Breaking News
Home / ಹುಬ್ಬಳ್ಳಿ (page 70)

ಹುಬ್ಬಳ್ಳಿ

ಮನೆಯವರು ಮದುವೆಗೆ ತೆರಳಿ ವಾಪಸ ಬರೋದರೊಳಗೆ ಅಪಾರ ಪ್ರಮಾಣದ ಚಿನ್ನಾಭರಣ. ನಗದು ರೇಷ್ಮೆ ಸೀರೆಗಳು ಕಳ್ಳತನ

ಹುಬ್ಬಳ್ಳಿ: ಮನೆಯವರು ಮದುವೆಗೆ ತೆರಳಿ ವಾಪಸ ಬರೋದರೊಳಗೆ ಅಪಾರ ಪ್ರಮಾಣದ ಚಿನ್ನಾಭರಣ. ನಗದು ರೇಷ್ಮೆ ಸೀರೆಗಳು ಕಳ್ಳತನವಾದ ಘಟನೆ ಹುಬ್ಬಳ್ಳಿಯ ಆದರ್ಶನಗರದಲ್ಲಿ ನಡೆದಿದೆ. ನೀರಾವರಿ ಇಲಾಖೆಯ ನಿವೃತ್ತ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಹಾದೇವಪ್ಪ ಭೀಮಕ್ಕನವರ ಎಂಬವರ ಮನೆಯಲ್ಲೇ ಕಳ್ಳತನ ನಡೆದಿದೆ. 380 ಗ್ರಾಂ ಚಿನ್ನ, 15 ಕೆಜಿ ಬೆಳ್ಳಿ, 10ಬೆಲೆಬಾಳುವ ರೇಷ್ಮೆ ಸೀರೆ, ಸಾವಿರಾರೂ ರೂಪಾಯಿ ನಗದನ್ನ ದೋಚಿಕೊಂಡು ಪರಾರಿಯಾಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಘಟನೆ ನಡೆದಿದ್ದು, ಮದುವೆಗಾಗಿ ಮನೆಯವರು …

Read More »

ಬಂಗಾರಕ್ಕೆ ಹಾಲ್ ಮಾರ್ಕ್ ಹಾಕಿ ಕೊಡುತ್ತೇನೆ, ಎಂದು ಹೇಳಿ ಮೋಸ ಮಾಡುತ್ತಿದ್ದ ವಂಚಕನನ್ನು ಬಂಧಿಸಿರುವ ಪೊಲೀಸರು

ಹುಬ್ಬಳ್ಳಿ: ಬಂಗಾರಕ್ಕೆ ಹಾಲ್ ಮಾರ್ಕ್ ಹಾಕಿ ಕೊಡುತ್ತೇನೆ, ಕಲರ್ ಪಾಲೀಷ್ ಮಾಡುತ್ತೇನೆ ಎಂದು ಹೇಳಿ ಮೋಸ ಮಾಡುತ್ತಿದ್ದ ವಂಚಕನನ್ನು ಬಂಧಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಸುನಿಲ್ ಪತ್ತಾರ ಎಂದು ಗುರುತಿಸಲಾಗಿದೆ. ಈತ ನನ್ನು ಬಂಧಿಸುವಲ್ಲಿ ವಿದ್ಯಾನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಸುನಿಲ್ ಪತ್ತಾರ ಸಾರ್ವಜನರಿಕರನ್ನು ನಂಬಿಸಿ ಬಂಗಾರಕ್ಕೆ ಹಾಲ್ ಮಾರ್ಕ್ ಹಾಕಿ ಕೊಡುತ್ತೇನೆ. ಕಲರ್ ಪಾಲೀಷ್ ಮಾಡುತ್ತೇನೆ ಅಂತ ಮೋಸ ಮಾಡುತ್ತಿದ್ದ. ವಂಚಕನ ಬಗ್ಗೆ ಸಾರ್ವಜನಿಕರು ದೂರು …

Read More »

ಹುಬ್ಬಳ್ಳಿಯಿಂದ ರಾಜಹಂಸ, ಸ್ಲೀಪರ್, ವೋಲ್ವೋ ಬಸ್‌ಗಳ ಪುನರಾರಂಭ

ಹುಬ್ಬಳ್ಳಿ (ಡಿ. 17):  ಕೊರೋನಾ ಲಾಕ್ ಡೌನ್ ನಂತರ ದಿನ ಕಳೆದಂತೆ ದೂರ ಮಾರ್ಗದ ಬಸ್ಸುಗಳ ಪ್ರಯಾಣಿಕರ ಸಂಖ್ಯೆಯಲ್ಲಿ ಚೇತರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ಒಂಭತ್ತು ತಿಂಗಳಿಂದ ಸ್ಥಗಿತಗೊಂಡಿದ್ದ ಹೈದರಾಬಾದ್, ಸೊಲ್ಲಾಪುರ, ಮಂಗಳೂರು ಮತ್ತು ಬೆಂಗಳೂರಿಗೆ ಮತ್ತಷ್ಟು  ಸ್ಲೀಪರ್, ವೋಲ್ವೊ ಮತ್ತು ರಾಜಹಂಸ ಬಸ್ಸುಗಳ ಸಂಚಾರವನ್ನು ಪುನರಾರಂಭಿಸಲಾಗಿದೆ. ಈ ಬಸ್​ಗಳು ಗೋಕುಲ ರಸ್ತೆಯ ಬಸ್ ನಿಲ್ದಾಣದಿಂದ ಹೊರಡುತ್ತವೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. …

Read More »

ಹುಬ್ಬಳ್ಳಿಯಲ್ಲಿರುವ ಶ್ರೀಗಳ ಐಕ್ಯಸ್ಥಳಕ್ಕೆ ಸಿಕ್ಕಿದಷ್ಟು ಮನ್ನಣೆ ಅವರ ಹುಟ್ಟೂರು ಚಳಕಾಪುರಕ್ಕೆ ಸಿಕ್ಕಿಲ್ಲ.

ಬೀದರ್; ಕರ್ನಾಟಕದ ಪ್ರಸಿದ್ಧ ಮಠಗಳಲ್ಲಿ ಹುಬ್ಬಳ್ಳಿಯ ಸಿದ್ಧಾರೂಢ ಮಠ ಕೂಡ ಒಂದು. ಕೇವಲ ರಾಜ್ಯದಲ್ಲಷ್ಟೇ ಅಲ್ಲ, ದೇಶ- ವಿದೇಶಗಳಲ್ಲೂ ಈ ಮಠದ ಭಕ್ತರಿದ್ಧಾರೆ. ಸಿದ್ಧಾರೂಢ ಸ್ವಾಮೀಜಿಗಳ ಐಕ್ಯಸ್ಥಳವಾದ ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಕೋಟ್ಯಾಂತರ ಜನರು ಭಕ್ತರಿದ್ದು, ಸಾವಿರಾರು ಕೋಟಿ ಆಸ್ತಿ ಇದೆ. ಆದರೆ ಈ ಪವಾಡ ಪುರುಷನ ಹುಟ್ಟೂರು ಯಾವುದು ಅಂತ ಅದೇಷ್ಟೋ ಭಕ್ತರಿಗೆ ಗೊತ್ತಿಲ್ಲ. ಬೀದರ್ ಜಿಲ್ಲೆಯಲ್ಲಿ ಹುಟ್ಟಿದ ಸಿದ್ಧಾರೂಢರು ಹುಬ್ಬಳ್ಳಿಯಲ್ಲಿ ನೆಲೆನಿಂತು ಕೋಟ್ಯಾಂತರ ಭಕ್ತರನ್ನು ಹೊಂದಿರುವ ಪವಾಡ …

Read More »

ಜಮೀನಿಗೆ ನುಗ್ಗಿದ ಬಸ್: ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯ

ಧಾರವಾಡ:  ರಾಜ್ಯ  ಸಾರಿಗೆ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಹೊಲಕ್ಕೆ ನುಗ್ಗಿದ  ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರಕೋಳ ಮತ್ತು ಮೊರಬ ಗ್ರಾಮಗಳ ರಸ್ತೆಯ ಮಧ್ಯ ಸಂಭವಿಸಿದೆ. ನವಲಗುಂದ ತಾಲೂಕಿನ ಹನಸಿ ಗ್ರಾಮದಿಂದ ಧಾರವಾಡದತ್ತ ಬರುತ್ತಿದ್ದ ಬಸ್  ಚಾಲಕನ ನಿಯಂತ್ರಣ ತಪ್ಪಿ, ಹೊಲದೊಳಗೆ ನುಗ್ಗಿದೆ. ಕೆಲವರು ಕಿಡಕಿಯಿಂದ ಜಿಗಿದು ಹೊರಗಡೆ ಹೋಗಿದ್ದಾರೆ. ಇನ್ನೂ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಳುಗಳನ್ನು ಆಸ್ಪತ್ರೆಗೆ  ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.  ಅದೃಷ್ಟವಶಾಹತ್ …

Read More »

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ಹುಬ್ಬಳ್ಳಿಯಲ್ಲೂ ರೈತರಿಂದ ಪ್ರತಿಭಟನೆ

ಹುಬ್ಬಳ್ಳಿ; ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ಹುಬ್ಬಳ್ಳಿಯಲ್ಲೂ ರೈತರಿಂದ ಪ್ರತಿಭಟನೆ ನಡೆಸಲಾಗುತ್ತಿದೆ.  ಶಿರಗುಪ್ಪಿ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ರೈತರು ಪ್ರತಿಭಟನೆ ಮಾಡಿದ್ದು, ರೈತ ಮತ್ತು ಕಾರ್ಮಿಕ ವಿರೋಧಿ ಕಾನೂನುಗಳನ್ನು ಕೈಬಿಡಲು ಒತ್ತಾಯಿಸಲಾಗಿದೆ. ರೈತರು ಹೆದ್ದಾರಿ ಮಧ್ಯ ಟ್ರ್ಯಾಕ್ಟರ್ ನಿಲ್ಲಿಸಿ ರಸ್ತೆ ತಡೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ರೈತರ ಬೇಡಿಕೆಗಳನ್ನು ಮೋದಿಯವರ ಸರ್ಕಾರ ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿದ್ದಾರೆ. ರೈತ ಮುಖಂಡರಾದ ಶಿವಣ್ಣ ಹುಬ್ಬಳ್ಳಿ, ಅಮೃತ …

Read More »

ಲಂಚ ಪಡೆಯುತ್ತಿದ್ದ ಕುಂದಗೋಳ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕನನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಹುಬ್ಬಳ್ಳಿ (ಡಿ. 16): ಲಂಚ ಪಡೆಯುತ್ತಿದ್ದ ಕುಂದಗೋಳ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕನನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಹುಬ್ಬಳ್ಳಿಯ ಮುತ್ತುಗೌಡ ಗಂಗನಗೌಡರ ಎಂಬುವವರ ಜಮೀನು ಕುಂದಗೋಳದ ಬೆಳ್ಳಿಗಟ್ಟಿ ಬಳಿ ಇದೆ‌. ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಹೆದ್ದಾರಿ ಪ್ರಾಧಿಕಾರದವರು ಜಮೀನನ್ನು ವಶಕ್ಕೆ ಪಡೆದಿದ್ದಾರೆ. ಜಮೀನು ಸ್ವಾಧೀನ ಪಡಿಸಿಕೊಂಡ ನಂತರ ಅದರಲ್ಲಿ ಎಷ್ಟು ಮರಗಳಿದ್ದವು ಎಂಬ ಮಾಹಿತಿಯನ್ನ ತೋಟಗಾರಿಕೆ ಇಲಾಖೆಯಿಂದ ಪಡೆಯಬೇಕಿತ್ತು. ಮರಗಳ ಮಾಹಿತಿ ನೀಡಿದರೆ ಹೆದ್ದಾರಿ ಪ್ರಾಧಿಕಾರದವರು ಪರಿಹಾರ ಹಣವನ್ನು ಕೊಡುತ್ತಿದ್ದರು. …

Read More »

ಶಿಕ್ಷಕರ ಬೇಡಿಕೆಗಳನ್ನು ಸರ್ಕಾರ ಈಡೇರಿಸುವವೆಗೂ ಉಪವಾಸ ಸತ್ಯಾಗ್ರಹದಿಂದ ಹಿಂದೆ ಸರಿಯುವುದಿಲ್ಲ

ಧಾರವಾಡ : ಖಾಸಗಿ ಶಿಕ್ಷಣ ಸಂಸ್ಥೆಗಳು, ಶಿಕ್ಷಕರ ಬೇಡಿಕೆಗಳನ್ನು ಸರ್ಕಾರ ಈಡೇರಿಸುವವೆಗೂ ಉಪವಾಸ ಸತ್ಯಾಗ್ರಹದಿಂದ ಹಿಂದೆ ಸರಿಯುವುದಿಲ್ಲ ಎಂದು ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಡಿಕೆ ಈಡೇರಿಕೆ ಕುರಿತು ಚರ್ಚಿಸಲು ಸಭೆ ನಿಗದಿ ಮಾಡಲಾಗುವುದಲ್ಲದೆ, ಸದನದಲ್ಲಿ ಸಹ ಚರ್ಚೆ ನಡೆಸುವುದಾಗಿ ಶಿಕ್ಷಣ ಸಚಿವರು ಹೇಳಿದ್ದಾರೆ. ಆದರೆ ಕೇವಲ ಸಭೆ ಕರೆದರೆ ಸಾಲದು, ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ಕೇವಲ ಭರವಸೆ ನೀಡಿದರೆ, ಪ್ರತಿಭಟನೆ …

Read More »

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಹಾಡಹಗಲೇ ಚಾಕು ಇರಿದ ವ್ಯಕ್ತಿ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಹಾಡಹಗಲೇ ನೆತ್ತರು ಹರಿದಿದೆ. ಕಟಿಂಗ್ ಶಾಪ್‍ಗೆ ಆಗಮಿಸಿದ್ದ ಮಾಜಿ ರೌಡಿಶೀಟರ್ ಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ನಗರದ ಬಾಬಾಸಾನ್ ಗಲ್ಲಿಯಲ್ಲಿ ನಡೆದಿದೆ. ಕಮರಿಪೇಟೆಯ ಹಳೇ ರೌಡಿ ಶೀಟರ್ ರಮೇಶ್ ಭಾಂಡಗೆ ಚಾಕು ಇರಿದು ಕೊಲೆ ಮಾಡಲಾಗಿದೆ. ರಮೇಶ್ ಭಾಂಡಗೆ ಹಲವು ಅಕ್ರಮ ಧಂದೆಯಲ್ಲಿ ಈ ಹಿಂದೆ ಭಾಗಿಯಾಗಿದ್ದ, ಇಂದು ಮಧ್ಯಾಹ್ನ ಕಟಿಂಗ್ ಶಾಪ್ ಗೆ ಬಂದಿದ್ದ ವೇಳೆ ವ್ಯಕ್ತಿಯೊಬ್ಬ ಚಾಕು …

Read More »

ಅಸ್ವಚ್ಛತೆಯಿಂದ ಕುಡಿರುವ ಕೊಣ್ಣೂರು ಬಸ್ ನಿಲ್ದಾಣ

ಹುಬ್ಬಳ್ಳಿ : ನರಗುಂದ ತಾಲೂಕಿನ  ಕೋಣ್ಣೂರು ಗ್ರಾಮದ ಬಸ್ ನಿಲ್ದಾಣವು ಅಸ್ವಚ್ಛತೆಯಿಂದ ಕೊಡಿದ್ದು, ಇಲ್ಲಿ ದಿನನಿತ್ಯ ಪ್ರಯಾಣಿಸುವ ಪ್ರಯಾಣಿಕರು ದುರ್ವಾಸನೆಯಿಂದ ಕಂಗಾಲಾಗಿದ್ದಾರೆ. ಕೊಣ್ಣೂರು ಗ್ರಾಮ ದೊಡ್ಡ ಗ್ರಾಮವಾಗಿದ್ದು ಇದು ಸುತ್ತಮುತ್ತಲಿನ ಗ್ರಾಮಗಳಿಗೆ ಕೇಂದ್ರ ಬಿಂದುವಾಗಿದೆ. ಇಲ್ಲಿಂದ ದಿನನಿತ್ಯ ಬೇರೆ ಬೇರೆ ಗ್ರಾಮಗಳಿಗೆ  ಪ್ರಯಾಣಿಕರು ತೆರಳುತ್ತಾರೆ ಆದರೆ ಇಲ್ಲಿಯ ಬಸ್ ನಿಲ್ದಾಣದಲ್ಲಿ ಶೌಚಾಲಯವಿದ್ದರು ಅವು ಅಸ್ವಚ್ಛತೆಯಿಂದ ಕೊಡಿ ಗಬ್ಬುನಾರುತ್ತಿವೆ. ಕೊರೊನಾ ಸೋಂಕಿನಿಂದ ಭಯಗೊಂಡ ಜನರು ಮತ್ತೆ ಅಸ್ವಚ್ಛತೆಯಿಂದ ರೋಗ ತಗುಲುವು ಭಯದಲ್ಲಿಯೇ …

Read More »