Breaking News
Home / ರಾಜಕೀಯ / ತಿಷ್ಠಿತ ಹೋಟೆಲ್​​ಗಳಲ್ಲಿ ಹಣ ಕದಿಯುತ್ತಿದ್ದ ಆರೋಪಿ ಬಂಧನ

ತಿಷ್ಠಿತ ಹೋಟೆಲ್​​ಗಳಲ್ಲಿ ಹಣ ಕದಿಯುತ್ತಿದ್ದ ಆರೋಪಿ ಬಂಧನ

Spread the love

ಬೆಂಗಳೂರು, ಫೆ.19: ಪ್ರತಿಷ್ಠಿತ ಹೋಟೆಲ್​​ಗಳಲ್ಲಿ (Hotels) ಹಣ ಕದಿಯುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಬನಶಂಕರಿ ನಿವಾಸಿ ಎಂ.ಎಸ್.ರವಿಕುಮಾರ್ ಬಂಧಿತ ಆರೋಪಿ. ಈತ ಪ್ರತಿಷ್ಠಿತ ಹೋಟೆಲ್​ಗಳನ್ನೇ ಟಾರ್ಗೆಟ್ ಮಾಡಿ ಹಣ ಎಗರಿಸ್ತಿದ್ದ. ಮೊದಲಿಗೆ ತನಗೆ ವಯಸ್ಸಾಗಿದೆ, ಆರ್ಥಿಕ ಸಂಕಷ್ಟದ ನೆಪವೊಡ್ಡಿ ಸಿಂಪತಿ ಗಿಟ್ಟಿಸಿ ಹೋಟೆಲ್​ನಲ್ಲಿ ಕೆಲಸ ಪಡೆಯುತ್ತಿದ್ದ. ಬಳಿಕ ಹೋಟೆಲ್ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಲೇ ಹೊಂಚುಹಾಕಿ ಹಣ ಎಗರಿಸ್ತಿದ್ದ.

ಆರೋಪಿ ರವಿಕುಮಾರ್, ಕಳೆದ ವರ್ಷ ಫೆ.19ರಂದು ಕೆ.ಆರ್.ಪುರದ ಭಟ್ಟರಹಳ್ಳಿಯ ಹೋಟೆಲ್​​​​​​ನಲ್ಲಿ ಹಣ ಕಳವು ಮಾಡಿದ್ದ. ಹೋಟೆಲ್​​​​​​​​ನ ಕ್ಯಾಷ್​​​ಕೌಂಟರ್​​​​ನಲ್ಲಿದ್ದ 1 ಲಕ್ಷ ಹಣ ಕದ್ದಿದ್ದ. ಸತೀಶ್​ ಶೆಟ್ಟಿ ಎಂಬುವರ ಹೋಟೆಲ್​​ನಲ್ಲಿ ಹಣ ಕದ್ದು ಪರಾರಿಯಾಗಿದ್ದ. ಇದಾದ ಬಳಿಕ ಇತ್ತೀಚೆಗೆ ದೇವನಹಳ್ಳಿ ಬಳಿ ಹೋಟೆಲ್​ನಲ್ಲಿ ಕೆಲಸ ಮಾಡುವಾಗ ಸಿಕ್ಕಿಬಿದ್ದಿದ್ದಾನೆ. ​​ಹಣ ಕಳೆದುಕೊಂಡಿದ್ದ ಮಾಲೀಕ ಸತೀಶ್ ಶೆಟ್ಟಿಯಿಂದಲೇ ಆರೋಪಿ ಲಾಕ್ ಆಗಿದ್ದಾನೆ. ಸತೀಶ್ ಶೆಟ್ಟಿ ಅವರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿತ್ತು. ಪ್ರತಿಷ್ಠಿತ ಹೋಟೆಲ್​​ ಗುರಿಯಾಗಿಸಿಕೊಂಡು ಹಣ ಎಗರಿಸುತ್ತಿದ್ದ ಆರೋಪಿ ಅರೆಸ್ಟ್ ಆಗಿದ್ದಾನೆ.

 

ಇನ್ನು ಆರೋಪಿ ಹಣ ಎಗರಿಸುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಕ್ಯಾಷ್ ಕೌಂಟರ್​ನಲ್ಲಿ ಕುಳಿತೇ ಹಣವನ್ನು ಪ್ಯಾಂಟ್ ಜೇಬಿಗಿಳಿಸಿ ಅಲ್ಲಿಂದ ಕಾಲ್ಕಿತ್ತ ಆರೋಪಿಯ ಕೈಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

Spread the love

About Laxminews 24x7

Check Also

ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ ನಿರಾಣಿ…!!

Spread the love ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ