Breaking News
Home / ರಾಜ್ಯ (page 22)

ರಾಜ್ಯ

ರಂಜಾನ್ ಹಬ್ಬದ ದಿನವೇ ಸಲ್ಮಾನ್ ಖಾನ್ ಅಭಿಮಾನಿಗಳ ಮೇಲೆ ಪೊಲೀಸರು ಲಾಠಿಚಾರ್ಜ್

ರಂಜಾನ್ ಹಬ್ಬದ ದಿನವೇ ಸಲ್ಮಾನ್ ಖಾನ್ ಅಭಿಮಾನಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ಅಭಿಮಾನಿಗಳು ಮುಂಬೈನಲ್ಲಿರುವ ತಮ್ಮ ನೆಚ್ಚಿನ ಸೂಪರ್ ಸ್ಟಾರ್ ಮನೆಗಳಿಗೆ ಧಾವಿಸಿದ್ದಾರೆ. ಗುರುವಾರ ಇಡೀ ದಿನ, ಬಾಂದ್ರಾದಲ್ಲಿರುವ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರ ಮನೆಗಳ ಹೊರಗೆ ಅಭಿಮಾನಿಗಳು ಜಮಾಯಿಸಿದ್ದರಿಂದ ಸಂಚಾರ ಅಸ್ತವ್ಯಸ್ತವಾಯಿತು. ಸಲ್ಮಾನ್ ನಿವಾಸಕ್ಕೆ ಆಗಮಿಸಿದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ

Read More »

ಲೋಕಸಭೆ ಚುನಾವಣೆ; 2ನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಶುಕ್ರವಾರ ಆರಂಭ

ಬೆಂಗಳೂರು: ರಾಜ್ಯದಲ್ಲಿ ಎರಡನೇ ಹಂತದ ಲೋಕಸಭೆ ಚುನಾವಣೆಗೆ ಚುನಾವಣಾ ಆಯೋಗ ಅಧಿಸೂಚನೆ ಪ್ರಕಟಿಸಲಿದ್ದು, ಶುಕ್ರವಾರದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ರಂಗೇರಿರುವ ಬೆನ್ನಲ್ಲೇ ಉಳಿದ 14 ಕ್ಷೇತ್ರಗಳಿಗೆ ಚುನಾವಣಾ ಆಯೋಗ ಶುಕ್ರವಾರ ಅಧಿಸೂಚನೆ ಹೊರಡಿಸಲಿದೆ. ರಾಜ್ಯದ ಮಧ್ಯಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಸೇರಿದಂತೆ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಸಲ್ಲಿಕೆಗೆ ಏ.19 ಕೊನೆ …

Read More »

ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್: ಹಳೆಯ ಪಿಂಚಣಿಗೆ ಮಹತ್ವದ ಆದೇಶ

ಬೆಂಗಳೂರು: ಹಳೇ ಪಿಂಚಣಿ ಜಾರಿಗೆ ಒತ್ತಾಯಿಸಿ ಈಗಾಗಲೇ ಸಾಕಷ್ಟು ಹೋರಾಟಗಳು ನಡೆದಿವೆ. ಈಗ ರಾಜ್ಯ ಸರ್ಕಾರವೂ ಜಾರಿಗೆ ಒಪ್ಪಿಗೆ ನೀಡಿದ್ದಲ್ಲದೆ ಆದೇಶವನ್ನು ಸಹ ನೀಡಿದೆ. ಈ ಏಪ್ರಿಲ್‌ 1ರಂದು ರಾಜ್ಯ ಸರ್ಕಾರದಿಂದ ಮತ್ತೊಂದು ಆದೇಶ ಜಾರಿಯಾಗಿದ್ದು, ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. 01.04.2006ರ ಪೂರ್ವದಲ್ಲಿ ನೇಮಕಾತಿಯಾಗಿ ನಂತರ ಅನುದಾನಕ್ಕೆ ಒಳಪಟ್ಟ ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿ ಯೋಜನಾ ವ್ಯಾಪ್ತಿಗೆ ಒಳಪಡಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶವನ್ನು ನೀಡಿದೆ. ಹಳೇ ಪಿಂಚಣಿ ವ್ಯವಸ್ಥೆಯನ್ನು …

Read More »

ಮದ್ಯ ಸೇವಿಸದಂತೆ ಬುದ್ಧಿಮಾತು ಹೇಳಿದ ವ್ಯಕ್ತಿಯನ್ನೇ ಕೊಂದ ಯುವಕರು

ಬೆಂಗಳೂರು: ಮದ್ಯ ಸೇವಿಸದಂತೆ ಬುದ್ಧಿಮಾತು ಹೇಳಿದ ಸಾಮಾಜಿಕ ಕಾರ್ಯಕರ್ತನನ್ನು ಚಾಕುವಿನಿಂದ ಇರಿದು ಪರಿಚಯಸ್ಥ ಯುವಕರೇ ಹತ್ಯೆ ಮಾಡಿದ್ದಾರೆ. ಮೈಲನಾಪ್ಪನಹಳ್ಳಿ ನಿವಾಸಿ ವೆಂಕಟೇಶ್ (45) ಕೊಲೆಯಾದ ಸಾಮಾಜಿಕ ಕಾರ್ಯಕರ್ತ. ಈ ಸಂಬಂಧ ಪವನ್ ಕುಮಾರ್ ಮತ್ತು ನಂದ ಗೋಪಾಲ ಅಲಿಯಾಸ್ ನಂದನನ್ನು ಪೊಲೀಸರು ಬಂಧಿಸಿದ್ದಾರೆ.ರಾಮಚಂದ್ರಪುರದ ಆಟದ ಮೈದಾನದಲ್ಲಿ ಮಂಗಳವಾರ ರಾತ್ರಿ 11 ಗಂಟೆಯಲ್ಲಿ ಈ ಕೃತ್ಯ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಮಚಂದ್ರಪುರದಲ್ಲಿ ನೆಲೆಸಿದ್ದ ವೆಂಕಟೇಶ್, ಕೆಲ ತಿಂಗಳ ಹಿಂದಷ್ಟೇ ಮೈಲನಾಪ್ಪನಹಳ್ಳಿಗೆ ವಾಸ್ತವ್ಯ …

Read More »

ಇಬ್ಬರು ಮಕ್ಕಳನ್ನು ಕೊಂದ ತಾಯಿ: ಪೊಲೀಸರಿಗೆ ಶರಣು

ಬೆಂಗಳೂರು: ಜಾಲಹಳ್ಳಿಯಲ್ಲಿ ಬುಧವಾರ ಮುಂಜಾನೆ ಇಬ್ಬರು ಮಕ್ಕಳನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ ತಾಯಿ, ಬಳಿಕ ಪೊಲೀಸರಿಗೆ ಕರೆ ಶರಣಾಗಿದ್ದಾಳೆ. ಭೋವಿ ಕಾಲೊನಿ ನಿವಾಸಿ ಗಂಗಾದೇವಿ(30) ಪೊಲೀಸ್ ಠಾಣೆಗೆ ಶರಣಾದ ಮಹಿಳೆ. ಆರೋಪಿ ಮಹಿಳೆ ತನ್ನ ಮಕ್ಕಳಾದ ಲಕ್ಷ್ಮಿ(7) ಹಾಗೂ ಗೌತಮ್(9)ನನ್ನು ಕೊಲೆ ಮಾಡಿದ್ದಾಳೆ. ಕೌಟುಂಬಿಕ ಕಲಹದಿಂದ ಮಕ್ಕಳನ್ನು ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿ ಮಹಿಳೆ ಹೇಳಿದ್ದಾಳೆ’ ಎಂದು ಪೊಲೀಸರು ಹೇಳಿದರು. ಆಂಧ್ರಪ್ರದೇಶದ ಗಂಗಾದೇವಿ 10 ವರ್ಷಗಳ ಹಿಂದೆ …

Read More »

ಬೆಳಗಾವಿಯಲ್ಲಿ ಒಟ್ಟು 10,175 ಮಕ್ಕಳು ಫೇಲ್‌!

ಬೆಳಗಾವಿ: ಅಖಂಡ ಜಿಲ್ಲೆ ಸೇರಿ ಈ ಬಾರಿ ಒಟ್ಟು 10,175 ವಿದ್ಯಾರ್ಥಿಗಳು ಫೇಲಾಗಿದ್ದಾರೆ! ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 4,742 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಅತಿ ಹೆಚ್ಚು ಮಕ್ಕಳು ಅಂದರೆ; 2,490 ಮಕ್ಕಳು ಅನುತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಿಂದ 1,352 ಹಾಗೂ ವಿಜ್ಞಾನ ವಿಭಾಗದಲ್ಲಿ 900 ಫೇಲಾಗಿದ್ದಾರೆ. ಅದೇ ರೀತಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 5,433 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ 3,606, ವಾಣಿಜ್ಯ ವಿಭಾಗದಲ್ಲಿ 927 ಹಾಗೂ ವಿಜ್ಞಾನ ವಿಭಾಗದಲ್ಲಿ …

Read More »

ಸ್ವರ್ಣವಲ್ಲೀ ಸ್ವಾಮೀಜಿ ಆಶೀರ್ವಾದ ಪಡೆದ ಕಾಗೇರಿ

ಶಿರಸಿ : ಯುಗಾದಿಯ ಶುಭದಿನದಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ವರ್ಣವಲ್ಲೀ ಮಠಕ್ಕೆ ಭೇಟಿ ನೀಡಿ, ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ದಂಪತಿ ಸಮೇತವಾಗಿ ಕಾಗೇರಿ ಅವರು ಮಠಕ್ಕೆ ಭೇಟಿ ನೀಡಿ, ಸ್ವರ್ಣವಲ್ಲೀ ಗಂಗಾಧರೇಂದ್ರ ಸ್ವಾಮಿಜಿ ಅವರಿಂದ ಮತ್ತು ಆನಂದಬೋಧೇಂದ್ರ ಸರಸ್ವತಿ ಸ್ವಾಮೀಜಿ ಅವರಿಂದ ಮಂತ್ರಾಕ್ಷತೆ ಹಾಗೂ ಆಶೀರ್ವಾದ ಪಡೆದರು.   ಈ ವೇಳೆ ಕಾಗೇರಿ ಅವರ ಪುತ್ರಿ ಶ್ರೀಲಕ್ಷ್ಮೀ ಹೆಗಡೆ, …

Read More »

ಅಕ್ರಮ ಆಸ್ತಿ ಗಳಿಕೆ ಕೇಸ್ ದಾಖಲೆ ಒದಗಿಸಲು ಡಿಸಿಎಂ ಡಿಕೆಶಿಗೆ ಲೋಕಾಯುಕ್ತ ನೋಟಿಸ್

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಲೋಕಾಯುಕ್ತ ಸಂಸ್ಥೆಯಿಂದ ನೋಟಿಸ್ ನೀಡಲಾಗಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ದಾಖಲೆ ಒದಗಿಸಲು ನೋಟಿಸ್ ನೀಡಲಾಗಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ತನಿಖೆಯನ್ನು ಸರ್ಕಾರ ರದ್ದು ಮಾಡಿದ್ದು, ಲೋಕಾಯುಕ್ತ ತನಿಖೆಗೆ ಆದೇಶಿಸಿತ್ತು. ಲೋಕಾಯುಕ್ತ ಸಂಸ್ಥೆಯಲ್ಲಿ ಡಿಸಿಎಂ ಡಿಕೆ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಸಿಬಿಐಗೆ ನೀಡಿರುವ ದಾಖಲೆ ಮತ್ತು ಮಾಹಿತಿ ಒದಗಿಸುವಂತೆ ಲೋಕಾಯುಕ್ತ ಪೊಲೀಸರು ಡಿಸಿಎಂ ಡಿಕೆಶಿಗೆ ನೋಟಿಸ್ ನೀಡಿದ್ದಾರೆ.

Read More »

‘ಆರೋಗ್ಯ ಚಿಂತನ ಮಾಲಿಕೆ’ 12 ಕೃತಿಗಳ ಬಿಡುಗಡೆ

ಬೆಂಗಳೂರು: ವಸಂತ ಪ್ರಕಾಶನ ವತಿಯಿಂದ ಡಾ. ವಸುಂಧರಾ ಭೂಪತಿ ಅವರ ಸಂಪಾದಕತ್ವದಲ್ಲಿ ಮೂಡಿಬಂದಿರುವ ‘ಆರೋಗ್ಯ ಚಿಂತನ ಮಾಲಿಕೆ’ ಯ 4ನೇ ಕಂತಿನ 12 ಕೃತಿಗಳ ಲೋಕಾರ್ಪಣೆ ಮತ್ತು ಪದ್ಮಶ್ರೀ ಪುರಸ್ಕೃತ ಡಾ. ಸಿ.ಆರ್. ಚಂದ್ರಶೇಖರ್ ಅವರ ಅಭಿನಂದನಾ ಸಮಾರಂಭ ಏ. 13ರಂದು ಆಯೋಜಿಸಲಾಗಿದೆ.   ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತು ಆವರಣದಲ್ಲಿ ಅಂದು ಬೆಳಗ್ಗೆ 10.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಕೆ. ಮರುಳಸಿದ್ದಪ್ಪ ಕೃತಿಗಳ ಲೋಕಾರ್ಪಣೆ ಮಾಡಲಿದ್ದಾರೆ. ಲೇಖಕಿಯರಾದ …

Read More »

ತೋಟದಲ್ಲಿ ಬಾಡೂಟ ವ್ಯವಸ್ಥೆ: ಶಾಮಿಯಾನ, ಕುರ್ಚಿ ತೆಗೆಸಿದ ಅಧಿಕಾರಿಗಳು

ರಾಮನಗರ: ತಾಲ್ಲೂಕಿನ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿರುವ ಜೆಡಿಎಸ್ ಅಧ್ಯಕ್ಷ ಹಾಗೂ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಎಚ್‌.ಡಿ. ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ರಾಜಕೀಯ ಮುಖಂಡರಿಗೆ ಬಾಡೂಟ ವ್ಯವಸ್ಥೆ ಮಾಡಲಾಗಿದೆ ಎಂಬ ಆರೋಪದ ಮೇಲೆ, ಚುನಾವಣಾ ಅಧಿಕಾರಿಗಳ ತಂಡ ಬುಧವಾರ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.   ಮಾಗಡಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ, ಕ್ಷಿಪ್ರ ಕಾರ್ಯಪಡೆ ತಂಡ (ಎಫ್‌ಎಸ್‌ಟಿ) ಹಾಗೂ ವಿಡಿಯೊ ಪರಿವೀಕ್ಷಣಾ ತಂಡ (ವಿಡಿಯೊ ಪರಿವೀಕ್ಷಣಾ ತಂಡ) ಸ್ಥಳಕ್ಕೆ …

Read More »