Breaking News
Home / new delhi / ಪತ್ರಕರ್ತರ ಮೇಲೆ ಹಲ್ಲೆ ಜಿಲ್ಲಾಧಿಕಾರಿಗಳಿಗೆ ಮನವಿ

ಪತ್ರಕರ್ತರ ಮೇಲೆ ಹಲ್ಲೆ ಜಿಲ್ಲಾಧಿಕಾರಿಗಳಿಗೆ ಮನವಿ

Spread the love

ಚಿತ್ರದುರ್ಗ,ಆ12(ಹಿಸ): ಬೆಂಗಳೂರಿನ ಡಿ.ಜಿ ಹಳ್ಳಿ ಮತ್ತು ಕೆ.ಆರ್.ಹಳ್ಳಿಗಳಲ್ಲಿ ನಡೆದಿರುವ ಗಲಭೆಯ ಸಂದರ್ಭದಲ್ಲಿ ಸುದ್ದಿ ಮಾಧ್ಯಮದ ಪ್ರತಿನಿಧಿಗಳ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಇಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಹಲ್ಲೆಗೊಳಗಾದ ಪತ್ರಕರ್ತರಿಗೆ ಸರ್ಕಾರದಿಂದ ಪರಿಹಾರ ಘೋಷಣೆ ಮಾಡಬೇಕು ಮತ್ತು ಪತ್ರಕರ್ತರಿಗೆ ರಕ್ಷಣೆ ನೀಡಬೇಕು ಹಾಗೆಯೇ ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯದಲ್ಲೂ ಕೊಡ ಪತ್ರಕರ್ತರಿಗೆ ರಕ್ಷಣೆ ನೀಡುವಂತಹ ಸುರಕ್ಷಣಾ ಕಾನೂನು ಜಾರಿ ಮಾಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು. ಪತ್ರಕರ್ತರ ಪ್ರತಿಭಟನೆಯ ನೇತೃತ್ವವನ್ನು ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕರಾದ ನರೇನಹಳ್ಳಿ ಅರುಣ್ ಕುಮಾರ್ ಜಿಲ್ಲಾಧ್ಯಕ್ಷರಾದ ಹೆಚ್.ಲಕ್ಷ್ಮಣ್ ಖಜಾಂಚಿ ಮೇಘ ಗಂಗಾಧರ್ ನಾಯ್ಕ.ಟಿ.ಕೆ.ಬಸವರಾಜ್ .ಎಂ.ಎನ್.ಅಹೋಬಲಪತಿ. ಸುವರ್ಣ TV ಕಿರಣ್.ಕ್ಯಾಮೆರಾ ಮೇನ್ ಶ್ರೀನಿವಾಸ. 

ತಿಪ್ಪೇಸ್ವಾಮಿ ಸಂಪಿಗೆ .ಶ.ಮಂಜುನಾಥ್ .ಚನ್ನಬಸವಯ್ಯ ಪಬ್ಲಿಕ್‌ TV ಸಿದ್ದರಾಜ್. ಕ್ಯಾಮೆರಾ ಮ್ಯಾನ್ ವಿನಯ್. ಈ TV ಭಾರತ್.ನೂರುಲ್ಲಾ.ಎಂ.ಜೆ.ತಿಪ್ಪೇಸ್ವಾಮಿ ಗೋವಿಂದಪ್ಪ.ಗೌನಹಳ್ಳಿ ದಾವಣಗೆರೆ ಚಂದ್ರಣ್ನ.ಪ್ರಣವನಂದಕುಮಾರ್.ಸಿಪಿ ಮಾರುತಿ.ಇದ್ದರು.


Spread the love

About Laxminews 24x7

Check Also

ಕೊಲೆಯಾದ ನೇಹಾ ಹಿರೇಮಠ ತಂದೆಗೆ ಪೊಲೀಸ್ ಭದ್ರತೆ

Spread the love ಹುಬ್ಬಳ್ಳಿ: ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಮೃತಳ ತಂದೆ ನಿರಂಜನಯ್ಯ ಹಿರೇಮಠ ಅವರಿಗೆ ಪೊಲೀಸ್ ಭದ್ರತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ