ಹಾಸನ: ಹೃದಯಾಘಾತದಿಂದ ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಸಾವನ್ನಪ್ಪಿರುವ ಘಟನೆ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ. ಡಾ.ವೆಂಕಟೇಶ್ (55) ಮೃತಪಟ್ಟ ಅಧಿಕಾರಿ. ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯವರಾದ ಡಾ.ವೆಂಕಟೇಶ್ ಕಳೆದ ಐದಾರು ವರ್ಷಗಳಿಂದ ಸಕಲೇಶಪುರದಲ್ಲಿ ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬೆಂಗಳೂರಿನಲ್ಲಿ ಡಾ.ವೆಂಕಟೇಶ್ ಕುಟುಂಬ ನೆಲೆಸಿದ್ದು, ಸಕಲೇಶಪುರದಲ್ಲಿ ಒಬ್ಬರೇ ವಾಸವಿದ್ದರು. ಸೆ.10 ರಂದು ಕೆಲಸ ಮುಗಿಸಿ ಮನೆಗೆ ತೆರಳಿದ್ದರು. ಬೆಳಿಗ್ಗೆ ಫೋನ್ ರಿಸೀವ್ ಮಾಡದ ಹಿನ್ನೆಲೆಯಲ್ಲಿ ಮನೆಗೆ ತೆರಳಿ ನೋಡಿದಾಗ …
Read More »ಹಾಸನದ ಯೋಧ ಅಸ್ಸಾಂನಲ್ಲಿ ಅನಾರೋಗ್ಯದಿಂದ ನಿಧನ
ಹಾಸನ: ಕರ್ತವ್ಯದಲ್ಲಿದ್ದಾಗಲೇ ಹಾಸನ ಜಿಲ್ಲೆಯ ಯೋಧರೊಬ್ಬರು ಅನಾರೋಗ್ಯದಿಂದ ಸಾವನ್ನಪ್ಪಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ. ಆಲೂರು ತಾಲೂಕಿನ, ಹಾಂಜಿಹಳ್ಳಿ ಗ್ರಾಮದ ಮಧು. ಹೆಚ್.ಹೆಚ್. (34) ನಿಧನರಾದ ಯೋಧ. ಮಧು ಅವರು ಕಳೆದ 15 ವರ್ಷಗಳಿಂದ ಬಿಎಸ್ಎಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರ ನಿಧನದಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಒಂದುವರೆ ತಿಂಗಳ ಹಿಂದಷ್ಟೇ ಅವರ ಪತ್ನಿಗೆ ಮಗು ಜನಿಸಿತ್ತು. ಮಧು ಅವರ ನಿವೃತ್ತಿಗೆ ಮೂರು ತಿಂಗಳಷ್ಟೇ ಬಾಕಿ ಇತ್ತು. ಇನ್ನೂ ಕುಟುಂಬಸ್ಥರ ಜೊತೆ …
Read More »ಕರಡು ಮತದಾರರ ಪಟ್ಟಿಯಲ್ಲಿ ಹೆಸರು ತಿದ್ದುಪಡಿಗೆ ನಟ ಶಿವರಾಜಕುಮಾರ್ ಮನವಿ
ಹ್ಯಾಟ್ರಿಕ್ ಹೀರೋ ನಟ ಶಿವರಾಜುಕುಮಾರ್ ಅವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ತಿದ್ದುಪಡಿ ಮಾಡುವಂತೆ ಕೋರಿ ಚುನಾವಣಾ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿರುವ ಅಪರ ಜಿಲ್ಲಾ ಚುನಾವಣಾಧಿಕಾರಿ ಕಾಂತರಾಜ್ ಅವರು, ನಟ ಶಿವರಾಜ್‌ಕುಮಾರ್ ಅವರಿಗೆ ಯಾವುದೇ ನೋಟಿಸ್ ಜಾರಿಯಾಗಿಲ್ಲ, ಬದಲಾಗಿ ಅವರ ಪಾಸ್‌ಪೋರ್ಟ್‌ನಲ್ಲಿರುವಂತೆ `ಪುಟ್ಟಸ್ವಾಮಿ ಶಿವರಾಜ್ ಕುಮಾರ್’ ಎಂದು ಮತದಾರರ ಪಟ್ಟಿಯಲ್ಲೂ ಹೆಸರು ತಿದ್ದುಪಡಿ ಮಾಡುವಂತೆ ಅವರೇ ಸ್ವಯಂಪ್ರೇರಿತರಾಗಿ ಮನವಿ ಮಾಡಿಕೊಂಡಿದ್ದಾರೆ ಎಂದು ಪಬ್ಲಿಕ್ ಟಿವಿಗೆ …
Read More »ಒಂದು ಕಡೆ ಪುಟಿನ್, ಮತ್ತೊಂದು ಕಡೆ ಪೆಜೆಶ್ಕಿಯಾನ್ ಕೈಹಿಡಿದು ಬಂದ ಮೋದಿ – ವಿಶ್ವದ ಗಮನ ಸೆಳೆದ ಫೋಟೋ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ನವದೆಹಲಿಯಲ್ಲಿ ನಡೆದ ಬ್ರಿಕ್ಸ್ ಬಿಸಿನೆಸ್ ಫೋರಂನ ರೆಡ್‌ಕಾರ್ಪೆಟ್ ಮೇಲೆ ವಿಶ್ವ ನಾಯಕರೊಂದಿಗೆ ಹೆಜ್ಜೆ ಹಾಕಿದ ದೃಶ್ಯ ಗಮನ ಸೆಳೆಯಿತು. ಹೌದು. ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಹಾಗೂ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ ಸೇರಿದಂತೆ ಹಲವು ಬ್ರಿಕ್ಸ್ ನಾಯಕರೊಂದಿಗೆ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು. ನಾಯಕರು ಒಟ್ಟಿಗೆ ಸಾಗುವ ವೇಳೆ …
Read More »ಕೂಡಗಿ ಪೊಲೀಸರ ಬೇಟೆ – 8 ನಿಮಿಷದಲ್ಲಿ 19 ಲಕ್ಷ ದೋಚಿ ಪರಾರಿಯಾಗಿದ್ದ ಕಳ್ಳರ ಗ್ಯಾಂಗ್ ಅಂದರ್
ವಿಜಯಪುರ: ಇಲ್ಲಿನ ಗೊಳಸಂಗಿ ಕೆನರಾ ಬ್ಯಾಂಕ್ ಎಟಿಎಂ ಕಳ್ಳತನ ಪ್ರಕರಣವನ್ನ ಕೂಡಗಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಕೇವಲ 8 ನಿಮಿಷದಲ್ಲಿ ಬರೋಬ್ಬರಿ 19.29 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದ ಹರಿಯಾಣ ಮೂಲದ ಅಂತರರಾಜ್ಯ ಕಳ್ಳರ ಗ್ಯಾಂಗ್ ಅನ್ನು ಖೆಡ್ಡಾಕ್ಕೆ ಕೆಡವಿದ್ದಾರೆ. ಕಳೆದ ಸೆಪ್ಟೆಂಬರ್ 2ರಂದು ವಿಜಯಪುರ ಜಿಲ್ಲೆ ಕೂಡಗಿ ಠಾಣಾ ವ್ಯಾಪ್ತಿಯ ಗೊಳಸಂಗಿಯಲ್ಲಿ ಕೆನರಾ ಬ್ಯಾಂಕ್ ಎಟಿಎಂ ಟಾರ್ಗೆಟ್ ಮಾಡಿದ್ದ ಹರಿಯಾಣ ಗ್ಯಾಂಗ್, ಕೇವಲ 8 ನಿಮಿಷಗಳಲ್ಲಿ ಎಟಿಎಂ ಕ್ಯಾಶ್ …
Read More »ಸಚಿವ ಸತೀಶ ಜಾರಕಿಹೊಳಿ ವಿರುದ್ಧದ ಇಡಿ ದಾಳಿ ಖಂಡಿಸಿ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ
ಬೆಳಗಾವಿ: ಸಚಿವ ಸತೀಶ ಜಾರಕಿಹೊಳಿ ಅವರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ದಾಳಿಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದ ರಾಣಿ ಚೆನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕೇಂದ್ರ ತನಿಖಾ ಸಂಸ್ಥೆಗಳನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಸಚಿವ ಸತೀಶ ಜಾರಕಿಹೊಳಿ ಅವರನ್ನು ತನಿಖೆಯ ಹೆಸರಿನಲ್ಲಿ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಚಿವರನ್ನು ಇಡಿ ಮೂಲಕ ಹತ್ತಿಕ್ಕುವ ಪ್ರಯತ್ನ ನಡೆಸಿದರೂ …
Read More »ಕಾಂಗೋದಲ್ಲಿ ಚಿನ್ನದ ಗಣಿಯಲ್ಲಿ ಸತೀಶ್ ಜಾರಕಿಹೊಳಿ ಹೂಡಿಕೆ ಪತ್ತೆ: ಅಧಿಕೃತ ಪ್ರಕಟಣೆ ಹೊರಡಿಸಿದ ಇಡಿ* *PWD ಟೆಂಡರ್ ಲಂಚದ ಆರೋಪ
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಅವರ ಕುಟುಂಬದ ಸದಸ್ಯರಿಗೆ ಸಂಬಂಧಿಸಿದ ನಿವಾಸಗಳು ಹಾಗೂ ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ನಡೆಸಿದ ದಿಢೀರ್ ದಾಳಿಯಲ್ಲಿ ಸಿಕ್ಕ ದಾಖಲೆಗಳ ಬಗ್ಗೆ ಇಡಿ ಪ್ರಕಟಣೆ ಹೋರಡಿಸಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್‌ನಲ್ಲಿರುವ ಸತೀಶ್ ಜಾರಕಿಹೊಳಿ ಅವರ ಸ್ವಗೃಹ ಹಾಗೂ ಬೆಂಗಳೂರಿನ ಪ್ರತಿಷ್ಠಿತ ಡಾಲರ್ಸ್ ಕಾಲೋನಿ ಹಾಗೂ ಕ್ರೆಸೆಂಟ್ ರಸ್ತೆಯಲ್ಲಿರುವ ಅವರ ಕಚೇರಿ ಹಾಗೂ ನಿವಾಸಗಳ ಮೇಲೆ ತನಿಖಾಧಿಕಾರಿಗಳು ದಾಳಿ ನಡೆಸಿ ಕಡತಗಳನ್ನು ಪರಿಶೀಲಿಸಿದ್ದಾರೆ. ಇದರೊಂದಿಗೆ …
Read More »ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ರೈತರು
ಬೆಳಗಾವಿ: ಬೆಳಗಾವಿಯನ್ನು ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಿದರು. ಇಂದಯ ಬೆಳಗಾವಿ ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಮಾನವಸರಪಳಿ ನಿರ್ಮಿಸಿ, ಕೈಯಲ್ಲಿ ಹಾಳಾಗಿರುವ ಬೆಳೆಗಳನ್ನು ಹಿಡಿದು, ರಸ್ತೆ ಮೇಲೆ ಹೊರಳಾಡಿ ಪ್ರತಿಭಟನೆ ನಡೆಸಿದ ರೈತ ಹೋರಾಟಗಾರರು ರಾಜ್ಯ ಸರ್ಕಾರ, ಸಿಎಂ ಡಿ.ಕೆ.ಶಿವಕುಮಾರ ವಿರುದ್ಧ ದಿಕ್ಕಾರ ಕೂಗಿ ತಮ್ಮ …
Read More »ಬೆಳಗಾವಿಯಿಂದ ವಿಶೇಷ ಬಸ್‌ಗಳ ಕಾರ್ಯಾಚರಣೆ
ಬೆಳಗಾವಿ: ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಚಿಕ್ಕೋಡಿ ವಿಭಾಗದ ಚಿಕ್ಕೋಡಿ, ನಿಪ್ಪಾಣಿ, ಸಂಕೇಶ್ವರ, ಹುಕ್ಕೇರಿ, ಗೋಕಾಕ, ರಾಯಬಾಗ, ಅಥಣಿ ಹಾಗೂ ಹುಕ್ಕೇರಿ ಘಟಕಗಳಿಂದ ಬೆಂಗಳೂರು, ಪೂಣೆ, ಸಾತಾರಾ, ಇಚಲಕರಂಜಿ, ಕೊಲ್ಲಾಪೂರ, ಮಿರಜ ಹಾಗೂ ಇತರೆ ಅಂತರರಾಜ್ಯ ಮಾರ್ಗಗಳಿಗೆ ಸೆಪ್ಟೆಂಬರ್ 11 ರಿಂದ 25 ರವರೆಗೆ ಹೆಚ್ಚುವರಿ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ಗಣೇಶ ಹಬ್ಬ ಆಚರಿಸಲು ಬರುವ ಪ್ರಯಾಣಿಕರಿಗಾಗಿ ವಿಭಾಗದ ಎಲ್ಲ ಘಟಕಗಳಿಂದ ಸೆಪ್ಟೆಂಬರ್ 11 …
Read More »ಭಾರತದಲ್ಲಿ ಹೂಡಿಕೆ ಮಾಡಿ, ಲಾಭ ಪಡೆಯಿರಿ – ಬ್ರಿಕ್ಸ್ ರಾಷ್ಟ್ರಗಳಿಗೆ ಮೋದಿ ಆಹ್ವಾನ
ನವದೆಹಲಿ: 2014 ರ ನಂತರ ನಾವು 40 ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದೇವೆ. ವ್ಯಾಪಾರಕ್ಕೆ ಹೊಸ ಅವಕಾಶಗಳನ್ನ ಸೃಷ್ಟಿಸುತ್ತಿದ್ದೇವೆ. ಜೊತೆಗೆ ಹೊಸ ಹೊಸ ಸಹಕಾರವನ್ನೂ ಹುಡುಕುತ್ತಿದ್ದೇವೆ. ಭಾರತದಲ್ಲಿ ಹೂಡಿಕೆ ಮಾಡುವ ಮೂಲಕ ನೀವೂ ಇದರ ಲಾಭ ಪಡೆದುಕೊಳ್ಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತದ ಅಧ್ಯಕ್ಷತೆಯಲ್ಲಿ ದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ …
Read More »
Laxmi News 24×7