Breaking News
Home / ರಾಷ್ಟ್ರೀಯ (page 28)

ರಾಷ್ಟ್ರೀಯ

ಡಿಕೆಶಿ ಮುಖ್ಯಮಂತ್ರಿ ಆಗಲೆಂದು ಅರ್ಚಕರ ಸಂಕಲ್ಪ

ಉತ್ತರಕನ್ನಡ: ನಮ್ಮ ವಿರುದ್ಧ ಹೋರಾಟ ಮಾಡಿದ, ಬಿಜೆಪಿ ಪಕ್ಷಕ್ಕೆ ಅಡಿಪಾಯ ಹಾಕಿದವರನ್ನು ಮನೆಯಲ್ಲಿ ಕೂರಿಸಿ, ಹೊಸಮುಖಗಳನ್ನು ಕಣಕ್ಕೆ ಇಳಿಸಿದ್ದಾರೆ ಎಂದು ಬಿಜೆಪಿ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.   ಗೋಕರ್ಣ ಮಹಾಬಲೇಶ್ವರ ದೇಗುಲದಲ್ಲಿ ಬುಧವಾರ ಪೂಜೆ ಸಲ್ಲಿಸಿದ ನಂತರ ಶಿವಕುಮಾರ್, ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ಹೊಸಬರನ್ನು ಕಣಕ್ಕಿಳಿಸಿ ಪ್ರಯೋಗ ಮಾಡುತ್ತಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ದಳದವರು ಆರಂಭದಲ್ಲೇ ಎಡವಿದ್ದಾರೆ. ಆ ಪಕ್ಷದಲ್ಲಿ ಜಾತ್ಯಾತೀತ ತತ್ವ ಇಲ್ಲವಾಗಿದೆ. ಅಲ್ಲಿ ಪಕ್ಷದ ವಿಚಾರವೇ …

Read More »

SSLC ಪರೀಕ್ಷೆ: ಇಂದು ‘8.27 ಲಕ್ಷ ವಿದ್ಯಾರ್ಥಿ’ಗಳು ಹಾಜರ್, ‘9 ಮಂದಿ’ ಡಿಬಾರ್ | SSLC Exam

ಬೆಂಗಳೂರು: ಇಂದು ರಾಜ್ಯಾಧ್ಯಂತ ಎರಡನೇ ದಿನದ ಎಸ್ ಎಸ್ ಎಲ್ ಸಿ ಪರೀಕ್ಷೆ ಯಶಸ್ವಿಯಾಗಿ ನಡೆಯಿತು. 8.27 ಲಕ್ಷ ವಿದ್ಯಾರ್ಥಿಗಳು ಇಂದು ನಡೆದಂತ ಸಮಾಜ ವಿಜ್ಞಾನ ಪರೀಕ್ಷೆಗೆ ಹಾಜರಾಗಿದ್ದಾರೆ. ಅಲ್ಲದೇ ಪರೀಕ್ಷೆಯಲ್ಲಿ ನಕಲಿಗೆ ಯತ್ನಿಸಿದಂತ 9 ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ.   ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ದಿನಾಂಕ 27-03-2024ರಂದು ಸೋಷಿಯಲ್ ಸೈನ್ಸ್ ವಿಷಯದ ಪರೀಕ್ಷೆ ನಡೆಯಿತು. ನೋಂದಾಯಿಸಿಕೊಂಡಿದ್ದಂತ 8,41,120 ವಿದ್ಯಾರ್ಥಿಗಳಲ್ಲಿ, 8,27,773 ವಿದ್ಯಾರ್ಥಿಗಳು ಪರೀಕ್ಷೆಗೆ …

Read More »

ED ಕಸ್ಟಡಿಯಲ್ಲಿ ಕೇಜ್ರಿವಾಲ್‌ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ: ಎಎಪಿ

ನವದೆಹಲಿ: ‘ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯವು ಸಂಪೂರ್ಣ ಹದಗೆಟ್ಟಿದೆ. ಮಧುಮೇಹದಿಂದ ಬಳಲುತ್ತಿರುವ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರುಪೇರಾಗುತ್ತಿದೆ’ ಎಂದು ಆಮ್‌ ಆದ್ಮಿ ಪಕ್ಷದ(ಎಎಪಿ) ಮೂಲಗಳು ಬುಧವಾರ ಹೇಳಿವೆ. ಅರವಿಂದ್ ಕೇಜ್ರಿವಾಲ್ ಅವರ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಒಂದು ಸಮಯದಲ್ಲಿ 46 ಎಂಜಿ ಗೆ ಇಳಿದಿತ್ತು. ವೈದ್ಯರ ಪ್ರಕಾರ ಇದು ಅತ್ಯಂತ ಗಂಭೀರ ಆರೋಗ್ಯ ಪರಿಸ್ಥಿತಿಯಾಗಿದೆ’ ಎಂದಿದೆ. ಮಂಗಳವಾರ ಕೇಜ್ರಿವಾಲ್‌ ಅವರನ್ನು ಇ.ಡಿ …

Read More »

ಮಾರ್ಚ್ 28ರಿಂದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

ನೇಸರಗಿ: ಸಮೀಪದ ವಣ್ಣೂರ ಗ್ರಾಮದಲ್ಲಿ ಪ್ರಭುದೇವರ ಮೂರ್ತಿ ಪ್ರತಿಷ್ಠಾಪನೆ, ವೀರಭದ್ರೇಶ್ವರ ಜಾತ್ರಾ ಮಹೋತ್ಸವ, ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಮಾರ್ಚ್ 28ರಿಂದ ಏಪ್ರಿಲ್ 1ರ ವರೆಗೆ ನಡೆಯಲಿದೆ. ’28ರಂದು ಗ್ರಾಮದ ಪ್ರಭುದೇವರ ಮೂರ್ತಿಗಳ ಮೆರವಣಿಗೆ, 30ರಂದು ಪ್ರಭುದೇವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ವೀರಭದ್ರೇಶ್ವರ ಅಡ್ಡ ಪಲ್ಲಕ್ಕಿ ಉತ್ಸವ ನಡೆಯಲಿದೆ. ಏಪ್ರಿಲ್ 1ರಂದು ಬಾಳೆಹೊನ್ನೂರ ರಂಭಾಪುರಿ ಶ್ರೀ ಅಡ್ಡ ಪಲ್ಲಕ್ಕಿ ಮಹೋತ್ಸವ ಮತ್ತು ಧರ್ಮ ಸಮಾರಂಭ ನಡೆಯಲಿದೆ’ ಎಂದು ಜಾತ್ರಾ ಕಮಿಟಿ ಪ್ರಕಟಣೆಯಲ್ಲಿ …

Read More »

ಮಹಿಳಾ ಮತದಾರರು ಬಿಜೆಪಿ ಪರ ಇದ್ದಾರೆ: B.S.Y.

ಬೆಳಗಾವಿ: ‘ರಾಜ್ಯದಲ್ಲಿ ಮಹಿಳಾ ನಾಯಕಿಯರು ಹಾಗೂ ಕಾರ್ಯಕರ್ತೆಯರು ಬಿಜೆಪಿ ಮೇಲೆ ನಂಬಿಕೆ ಇಟ್ಟಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಟಿಕೆಟ್‌ಗಳನ್ನು ಕೊಟ್ಟಿದ್ದೇವೆ. ಎಲ್ಲ 28 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿ ನಿಮಗೆ ಉತ್ತರ ಕೊಡುತ್ತೇವೆ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು.   ‘ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಏಕಮಾತ್ರ ಮಹಿಳಾ ಸಂಸದರಾದ ಮಂಗಲಾ ಅಂಗಡಿ ಅವರಿಗೆ ಟಿಕೆಟ್‌ ತಪ್ಪಿಸಿದ್ದನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, …

Read More »

ಐಪಿಎಲ್ ಬೆಟ್ಟಿಂಗ್ ಹುಚ್ಚಿಗೆ ಕೋಟಿ ಸಾಲ ಮಾಡಿದ ಪತಿ! ಸಾಲಗಾರರ ಹಿಂಸೆಗೆ ಮಸಣ ಸೇರಿದ ಪತ್ನಿ

ಚಿತ್ರದುರ್ಗ: ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎಂಬ ಮಾತನ್ನು ಕೇಳಿರುತ್ತೇವೆ. ಇಲ್ಲ ಕಣ್ಣಾರೆ ಸಹ ನೋಡಿರುತ್ತೇವೆ. ಇಲ್ಲಿಯೂ ಅಂತಹದ್ದೇ ದುರ್ಘಟನೆ ಸಂಭವಿಸಿದೆ. ಪತಿಯ ಬೆಟ್ಟಿಂಗ್ (Cricket Betting) ಗೀಳಿಗೆ ಪತ್ನಿ ದುರಂತ ಅಂತ್ಯ ಕಂಡಿದ್ದಾಳೆ. ಆನ್ ಲೈನ್ ಬೆಟ್ಟಿಂಗ್ ದಂಧೆಯಲ್ಲಿ ಕರ್ನಾಟಕದ (Karnataka) ನಿವಾಸಿ ಕೋಟಿ ಕೋಟಿ ಸಾಲ ಮಾಡಿಕೊಂಡಿದ್ದಾನೆ. ಪತಿಯ ಸಾಲದಿಂದ ಪ್ರತಿನಿತ್ಯ ಆಕೆಯೂ ನರಕ ಕಂಡಿದ್ದಾಳೆ. ಕೊನೆಗೆ ಸಾಲಗಾರರ ಕಿರುಕುಳ ತಾಳಲಾರದೆ ಮನನೊಂದ ಗೃಹಿಣಿ ಆತ್ಮಹತ್ಯೆಗೆ …

Read More »

ಹೊಸ ರೇಷನ್‌ ಕಾರ್ಡ್‌ಗಳಿಗೆ ರಾಜ್ಯ ಸರ್ಕಾರದಿಂದ ಅರ್ಜಿ ಆಹ್ವಾನ: ಬೇಕಾದ ದಾಖಲೆಗಳೇನು?

ಏಪ್ರಿಲ್‌ 1ರಿಂದ ಮತ್ತೆ ಹೊಸ ರೇಷನ್‌ ಕಾರ್ಡ್‌ಗೆ ರಾಜ್ಯ ಸರ್ಕಾರ ಅರ್ಜಿ ಆಹ್ವಾನಿಸಲಿದೆ ಎಂದು ವರದಿಯಾಗಿದೆ. ಅರ್ಜಿ ಸಲ್ಲಿಸಲು ಬೇಕಾದ ಮಾನದಂಡಗಳು:   ಕರ್ನಾಟಕದ ನಿವಾಸಿಯಾಗಿರಬೇಕು. ಈಗಾಗಲೇ ರೇಷನ್‌ ಕಾರ್ಡ್‌ ಹೊಂದಿರಬಾರದು. ಬೇಕಾದ ದಾಖಲೆಗಳು: ಓಟರ್‌ ಐಡಿ, ಆಧಾರ್‌ ಕಾರ್ಡ್‌, ವಯಸ್ಸಿನ ಪ್ರಮಾಣಪತ್ರ, ಡ್‌ರೈವಿಂಗ್‌ ಲೈಸನ್ಸ್‌, ಇತ್ತೀಚಿನ ಫೋಟೊ(ಪಾಸ್‌ಪೋರ್ಟ್‌ ಸೈಜ್‌), ಮೋಬೈಲ್‌ ನಂಬರ್‌, ಸ್ವಯಂ ಘೋಷಿತ ಪ್ರಮಾಣ ಪತ್ರ ಹೊಂದಿರಬೇಕು. https://ahara.kar.nic.in/ ಅಧಿಕೃತ ವೆಬ್‌ ಸೈಟ್‌ ಗೆ ಭೇಟಿ ನೀಡಿ, ರೇಷನ್‌ …

Read More »

ರೂಲ್ಸ್ ಅಂದ್ರೆ ರೂಲ್ಸ್..! DC ಕಾರ್ ಸಹ ತಪಾಸಣೆ

ಲೋಕಸಭಾ ಚುನಾವಣೆಗೆ ಕಟ್ಟುನಿಟ್ಟಿನ ರೂಲ್ಸ್ ಜಾರಿ ಹಿನ್ನಲೆ ಕಲಬುರಗಿ DC ಫೌಜಿಯಾ ತರುನಮ್ ಕಾರ್ ಸಹ ತಪಾಸಣೆ ಮಾಡಿದ ಎಲೆಕ್ಷನ್ ಟೀಂ ಇದೀಗ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.. ಜಿಲ್ಲಾಧಿಕಾರಿ & ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಫೌಜಿಯಾ ತರನಮ್ ಹೀರಾಪುರ್ ಕ್ರಾಸ್ ಚೆಕ್ ಪೋಸ್ಟ್ ಗೆ ಭೇಟಿ. ನೀಡಿದ ವೇಳೆ ನನ್ನ ಕಾರ್ ಸಹ ತಪಾಸಣೆ ಮಾಡಿ ಅಂತ ಖುದ್ದು DC ಸ್ಥಳದಲ್ಲಿದ್ದ ಚುನಾವಣಾ ಸಿಬ್ಬಂದಿಗೆ ಸೂಚನೆ ಕೊಟ್ಟಿದ್ರು..DC ಸೂಚನೆ ಮೇರೆಗೆ …

Read More »

ಮಗ, ಸೊಸೆಯನ್ನ ನೋಡಲು ಬೆಂಗಳೂರಿಗೆ ಬಂದಿದ್ದ ಮುಗ್ಧ ಅಜ್ಜಿಗೆ ನಿರಾಸೆ; ಇಳಿ ವಯಸ್ಸಲ್ಲೂ ಹಠ, ಹೇಳಿಕೊಳ್ಳದ ನೋವು

ಮಗ, ಸೊಸೆಯನ್ನ ನೋಡಲು ಬೆಂಗಳೂರಿಗೆ ಬಂದಿದ್ದ ಮುಗ್ಧ ಅಜ್ಜಿಗೆ ನಿರಾಸೆ; ಇಳಿ ವಯಸ್ಸಲ್ಲೂ ಹಠ, ಹೇಳಿಕೊಳ್ಳದ ನೋವು ಮೆಜೆಸ್ಟಿಕ್ ಲಾಸ್ಟ್ ಸ್ಟಾಪಲ್ಲಿ ಬಸ್ ನಿಲ್ತು. ಕೆಳಗೆ ಇಳಿಯೋವಾಗ ನನ್ನ ಹಿಂದೆ ಒಬ್ರು ಅಜ್ಜಿ ಇದ್ರು. ಕಂಡಕ್ಟರ್ ನನ್ನ ಹತ್ರ “ನೀವು ಯಾವ್ ಕಡೆ ಹೋಗೋದು? ಇವರಿಗೆ ರೈಲ್ವೇ ಸ್ಟೇಷನ್ ತೋರಿಸ್ತೀರಾ” ಅಂತ ಕೇಳಿದ್ರು. ನಾನು ವಿರುದ್ಧ ದಿಕ್ಕಿನಲ್ಲಿ ಹೋಗೋನು, ಬಟ್ ಹಿಂಗ್ ಹಿಂಗ್ ಇದೆ ಸ್ಟೇಷನ್ ರೋಡ್ ಅಂತ ಅಜ್ಜಿಗೆ …

Read More »

ಕಾರ್ಮಿಕರಿಗೆ ಗುಡ್ ನ್ಯೂಸ್ : ಕನಿಷ್ಠ ವೇತನ ಬದಲಿಗೆ ಜೀವನ ವೇತನ ನೀಡಲು ಸರ್ಕಾರ ಚಿಂತನೆ – 2025ರಿಂದ ಜಾರಿ ಸಾಧ್ಯತೆ

ನವದೆಹಲಿ : ಕಾರ್ಮಿಕರಿಗೆ ಕನಿಷ್ಠ ವೇತನ ಬದಲಿಗೆ ಜೀವನ ವೇತನ ನೀಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 2025ರಿಂದ ಈ ವೇತನ ಬದಲಾವಣೆ ಜಾರಿಗೆ ತರುವ ಸಾಧ್ಯತೆ ಇದೆ. ಜೀವನ ವೇತನ ಜಾರಿಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯಿಂದ ತಾಂತ್ರಿಕ ಸಹಕಾರ ಪಡೆದು ರೂಪುರೇಷೆ ಸಿದ್ದಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕನಿಷ್ಠ ವೇತನದಲ್ಲಿ ಕಾರ್ಮಿಕರ ಕೆಲಸ, ಉತ್ಪಾದಕತೆ, ಕೌಶಲ ಪರಿಗಣಿಸಿ ವೇತನ ನಿಗದಿ ಮಾಡಲಾಗುತ್ತದೆ. ಜೀವನ ವೇತನದಲ್ಲಿ ಹೆಚ್ಚಿನ …

Read More »