Breaking News

ರಾಜ್ಯ

ಮಹಿಳೆಗೆ ಅಶ್ಲೀಲ ಉತ್ತರ ಕೊಟ್ಟ ಮೈಸೂರು ಮಹಾನಗರ ಪಾಲಿಕೆ ಜೋನಲ್​ ಅಧಿಕಾರಿಗೆ ಕಚೇರಿಯಲ್ಲೇ ಧರ್ಮದೇಟು: ವಿಡಿಯೋ ವೈರಲ್

ಮೈಸೂರು: ಆಶ್ರಯ ಮನೆಗಾಗಿ ವಾಸ ದೃಢೀಕರಣ ಪತ್ರ ಕೇಳಿದ ಮಹಿಳೆಯೊಂದಿಗೆ ಅಸಭ್ಯವಾಗಿ ಮಾತನಾಡಿದ ಮೈಸೂರು ಮಹಾನಗರ ಪಾಲಿಕೆಯ (Mysuru City Corporation) ಜೋನಲ್ ಅಧಿಕಾರಿಗೆ ಮಹಿಳೆಯರು ಧರ್ಮದೇಟು ನೀಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಜೋನಲ್ ಅಧಿಕಾರಿ ವಿಷಕಂಠೇಗೌಡ ಎನ್ನುವವರು ಮಹಿಳೆಯೊಂದಿಗೆ ಅಶ್ಲೀಲವಾಗಿ ಮಾತನಾಡಿದ ಆರೋಪ ಎದುರಿಸುತ್ತಿದ್ದು, ಅವರ ವರ್ತನೆಯಿಂದ (Misbehave) ಕುಪಿತರಾದ ಮಹಿಳೆಯರು ಶಾರದಾದೇವಿ ನಗರದ ವಲಯ ಕಚೇರಿಗೆ ನುಗ್ಗಿ ಥಳಿಸಿದ ವಿಡಿಯೋ ಇದೀಗ ವೈರಲ್ (Viral Video) …

Read More »

ಬೆಳ್ಳಂಬೆಳಗ್ಗೆ ಹೊತ್ತಿ ಉರಿದ ಮನೆ: ಗಂಡ ಸಜೀವ ದಹನ, ಪತ್ನಿ ಸ್ಥಿತಿ ಗಂಭೀರ

ಚಿತ್ರದುರ್ಗ: ಹೊಳಲ್ಕೆರೆ ತಾಲೂಕಿನ ತೇಕಲವಟ್ಟಿ ಗ್ರಾಮದಲ್ಲಿ ಇಂದು ಬೆಳಗಿನ ಜಾವ ಮನೆಯೊಂದು ಹೊತ್ತಿ ಉರಿದಿದ್ದು, ಮಲಗಿದ್ದಲ್ಲೇ ವ್ಯಕ್ತಿಯೊಬ್ಬ ಸಜೀವ ದಹನ ಆಗಿದ್ದಾರೆ. ಪ್ರಕಾಶ್ (55) ಮೃತ ದುರ್ದೈವಿ. ಇವರ ಪತ್ನಿ ಗಂಭೀರ ಗಾಯಗೊಂಡಿದ್ದು, ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕಾಶ್​ ಮನೆಯಲ್ಲೇ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದರು. ಬೆಳಗಿನ ಜಾವ ಮನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ನಿದ್ರೆ ಮಾಡುತ್ತಿದ್ದ ಪ್ರಕಾಶ್​ ಅಲ್ಲೇ ಸುಟ್ಟುಕರಕಲಾಗಿದ್ದಾರೆ. ಕಿರಾಣಿ ಅಂಗಡಿಯಲ್ಲಿದ್ದ ಸಾಮಗ್ರಿ ಸಂಪೂರ್ಣ ಸುಟ್ಟು ಬೂದಿಯಾಗಿದೆ. …

Read More »

ಮಳೆಗೆ ಮನೆಯ ಗೋಡೆ ಕುಸಿದು ಅಣ್ಣ, ತಂಗಿ ದಾರುಣ ಸಾವು

ಬೆಂಗಳೂರು: ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ಧಾರಾಕಾರ ಮಳೆಗೆ ಮನೆಯ ಗೋಡೆ ಕುಸಿದು ಅಣ್ಣ, ತಂಗಿ ಮೃತಪಟ್ಟ ಘಟನೆ ನಡೆದಿದೆ. ತುಮಕೂರು ಮೂಲದ ಕಾವ್ಯ (19) ಹಾಗೂ ವೇಣುಗೋಪಾಲ್ (22) ಮೃತರು. ಬಿನ್ನಮಂಗಲದ ಕೃಷ್ಣಪ್ಪ ಎಂಬ ವ್ಯಕ್ತಿಗೆ ಸೇರಿದ ಜಾಗದಲ್ಲಿ ಕಟ್ಟಿದ್ದ ಕಾಂಪೌಂಡ್ ಗೋಡೆ ಪಕ್ಕದಲ್ಲಿದ್ದ ಮನೆ ಮೇಲೆ ಕುಸಿದಿದ್ದು, ಘಟನೆಯಲ್ಲಿ ಸಂಪ್ರಥ್ (22) ಎಂಬ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ನೆಲಮಂಗಲ ಟೌನ್ ಇನ್ಸ್ ಪೆಕ್ಟರ್ ಕುಮಾರ್ ಸ್ಥಳ ಪರಿಶೀಲನೆ ನಡೆಸಿ …

Read More »

ಬುಧವಾರ ಬೆಳಿಗ್ಗೆ ದೇಶದ ಹಲವೆಡೆ ಲಘು ಭೂಕಂಪ

ನವದೆಹಲಿ: ಬುಧವಾರ ಬೆಳಗಿನ ಜಾವ ದೇಶದ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದ್ದು, ರಾಜಸ್ಥಾನದ ಬಿಕಾನೆರ್‌ನಲ್ಲಿ 5.3ರಷ್ಟು ತೀವ್ರತೆಯ ಭೂಕಂಪ ಸಂಭವಿಸಿರುವುದು ರಿಕ್ಟರ್‌ ಮಾಪಕದಲ್ಲಿ ದಾಖಲಾಗಿದೆ. ರಾಷ್ಟ್ರೀಯ ಭೂಕಂಪನ ವೀಕ್ಷಣಾ ಕೇಂದ್ರದ (ಎನ್‌ಸಿಎಸ್‌) ಪ್ರಕಾರ, ಬಿಕಾನೆರ್‌ನಲ್ಲಿ ಬೆಳಗಿನ ಜಾವ 5:24ಕ್ಕೆ ಭೂಕಂಪ ಸಂಭವಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ ಯಾವುದೇ ಸಾವು-ನೋವು ಅಥವಾ ಆಸ್ತಿ-ಪಾಸ್ತಿಗೆ ಹಾನಿಯಾಗಿಲ್ಲ. ಮೇಘಾಲಯದ ಪಶ್ಚಿಮ ಗಾರೊ ಹಿಲ್ಸ್‌ ಮತ್ತು ಲಡಾಖ್‌ ಪ್ರದೇಶಗಳಲ್ಲಿ ಕ್ರಮವಾಗಿ ಬೆಳಗಿನ ಜಾವ 2:10 ಮತ್ತು …

Read More »

ರಾಜ್ಯದ 27 ವಲಯ ಅರಣ್ಯಾಧಿಕಾರಿಗಳ ವರ್ಗಾವಣೆ

ಬೆಂಗಳೂರು – ರಾಜ್ಯದ 27 ವಲಯ ಅರಣ್ಯಾಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ರಾಜ್ಯದಲ್ಲಿ ಜುಲೈ 22ರ ವರೆಗೆ ವರ್ಗಾವಣೆಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ವರ್ಗಾವಣೆ ಪ್ರಕ್ರಿಯೆ ಜೋರಾಗಿ ನಡೆಯುತ್ತಿದೆ. ವಲಯಾರಣ್ಯಾಧಿಕಾರಿಗಳ ವರ್ಗಾವಣೆ ವಿವರ ಇಲ್ಲಿದೆ –

Read More »

‘ನೀವು ಬಂದು ಲೈವ್​ ನೋಡಬೇಕು’; ಅಂಜಿಕ್ಯಾ ರಹಾನೆಗೆ ರಾಜ್​ ಕುಂದ್ರಾ ಹೀಗೆ ಹೇಳಿದ್ರು

ನೀಲಿಚಿತ್ರ ನಿರ್ಮಾಣ ಮಾಡುತ್ತಿದ್ದ ಆರೋಪದ ಮೇಲೆ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಅವರನ್ನು ಬಂಧಿಸಲಾಗಿದೆ. ಅವರ ಬಂಧನದ ನಂತರದಲ್ಲಿ ಸಾಕಷ್ಟು ಹಳೆಯ ಟ್ವೀಟ್​ಗಳು ವೈರಲ್​ ಆಗಿವೆ. ಅಲ್ಲದೆ, ಈ ಬಗ್ಗೆ ಮೀಮ್​ಗಳು ಕೂಡ ಹರಿದಾಡಿದೆ. ಟೀಂ ಇಂಡಿಯಾ ಟೆಸ್ಟ್​ ತಂಡದ ಉಪನಾಯಕ ಹಾಗೂ ರಾಜ್​ ಕುಂದ್ರಾ 2012ರಲ್ಲಿ ಟ್ವೀಟ್​ ಮೂಲಕ ಸಂಭಾಷಣೆ ನಡೆಸಿದ್ದರು. ರಾಜ್​ ಬಗ್ಗೆ ರಹಾನೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಈ ಟ್ವೀಟ್​ ಈಗ ಸಾಕಷ್ಟು ವೈರಲ್​ …

Read More »

KSRTC ಬಸ್ – ಕಾರು ಮಧ್ಯೆ ಮುಖಾಮುಖಿ ಢಿಕ್ಕಿ

ಕೆಎಸ್ಸಾರ್ಟಿಸಿ ಬಸ್ ಹಾಗೂ ಸ್ವಿಫ್ಟ್ ಡಿಸೈರ್ ಕಾರು ಮಧ್ಯೆ ಢಿಕ್ಕಿ ಸಂಭವಿಸಿದ ಘಟನೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೈಕಂಬ ಸಮೀಪ ಮಂಗಳವಾರದಂದು ನಡೆದಿದೆ. ಸುಬ್ರಹ್ಮಣ್ಯದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಹಾಗೂ ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಹಾಸನ ಮೂಲದವರಿದ್ದ ಕಾರು ಕೈಕಂಬ ಬಳಿ ಮುಖಾಮುಖಿ ಢಿಕ್ಕಿಯಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಹಾಸನದ ಚಾಲಕ ಪುಟ್ಟರಾಜು, ಜಯಂತಿ, ಲೀಲಾ ಎಂಬವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಕಡಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು …

Read More »

ನದಿಯಲ್ಲಿ ಹುಚ್ಚು ಸಾಹಸ; ಸೇತುವೆ ಕೆಳಕ್ಕೆ ಉರುಳಿಬಿದ್ದ ಟ್ರ್ಯಾಕ್ಟರ್

ವಿಜಯಪುರ: ಜಿಲ್ಲೆಯಲ್ಲಿ ಡೋಣಿ ನದಿಯ ರಭಸಕ್ಕೆ ಸೇತುವೆಯ ಕೆಳಗೆ ಟ್ರ್ಯಾಕ್ಟರ್ ಉರುಳಿದ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಗುಂಡಕಾನಾಳ ಗ್ರಾಮದ ಮಧುಗೌಡ ಪಾಟೀಲ ಅವರ ಎಂಬುವವರಿಗೆ ಸೇರಿದ್ದ ಟ್ರ್ಯಾಕ್ಟರ್ ಹಡಗಿನಾಳ ಮಾರ್ಗದಲ್ಲಿ ಡೋಣಿ ಸೇತುವೆಗೆ ಅಡ್ಡಲಾಗಿ ನಿರ್ಮಿಸಲಾಗಿರುವ ನೆಲಮಟ್ಟದ ಸೇತುವೆಯ ಮೇಲೆ ವಾಹನ ಚಲಾಯಿಸುತ್ತಿರುವಾಗ ಟ್ರ್ಯಾಕ್ಟರ್ ಸೇತುವೆಯ ಕೆಳಗೆ ಉರುಳಿದೆ. ತಾಳಿಕೋಟಿ ಪಟ್ಟಣದಿಂದ ಮೂಕಿಹಾಳ ಗ್ರಾಮದತ್ತ ಹೊರಟಿದ್ದ ಟ್ರ್ಯಾಕ್ಟರ್ ಡೋಣಿ ನದಿಯ ಮೇಲೆ ಪ್ರವಾಹದ ನೀರು ಇದ್ದರೂ …

Read More »

ಅಪ್ಪ ಅಮ್ಮನ ಜೊತೆಗೆ ಖುಷಿ ಖುಷಿಯಾಗಿ ಮಾತನಾಡಿದ್ದ ಯೋಧ ಮಾತನಾಡಿದ ಒಂದೇ ಗಂಟೆಯಲ್ಲಿ ಯೋಧನ ಹುತಾತ್ಮನಾದ ಸುದ್ದಿ ಬರಸಿಡಿಲಂತೆ ಬಡಿದಿದೆ.

ಗದಗ: ಆತ 12 ವರ್ಷಗಳಿಂದ ಸೈನಿಕನಾಗಿ ದೇಶ ಕಾಯ್ತಿದ್ದ. ಒಂದು ತಿಂಗಳ ಹಿಂದೆ ರಜೆ ಮೇಲೆ ಊರಿಗೆ ಬಂದಿದ್ದ. ಬಳಿಕ ಮೇಲಾಧಿಕಾರಿಗಳ ಕರೆ ಮೇಲೆ ಮತ್ತೆ ಸೇವೆಗೆ ಹಾಜರಾದ. ಆದ್ರೆ ಬೆಳಿಗ್ಗೆ ಅಪ್ಪ ಅಮ್ಮನ ಜೊತೆಗೆ ಖುಷಿ ಖುಷಿಯಾಗಿ ಮಾತನಾಡಿದ್ದ ಯೋಧ ಮಾತನಾಡಿದ ಒಂದೇ ಗಂಟೆಯಲ್ಲಿ ಯೋಧನ ಹುತಾತ್ಮನಾದ ಸುದ್ದಿ ಬರಸಿಡಿಲಂತೆ ಬಡಿದಿದೆ. ಇಂದು ಛತ್ತೀಸ್​ಘಡದಲ್ಲಿ ಗದಗ ಮೂಲದ ಯೋಧ ಹುತಾತ್ಮನಾಗಿರೋ ಸುದ್ದಿ ತಿಳಿದು ಗೊಜನೂರು ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. …

Read More »

ಹಾವೇರಿ: ಇನ್ನೂ ಕೈಸೇರದ ‘ಕೋವಿಡ್‌ ರಿಸ್ಕ್‌ ಭತ್ಯೆ’

ಹಾವೇರಿ: ಕೋವಿಡ್‌ ಸೇವೆಯಲ್ಲಿ ಜೀವ ಒತ್ತೆಯಿಟ್ಟು ಕರ್ತವ್ಯ ನಿರ್ವಹಿಸಿದ ‘ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ’ಗಳಿಗೆ (ಲ್ಯಾಬ್‌ ಟೆಕ್ನಿಷಿಯನ್‌) ರಾಜ್ಯ ಸರ್ಕಾರ ಘೋಷಿಸಿದ ‘ಕೋವಿಡ್‌ ರಿಸ್ಕ್‌ ಭತ್ಯೆ’ ಕಾಗದದಲ್ಲೇ ಉಳಿದಿದ್ದು, ಸಿಬ್ಬಂದಿಗಳಿಗೆ ಇನ್ನೂ ದೊರೆತಿಲ್ಲ. ಕೋವಿಡ್‌ ಸೇವೆಯಲ್ಲಿ ಕರ್ತವ್ಯ ನಿರ್ವಹಿಸಿದ ವೈದ್ಯರಿಗೆ ₹10 ಸಾವಿರ, ಶುಶ್ರೂಷಕ ಅಧಿಕಾರಿಗಳಿಗೆ ₹8 ಸಾವಿರ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (ಎನ್‌ಎಚ್‌ಎಂ) ಕರ್ತವ್ಯ ನಿರ್ವಹಿಸುವ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳಿಗೆ ₹5 ಸಾವಿರ ‘ಕೋವಿಡ್‌ ರಿಸ್ಕ್‌ ಭತ್ಯೆ’ಯನ್ನು 2021ರ …

Read More »