ಚಿಕ್ಕಬಳ್ಳಾಪುರ: ಬಾಡಿಗೆ ರೂಮ್‌ನಲ್ಲಿ ವಾಸವಾಗಿದ್ದ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ನೇಣು ಬಿಗಿದುಕೊಂಡು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಆಂಧ್ರಪ್ರದೇಶದ ಹಿಂದೂಪುರ ಮೂಲದ 21 ವರ್ಷದ ಸಾಯಿ ತರುಣ್ ರೆಡ್ಡಿ ಮೃತ ವಿದ್ಯಾರ್ಥಿ. ಮುಂಜಾನೆ ಎಂದಿನಂತೆ ಕಾಲೇಜಿಗೆ ತೆರಳಬೇಕಿದ್ದ ವಿದ್ಯಾರ್ಥಿ ರೂಮ್‌ನಲ್ಲೇ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಚಿಕ್ಕಬಳ್ಳಾಪುರದ ಗಂಗಮ್ಮಗುಡಿ ರಸ್ತೆಯಲ್ಲಿ ರೂಮ್ ಮಾಡಿಕೊಂಡು ವಾಸವಾಗಿದ್ದ ಸಾಯಿ ತರುಣ್, ನಗರದ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವ್ಯಾಸಂಗ …
Read More »ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ ಅಂತ್ಯ – ಪುತ್ರಿ, ಗೋಕಾಕ್ ಮನೆಯಲ್ಲಿ 3 ಕೋಟಿ ರೂ. ಸೀಜ್
ಬೆಂಗಳೂರು: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಆರೋಪದಲ್ಲಿ ಸಿಲುಕಿರುವ ಸಚಿವ ಸತೀಶ್ ಜಾರಕಿಹೊಳಿ 36 ಗಂಟೆಗಳ ವಿಚಾರಣೆ ಎದುರಿಸಿದ್ದು, ಇ.ಡಿ ದಾಳಿ ಅಂತ್ಯಗೊಂಡಿದೆ. ಬುಧವಾರ ತಡರಾತ್ರಿ 2 ಗಂಟೆವರೆಗೆ ವಿಚಾರಣೆ ನಡೆಸಿದ್ದ ಇಡಿ, ಇಂದು ಬೆಳಗ್ಗೆ 6 ಗಂಟೆಯಿಂದಲೂ ಮತ್ತೆ ಇ.ಡಿ ದಾಳಿ ಆರಂಭಿಸಿತ್ತು. ವಿಚಾರಣೆ ವೇಳೆ ವಿದೇಶ ವ್ಯವಹಾರಗಳ ಬಗ್ಗೆ ಜಾರಕಿಹೊಳಿ ಮಾಹಿತಿ ನೀಡದಿರುವುದರಿಂದ ಸಂಕಷ್ಟ ಎದುರಾಗುವ ಸಾಧ್ಯತೆಗಳು ಹೆಚ್ಚಾಗಿದೆ. ಇನ್ನು, ಬೆಂಗಳೂರು, ಬೆಳಗಾವಿ, ಗೋಕಾಕ್‌ನಲ್ಲಿ 18 …
Read More »ನಾವೆಲ್ಲ ಒಟ್ಟಾಗಿ ರಾಜ್ಯದಲ್ಲಿ ರೈತರು, ದಲಿತರು, ಹಿಂದೂಗಳ ಪರ ಸರ್ಕಾರ ತರಬೇಕು: ವಿಜಯೇಂದ್ರ ಕರೆ
ಬಳ್ಳಾರಿ: ಅಲ್ಪಸಂಖ್ಯಾತರ ಓಲೈಕೆಗಾಗಿ ರಾಜ್ಯ ಸರ್ಕಾರ ‘ವಂದೇ ಮಾತರಂ’ ಗೀತೆಯನ್ನ ಮೊಟಕುಗೊಳಿಸಿದೆ. ರೈತರು, ದಲಿತರು ನಾವೆಲ್ಲ ಒಟ್ಟಾಗಿ ಹಿಂದೂಗಳ ಪರ ಇರುವ ಸರ್ಕಾರವನ್ನ ಅಧಿಕಾರಕ್ಕೆ ತರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕರೆ ನೀಡಿದರು. ಬಳ್ಳಾರಿಯ ಮುನ್ಸಿಪಲ್ ಮೈದಾನದಲ್ಲಿ ಆಯೋಜಿಸಲಾಗಿದ್ದ `ಬಳ್ಳಾರಿ ಚಲೋ’ ಪಾದಯಾತ್ರೆಯ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪಾದಯಾತ್ರೆಯಲ್ಲಿ ಭಾಗವಹಿಸಿದ …
Read More »ಜಾನಪದ ವಿಶ್ವವಿದ್ಯಾಲಯದಲ್ಲಿ ಅನುಮತಿ ಇಲ್ಲದೆ ಹೊಸ ಪಠ್ಯಕ್ರಮ; 8 ಕೋರ್ಸ್‌ಗಳು ರದ್ದು
ಹಾವೇರಿ: ಜಿಲ್ಲೆಯ ಜನಪದ ವಿಶ್ವವಿದ್ಯಾಲಯದಲ್ಲಿ ಸರ್ಕಾರ ಮತ್ತು ರಾಜ್ಯಪಾಲರ ಅನುಮತಿ ಪಡೆಯದೆ ಪ್ರಾರಂಭಿಸಿದ್ದ 8 ಕೋರ್ಸ್‌ಗಳನ್ನು ಉನ್ನತ ಶಿಕ್ಷಣ ಇಲಾಖೆ ರದ್ದು ಮಾಡುವಂತೆ ಆದೇಶಿಸಿದೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಗೊಟಗೋಡಿ ಬಳಿ ಇರುವ ಜನಪದ ವಿಶ್ವವಿದ್ಯಾಲಯದಲ್ಲಿ ಒಂದಿಲ್ಲಾ ಒಂದು ಯಡವಟ್ಟು ನಡೆಯುತ್ತಾ ಬಂದಿವೆ. ಸರ್ಕಾರ ಮತ್ತು ರಾಜ್ಯಪಾಲರ ಅನುಮೋದನೆ ಪಡೆಯದೆ, ನಿಯಮಾವಳಿ ರಚಿಸಿದೆ, 2018-19 ರಲ್ಲಿ ಸ್ನಾತಕೋತ್ತರ 8 ಕೊರ್ಸ್‌ಗಳನ್ನ ಪ್ರಾರಂಭ ಮಾಡಿತ್ತು. ಈಗ ವಿಶ್ವವಿದ್ಯಾಲಯ 2018-19ರಿಂದ ಎಂ.ಎ …
Read More »ನದಿ ನೀರನ್ನ ಕಲುಷಿತಗೊಳಿಸಿದ್ರೆ ಕಾರ್ಖಾನೆ ಮುಚ್ಚಿಸುತ್ತೇವೆ: ರಾಮಲಿಂಗಾರೆಡ್ಡಿ ಎಚ್ಚರಿಕೆ
ಬೆಂಗಳೂರು: ನದಿ ನೀರನ್ನ ಕಲುಷಿತಗೊಳಿಸಿದ್ರೆ ಕಾರ್ಖಾನೆಗಳನ್ನ ಮುಚ್ಚಿಸುತ್ತೇವೆ ಎಂದು ಅರಣ್ಯ ಹಾಗೂ ಪರಿಸರ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದರು. ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನಿಂದ ಕುಡಿಯಲು ಯೋಗ್ಯವಲ್ಲದ ನೀರು ಬರ್ತಿದೆ ಅಂತಾ ಎನ್‌ಜಿಟಿಗೆ ತಮಿಳುನಾಡಿನವರು ಕೇಸ್ ಹಾಕಿದ್ದಾರೆ. ಅ.14 ರಂದು ಕೇಸ್ ಇದೆ. BWSSB (ಜಲಮಂಡಳಿ) ಅಧ್ಯಕ್ಷರ ಜೊತೆಗೆ ಮಾತುಕತೆ ನಡೆಸಿದ್ದೇನೆ. ನದಿ ಪಕ್ಕದ ಫ್ಯಾಕ್ಟರಿಗಳಿಗೆ ವಾರ್ನ್ ಮಾಡ್ತೇನೆ. ಎಸ್‌ಟಿಪಿ ಅಳವಡಿಸಬೇಕು, ನದಿ ನೀರನ್ನ ಕಲುಷಿತ ಮಾಡಿದ್ರೇ …
Read More »ತಂತ್ರಜ್ಞಾನ ಬಳಸಿ, ಖುದ್ದು ಹಾಜರಾತಿ ಸಮಸ್ಯೆಯಾಗುತ್ತೆ – ಸೆ.16ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಅನ್ನು ಸೆಷನ್ಸ್ ಕೋರ್ಟ್ ಈಗಾಗಲೇ ಟ್ರಯಲ್ ನಡೆಸುತ್ತಿದೆ. ಸೆಷನ್ ಕೋರ್ಟ್ ವಜಾಗೊಳಿಸಿದ್ದ ವಿಚಾರಣೆಗೆ ಖುದ್ದು ಹಾಜರಾಗಬೇಕೆಂಬ ದರ್ಶನ್ ಅರ್ಜಿ ಈಗ ಹೈಕೋರ್ಟ್‌ನಲ್ಲಿದ್ದು , ಸೆ.16ಕ್ಕೆ ವಿಚಾರಣೆ ಮುಂದೂಡಿದೆ. ಖುದ್ದು ಹಾಜರಾತಿ ಬಗ್ಗೆ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು. ನ್ಯಾ.ವಿ.ಶ್ರೀಶಾನಂದ ಅವರಿದ್ದ ಪೀಠದಲ್ಲಿ ವಿಚಾರಣೆ ನಡೆದಿದ್ದು, ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ವಾದ ಮಂಡಿಸಿ, ಖುದ್ದು ಹಾಜರಾತಿಗೆ ಅವಕಾಶ …
Read More »ಬಾವಿಗೆ ಬಿದ್ದು ಮಹಿಳೆ ಅನುಮಾನಾಸ್ಪದ ಸಾವು
ಚಿಕ್ಕಬಳ್ಳಾಪುರ: ಬಾವಿಗೆ ಬಿದ್ದು ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕುಡುವತಿ ಗ್ರಾಮದಲ್ಲಿ ನಡೆದಿದೆ. ಕಲ್ಪನ (39) ಸಾವನ್ನಪ್ಪಿರುವ ಮಹಿಳೆ. ಕಳೆದ 20 ವರ್ಷಗಳ ಹಿಂದೆ ಕುಡುವತಿ ಗ್ರಾಮದ ತಮ್ಮೇಗೌಡ ಜೊತೆ ಕಲ್ಪನ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದರು. ಇತ್ತೀಚಿಗೆ ಅನಾರೋಗ್ಯದಿಂದ ಕಲ್ಪನ ಕುಡುವತಿ ಗ್ರಾಮದ ತವರು ಮನೆಯಲ್ಲಿದ್ದರು. ಕೌಟುಂಬಿಕ ಕಲಹ ಹಿನ್ನೆಲೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ನಂದಿಗಿರಿಧಾಮ ಪೊಲೀಸರು ಭೇಟಿ ನೀಡಿ …
Read More »ಇದು 100 ದಿನಗಳ ಸಂಭ್ರಮಾಚರಣೆಯಲ್ಲ, ದೃಢ ಕರ್ನಾಟಕದ ಸಂಕಲ್ಪ: ಡಿಸಿಎಂ ಪರಮೇಶ್ವರ್
ಬೆಂಗಳೂರು: ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ನೇತೃತ್ವದ ನಮ್ಮ ಸರ್ಕಾರ ಹೊಸ ಆಲೋಚನೆಗಳು, ಜನಪರವಾದ ಕಾರ್ಯಕ್ರಮಗಳನ್ನು ಕೇವಲ ನೂರು ದಿನಗಳಲ್ಲಿ ರಾಜ್ಯದ ಜನರಿಗೆ ಕೊಡುವ ಕೆಲಸ ಮಾಡಿದೆ ಎಂದು ಉಪ ಮುಖ್ಯಮಂತ್ರಿ ಡಾ .ಜಿ.ಪರಮೇಶ್ವರ್ ಅವರು ಹೇಳಿದರು. ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ರಾಜ್ಯ ಸರ್ಕಾರದ “ದೃಢ ಕರ್ನಾಟಕದ ಸಂಕಲ್ಪ – 100 ದಿನಗಳ ಯಶಸ್ವಿ ಪೂರೈಕೆ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇತ್ತೀಚಿನ ರಾಜಕೀಯ ರಂಗದಲ್ಲಿ …
Read More »ಕೊಡಗು | ಕುಶಾಲನಗರದ ಕೆರೆಗಳಿಗೆ ಕಂಟಕ – 139 ರಲ್ಲಿ 68 ಕೆರೆಗಳು ಒತ್ತುವರಿ ಆರೋಪ
ಮಡಿಕೇರಿ: ಕಾವೇರಿ ನದಿ ನೀರು ಮೈಸೂರು, ಬೆಂಗಳೂರು ಸೇರಿದಂತೆ ಹಲವು ಭಾಗಗಳ ಜನರ ಜೀವನಾಡಿ. ಕಾವೇರಿಯ ಉಗಮ ಪ್ರದೇಶವಾಗಿರುವ ಕೊಡಗಿನ ಜಲಮೂಲಗಳ ಸಂರಕ್ಷಣೆ ಅತ್ಯಂತ ಮಹತ್ವದ್ದು. ಆದರೆ, ಕುಶಾಲನಗರ ತಾಲ್ಲೂಕಿನ ಸರ್ಕಾರಿ ಕೆರೆಗಳ ಸ್ಥಿತಿ ಇದೀಗ ಆತಂಕಕ್ಕೆ ಕಾರಣವಾಗಿದೆ. ತಾಲ್ಲೂಕಿನಲ್ಲಿರುವ 139 ಸರ್ಕಾರಿ ಕೆರೆಗಳ ಪೈಕಿ 68 ಕೆರೆಗಳು ಒತ್ತುವರಿಗೆ ಒಳಗಾಗಿವೆ. ಒತ್ತುವರಿ ತೆರವು ಮಾಡಲಾಗಿದೆ ಎಂದು ಅಧಿಕಾರಿಗಳ ವರದಿಯಲ್ಲಿ ಉಲ್ಲೇಖವಿದ್ದರೂ, ಸ್ಥಳದಲ್ಲಿ ಒತ್ತುವರಿ ಮುಂದುವರಿದಿದೆ ಎಂಬ ಆರೋಪ ಕೇಳಿಬಂದಿದೆ. …
Read More »ಆಟೋಗೆ ಡಿಕ್ಕಿ ಹೊಡೆದ ಕಾಲೇಜು ವಾಹನ; ಆಟೋ ಚಾಲಕ ಸ್ಥಳದಲ್ಲೇ ಸಾವು
ಬೀದರ್ : ಕಾಲೇಜು ವಾಹನ ಮತ್ತು ಆಟೋ ನಡುವೆ ಭೀಕರ ರಸ್ತೆ ಅಪಘಾತವಾಗಿ ಆಟೋ ಚಾಲಕ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ಘಟನೆ ಬೀದರ್ ತಾಲೂಕಿನ ಕೊಳ್ಳಾರ ಕೆ ಗ್ರಾಮದ ಬಳಿ ನಡೆದಿದೆ. 28 ವರ್ಷದ ಆನಂದ ಸಾವನ್ನಪ್ಪಿದ ದುರ್ದೈವಿ. ಹುಮ್ನಾಬಾದ್‌ನಿಂದ ಖಾಸಗಿ ಕಾಲೇಜು ವಾಹನ ಬೀದರ್ ಕಡೆ ಬರುತ್ತಿದ್ದಾಗ ಆಟೋಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಕಾಲೇಜು ವಾಹನ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. …
Read More »
Laxmi News 24×7