Breaking News
Home / Uncategorized / ಶಿವಸೇನೆ ಷಡ್ಯಂತ್ರಕ್ಕೆ ಗ್ರಾಮಸ್ಥರ ಮಂಗಳಾರತಿ; ಮಣಗುತ್ತಿ ಶಿವಾಜಿ ಮೂರ್ತಿ ವಿವಾದ ಇತ್ಯರ್ಥ

ಶಿವಸೇನೆ ಷಡ್ಯಂತ್ರಕ್ಕೆ ಗ್ರಾಮಸ್ಥರ ಮಂಗಳಾರತಿ; ಮಣಗುತ್ತಿ ಶಿವಾಜಿ ಮೂರ್ತಿ ವಿವಾದ ಇತ್ಯರ್ಥ

Spread the love

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ನಡೆದ ಶಿವಾಜಿ ಮೂರ್ತಿ ಪ್ರತಿ ಸ್ಥಾಪನೆ ಪ್ರಕರಣ ಕೊನೆಗೆ ಅಂತ್ಯ ಕಂಡಿದೆ. ಶಿವಾಜಿ ಮೂರ್ತಿ ವಿಚಾರವನ್ನೆ ಮುಂದಿಟ್ಟುಕೊಂಡು ರಾಜಕೀಯ ಮಾಡಲು ಹೊರಟಿದ್ದ ಎಂ.ಇ.ಎಸ್. ಹಾಗೂ ಶಿವಸೇನೆಗೆ ತೀವ್ರ ಮುಖ ಭಂಗವಾಗಿದೆ.

ಹೌದು, ಕಳೆದ ಒಂದು ವಾರದಿಂದಲೂ ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿ ಸ್ಥಾಪನೆ ಮಾಡುವ ವಿಚಾರವಾಗಿ ಹಲವಾರು ಗಲಾಟೆಗಳು ನಡೆದಿದ್ದವು. ಶಿವಸೇನೆಯ ಕುಮ್ಮಕ್ಕಿನಿಂದ ಸುಳ್ಳು ಪ್ರಚಾರ ಪಡೆದಿದ್ದ ಮೂರ್ತಿ ಸ್ಥಾಪನೆ ವಿಚಾರ ಸಾಕಷ್ಟು ಗಲಾಟೆ ಗದ್ದಲಗಳಿಗೆ ಸಾಕ್ಷಿಯಾಗಿತ್ತು. ಅನುಮತಿ ಪಡೆಯದೆ ಗ್ರಾಮದ ಕೆಲ ಯುವಕರು ರಾತ್ರೋರಾತ್ರಿ ಲಕ್ಷ್ಮೀ ದೇವಸ್ಥಾನ ಜಾಗದ ಪಕ್ಕದಲ್ಲೆ ಮೂರ್ತಿ ಸ್ಥಾಪನೆ ಮಾಡುವ ವಿವಾದದ ಕಿಚ್ಚು ಹಚ್ಚಿದ್ದರು. ಗ್ರಾಮದಲ್ಲಿ ಎರಡು ಗುಂಪುಗಳ ಮಧ್ಯೆ ಸಮನ್ವಯದ ಕೊರತೆಯಿಂದಾಗಿ ಒಂದು ಗುಂಪು ಮೂರ್ತಿಯನ್ನು ಪರವಾನಗಿ ಪಡೆದು ಸ್ಥಾಪನೆ ಮಾಡಲು ಮುಂದಾಗಿತ್ತು. ಆದರೆ ಇದಕ್ಕೆ ಒಪ್ಪಂದ ಇನ್ನೊಂದು ಗುಂಪಿನ ಯುವಕರು ರಾತ್ರೋರಾತ್ರಿ ಆ. 5 ರಂದು ಶಿವಾಜಿ ಮೂರ್ತಿಯನ್ನು ಸ್ಥಾಪನೆ ಮಾಡಿದ್ದರು. ಆದರೆ ಇದಕ್ಕೆ ವಿರೋಧ ಮಾಡಿದ್ದ ಅದೇ ಗುಂಪಿನ ಸದಸ್ಯರು ಎರಡು ದಿನಗಳ ಬಳಿಕ ಆ.7 ರಂದು ಶಿವಾಜಿ ಮೂರ್ತಿಯನ್ನು ತೆಗೆದು ಬದಿಗೆ ಇಟ್ಟಿದ್ದರು.

ಇದನ್ನೆ ಬಂಡವಾಳ ಮಾಡಿಕೊಂಡ ಶಿವಸೇನೆ ಮೂರ್ತಿ ಇಟ್ಟಿದ್ದ ಹಾಗೂ ಮೂರ್ತಿ ತೆಗೆದ ಫೋಟೊಗಳನ್ನು ಬಳಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ ಪ್ರಚಾರ ಮಾಡುವ ಮೂಲಕ ತಮ್ಮ ಕೀಳು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿತ್ತು. ರಾಜ್ಯ ಸರ್ಕಾರ ಶಿವಾಜಿ ಮೂರ್ತಿಗೆ ಅನ್ಯಾಯ ಮಾಡಿದೆ ಕನ್ನಡಿಗರೇ ಮೂರ್ತಿ ವಿರೋಧಿಸುವ ಮೂಲಕ ಮರಾಠಿಗರ ಮೇಲೆ ದೌರ್ಜನ್ಯ ಎಸಗಿದ್ದಾರೆ, ನಾವು ಸುಮ್ನನಿರಲ್ಲ ಎಂದು ಭಾಷಾ ವೈಷಮ್ಯ ಬಿತ್ತಲು ಸಂಚು ಹಾಕಿತ್ತು. ಅಲ್ಲದೆ ಶಿವಸೇನೆಯ ಸಾಮನಾ ಪತ್ರಿಯಲ್ಲೂ ಸುಳ್ಳು ಸುದ್ದಿ ಪ್ರಕಟ ಮಾಡುವ ಮೂಲಕ ಮರಾಠಿಗರನ್ನ ಕೆರಳಿಸುವ ಯತ್ನ ಮಾಡಿತ್ತು. ಇದಕ್ಕೆ ಮರಾಠಿ ಮಾಧ್ಯಮಗಳು ಸಹ ಸಾಥ ನೀಡಿದ್ದವು.

ಇಂದಿನಿಂದ ಚಾರ್ಮಾಡಿ ಘಾಟ್ ಸಂಚಾರ ಮುಕ್ತ; ವಾಹನ ಸವಾರರೇ ಮೈ ಮರೆಯಬೇಡಿ

ಆದ್ರೆ ಶಿವಸೇನೆ ಷಡ್ಯಂತ್ರಕ್ಕೆ ಗ್ರಾಮಸ್ಥರೆ ತಕ್ಕ ಪಾಠವನ್ನ ಕಲಿಸಿದ್ದಾರೆ. ಶಿವಸೇನೆಯ ರಾಜಕೀಯಕ್ಕೆ ಗ್ರಾಮಸ್ಥರೆ ಮಂಗಲಾರತಿ ಮಾಡುವ ಮೂಲಕ ಶಿವಸೇನೆ ಹಾಗೂ ಎಂ.ಇ.ಎಸ್.ಗೆ ಮುಖಭಂಗ ಮಾಡಿದ್ದಾರೆ. ಗ್ರಾಮದ ಮರಾಠಿ ಮುಖಂಡೆ ಮುಂದೆ ಬಂದು ಇದರಲ್ಲಿ ಯಾರ ತಪ್ಪು ಇಲ್ಲಾ ನೀವು ಇಲ್ಲಿ ರಾಜಕೀಯ ಮಾಡಬೇಡಿ ಇದು ನಮ್ಮ ಗ್ರಾಮದ ಸಮಸ್ಯೆ ನೀವು ಇದರಲ್ಲಿ ಮೂಗು ತೋರಿಸುವ ಅವಶ್ಯಕತೆ ನಮಗೆ ಇಲ್ಲ ಎಂದು ಮುಖಕ್ಕೆ ಹೊಡೆದ ಹಾಗೆ ನೇರವಾಗಿ ಹೇಳಿದ್ದಾರೆ.

ಇನ್ನು ನಿನ್ನೆ ಸಂಜೆ ಮಣಗುತ್ತಿ ಗ್ರಾಮದಲ್ಲಿ ಮೂರು ಗ್ರಾಮದ ಮುಖಂಡರ ಸಭೇ ನಡೆಸಲಾಗಿದೆ ಮಣಗುತ್ತಿ, ಬೋಶ್ಯಾನಹಟ್ಟಿ, ಬೆನಕನಹೊಳಿ ಗ್ರಾಮದ ಮುಖಂಡರು, ಹುಕ್ಕೇರಿ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ಸಮ್ಮುಖದಲ್ಲಿ ಸಭೆ ನಡೆಸಿ. ಗ್ರಾಮದಲ್ಲಿ ಎಲ್ಲಾ ಧರ್ಮದಗಳ ಸಮನ್ವಯತೆ ಕಾಪಾಡಲು ಒಟ್ಟು ಐದು ಮೂರ್ತಿಗಳನ್ನ ಒಟ್ಟಿಗೆ ಪ್ರತಿಷ್ಠಾಪನೆ ಮಾಡಲು ನಿರ್ಧಾರ ಮಾಡಿದ್ದಾರೆ. ಶಿವಾಜಿ, ಅಂಬೇಡ್ಕರ್, ಬಸವಣ್ಣ, ವಾಲ್ಮೀಕಿ ಹಾಗೂ ಕೃಷ್ಣನ ಮೂರ್ತಿಗಳ ಸ್ಥಾಪನೆಗೆ ನಿರ್ಧಾರ ಮಾಡಿ ಮಣಗುತ್ತಿ ಗ್ರಾಮದ ಹೊರ ವಲಯದ ಬಸವಣ್ಣ ಗುಡಿ ಹತ್ತಿರ 5 ಮೂರ್ತಿಗಳ ಸ್ಥಾಪನೆ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಮೂರು ಗ್ರಾಮದ ಮುಖಂಡರ ಸಮ್ಮುಖದಲ್ಲಿ ಭೂಮಿ ಪೂಜೆಯನ್ನು ಮಾಡುವ ಮೂಲಕ ಶಾಂತಿಯ ಸಂದೇಶವನ್ನ ರವಾನಿಸಿದ್ದಾರೆ.ಸುಳ್ಳು ಸುದ್ದಿ ಹಬ್ಬಿಸಿದವರ ಮೇಲೆ ಎಫ್​.ಐ.ಆರ್.
ಇನ್ನು ಮಣಗುತ್ತಿ ಗ್ರಾಮದ ಶಿವಾಜಿ ಮೂರ್ತಿ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದವರ ಮೇಲೆ ಬೆಳಗಾವಿ ಪೊಲೀಸರು ಎಪ್.ಐ.ಆರ್. ದಾಖಲಿದ್ದಾರೆ. ಮಹಾರಾಷ್ಟ್ರದ ಮಿರಜ್ ಮೂಲದ ದಿನೇಶ್ ಕದಂ ಎಂಬಾತನ ಮೇಲೆ ಪ್ರಕರಣದ ದಾಖಲಾಗಿದೆ. ಜನಾಂಗ, ಭಾಷೆ, ಸಮೂದಾಯಗಳ ಮದ್ಯೆ ದ್ವೇಷ ಸಮಾಜದಲ್ಲಿ ಅಶಾಂತಿ ಹುಟ್ಟು ಹಾಕಲು ಯತ್ನದಡಿ ಪ್ರಕರಣ ದಾಖಲಿಸಿದ್ದಾರೆ.

ಒಟ್ಟಿನಲ್ಲಿ ಶಿವಸೇನೆಯ ಪುಂಡಾಟಕ್ಕೆ ಬ್ರೇಕ ಬಿದ್ದಿದ್ದು ಗ್ರಾಮಸ್ಥರೆ ಶಿವಸೇನೆಗೆ ಮಂಗಳಾರತಿ ಮಾಡುವ ಮೂಲಕ ಶಿವಸೇನೆ ಉದ್ದಟತನಕ್ಕೆ ಬ್ರೇಕ್ ಹಾಕಿದ್ದಾರೆ. ಇನ್ನಾದ್ರು ಶಿವಸೇನೆ ಕೀಳ ರಾಜಕೀಯ ಮಾಡುವುದನ್ನ ಬಿಡಬೇಕು.


Spread the love

About Laxminews 24x7

Check Also

ಅಕ್ಷಯ ತೃತೀಯ 2024ರ ಪೂಜಾ ಸಮಯ ಮತ್ತು ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

Spread the loveಅಕ್ಷಯ ತೃತೀಯವನ್ನು ಹಿಂದೂ ಧರ್ಮದಲ್ಲಿ ವಿಶೇಷ ದಿನವೆಂದು ಪರಿಗಣಿಸಲಾಗಿದೆ. ಧಾರ್ಮಿಕ ದೃಷ್ಟಿಕೋನದ ಹೊರತಾಗಿ, ಅಕ್ಷಯ ತೃತೀಯ ದಿನವು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ