Breaking News

ಹುಬ್ಬಳ್ಳಿ

17 ಪಿಎಸ್‌ಐಗಳ ವರ್ಗಾವಣೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 17 ಪೊಲೀಸ್ ಸಬ್ ಇನ್ಸಪೆಕ್ಟರ್‌ಗಳನ್ನು (ಪಿಎಸ್‌ಐ) ನಗರದ ವಿವಿಧ ಠಾಣೆಗಳಿಗೆ ಆಂತರಿಕ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಬುಧವಾರ ಆದೇಶಿಸಿದೆ. ಇತ್ತೀಚೆಗೆ ಒಂದೇ ಠಾಣೆಯಲ್ಲಿ ಐದು ವರ್ಷಕ್ಕಿಂತ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸಿದ್ದ ಎಎಸ್‌ಐ, ಹೆಡ್‌ ಕಾನ್‌ಸ್ಟೆಬಲ್‌, ಕಾನ್‌ಸ್ಟೆಬಲ್‌ಗಳನ್ನು ಕೌನ್ಸ್‌ಲಿಂಗ್‌ ಮೂಲಕ ವಿವಿಧ ಠಾಣೆಗಳಿಗೆ ವರ್ಗಾವಣೆ ಮಾಡಲಾಗಿತ್ತು.

Read More »

ಐಶ್ವರ್ಯಗೆ ಚಿನ್ನ, ಸಿದ್ಧಾರ್ಥಗೆ ಬೆಳ್ಳಿ

ಹುಬ್ಬಳ್ಳಿ: ಬೆಂಗಳೂರಿನ ಸಾಯಿ ಶೂಟಿಂಗ್ ರೇಂಜ್‌ನಲ್ಲಿ ನಡೆದ 12ನೇ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿಯ ಐಶ್ವರ್ಯ ಬಾಲೆಹೊಸೂರು ಚಾಂಪಿಯನ್ ಆಗಿ ಹೊರಹೊಮ್ಮಿದರು. ಪಿಸ್ತೂಲ್ ಐಎಸ್‌ಎಸ್‌ಎಫ್‌ನ ಮಹಿಳೆಯರ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅವರು, ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಪುರುಷರ ವಿಭಾಗದಲ್ಲಿ (ಪಿಸ್ತೂಲ್‌) ಸಿದ್ಧಾರ್ಥ ದಿವಟೆ ಬೆಳ್ಳಿ ಪದಕ ಗೆದ್ದರು. ಪಿಸ್ತೂಲ್ ಮಾಸ್ಟರ್ ವಿಭಾಗದಲ್ಲಿ ಜಯಶ್ರೀ ಪಾಟೀಲ ಬೆಳ್ಳಿ, ಇದೇ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಪ್ರಶಾಂತ್ ಪಾವಸ್ಕರ್ …

Read More »

ಆಯುಕ್ತರ ಕಚೇರಿಗೆ ಪೌರಕಾರ್ಮಿಕರ ಮುತ್ತಿಗೆ

ಹುಬ್ಬಳ್ಳಿ: ಸೇವೆ ಕಾಯಂಗೊಳಿಸುವುದು, ನೇರ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪೌರಕಾರ್ಮಿಕರು, ಮಂಗಳವಾರ ಇಲ್ಲಿನ ಮಹಾನಗರ ಪಾಲಿಕೆ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಪೌರಕಾರ್ಮಿಕರ ಸಂಘದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ನಾರಾಯಣ ಅವರ ನೇತೃತ್ವದಲ್ಲಿ ಆಯುಕ್ತರ ಕಚೇರಿ ಎದುರು ಕುಳಿತ ‍ಪೌರಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು. ನಾರಾಯಣ ಮಾನತಾಡಿ, ‘ಮಹಾನಗರ ಪಾಲಿಕೆ ಆಯುಕ್ತ, ಮೇಯರ್ ಅವರು ಬೇಡಿಕೆಗಳ ಈಡೇರಿಕೆಗೆ …

Read More »

ಹುಬ್ಬಳ್ಳಿ: ರೈತರಿಗೆ ನೆರವಾದ ‘ಕೃಷಿ ಸಿಂಚಾಯಿ’

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ‘ಪ್ರಧಾನಮಂತ್ರಿ ಕೃಷಿ ಸಿಂಚಾಯಿ’ ಯೋಜನೆಗೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 2023-24ರ ಸಾಲಿನಲ್ಲಿ 11,143 ಜನ ರೈತರು ಅರ್ಜಿ ಸಲ್ಲಿಸಿದ್ದು, ಇವರಲ್ಲಿ 8,009 ರೈತರಿಗೆ ಯೋಜನೆಯ ಲಾಭ ದಕ್ಕಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಇದು ಅತ್ಯಧಿಕವಾಗಿದೆ.   ಉತ್ತಮ ಇಳುವರಿ ಪಡೆಯಲು ಹಾಗೂ ಬೆಳೆಗೆ ಆಗುವ ನೀರಿನ ತೊಂದರೆ ನೀಗಿಸಲು 2015ರಲ್ಲಿ ‘ಪ್ರಧಾನಮಂತ್ರಿ ಕೃಷಿ ಸಿಂಚಾಯಿ’ಯೋಜನೆ ಜಾರಿಗೆ ತರಲಾಗಿದೆ. ಯೋಜನೆಯ ಲಾಭ ಪಡೆಯುತ್ತಿರುವ ರೈತರ ಸಂಖ್ಯೆ ವರ್ಷದಿಂದ …

Read More »

ಬೆಂಗಳೂರು- ಕಾರವಾರ: 26, 28ರಂದು ವಿಶೇಷ ರೈಲು

ಹುಬ್ಬಳ್ಳಿ: ಪ್ರಯಾಣಿಕರ ಬೇಡಿಕೆ ಮೇರೆಗೆ ಬೆಂಗಳೂರು ಮತ್ತು ಕಾರವಾರ ನಡುವೆ ಜುಲೈ 26 ಮತ್ತು 28ರಂದು ವಿಶೇಷ ರೈಲು ಓಡಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ. ಬೆಂಗಳೂರಿನ ಸರ್‌ ಎಂ.ವಿಶ್ವೇಶ್ವರಯ್ಯ ನಿಲ್ದಾಣದಿಂದ ಎರಡೂ ದಿನ ಮಧ್ಯರಾತ್ರಿ 12.30ಕ್ಕೆ ಹೊರಡುವ ವಿಶೇಷ ರೈಲು (06567) ಸಂಜೆ 4ಕ್ಕೆ ಕಾರವಾರ ನಿಲ್ದಾಣ ತಲುಪಲಿದೆ. ಪುನಃ ಇದೇ ರೈಲು ಅವತ್ತೇ ರಾತ್ರಿ 11.30ಕ್ಕೆ ಕಾರವಾರ ನಿಲ್ದಾಣದಿಂದ ಹೊರಟು, ಮರುದಿನ ಸಂಜೆ 3.30ಕ್ಕೆ ಬೆಂಗಳೂರಿನ ಸರ್‌ ಎಂ.ವಿಶ್ವೇಶ್ವರಯ್ಯ …

Read More »

ಹೆಸ್ಕಾಂ ನೂತನ ಎಂ.ಡಿಯಾಗಿ ವೈಶಾಲಿ

ಹುಬ್ಬಳ್ಳಿ : ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ( ಹೆಸ್ಕಾಂ) ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ವೈಶಾಲಿ ಎಂ.ಎಲ್ (ಐಎಎಸ್) ಗುರುವಾರ ಅಧಿಕಾರ ವಹಿಸಿಕೊಂಡರು. ಈ ಹಿಂದಿನ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮೊಹಮ್ಮದ್ ರೋ‍‍ಷನ್ ( ಐಎಎಸ್) ಅವರು ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಹೊಂದಿದ್ದರು.ಈ ಹಿನ್ನೆಲೆ ತೆರವಾಗಿದ್ದ ಎಂ.ಡಿ ಹುದ್ದೆಗೆ ವೈಶಾಲಿ ಎಂ.ಎಲ್ ಅವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ. ಇವರು ಗದಗ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

Read More »

ಕನ್ನಡಮ್ಮ ಮಡಿಲಿಗೆ ಪಾಪು‌ ಪ್ರಶಸ್ತಿ

ಧಾರವಾಡ : ಪಾಟೀಲ್ ಪುಟ್ಟಪ್ಪನವರ ಪತ್ರಿಕೋದ್ಯಮದಲ್ಲಿ ಕನ್ನಡದ ಯೋಧರು. ಅವರ ಹೆಸರಿನಲ್ಲಿ ‌ನೀಡುವ ಪ್ರಶಸ್ತಿಯನ್ನು ಕನ್ನಡಮ್ಮ ದಿನಪತ್ರಿಕೆಗೆ ಕೊಡುತ್ತಿರುವುದು‌‌‌ ಅಭಿಮಾನದ ಸಂಗತಿ ಎಂದು ಉನ್ನತ ಶಿಕ್ಷಣ ಅಕಾಡೆಮಿ ವಿಶ್ರಾಂತ ನಿರ್ದೇಶಕ ಡಾ. ಎಂ.ಎಸ್.ಶಿವಪ್ರಸಾದ ಹೇಳಿದರು. ಭಾನುವಾರ ಕರ್ನಾಟಕ ವಿಧ್ಯಾವರ್ಧಕ ಸಂಘದ 135ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಕನ್ನಡದ ಪ್ರಪಂಚ ನಾಡೋಜ ಡಾ. ಪಾಟೀಲ್ ಪುಟ್ಟಪ್ಪನವರ ಸವಿ ನೆನಪಿನಲ್ಲಿ ಕೊಡಮಾಡುವ ಡಾ. ಪಾಟೀಲ್ ಪುಟ್ಟಪ್ಪನವರ ಪ್ರಶಸ್ತಿಯನ್ನು ಕನ್ನಡಮ್ಮ ದಿನಪತ್ರಿಕೆಯ ಸಂಪಾದಕ ರಾಜಕುಮಾರ ಟೋಪಣ್ಣವರ …

Read More »

ಮರಕ್ಕೆ ಡಿಕ್ಕಿ ಹೊಡೆದ ಸರ್ಕಾರಿ ಬಸ್: ಚಾಲಕನ ಎರಡೂ ಕಾಲು ಕಟ್

ಧಾರವಾಡ: ಸರ್ಕಾರಿ ಬಸ್ ವೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕನ ಎರಡೂ ಕಾಲು ಕಟ್ ಆಗಿದ್ದು, ಅಪಘಾತದಲ್ಲಿ ನಾಲ್ವರು ಪ್ರಯಾಣಿಕರ ಸ್ಥಿತಿ ಗಂಭೀರವಾಗಿರುವ ಘಟನೆ ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ನಡೆದಿದೆ. ಕಲಘಟಗಿಯ ರಾಮನಾಳ ಕ್ರಾಸ್ ಬಳಿ ಬಸ್ ಅಪಘಾತಕ್ಕೀಡಾಗಿದೆ. ದುರಂತದಲ್ಲಿ ಬಸ್ ಚಾಲಕನ ಎರಡೂ ಕಾಲುಗಳು ಕಟ್ ಆಗಿದ್ದು, ನಾಲ್ವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿಯಿಂದ ಕುಮಟಾಗೆ …

Read More »

ನಕಲಿ ಖಾತೆ ತೆರೆದು ಬ್ಯಾಂಕ್ ಗಳಲ್ಲಿ ಅವ್ಯವಹಾರ: ಮೂವರು ಆರೋಪಿಗಳು ಅರೆಸ್ಟ್

ಹುಬ್ಬಳ್ಳಿ: ವಿವಿಧ ಬ್ಯಾಂಕ್ ಗಳಲ್ಲಿ ನಕಲಿ ಖಾತೆ ತೆರೆದು ಅವ್ಯವಹಾರ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ದೇಶದ ವಿವಿಧ ರಾಜ್ಯಗಳ ಬ್ಯಾಂಕ್ ಗಳಲ್ಲಿ ನಕಲಿ ಖಾತೆ ತೆರೆದು ಅವ್ಯವಹಾರ ನಡೆಸುತ್ತಿದ್ದರು. ಇದೀಗ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ದೆಹಲಿ ಮೂಲದ ನಿಖಿಲ್ ಕುಮಾರ್ ರೌನಿ, ಸಚಿನ್ ಬೋಲಾ, ಮುಂಬೈ ಮೂಲದ ನಿಗಮ್ ಎಂದು ಗುರುತಿಸಲಾಗಿದೆ. ಬಂಧಿತ ಅರೋಪಿಗಳಲ್ಲಿ ಇಬ್ಬರು ಸಪಹ್ಟ್ ವೇರ್ ಇಂಜಿನಿಯರ್ ಗಳಾಗಿದ್ದು, …

Read More »

ಧಾರವಾಡ | ಮಹಿಳಾ ಕಾಲೇಜು ಕಟ್ಟಡ ಕಾಮಗಾರಿಗೆ ಮೀನಮೇಷ: ಸೋರುವ ಕೊಠಡಿಗಳಲ್ಲೇ ಪಾಠ

ಧಾರವಾಡ: ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಕಟ್ಟಡ ನಿರ್ಮಾಣಕ್ಕೆ ಅನುದಾನ, ಜಾಗ ಮಂಜೂರಾದರೂ ಕಾಮಗಾರಿ ಆರಂಭವಾಗಿಲ್ಲ. ಶಿಥಿಲಸ್ಥಿತಿಗೆ ತಲುಪಿರುವ ಸೋರುವ ಕಟ್ಟಡದಲ್ಲಿಯೇ ವಿದ್ಯಾರ್ಥಿನಿಯರು ಪಾಠ ಕೇಳುವ ಸ್ಥಿತಿ ಇದೆ. ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದ ಮುಂಭಾಗದ ಇಎಲ್‌ಟಿಸಿ (ಇಂಗ್ಲಿಷ್‌ ಲಾಂಗ್ವೆಜ್‌ ಲರ್ನಿಂಗ್‌ ಕೋರ್ಸ್‌ ಫಾರ್‌ ಟೀಚರ‍್ಸ್‌) ಕಟ್ಟಡದಲ್ಲಿ ಈ ಕಾಲೇಜು ಇದೆ. ಕಾಲೇಜು ಆರಂಭವಾಗಿ ದಶಕ ಕಳೆದರೂ ಸ್ವಂತ ಕಟ್ಟಡ ಇಲ್ಲ, ಶಿಥಿಲವಾಗಿರುವ ಕಟ್ಟಡವೇ ಗತಿಯಾಗಿದೆ. ಕಳೆದ ವರ್ಷ ಮಳೆಗಾಲದಲ್ಲಿ …

Read More »