Breaking News
Home / ರಾಜಕೀಯ / ಅಕ್ಷರಕ್ಕೆ ಭಾವನೆ ತುಂಬಿದ ಮಾಂತ್ರಿಕ ಗುಲ್ಜಾರ್​ಗೆ ಜ್ಞಾನಪೀಠ ಪ್ರಶಸ್ತಿ

ಅಕ್ಷರಕ್ಕೆ ಭಾವನೆ ತುಂಬಿದ ಮಾಂತ್ರಿಕ ಗುಲ್ಜಾರ್​ಗೆ ಜ್ಞಾನಪೀಠ ಪ್ರಶಸ್ತಿ

Spread the love

ಹಿಂದಿ ಚಿತ್ರರಂಗದ ಮೇರು ಚಿತ್ರಸಾಹಿತಿ, ಭಾರತದ ಪ್ರಸ್ತುತ ಅತ್ಯುತ್ತಮ ಉರ್ದು ಕವಿ ಗುಲ್ಜಾರ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಗುಲ್ಜಾರ್ ಸಾಗಿ ಬಂದ ಹಾದಿ ಎಂಥಹುದು ಗೊತ್ತೆ?ಕೇಂದ್ರ ಸರ್ಕಾರವು (Central Government) ಇಂದು ಖ್ಯಾತ ಚಿತ್ರಸಾಹಿತಿ ಗುಲ್ಜಾರ್ ಹಾಗೂ ವಿದ್ವಾಂಸ ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ ಜ್ಞಾನಪೀಠ ಪ್ರಶಸ್ತಿ ಘೋಷಿಸಲಾಗಿದೆ.

ಒಬ್ಬರು ಸಂಸ್ಕೃತ ವಿದ್ವಾಂಸರಾದರೆ ಮತ್ತೊಬ್ಬರು ಭಾರತದ ಈಗಿನ ಅತ್ಯುತ್ತಮ ಉರ್ದು ಕವಿ. ಬಾಲಿವುಡ್ ಸಿನಿಮಾ ಸಾಹಿತ್ಯವನ್ನು ತಮ್ಮ ಲೇಖನಿ ಮೂಲಕ ಎತ್ತರಕ್ಕೆ ಒಯ್ದವರಲ್ಲಿ ಪ್ರಮುಖರು ಗುಲ್ಜಾರ್. ದಶಕಗಳಿಂದಲೂ ಹಿಂದಿ ಸಿನಿಮಾ ಸಾಹಿತ್ಯದ ಜೊತೆ-ಜೊತೆಗೆ ಉರ್ದು ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತಲೇ ಬಂದಿದ್ದಾರೆ ಗುಲ್ಜಾರ್. ಕೇವಲ ಲೇಖಕರಾಗಿ ಮಾತ್ರವೇ ತಮ್ಮ ಅನುಭವ, ಜ್ಞಾನವನ್ನು ಪಸರಿಸದೆ ನಿರ್ದೇಶಕರಾಗಿ, ಚಿತ್ರಕತೆ ಬರಹಗಾರರಾಗಿ, ಟಿವಿ ನಿರ್ದೇಶಕರಾಗಿ, ಡಾಕ್ಯುಮೆಂಟರಿ ನಿರ್ದೇಶಕರಾಗಿ ಹೀಗೆ ಹಲವು ಕ್ಷೇತ್ರಗಳಲ್ಲಿ ಕೃಷಿ ಮಾಡಿದವರು ಗುಲ್ಜಾರ್.

ಗುಲ್ಜಾರ್ ಮೂಲ ಹೆಸರು ಸಂಪೂರ್ಣ ಸಿಂಗ್. ಜನಿಸಿದ್ದು 1938ರಲ್ಲಿ, ಈಗಿನ ಪಾಕಿಸ್ತಾನಕ್ಕೆ ಸೇರಿರುವ ಪ್ರಾಂತ್ಯದಲ್ಲಿ. ಸ್ವಾತಂತ್ರ್ಯಾನಂತರ ಓದು ತ್ಯಜಿಸಿ ಬಾಂಬೆಗೆ ಬಂದ ಗುಲ್ಜಾರ್ ಜೀವನ ಸಾಗಿಸಲು ಹಲವು ಸಣ್ಣ ಪುಟ್ಟ ಕೆಲಸಗಳನ್ನು ಮಾಡಿದರು. ಕಾರು ರಿಪೇರಿ, ಅಪಘಾತವಾದ ಕಾರಿಗೆ ಬಣ್ಣ ಹಾಕುವ ಕೆಲಸ ಮಾಡುತ್ತಿದ್ದರು. ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದ ಗುಲ್ಜಾರ್, ‘ನನಗೆ ಬಣ್ಣ ಹಾಕುವ ಕೆಲಸ ಬಹಳ ಇಷ್ಟವಾಗಿದ್ದಾಗಿತ್ತು. ಬಣ್ಣಗಳು ನನಗೆ ಖುಷಿ ಕೊಡುತ್ತಿದ್ದವು. ಆ ಕೆಲಸ ಮಾಡುತ್ತಲೇ ನಾನು ಓದು ಮುಂದುವರೆಸಿದೆ, ಬರಹಗಾರರ ಅಸೋಸಿಯೇಷನ್ ಸಹ ಸೇರಿಕೊಂಡೆ. ಅಲ್ಲಿಂದ ನನ್ನ ಜೀವನದ ದಿಕ್ಕು ಬದಲಾಯ್ತು’ ಎಂದಿದ್ದರು.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ