Home / ರಾಜ್ಯ (page 2340)

ರಾಜ್ಯ

ಹು-ಧಾ ಮಹಾನಗರ ಪೊಲೀಸ ಆಯುಕ್ತರನ್ನು ಅಮಾನತು ಮಾಡಿ:ಅಣ್ವೇಕರ ಆಗ್ರಹ

ಹು-ಧಾ ಮಹಾನಗರ ಪೊಲೀಸ ಆಯುಕ್ತರನ್ನು ಅಮಾನತು ಮಾಡಿ:ಅಣ್ವೇಕರ ಆಗ್ರಹ ಹುಬ್ಬಳ್ಳಿ:ಪಾಕ್ ಪರ ಘೋಷಣೆ ಕೂಗಿದ ದೇಶದ್ರೋಹದ ಪ್ರಕರಣದಲ್ಲಿ ಹು-ಧಾ ಮಹಾನಗರ ಪೊಲೀಸ ಆಯುಕ್ತ ಮೃಧುಧೋರಣೆ ಅನುಸರಿಸುತ್ತಿರುವುದು ಖಂಡನೀಯವಾಗಿದೆ‌‌‌.ಕೂಡಲೇ ಪೊಲೀಸ ಆಯುಕ್ತರನ್ನು ಅಮಾನತು ಮಾಡಬೇಕು ಎಂದು ಯುವ ವಕೀಲರ ಸಂಘದ ಮುಖಂಡ ಅಶೋಕ ಅಣ್ವೇಕರ ಹೇಳಿದರು. ನಗರದಲ್ಲಿಂದು ಪ್ರತಿಭಟನೆ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು,ದೇಶದ್ರೋಹದ ಪ್ರಕರಣದಲ್ಲಿ ಪೊಲೀಸ ಆಯುಕ್ತರು ಮೃಧುಧೋರಣೆ ಅನುಸರಿಸುವ ಮೂಲಕ ದೇಶದ್ರೋಹದ ಆರೋಪಿತರಿಗೆ ರಕ್ಷಣೆ ನೀಡಿರುವುದು ಖಂಡನೀಯವಾಗಿದೆ. …

Read More »

ಸ್ವಾಗತ ಕಮಾನಿನಲ್ಲಿ ಅಷ್ಟೇ ಸಕ್ಕರೆ ನಾಡು:

ಮಂಡ್ಯ: ಮೈಸೂರಿನಿಂದ ಬೆಂಗಳೂರಿಗೆ ಬರುವ ರಸ್ತೆಯ ಮಧ್ಯ ಭಾಗದಲ್ಲಿ ಸಕ್ಕರೆ ನಗರಿ ಮಂಡ್ಯಗೆ ಸ್ವಾಗತ ಎಂದು ಮಂಡ್ಯದ ಸ್ವಾಗತ ಕಮಾನನ್ನು ಹಾಕಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಅತೀ ಹೆಚ್ಚು ಕಬ್ಬು ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯಗೆ ಸಕ್ಕರೆ ನಾಡು ಎಂದು ಹೆಸರು ಬಂದಿದೆ. ಆದರೆ ಇದೀಗ ಮಂಡ್ಯ ಜಿಲ್ಲೆಯಲ್ಲಿ ಸಕ್ಕರೆ ಎನ್ನುವುದು ಕೇವಲ ಸ್ವಾಗತದ ಕಮಾನಿನಲ್ಲಿ ಇದೆ. ಮಂಡ್ಯ ಜಿಲ್ಲೆಯ ಜೀವಾಳವಾಗಿದ್ದ ಮೈ ಶುಗರ್ ಹಾಗೂ ಪಾಂಡವಪುರ ಸಕ್ಕರೆ ಕಾರ್ಖಾನೆಗಳ ಬಾಗಿಲು ಮುಚ್ಚಿರುವ ಹಿನ್ನೆಲೆಯಲ್ಲಿ …

Read More »

ಸಿದ್ದರಾಮಯ್ಯ ಸಾಹೇಬ್ರಿಗೆ ಏನ್ ಗೊತ್ತು, ಎಲ್ಲವನ್ನ ಕಾಮಾಲೆ ಕಣ್ಣಿನಲ್ಲಿ ನೋಡೋದು ಬಿಡಿ: ಸೋಮಣ್ಣ ಟಾಂಗ್

ಬೆಂಗಳೂರು: ಇಂದು ಭಾರತಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ವಸತಿ ಸಚಿವ ವಿ.ಸೋಮಣ್ಣ ಗೇಲಿ ಮಾಡಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಅಗ್ರಹಾರ ಪಾಳ್ಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭಾರತಕ್ಕೆ ಡೊನಾಲ್ಡ್ ಟ್ರಂಪ್ ಭೇಟಿಯಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ತಿರುಗೇಟು ನೀಡಿದರು. ಈ ವಿಚಾರದಲ್ಲಿ ಸಿದ್ದರಾಮಯ್ಯ ಸಾಹೇಬ್ರಿಗೆ ಏನ್ ಗೊತ್ತು ಟ್ರಂಪ್ ಎಲ್ಲಿ, ಸಿದ್ದರಾಮಯ್ಯ ಎಲ್ಲಿ. ಅಮೆರಿಕ …

Read More »

ಮಾರ್ಚ್ ಮೊದಲ ವಾರದಲ್ಲಿ ಕೆಪಿಸಿಸಿ ಅಧ್ಯಕ್ಷರ ನೇಮಕವಾಗುವ ಸಾಧ್ಯತೆ ಇದೆ: ಮಾಜಿ ಸ್ಪೀಕರ್. ಕೆ.ಬಿ.ಕೋಳಿವಾಡ ಅಭಿಪ್ರಾಯ

ಬೆಂಗಳೂರು, ಫೆ.24-ಮಾರ್ಚ್ ಮೊದಲ ವಾರದಲ್ಲಿ ಕೆಪಿಸಿಸಿ ಅಧ್ಯಕ್ಷರ ನೇಮಕವಾಗುವ ಸಾಧ್ಯತೆ ಇದೆ. ಆದಷ್ಟು ಬೇಗ ನೇಮಕ ಮಾಡದಿದ್ದರೆ ಪಕ್ಷ ಸೊರಗಿ ಹೋಗುತ್ತದೆ ಎಂದು ಮಾಜಿ ಸ್ಪೀಕರ್. ಕೆ.ಬಿ.ಕೋಳಿವಾಡ ಅಭಿಪ್ರಾಯಪಟ್ಟಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧ್ಯಕ್ಷರ ನೇಮಕ ತಡ ಮಾಡಿದಷ್ಟು ಪಕ್ಷಕ್ಕೆ ಹಾನಿಕಾರಕ. ಹೈಕಮಾಂಡ್ ಗಮನಕ್ಕೂ ತರುವ ಪ್ರಯತ್ನ ನಾನು ಮಾಡುತ್ತೇನೆ. ಕೆಪಿಸಿಸಿ ಪದಾಧಿಕಾರಿಗಳ ನೇಮಕ ಕೂಡ ಆಗಬೇಕಾಗಿದೆ. ಹೈಕಮಾಂಡ್ ಬಳಿಯೂ ಸ್ವಲ್ಪ ಗೊಂದಲವಿದೆ. ಅಲ್ಲಿ ಎಐಸಿಸಿ ಅಧ್ಯಕ್ಷರು ಯಾರು ಆಗಬೇಕು …

Read More »

ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಚಂದನ್, ನಿವೇದಿತಾ

ಮೈಸೂರು: ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿವಾಹ ಬುಧವಾರ ಮೈಸೂರಿನಲ್ಲಿ ನಡೆಯಲಿದ್ದು, ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಮೈಸೂರಿನ ದಟ್ಟಗಹಳ್ಳಿಯ ನಿವೇದಿತಾ ಗೌಡ ಮನೆಯಲ್ಲಿ ಮದುವೆ ಕಾರ್ಯಗಳು ಜೋರಾಗಿ ನಡೆದಿದ್ದು, ಫೆ.25 ಮತ್ತು 26ರಂದು ಕನ್ವೆನ್ಶನ್ ಹಾಲ್‍ನಲ್ಲಿ ನಡೆಯಲಿರುವ ವಿವಾಹಕ್ಕೆ ಗಣ್ಯರ ದಂಡೇ ಹರಿದು ಬರುತ್ತಿದೆ. ಈ ಮದುವೆ ಸಮಾರಂಭಕ್ಕೆ ಸ್ಯಾಂಡಲ್‍ವುಡ್‍ನ ಕಲಾವಿದರು, ಗಾಯಕರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಸೇರಿ ಸುಮಾರು ಐದು ಸಾವಿರಕ್ಕೂ ಅಧಿಕ ಜನ ಸಾಕ್ಷಿ …

Read More »

ಸಾಹುಕಾರ್‌ಗಾಗಿ ನಿಯಮವನ್ನೇ ಗಾಳಿಗೆ ತೂರಿದ ಸಿಎಂ ಬಿಎಸ್‍ವೈ?

ಬೆಂಗಳೂರು: ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೋಳಿಯವರಿಂದ ಬಿಜೆಪಿ ಸರ್ಕಾರ ಬಂತು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಸರ್ಕಾರ ಬರಲು ಕಾರಣರಾದ 17 ಜನರ ಮೇಲೆ ಸಿಎಂ ಯಡಿಯೂರಪ್ಪ ಅತಿ ಹೆಚ್ಚು ಪ್ರೀತಿ ಇಟ್ಟುಕೊಂಡಿದ್ದಾರೆ. 17 ಜನರು ಏನೇ ಕೇಳಿದರೂ ತಕ್ಷಣ ಗ್ರೀನ್ ಸಿಗ್ನಲ್ ಕೊಟ್ಟು ಕೆಲಸ ಮಾಡಿಕೊಡ್ತಾರೆ. ಹೀಗೆ ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೋಳಿಯ ಒಂದು ಡಿಮ್ಯಾಂಡ್ ಪೂರೈಸಲು ಸಿಎಂ ಯಡಿಯೂರಪ್ಪ ನಿಯಮಗಳನ್ನೇ ಗಾಳಿಗೆ ತೂರಿದ್ದಾರೆ. ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿ …

Read More »

ಬಾಲಿವುಡ್ ಸೂಪರ್ ಹಿಟ್ ಸಿನ್ಮಾ ನೆನಪು ಮಾಡ್ಕೊಂಡ ಟ್ರಂಪ್

ಅಹಮದಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಭಾಷಣದಲ್ಲಿ ಬಾಲಿವುಡ್ ಸೂಪರ್ ಹಿಟ್ ಸಿನಿಮಾವನ್ನು ನೆನಪು ಮಾಡಿಕೊಂಡರು. ಮೊಟೆರಾದ ಸ್ಟೇಡಿಯಂಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಡೊನಾಲ್ಡ್ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ದೇಶದ ಪ್ರತಿಯೊಂದು ಕ್ಷೇತ್ರಗಳ ಸಾಧನೆಯನ್ನು ತಿಳಿಸಿ ನಾನು ಭಾರತವನ್ನು ಪ್ರೀತಿಸುತ್ತೇನೆ. ಬಾಲಿವುಡ್ ಮತ್ತು ಹಾಲಿವುಡ್ ಹೊಸತನಕ್ಕೆ ಮಾದರಿಯಾಗಿವೆ. ಶಾರೂಖ್ ಖಾನ್ ಮತ್ತು ಕಾಜೋಲ್ ನಟನೆಯ ‘ದಿಲ್‍ವಾಲೇ ದುಲ್ಹನಿಯಾ ಲೇ ಜಾಯೇಂಗೆ’ (ಡಿಡಿಎಲ್‍ಜೆ) ಚಿತ್ರದ ಯಶಸ್ಸು ಭಾರತೀಯ ಸಿನಿಮಾ ಏನು …

Read More »

ಕರ್ನಾಟಕವನ್ನು ಥೈಲ್ಯಾಂಡ್ ಮಾಡಲು ಹೊರಟಿದ್ದಾರೆ: ಎಚ್.ಕೆ ಪಾಟೀಲ್

ಹುಬ್ಬಳ್ಳಿ: ಬಿಜೆಪಿಯ ನಾಯಕರು ಕ್ಯಾಸಿನೋ ಅಂತಹ ಜೂಜು ಅಡ್ಡೆಗಳನ್ನು ಕರ್ನಾಟಕದಲ್ಲಿ ಸ್ಥಾಪನೆ ಮಾಡುವ ಮೂಲಕ ಕರ್ನಾಟಕವನ್ನು ಥೈಲ್ಯಾಂಡ್ ಮಾಡಲು ಹೊರಟಿದ್ದಾರೆ. ಪ್ರವಾಸಿಗರನ್ನು ಆಕರ್ಷಿಸಲು ರಾಜ್ಯದ ಸಂಸ್ಕೃತಿಗೆ ಧಕ್ಕೆ ತರುತ್ತಿರುವುದು ಖಂಡನೀಯವಾಗಿದೆ ಎಂದು ಮಾಜಿ ಸಚಿವ ಎಚ್.ಕೆ ಪಾಟೀಲ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನಸಭಾ ಹಾಗೂ ವಿಧಾನ ಪರಿಷತ್ ಕಲಾಪ ಪೂರ್ಣಗೊಂಡ ಬೆನ್ನಲ್ಲೇ ಸಚಿವ ಸಿ.ಟಿ ರವಿ ಅವರು ಪ್ರವಾಸಿಗರನ್ನು ಆಕರ್ಷಿಸಲು ಜೂಜು ಅಡ್ಡೆ …

Read More »

ಸಬರಮತಿ ಆಶ್ರಮದಲ್ಲಿ ಗಾಂಧಿ ಚರಕದಿಂದ ನೂಲು ನೇಯ್ದ ಟ್ರಂಪ್ ದಂಪತಿ

ಅಹಮದಾಬಾದ್, ಫೆ.24- ಭಾರತ ಪ್ರವಾಸ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಥಮ ಮಹಿಳೆ ಮಲೇನಿಯಾ ಟ್ರಂಪ್ ಅಹಮದಾಬಾದ್‍ನಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಸಬರ್‍ಮತಿ ಆಶ್ರಮಕ್ಕೆ ಭೇಟಿ ನೀಡಿದರು.ಮೋದಿಯವರೊಂದಿಗೆ ಇಂದು ಮಧ್ಯಾಹ್ನ ಆಶ್ರಮಕ್ಕೆ ತೆರಳಿದ ಟ್ರಂಪ್ ದಂಪತಿ ಬಾಪು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು ಟ್ರಂಪ್ ದಂಪತಿಗಳಿಗೆ ಮಾರ್ಗದರ್ಶಕರಾಗಿದ್ದ ಟ್ರಂಪ್ ಆಶ್ರಮದ ಮಹತ್ವ ಮತ್ತು ಅಲ್ಲಿ ಗಾಂಧೀಜಿಯವರು ಬಳಸುತ್ತಿದ್ದ ವಸ್ತುಗಳ ಬಗ್ಗೆ ವಿವರಿಸಿದರು.ಆಶ್ರಮದಲ್ಲಿದ್ದ ಗಾಂಧೀಜಿ ಮತ್ತು …

Read More »

ತರಬೇತಿ ಸಮಯದಲ್ಲಿ ತಲೆಗೆ ಪೆಟ್ಟು ಬಿದ್ದು ಯೋಧ ಸಾವು

ಧಾರವಾಡ, ಫೆ.24-ಭಾರತೀಯ ಸೇನೆಯ ತರಬೇತಿಯ ಸಮಯದಲ್ಲಿ ತಲೆಗೆ ಬಲವಾದ ಏಟು ಬಿದ್ದು, ಯೋಧನೊಬ್ಬ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ನಾಗಪುರ ಸೇನಾ ಕ್ಯಾಂಪ್‍ನಲ್ಲಿ ನಡೆದಿದೆ. ಧಾರವಾಡ ತಾಲೂಕಿನ ನಿಗದಿ ಗ್ರಾಮದ ಮಹೇಶ್ ಸಿಂಗನಹಳ್ಳಿ (20) ಮೃತಪಟ್ಟ ಯೋಧ. ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ಸೇನೆಗೆ ಸೇರಿದ್ದ ಇವರು ತಂದೆ-ತಾಯಿ, ಓರ್ವ ಸಹೋದರ, ಇಬ್ಬರು ಸಹೋದರಿಯನ್ನು ಅಗಲಿದ್ದಾರೆ. ಇಂದು ಯೋಧನ ಸ್ವಗ್ರಾಮಕ್ಕೆ ಪಾರ್ಥಿವ ಶರೀರ ಆಗಮಿಸಲಿದ್ದು, ಯೋಧನ ಅಗಲಿಕೆಯಿಂದ ಗ್ರಾಮದಲ್ಲಿ ನೀರವ ಮೌನ …

Read More »