Breaking News
Home / Uncategorized / ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮಾಡಿದ್ದೇ ಜೋಶಿ: ದಿಂಗಾಲೇಶ್ವರ ಶ್ರೀ

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮಾಡಿದ್ದೇ ಜೋಶಿ: ದಿಂಗಾಲೇಶ್ವರ ಶ್ರೀ

Spread the love

ದಾವಣಗೆರೆ: ಹುಬ್ಬಳ್ಳಿ – ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ವಿಚಾರವಾಗಿ ಈವರೆಗೆ ಯಾವುದೇ ರಾಜಕೀಯ ಪಕ್ಷಗಳಿಂದ ಆಹ್ವಾನ ಬಂದಿಲ್ಲ ಎಂದು ಶಿರಹಟ್ಟಿ ಜಗದ್ಗುರು ಶ್ರೀ ಫಕಿರೇಶ್ವರ ಸಂಸ್ಥಾನ ಮಠದ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.

ಹರಿಹರ ತಾಲೂಕಿನ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ಭೇಟಿ ನೀಡಿ, ವಚನಾನಂದ ಸ್ವಾಮೀಜಿಯವರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಯಾವುದೇ ಪಕ್ಷಗಳಿಂದ ಆಹ್ವಾನ ಬಂದರೂ ಮೊದಲು ಭಕ್ತರು ಹಾಗೂ ಸಾರ್ವಜನಿಕರ ಮುಂದೆ ವಿಚಾರ ಇಡುತ್ತೇನೆ. ಆ ಬಳಿಕ ಚರ್ಚೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿಯೇ ಅಂತಿಮ ನಿರ್ಧಾರ ಘೋಷಣೆ ಮಾಡಲಾಗುವುದು. ನಾನೊಬ್ಬನೇ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಆಗದು ಎಂದ ಅವರು, ನಾನು ಬಿಜೆಪಿ ಬಂಡಾಯನೂ ಅಲ್ಲ. ಕಾಂಗ್ರೆಸ್ ಬಂಡಾಯನೂ ಅಲ್ಲ ಎಂದರು.

ಯಾರೇ ಮನವೊಲಿಸಲು ಬಂದರೂ ನನ್ನ ನಿರ್ಣಯ ಬದಲಾಯಿಸುವುದಿಲ್ಲ
ಕೆಲ ಮಠಾಧೀಶರನ್ನು ಜೋಷಿ ಹೆದರಿಸಿ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ. ನಮ್ಮ ವಿರುದ್ದ ಹೇಳಿಕೆ ಕೊಡುವ ಸ್ವಾಮೀಜಿ ಗಳ ವಿರುದ್ದವೇ ಆ ಮಠದ ಭಕ್ತರೇ ಸಿಟ್ಟು ಹೊರ ಹಾಕುತ್ತಿದ್ದಾರೆ. ಅಲ್ಲಿ ಕೂಡ ಒಡೆದಾಳುವ ಕೆಲಸ ಜೋಶಿಯವರು ಮಾಡುತ್ತಿದ್ದಾರೆ. ಗುರುಗಳ ಆಶೀರ್ವಾದ ಪಡೆದೇ ನಾನು ಮಠದಿಂದ ರಾಜಕೀಯಕ್ಕೆ ಬಂದಿದ್ದೇನೆ ಎಂದರು.

ಲಿಂಗಾಯತರನ್ನು ಕೇವಲ ಮತಗಳಿಗಷ್ಟೇ ಉಪಯೋಗ ಮಾಡಿಕೊಂಡಿರುವ ಪ್ರಹ್ಲಾದ್ ಜೋಶಿ ಅವರು ಲಿಂಗಾಯತ ಸಮುದಾಯಕ್ಕೆ ನೀಡಿರುವ ಕೊಡುಗೆಯಾದರೂ ಏನು ಎಂದು ದಿಂಗಾಲೇಶ್ವರ ಶ್ರೀ ಪ್ರಶ್ನಿಸಿದರು.

ಲಿಂಗಾಯತ ‌ನಾಯಕರನ್ನು ತುಳಿಯುವುದರಲ್ಲಿ ಪ್ರಮುಖ ಪಾತ್ರ ಜೋಷಿಯವರದ್ದು‌. ಲಿಂಗಾಯತ ‌ನಾಯಕರು ಅಷ್ಟೇ ಅಲ್ಲ ಅ ಭಾಗದ ಎಲ್ಲಾ ಸಮಾಜದ ಜನರು ಕೂಡ ನನ್ನ ರಾಜಕೀಯ ಪ್ರವೇಶವನ್ನು ಸ್ವಾಗತ ಮಾಡಿದ್ದಾರೆ. ಅದರಲ್ಲಿ ಬ್ರಾಹ್ಮಣ ಸಮಾಜದವರು ಕೂಡ ಅತ್ಯಂತ ಪ್ರಮುಖವಾಗಿ ಸ್ವಾಗತ ಮಾಡಿದ್ದಾರೆ ಎಂದರು.

ಫಿಕ್ಸಿಂಗ್ ಆಗಿದೆ
ಧಾರವಾಡದಲ್ಲಿ ಎಲೆಕ್ಷನ್ ಫಿಕ್ಸಿಂಗ್ ಆಗಿದೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಜೋಶಿಯವರೇ ಆಯ್ಕೆ ಮಾಡಿದ್ದಾರೆ. ಅವರೇ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿಸಿದ್ದಾರೆ ಎಂದು ಜನರು ಮಾತನಾಡುತ್ತಿದ್ದಾರೆ. ಈ ಎರಡು ಪಕ್ಷದ ಜನರು ನನ್ನನ್ನು ಬಯಸಿ ಬೆಂಬಲಿಸಿದ್ದಾರೆ ಎಂದರು.

ಲಿಂಗಾಯತರು, ಲಿಂಗಾಯತ ಸ್ವಾಮೀಜಿಗಳ ಬಗ್ಗೆ ಅಪಪ್ರಚಾರ ಮಾಡುತ್ತಾ ಹಿಂದಿನಿಂದಲೂ ಜೋಶಿಯವರು ಬಂದಿದ್ದಾರೆ. ನಮ್ಮ ಮೇಲಿನ ಅಪಪ್ರಚಾರಗಳು ಜೋಶಿಯವರ ಕುತಂತ್ರದಿಂದಲೇ ನಡೆಯುತ್ತಿವೆ. ಎಷ್ಟೇ ವಿರೋಧ ಮಾಡಿದರೂ ಹಿಗ್ಗುವ ಕುಗ್ಗುವ ಕೆಲಸ ಮಾಡಿಲ್ಲ ಎಂದರು.
ನಾನು 40% ಅರೋಪವನ್ನು ಸಾಬೀತು ಮಾಡುತ್ತೇನೆಂದು ಹೇಳಿದ್ದೆ. ಆಗಲೂ ಸಮಸ್ಯೆಗಳು ಬಂದಿದ್ದವು. ಈಗಲೂ ಕೂಡ ಸಮಸ್ಯೆಗಳು ಬಂದಿವೆ. ಸತ್ಯ ಇರುವಾಗ ಸಮಸ್ಯೆಗಳು ಬಂದೇ ಬರುತ್ತವೆ ಎಂದರು.

ನನ್ನ ಮಠ ಇರುವ ಊರಿನಲ್ಲೇ ನಮ್ಮ ವಿರುದ್ದ ನಿಲ್ಲಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ವಿರುದ್ದ ನಮ್ಮವರನ್ನೇ ವಿರುದ್ದ ನಿಲ್ಲಿಸುವ ಕೆಲಸ ಮಾಡುತ್ತಿದ್ದಾರೆ. ಬಹುಸಂಖ್ಯಾತರಾದ ಲಿಂಗಾಯತರು ಹಾಗೂ ಉಳಿದ ಸಮಾಜದವರು ಕೂಡ ಈ ಬಾರಿ ಜೋಷಿಯವರಿಗೆ ಉತ್ತರ ಕೊಡುತ್ತಾರೆ ಎಂದರು.

ನಾನು ಹಾಗೂ ವಚನಾನಂದ ಸ್ವಾಮೀಜಿ ಆತ್ಮೀಯರು.ಈಗ ನಾನು ಪೀಠಕ್ಕೆ ಬಂದಿದ್ದಕ್ಕೆ ವಿಶೇಷ ಆರ್ಥ ಬಂದಿದೆ . ಎಲ್ಲ ಮಠಗಳನ್ನು, ಲಿಂಗಾಯತೇತರ ಮಠಗಳನ್ನು ಕೂಡ ಭೇಟಿಯಾಗಿದ್ದೇನೆ. ಎಲ್ಲರೂ ನನಗೆ ಬೆಂಬಲ ಕೊಟ್ಟು ಸ್ವಾಗತ ಮಾಡಿದ್ದಾರೆ ಎಂದರು.


Spread the love

About Laxminews 24x7

Check Also

ಪ್ರಜ್ವಲ್ ಪ್ರಕರಣ: ಬಿಜೆಪಿ -ಜೆಡಿಎಸ್‌ ಮೈತ್ರಿ ಮುರಿದು ಬೀಳುತ್ತಾ? : ಕುಮಾರಸ್ವಾಮಿ ಏನಂದ್ರು?

Spread the loveಬೆಂಗಳೂರು, ಮೇ 08: ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳ ಫೈಕಿ 28 ಕ್ಷೇತ್ರಗಳನ್ನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ