ಇಂದಿನಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಪ್ರಿ-ಪೇಯ್ಡ್ ಆಟೋ ಸೇವೆ ಪ್ರಾರಂಭ.
ಬೆಂಗಳೂರು ಮೂಲದ ಪ್ರಿ-ಪೇಯ್ಡ್ ಆಟೋ ಮತ್ತು ಟ್ಯಾಕ್ಸಿ ಸರ್ವಿಸ್ ಈ ಸೌಲಭ್ಯವನ್ನು ಸ್ಥಾಪಿಸಿದೆ (ಪಿಎಎಟಿಎಸ್), ಪೊಲೀಸ್ ಮಾರ್ಗದರ್ಶನದಲ್ಲಿ ಈ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡುವರು.
ಈಗ ಆರಂಭದಲ್ಲಿ ಮೊದಲು ಬೆಳಿಗ್ಗೆ 5 ರಿಂದ ರಾತ್ರಿ 10 ರವರೆಗೆ ಸೇವೆ ಲಭ್ಯವಿರುತ್ತದೆ. ಮತ್ತು
1.6 ಕಿ.ಮೀ.ಗೆ 28 ರೂಪಾಯಿ ಚಾರ್ಜ್ ಮಾಡುವರು.
ನಗರದೊಳಗಿನ ಎಲ್ಲಾ ಸ್ಥಳಗಳಿಗೆ ಮತ್ತು ಧಾರವಾಡ ಎಸ್‌ಡಿಎಂ ವೈದ್ಯಕೀಯ ಕಾಲೇಜುವರೆಗೆ ಸೇವೆಗಳನ್ನು ಒದಗಿಸಲಿದ್ದಾರೆ.