Breaking News
Home / ಜಿಲ್ಲೆ / ಬೆಳಗಾವಿ / ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಮೂರ್ತಿ ಸ್ಥಳಾಂತರಕ್ಕೆ ಸಂಬಂಧಿಸಿದ ಪ್ರಕರಣ ವಿವಾದ ಅಂತ್ಯ ಕಂಡಿದೆ.

ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಮೂರ್ತಿ ಸ್ಥಳಾಂತರಕ್ಕೆ ಸಂಬಂಧಿಸಿದ ಪ್ರಕರಣ ವಿವಾದ ಅಂತ್ಯ ಕಂಡಿದೆ.

Spread the love

ಹುಕ್ಕೇರಿ: ಕಳೆದ ಮೂರ್ನಾಲ್ಕು ದಿನಗಳಿಂದ ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಮೂರ್ತಿ ಸ್ಥಳಾಂತರಕ್ಕೆ ಸಂಬಂಧಿಸಿದ ಪ್ರಕರಣ ವಿವಾದ ಅಂತ್ಯ ಕಂಡಿದೆ.

ಮಣಗುತ್ತಿ, ಬೆನಕನಹೊಳಿ, ಬೋಳಶ್ಯಾನಟ್ಟಿ, ಸೇರಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಆವರಣದಲ್ಲಿ ಸೋಮವಾರ ಸಭೆ ನಡೆಸಿ, ಮಣಗುತ್ತಿ ಗ್ರಾಮದಲ್ಲಿನ ಲಕ್ಷ್ಮಿ ಟ್ರಸ್ಟ್‌ ಜಾಗದಲ್ಲಿ ಶಿವಾಜಿ ಮೂರ್ತಿ ಸೇರಿ ಐದು ಪುತ್ಥಳಿ ನಿರ್ಮಾಣಕ್ಕೆ ತಿರ್ಮಾನ ಕೈಗೊಂಡಿದ್ದಾರೆ.

ಮಣಗುತ್ತಿ ಗ್ರಾಮದಲ್ಲಿ ಅನಧಿಕೃತವಾಗಿ ಶಿವಾಜಿ ಮೂರ್ತಿ ಸ್ಥಳಾಂತರ ಮಾಡಿ, ತೆರವುಗೊಳಿಸಿದ ಹಿನ್ನೆಲೆ ಗ್ರಾಮದಲ್ಲಿ ಜಗಳ ನಡದಿತ್ತು. ಬಳಿಕ ಮಹಾರಾಷ್ಟ್ರ ಶಿವ ಸೇನೆಯ ಕಾರ್ಯಕರ್ತರು ಪ್ರವೇಶ ಮಾಡಿರುವುರಿಂದ ರಾಜಕೀಯ ಸ್ವರೂಪ ಪಡೆದುಕೊಂಡಿತ್ತು . ಈಗ ಮುಖಂಡರು ಸಭೆ ನಡೆಸುವ ಮೂಲಕ ವಿವಾದಕ್ಕೆ ಅಂತ್ಯ ಹಾಡಲಾಗಿದೆ.

ಲಕ್ಷ್ಮೀದೇವಿ ಟ್ರಸ್ಟ್ ಜಾಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ , ಬಸವೇಶ್ವರ ಪತ್ಥಳಿ, ಡಾ॥ಅಂಬೇಡ್ಕರ್ , ವಾಲ್ಮೀಕಿ ಮಹರ್ಷಿ ಮತ್ತು ಕೃಷ್ಣ ಗೌಳಿ ಮೂರ್ತಿ ಹೀಗೆ ಮೂರು ಗ್ರಾಮಸ್ಥರ ಮುಖಂಡರು ಸೇರಿ  5 ಮೂರ್ತಿ ಗಳನ್ನು ಒಂದೇ ಜಾಗದಲ್ಲಿ ಒಂದೇ ದಿನ ಪ್ರತಿಷ್ಠಾಪನೆ ಮಾಡುವುದೆಂದು ಸಭೆಯಲ್ಲಿ  ಕೈಗೊಂಡಿದ್ದಾರೆ .

ಶಿವಾಜಿ ಪ್ರತಿಮೆ ತೆರವುಗೊಳಿಸಿದ ಜಾಗವು ೩ ಮೂರು ಗ್ರಾಮಗಳಿಗೆ ಸೇರಿದ್ದರಿಂದ ಆ ಸ್ಥಳದಲ್ಲಿ ಯಾವುದೇ ಪ್ರತಿಷ್ಠಾಪನೆ ಮಾಡದೇ ಮನಗುತ್ತಿ ಗ್ರಾಮದ ಹೊರವಲಯದ ಸಮುದಾಯ ಭವನದ ಹಿಂದೆ

ಈ ಸಂದರ್ಭದಲ್ಲಿ ಮನಗುತ್ತಿ ಗ್ರಾಮದ ರಮೇಶ್ ಪಾಟೀಲ್ , ಶರದ್ ಪಾಟೀಲ್ , ರವಿ ಕುರಾಡೆ ,ಸುರೇಶ್ ಬೆನ್ನಿ , ಬೆನಕನಹೊಳಿ ಗ್ರಾಮದ ಮುಖಂಡರಾದ ಅರ್ಜುನ್ ಗಸ್ತಿ, ಬಸಪ್ಪಾ ದರನಟ್ಟಿ , ಕಾಡೇಶ ಮೆಕ್ಕಳಿ ಬೊಳಶ್ಯಾನಟ್ಟಿ ಗ್ರಾಮದ ಮುಖಂಡರಾದ ಬಸಪ್ಪ ಬುಜಪ್ಪಗೊಳ, ಚನ್ನಮಲ್ಲ ರಮೇಶ್, ಬುಜಪ್ಪಗೊಳ ಆರ್.ಕೆ.ದೇಸಾಯಿ, ಕಿರಣ್ ಸಿಂಗ್ ರಜಪೂತ್ ಹಾಜರಿದ್ದರು.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ