Breaking News
Home / ರಾಷ್ಟ್ರೀಯ (page 60)

ರಾಷ್ಟ್ರೀಯ

ಸದನಕ್ಕೆ ಬಂಕ್‌ ಹಾಕಬೇಡಿ

ಬೆಂಗಳೂರು : ಸದನಕ್ಕೆ ವಿಳಂಬವಾಗಿ ಆಗಮಿಸುವವರು,ಗೈರು ಹಾಜರಾಗುವವರು ಹಾಗೂ ಊಟದ ಸಮಯದಲ್ಲಿ ನಾಪತ್ತೆಯಾಗುವ ಶಾಸಕರಿಗೆ ಸಭಾಪತಿ ಯು.ಟಿ. ಖಾದರ್‌ (U T Khader) ಕಿವಿ ಹಿಂಡಿದ ಘಟನೆ ಸೋಮವಾರದ ಅಧಿವೇಶನದ (Karnataka Assembly) ವೇಳೆ ನಡೆದಿದೆ. ಕಲಾಪ ಪ್ರಾರಂಭವಾಗುತ್ತಿದ್ದಂತೆಯೇ ನಿಗದಿತ ಸಮಯಕ್ಕೆ ಆಗಮಿಸಿದವರ ಪಟ್ಟಿ ಓದಿದ ಯು.ಟಿ. ಖಾದರ ,ಬಳಿಕ ಗೈರು ಹಾಜರಾದವರು ಹಾಗೂ ವಿಳಂಬವಾಗಿ ಆಗಮಿಸುವವರಿಗೆ ಬಿಸಿ ಮುಟ್ಟಿಸಿದರು. ಊಟಕ್ಕೆಂದು ಹೊರಗೆ ಹೋಗುವ ಶಾಸಕರು ಮತ್ತೆ ವಾಪಸ್‌ ಬರುವುದೇ …

Read More »

ಹನಿಹನಿ ನೀರಿಗೂ ಹಾಹಾಕಾರ – ಟ್ಯಾಂಕರ್‌ ನೀರಿನ ಮಾಫಿಯಾ ಶುರು!

ಬೆಂಗಳೂರು ; ಬೇಸಿಗೆ ಆರಂಭಕ್ಕೆ ಮುನ್ನವೇ ಬೆಂಗಳೂರಿನಲ್ಲಿ ನೀರಿನ ಕೊರತೆ (Water scarcity) ಎದುರಾಗಿದೆ. ಟ್ಯಾಂಕರ್‌ ನೀರೂ (Tanker water) ಸಹ ದಿನೇ ದಿನೇ ದುಬಾರಿಯಾಗುತ್ತಾ ಸಾಗುತ್ತಿದ್ದರೂ ಜನರು ನೀರು ಪೋಲು ಮಾಡುತ್ತಿರುವುದು ನಗರಕ್ಕೆ ನುಂಗಲಾರದ ತುತ್ತಾಗಿದೆ. ಈ ನಡುವೆ ಟ್ಯಾಂಕರ್‌ ನೀರು ಪೂರೈಕೆ ಮಾಫಿಯಾ ತಡೆಗಟ್ಟಲು ಜಲಮಂಡಳಿ ಏಕರೂಪ ದರ ನಿಗದಿಗೆ ಮುಂದಾಗಿದೆ. ಬೆಂಗಳೂರಿನಲ್ಲಿ ಐದು ಹಂತಗಳಲ್ಲಿ ಕಾವೇರಿ ನೀರು ಪೂರೈಸಲಾಗುತ್ತಿದ್ದು ಪ್ರತಿದಿನ ನಗರವಾಸಿಗಳ ಬಳಕಗೆ ಎರಡು ಟಿಎಂಸಿ …

Read More »

ದಂಗಲ್’ ಖ್ಯಾತಿಯ ನಟಿ ಸುಹಾನಿಯನ್ನು ಬಲಿ ಪಡೆದಿದೆ ಅಪಾಯಕಾರಿ ಕಾಯಿಲೆ

ಬಾಲಿವುಡ್‌ನ ಸೂಪರ್‌ ಹಿಟ್‌ ಚಿತ್ರ ‘ದಂಗಲ್’ ನಲ್ಲಿ ನಟಿಸಿದ್ದ ಸುಹಾನಿ ಭಟ್ನಾಗರ್‌ ಅಕಾಲಿಕ ಸಾವು ಇಡೀ ಚಿತ್ರರಂಗಕ್ಕೆ ಆಘಾತ ತಂದಿದೆ. ಡರ್ಮಟೊಮಿಯೊಸಿಟಿಸ್ ಎಂಬ ಅಪರೂಪದ ಮತ್ತು ಅಪಾಯಕಾರಿ ಕಾಯಿಲೆ ಸುಹಾನಿಯನ್ನು ಬಲಿಪಡೆದಿದೆ. ಡರ್ಮಟೊಮಿಯೊಸಿಟಿಸ್ ಕಾಯಿಲೆ, ದೇಹದ ಸ್ನಾಯುಗಳಲ್ಲಿ ಊತ ಮತ್ತು ದೌರ್ಬಲ್ಯವನ್ನು ಉಂಟುಮಾಡುತ್ತದೆ. ಚರ್ಮದ ಮೇಲೆ ಕೆಂಪು ದದ್ದುಗಳು ಕಾಣಿಸಿಕೊಳ್ಳುತ್ತವೆ. ಈ ರೋಗವು ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು. ಆದರೆ ಇದು ಸಾಮಾನ್ಯವಾಗಿ 40 ರಿಂದ 60 ವರ್ಷ ವಯಸ್ಸಿನ ವಯಸ್ಕರಲ್ಲಿ …

Read More »

ಲಾರಿ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲೇ ದುರ್ಮರಣ

ಯಾದಗಿರಿ, : ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ದುರ್ಮರಣ(died)ಹೊಂದಿರುವಂತಹ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಬಳಿ ನಡೆದಿದೆ. ಸವಾರರಾದ ಶಿವನಗೌಡ ಹೊಸಮನಿ(25), ಲಕ್ಷ್ಮಣ(24) ಸಾವನ್ನಪ್ಪಿರುವವರು. ಮೃತರು ಶಹಾಪುರ ತಾಲೂಕಿನ ಬೊಮ್ಮನಹಳ್ಳಿಯ ನಿವಾಸಿಗಳು. ಕೆಂಭಾವಿಯಿಂದ ಬೊಮ್ಮನಹಳ್ಳಿ ಗ್ರಾಮಕ್ಕೆ ಬೈಕ್ ಮೇಲೆ ತೆರಳುವಾಗ ಘಟನೆ ಸಂಭವಿಸಿದೆ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಅಪರಿಚಿತ ವ್ಯಕ್ತಿಯ ಶವ …

Read More »

ತಿಷ್ಠಿತ ಹೋಟೆಲ್​​ಗಳಲ್ಲಿ ಹಣ ಕದಿಯುತ್ತಿದ್ದ ಆರೋಪಿ ಬಂಧನ

ಬೆಂಗಳೂರು, ಫೆ.19: ಪ್ರತಿಷ್ಠಿತ ಹೋಟೆಲ್​​ಗಳಲ್ಲಿ (Hotels) ಹಣ ಕದಿಯುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಬನಶಂಕರಿ ನಿವಾಸಿ ಎಂ.ಎಸ್.ರವಿಕುಮಾರ್ ಬಂಧಿತ ಆರೋಪಿ. ಈತ ಪ್ರತಿಷ್ಠಿತ ಹೋಟೆಲ್​ಗಳನ್ನೇ ಟಾರ್ಗೆಟ್ ಮಾಡಿ ಹಣ ಎಗರಿಸ್ತಿದ್ದ. ಮೊದಲಿಗೆ ತನಗೆ ವಯಸ್ಸಾಗಿದೆ, ಆರ್ಥಿಕ ಸಂಕಷ್ಟದ ನೆಪವೊಡ್ಡಿ ಸಿಂಪತಿ ಗಿಟ್ಟಿಸಿ ಹೋಟೆಲ್​ನಲ್ಲಿ ಕೆಲಸ ಪಡೆಯುತ್ತಿದ್ದ. ಬಳಿಕ ಹೋಟೆಲ್ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಲೇ ಹೊಂಚುಹಾಕಿ ಹಣ ಎಗರಿಸ್ತಿದ್ದ. ಆರೋಪಿ ರವಿಕುಮಾರ್, ಕಳೆದ ವರ್ಷ ಫೆ.19ರಂದು ಕೆ.ಆರ್.ಪುರದ ಭಟ್ಟರಹಳ್ಳಿಯ ಹೋಟೆಲ್​​​​​​ನಲ್ಲಿ …

Read More »

ಭಾರತದಲ್ಲಿ ಅತಿ ಹೆಚ್ಚು ಇವಿ ಚಾರ್ಜಿಂಗ್ ಸ್ಟೇಷನ್‌ಗಳು ಇರುವ ರಾಜ್ಯ ಕರ್ನಾಟಕ

ಬೆಂಗಳೂರು, ಫೆಬ್ರವರಿ 19: ಕರ್ನಾಟಕ (Karnataka) ರಾಜ್ಯ ಒಂದರಲ್ಲೇ 5,059 ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್​ಗಳು(Public Electric Vehicle Charging Stations)​ ಇರುವ ಮೂಲಕ ರಾಜ್ಯ ದೇಶದಲ್ಲೇ ನಂಬರ್​ ಒನ್​ ಸ್ಥಾನದಲ್ಲಿದೆ. ಕೇಂದ್ರ ವಿದ್ಯುತ್ ಸಚಿವಾಲಯದ ಅಡಿಯಲ್ಲಿನ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (ಬಿಇಇ) ಅಂಕಿಅಂಶಗಳ ಪ್ರಕಾರ, ಬೆಂಗಳೂರು ನಗರ ಜಿಲ್ಲೆಯಲ್ಲಿ 4,281ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳವೆ. ಅಂದರೆ ಶೇ 85 ರಷ್ಟು ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್​ಗಳು ಬೆಂಗಳೂರಿನಲ್ಲಿವೆ. ಕರ್ನಾಟಕದಲ್ಲಿ 2017 ರಲ್ಲಿ ಮೊದಲ …

Read More »

ಸರ್ಕಾರಿ ದಾಖಲೆಗಳನ್ನು ತಿದ್ದಿ ಅಕ್ರಮ: ಪೌರಾಯುಕ್ತ, ಕಂದಾಯ ಸಿಬ್ಬಂದಿ ವಿರುದ್ಧ ಎಫ್​ಐಆರ್

ಮೈಸೂರು, ಫೆ.19: ಸರ್ಕಾರಿ ದಾಖಲೆಗಳನ್ನು ತಿದ್ದಿ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ ಹಿನ್ನೆಲೆ ಪೌರಾಯುಕ್ತ, ಕಂದಾಯ ಸಿಬ್ಬಂದಿಯ ವಿರುದ್ಧ ಸೆಕ್ಷನ್ 420 ಅಡಿ ಪ್ರಕರಣ ದಾಖಲಾಗಿದೆ. ಸರ್ಕಾರಿ ದಾಖಲೆಗಳನ್ನು (Government Documents) ತಿದ್ದಿ ಕೆಲವು ಕಡತಗಳನ್ನು ನಾಪತ್ತೆ ಮಾಡಲಾಗಿದೆ. ನಿವೇಶನಗಳ ಖಾತೆ ಮಾಡುವ ವೇಳೆ ನಿಯಮಗಳನ್ನು ಗಾಳಿಗೆ ತೂರಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಲಾಗಿದೆ. ಈ ಹಿನ್ನೆಲೆ ಇಬ್ಬರು ಅಧಿಕಾರಿಗಳ ವಿರುದ್ದ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ (Nanjangud Town Police …

Read More »

ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವಕ್ಕೆ ಡೇಟ್ ಫಿಕ್ಸ್

ಬೆಂಗಳೂರು, ಫೆ.19: ವಿಶ್ವ ವಿಖ್ಯಾತ, ಐತಿಹಾಸಿಕ ಪ್ರಸಿದ್ಧ ಬೆಂಗಳೂರು ಕರಗ (Bengaluru Karaga) ಮಹೋತ್ಸವಕ್ಕೆ ಡೇಟ್ ಫಿಕ್ಸ್ ಆಗಿದೆ. ಏಪ್ರಿಲ್ 15 ರಿಂದ ಏಪ್ರಿಲ್ 23ರವರೆಗೆ ಬೆಂಗಳೂರು ಕರಗ ಉತ್ಸವ ನಡೆಯಲಿದೆ. ಏಪ್ರಿಲ್ 23ರ ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದೆ. ಈ ಬಾರಿಯೂ ಪೂಜಾರಿ ಎ.ಜ್ಞಾನೇಂದ್ರ (A Jnanendra) ಅವರು ಕರಗ ಹೊರಲಿದ್ದಾರೆ. ಜ್ಞಾನೇಂದ್ರ ಅವರು 14ನೇ ಬಾರಿ ಬೆಂಗಳೂರು ಕರಗ ಹೊರುತ್ತಿದ್ದಾರೆ. ನಿನ್ನೆ (ಫೆ.18) ನಡೆದ ಸಭೆಯಲ್ಲಿ ಧರ್ಮರಾಯ …

Read More »

ಅಕ್ಷರಕ್ಕೆ ಭಾವನೆ ತುಂಬಿದ ಮಾಂತ್ರಿಕ ಗುಲ್ಜಾರ್​ಗೆ ಜ್ಞಾನಪೀಠ ಪ್ರಶಸ್ತಿ

ಹಿಂದಿ ಚಿತ್ರರಂಗದ ಮೇರು ಚಿತ್ರಸಾಹಿತಿ, ಭಾರತದ ಪ್ರಸ್ತುತ ಅತ್ಯುತ್ತಮ ಉರ್ದು ಕವಿ ಗುಲ್ಜಾರ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಗುಲ್ಜಾರ್ ಸಾಗಿ ಬಂದ ಹಾದಿ ಎಂಥಹುದು ಗೊತ್ತೆ?ಕೇಂದ್ರ ಸರ್ಕಾರವು (Central Government) ಇಂದು ಖ್ಯಾತ ಚಿತ್ರಸಾಹಿತಿ ಗುಲ್ಜಾರ್ ಹಾಗೂ ವಿದ್ವಾಂಸ ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ ಜ್ಞಾನಪೀಠ ಪ್ರಶಸ್ತಿ ಘೋಷಿಸಲಾಗಿದೆ. ಒಬ್ಬರು ಸಂಸ್ಕೃತ ವಿದ್ವಾಂಸರಾದರೆ ಮತ್ತೊಬ್ಬರು ಭಾರತದ ಈಗಿನ ಅತ್ಯುತ್ತಮ ಉರ್ದು ಕವಿ. ಬಾಲಿವುಡ್ ಸಿನಿಮಾ ಸಾಹಿತ್ಯವನ್ನು ತಮ್ಮ ಲೇಖನಿ ಮೂಲಕ …

Read More »

ಆಸ್ತಿಗಾಗಿ ಮೊದಲ ಹೆಂಡತಿ ಮಕ್ಕಳ ಜೊತೆ ಸೇರಿ ಎರಡನೇ ಪತ್ನಿಯ ಹತ್ಯೆ ಮಾಡಿದ ಪತಿ

ಮೈಸೂರು, ಫೆಬ್ರವರಿ 19: ಆಸ್ತಿಗಾಗಿ ಮೊದಲ ಹೆಂಡತಿ ಮಕ್ಕಳ ಜೊತೆ ಸೇರಿ ಎರಡನೇ ಪತ್ನಿಯನ್ನು ವ್ಯಕ್ತಿಯೊಬ್ಬ ಹತ್ಯೆ (Murder) ಮಾಡಿದ ದಾರುಣ ಘಟನೆ ಮೈಸೂರಿನ (Mysuru)ನಾಯ್ಡುನಗರದಲ್ಲಿ ನಡೆದಿದೆ. ಇದೀಗ ಕೃತ್ಯಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತರನ್ನು ಅಖಿಲಾ ಭಾನು (46) ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಆರೋಪಿ ಪತಿ ಅಬ್ಬ ಥಾಯೂಬ್, ಆತನ ಮೊದಲನೇ ಹೆಂಡತಿಯ ಮಕ್ಕಳಾದ ಮೊಹಮದ್ ಆಸಿಫ್, ಮೊಹಮದ್ ಥೋಸಿಫ್ ಹಾಗೂ ಮೊಹಮದ್ ಹೈದರ್​ನನ್ನು ಪೊಲೀಸರು …

Read More »