ಬೆಂಗಳೂರು: ‘ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ’ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸಿಂಗಲ್ ಲೈನ್ ಎಕ್ಸ್ ಪೋಸ್ಟ್ ಮಾಡಿದ್ದಾರೆ. ಅಧಿಕಾರ ಹಂಚಿಕೆಯ ಗೊಂದಲದ ಮಧ್ಯೆ ಡಿಸಿಎಂ ಮಾಡಿರುವ ಈ ಪೋಸ್ಟ್ ಮಹತ್ವ ಪಡೆದುಕೊಂಡಿದೆ. ಈ ಸಿಂಗಲ್ ಲೈನ್ ಪೋಸ್ಟ್ ಹಲವು ಕುತೂಹಲ ಹುಟ್ಟುಹಾಕುವ ಜೊತೆಗೆ ಡಿ.ಕೆ.ಶಿವಕುಮಾರ್ ಹಲವರಿಗೆ ಸಂದೇಶ ಕಳುಹಿಸಿದ್ದಾರಾ ಎಂಬ ಪ್ರಶ್ನೆಗಳು ಮೂಡಿದೆ. ಎಕ್ಸ್ ಪೋಸ್ಟ್ನಲ್ಲಿ ವರ್ಡ್ ಪವರ್ ಈಸ್ ವರ್ಲ್ಡ್ ಪವರ್ ( Word Power is …
Read More »ದೆಹಲಿಗೆ ಸಿಎಂ, ಡಿಸಿಎಂ ಕರೆಸಿ ಮುಂದಿನ ತೀರ್ಮಾನ: ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು: ದೆಹಲಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಕರೆಸಿ, ಹೇಗೆ ಮುಂದುವರೆಯಬೇಕು ಎಂದು ತೀರ್ಮಾನ ಮಾಡುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದರು. ಸದಾಶಿವನಗರ ನಿವಾಸದಲ್ಲಿ ದೆಹಲಿಗೆ ತೆರಳುವ ಮುನ್ನ ಮಾತನಾಡಿದ ಅವರು, ”ನಾನು ದೆಹಲಿಗೆ ಹೋದ ಮೇಲೆ ಮಾತುಕತೆ ನಡೆಯಲಿದೆ. ಪ್ರಮುಖ ಮೂರ್ನಾಲ್ಕು ಜನರನ್ನು ಕರೆಸಿ ಮಾತನಾಡುತ್ತೇನೆ. ಹೇಗೆ ಮುಂದುವರೆಯಬೇಕೆಂದು ತೀರ್ಮಾನ ಮಾಡ್ತೇನೆ. ಸಿಎಂ, ಡಿಸಿಎಂ ಅವರೆಲ್ಲರನ್ನು ಕರೆಸಿಯೇ ಮಾತನಾಡ್ತೇನೆ. ಎಲ್ಲವನ್ನೂ ಸೆಟಲ್ ಮಾಡುತ್ತೇವೆ” ಎಂದರು. …
Read More »ರೈತರಿಗೆ ಹೆಚ್ಚುವರಿಯಾಗಿ ₹1,033.60 ಕೋಟಿ ಇನ್ಪುಟ್ ಸಬ್ಸಿಡಿ ವಿತರಿಸಿದ ಸಿಎಂ
ಬೆಂಗಳೂರು: ಬೆಳೆ ಹಾನಿ ಸಂಭವಿಸಿದ 14.24 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಒಟ್ಟು 1,033.60 ಕೋಟಿ ರೂ. ಹೆಚ್ಚುವರಿ ಪರಿಹಾರ ಒದಗಿಸುವ ಕಾರ್ಯಕ್ಕೆ ಮುಖ್ಯಮಂತ್ರಿ ಅವರು ಬಟನ್ ಒತ್ತುವ ಮೂಲಕ ಚಾಲನೆ ನೀಡಿದರು. ರೈತರ ಖಾತೆಗಳಿಗೆ ಇನ್ ಪುಟ್ ಸಬ್ಸಿಡಿ ನೀಡಿ ಬಳಿಕ ಮುಖ್ಯಮಂತ್ರಿಗಳು ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಸ್ತುತ ವರ್ಷದ ಮಾನ್ಸೂನ್ ಅವಧಿಯಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಬೆಳೆ ಹಾನಿಗೊಳಗಾದ ರೈತರಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಸಬ್ಸಿಡಿಗಾಗಿ 1,033.60 ಕೋಟಿ …
Read More »ಬಳ್ಳಾರಿ ನಗರದ ಬುಡಾ ಕಾಂಪ್ಲೆಕ್ಸ್ ಬಳಿ ನ.18 ರಂದು ನಡೆದಿದ್ದ ಕೊಲೆ ಭೇದಿಸಿರುವ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
ಬಳ್ಳಾರಿ: ನಗರದ ಬುಡಾ ಕಾಂಪ್ಲೆಕ್ಸ್ ಬಳಿ ನ.18 ರಂದು ನಡೆದಿದ್ದ ಕೊಲೆ ಕೇಸ್ ಭೇದಿಸುವಲ್ಲಿ ಬಳ್ಳಾರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆ ಆರೋಪಿ ರಾಂಪುರದ ಸತೀಶ್ (20) ಎಂಬಾತನನ್ನು ಬಂಧಿಸಲಾಗಿದೆ. ಬಳ್ಳಾರಿಯ ಅಂದ್ರಾಳು ನಿವಾಸಿಯಾಗಿದ್ದ ಶಿವು (21) ಕೊಲೆಯಾದ ಯುವಕ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಶಿವು ಹಾಗೂ ಸತೀಶ್ ಚಿಂದಿ ಆಯುವ ಕೆಲಸ ಮಾಡ್ತಿದ್ದು, ಕೊಲೆಯಾದ ದಿನದಂದು ಇಬ್ಬರು ಸೇರಿ 2 ಸಾವಿರ ಹಣ …
Read More »ನಿಪ್ಪಾಣಿ ಕ್ಷೇತ್ರದ ಬೋರಗಾಂವ ಪಟ್ಟಣದಲ್ಲಿರಕ್ತದಾನಶಿಬಿರಕ್ಕೆ ಶ್ರೀ ಬಸವಪ್ರಸಾದ ಜೊಲ್ಲೆ ಚಾಲನೆ
ರಕ್ತದಾನ ಶ್ರೇಷ್ಠದಾನ!ನಿಪ್ಪಾಣಿ ಕ್ಷೇತ್ರದ ಬೋರಗಾಂವ ಪಟ್ಟಣದಲ್ಲಿ ನನ್ನ ಜನ್ಮ ದಿನದ ಪ್ರಯುಕ್ತ ಪಕ್ಷದ ಕಾರ್ಯಕರ್ತರು ಆಯೋಜಿಸಿದ ರಕ್ತದಾನ ಶಿಬಿರಕ್ಕೆ ಶ್ರೀ ಬಸವಪ್ರಸಾದ ಜೊಲ್ಲೆ ಯವರು ಚಾಲನೆ ನೀಡಿದರು. ಪಕ್ಷದ ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿರುವುದು ಮತ್ತು ಶಿಬಿರ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ.ಇದೇವೇಳೆ ರಕ್ತದಾನ ಮಾಡಿದವರಿಗೆ ಹೆಲ್ಮೆಟ್ ವಿತರಿಸಿದರು. ಈ ಸಂದರ್ಭದಲ್ಲಿ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯ ಸಂಚಾಲಕರಾದ ಶ್ರೀ ಶರದ ಜಂಗಟೆ,ಶ್ರೀ ಜೀತು ಪಾಟೀಲ,ಶ್ರೀ ಬಿ.ಕೆ ಮಹಾಜನ ಶ್ರೀ ಅಜೀತ …
Read More »ಹೈನೋದ್ಯಮದಿಂದ ವರ್ಷಕ್ಕೆ ₹1.5 ಕೋಟಿ ಆದಾಯ: ದೊಡ್ಡ ಮನೆ ಕಟ್ಟಿ ಹಾಲಿನ ಡಬ್ಬಿಯೊಂದಿಗೆ ಹಸುವಿನ ಪ್ರತಿಕೃತಿ ನಿರ್ಮಿಸಿದ ಕುಟುಂಬ
ಹೈನೋದ್ಯಮದಿಂದ ವರ್ಷಕ್ಕೆ ₹1.5 ಕೋಟಿ ಆದಾಯ: ದೊಡ್ಡ ಮನೆ ಕಟ್ಟಿ ಹಾಲಿನ ಡಬ್ಬಿಯೊಂದಿಗೆ ಹಸುವಿನ ಪ್ರತಿಕೃತಿ ನಿರ್ಮಿಸಿದ ಕುಟುಂಬ ಕುಟುಂಬ ಸದಸ್ಯರ ಒಗ್ಗಟ್ಟು, ಕಠಿಣ ಶ್ರಮದ ಫಲವಾಗಿ ಎರಡು ಹಸುಗಳಿಂದ ಆರಂಭವಾದ ಇವರ ಹೈನುಗಾರಿಕೆ ಇಂದು ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ. ಕೊಲ್ಲಾಪುರ(ಮಹಾರಾಷ್ಟ್ರ):ಕಠಿಣ ಪರಿಶ್ರಮ, ದೃಢಸಂಕಲ್ಪ ಮತ್ತು ಕುಟುಂಬದ ಒಗ್ಗಟ್ಟಿನ ಫಲವಾಗಿ ಕೊಲ್ಲಾಪುರದ ನೂಲ್ ಎಂಬಲ್ಲಿನ ಸಾವಂತ್ ಸಹೋದರರ ಕುಟುಂಬ ಹೈನುಗಾರಿಕೆಯಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ. ಕೃಷಿ ಭೂಮಿಯಲ್ಲಿ ಉಂಟಾದ …
Read More »ಬೆಂಗಳೂರಲ್ಲಿ ವಾಹನ ಅಡ್ಡಗಟ್ಟಿ ₹7.11 ಕೋಟಿ ದರೋಡೆ ಪ್ರಕರಣ: ಆರೋಪಿಗಳು ಆಂಧ್ರಕ್ಕೆ ಪರಾರಿ ಶಂಕೆ; ಪತ್ತೆಗೆ ಇಂಚಿಂಚು ಶೋಧ
ಬೆಂಗಳೂರು : ನಗರದ ವಿವಿಧ ಎಟಿಎಂಗಳಿಗೆ ಹಣ ಹಾಕುವ ಸಿಎಂಎಸ್ ಎಜೆನ್ಸಿಯ ವಾಹನ ಅಡ್ಡಗಟ್ಟಿ 7.11 ಕೋಟಿ ರೂ. ದರೋಡೆ ಮಾಡಿದ ಪ್ರಕರಣ ಸಂಬಂಧ ಆರೋಪಿಗಳ ಜಾಡು ಪತ್ತೆ ಹಚ್ಚಿ ಹೆಡೆಮುರಿಕಟ್ಟಲು ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ. ಬುಧವಾರ (ನ.19) ಹಾಡಹಾಗಲೇ ಆರ್ಬಿಐ ಅಧಿಕಾರಿಗಳ ಸೋಗಿನಲ್ಲಿ ವಾಹನ ಅಡ್ಡಗಟ್ಟಿ ಮಹಾದರೋಡೆ ಮಾಡಿರುವ ಆರೋಪಿಗಳನ್ನು ಬಂಧಿಸಲು ಇಬ್ಬರು ಜಂಟಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ವಿಶೇಷ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಸಿಸಿಟಿವಿ, ಟವರ್ …
Read More »ಹೊಸ ಇತಿಹಾಸ ಸೃಷ್ಟಿಸಲಿದೆ ನವೆಂಬರ್ 28ರ ಕಾರ್ಯಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಹೊಸ ಇತಿಹಾಸ ಸೃಷ್ಟಿಸಲಿದೆ ನವೆಂಬರ್ 28ರ ಕಾರ್ಯಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಐಸಿಡಿಎಸ್ ಸುವರ್ಣ ಮಹೋತ್ಸವ, ಅಕ್ಕ ಪಡೆ ಲೋಕಾರ್ಪಣೆ, ಗೃಹಲಕ್ಷ್ಮಿ ಬ್ಯಾಂಕ್ ಗೆ ಚಾಲನೆ ಕುರಿತು ಪೂರ್ವ ಭಾವಿ ಸಭೆ ಕಾಂಗ್ರೆಸ್ ಸರ್ಕಾರ ಅಂದರೆ ಗ್ಯಾರಂಟಿ ಸರ್ಕಾರ ರಾಮನಗರ : ಕರ್ನಾಟಕದಲ್ಲಿ ಅಂಗನವಾಡಿ ಆರಂಭಗೊಂಡು 50 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 28ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಮುಖ ಮೂರು ಯೋಜನೆಗಳಿಗೆ ಚಾಲನೆ ನೀಡಲಾಗುವುದು. ಇದೊಂದು …
Read More »ರಾಜ್ಯದಲ್ಲಿ 2028ರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಸಿದ್ಧ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: “ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ. ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಕೇಂದ್ರದಲ್ಲಿ ಧ್ವನಿ ಎತ್ತುವುದೇ ಇಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬರೆದಿರುವ “ನೀರಿನ ಹೆಜ್ಜೆ: ವಿವಾದ-ಒಪ್ಪಂದ-ತೀರ್ಪು” ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. “ಶಿವಕುಮಾರ್ ಅವರು ಜಲಸಂಪನ್ಮೂಲ …
Read More »ಹುಬ್ಬಳ್ಳಿಯಲ್ಲಿ ಅನಧಿಕೃತ ಬ್ಯಾನರ್ಗಳ ಹಾವಳಿ: ಮಹಾನಗರ ಪಾಲಿಕೆ ಆದಾಯಕ್ಕೂ ಕೊಕ್ಕೆ
ಹುಬ್ಬಳ್ಳಿ : ಹುಬ್ಬಳ್ಳಿ – ಧಾರವಾಡ ಅವಳಿ ನಗರದಲ್ಲಿ ಬ್ಯಾನರ್ಗಳು, ಬಂಟಿಂಗ್ ಹಾಗೂ ಫ್ಲೆಕ್ಸ್ಗಳ ಹಾವಳಿ ಮಿತಿಮೀರಿದೆ. ಮುಖ್ಯ ರಸ್ತೆಗಳು ಸೇರಿದಂತೆ ಎಲ್ಲೆಂದರಲ್ಲಿ ಅನಧಿಕೃತವಾಗಿ ಬ್ಯಾನರ್ಗಳನ್ನು ಅಳವಡಿಸಿರುವುದರಿಂದ ನಗರ ಸೌಂದರ್ಯಕ್ಕೂ ಧಕ್ಕೆಯಾಗಿದೆ. ಸುಗಮ ಸಂಚಾರಕ್ಕೂ ಸಮಸ್ಯೆಯಾಗಿದೆ. ಜೊತೆಗೆ ಮಹಾನಗರ ಪಾಲಿಕೆ ಆದಾಯಕ್ಕೂ ಕುತ್ತು ಬಂದಿದೆ. ನಗರದಲ್ಲಿ ರಾಜಕೀಯ ಪಕ್ಷದ ಅಥವಾ ಸರ್ಕಾರೇತರ ಸಂಸ್ಥೆಗಳು ಹಾಗೂ ಸಾರ್ವಜನಿಕರು ಕೂಡ ಶುಭಕೋರುವ ಹಾಗೂ ಸ್ವಾಗತಕೋರುವ ಬ್ಯಾನರ್ಗಳು ದೊಡ್ಡ ಪ್ರಮಾಣದಲ್ಲಿವೆ. ಗೋಕುಲ ರಸ್ತೆಯ ವಿಮಾನ ನಿಲ್ದಾಣದಿಂದ …
Read More »
Laxmi News 24×7