Breaking News
Home / ರಾಜ್ಯ (page 30)

ರಾಜ್ಯ

ಅನೈತಿಕ ಪೊಲೀಸ್​ಗಿರಿ ನೆಪದಲ್ಲಿ ಕಾನೂನು ಕೈಗೆತ್ತಿಕೊಂಡರೆ ತಕ್ಕ ಕಾನೂನಿನ ಶಾಸ್ತಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಅನೈತಿಕ ಪೊಲೀಸ್ ಗಿರಿ ನೆಪದಲ್ಲಿ ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಅವರಿಗೆ ತಕ್ಕ ಕಾನೂನಿನ ಶಾಸ್ತಿ ಆಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು. ಶಿವಾಜಿನಗರದ ಸೇಂಟ್ ಮೇರಿ ಬೆಸಿಲಿಕಾ ಚರ್ಚ್​​​ನಲ್ಲಿ ತಾಯಿ ಮೇರಿ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಸಿಎಂ, ಸೇಂಟ್ ಮೇರಿಯಮ್ಮನವರ ಬೆಸಿಲಿಕಾ ಚರ್ಚ್ ಅತಿದೊಡ್ಡ ಭಾವೈಕ್ಯತಾ ಕೇಂದ್ರ. ಬೆಸಿಲಿಕಾ ಪ್ರಾರ್ಥನಾ ಮಂದಿರಕ್ಕೆ ಎಲ್ಲ ಜಾತಿ, ಧರ್ಮದವರು ಬರುತ್ತಾರೆ. ಹೀಗಾಗಿ ಇದೊಂದು ಭಾವೈಕ್ಯತಾ ಕೇಂದ್ರವಾಗಿ ರೂಪುಗೊಂಡಿದೆ. ನಾನು ಈ ಜಯಂತ್ಯುತ್ಸವ ಮತ್ತು …

Read More »

ಕೌನ್ ಬನೇಗಾ ಕರೋಡ್​​​ಪತಿಯಲ್ಲಿ ಕೆಬಿಸಿಯ ಮೊದಲ ಕೋಟ್ಯಧಿಪತಿ ಇವರೇ ನೋಡಿ!

ಅಮೃತಸರ (ಪಂಜಾಬ್​): ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮ ಈಗಾಗಲೇ ಎಲ್ಲರಿಗೂ ತಿಳಿದಿರುವ ಕಾರ್ಯಕ್ರಮ. ಇದರಲ್ಲಿ 15 ಪ್ರಶ್ನೆಗೆ ಸರಿಯಾದ ಉತ್ತರ ಕೊಟ್ಟರೆ 7 ಕೋಟಿ ಗೆಲ್ಲುವ ಅವಕಾಶ ಇದೆ. ಆದರೆ ಇಲ್ಲಿಯ ವರೆಗೆ ತಲುಪಲು 14 ಪ್ರಶ್ನೆಗಳನ್ನು ದಾಟಬೇಕಿದೆ. 15ನೇ ಸರಣಿಯ ಕೌನ್ ಬನೇಗಾ ಕರೋಡ್ಪತಿಯಲ್ಲಿ ಪಂಜಾಬ್‌ನ ಖಲ್ರಾ ಎಂಬ ಸಣ್ಣ ಹಳ್ಳಿಯಿಂದ ಬಂದಿರುವ ಜಸ್ಕರನ್ ಸಿಂಗ್ ಕೋಟಿ ಗೆದ್ದಿದ್ದಾರೆ. ಈ ಆವೃತ್ತಿಯ ಮೊದಲ ಕೋಟಿ ಬಹುಮಾನ ಇದಾಗಿದೆ.     …

Read More »

ಅಂಗದ್​ನ ಜನನದ ಹಿನ್ನೆಲೆಯಲ್ಲಿ ನೇಪಾಳ ಪಂದ್ಯಕ್ಕೂ ಮುನ್ನ ಭಾರತಕ್ಕೆ ಮರಳಿದ್ದ ಬುಮ್ರಾ ಈಗ ಮತ್ತೆ ಏಷ್ಯಾಕಪ್​ ತಂಡವನ್ನು ಸೇರಿಕೊಂಡಿದ್ದಾರೆ.

ಕೊಲಂಬೊ (ಶ್ರೀಲಂಕಾ): ಭಾನುವಾರ ಕೊಲಂಬೊದಲ್ಲಿ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಸೂಪರ್ ಫೋರ್ ಪಂದ್ಯಕ್ಕೆ ಮುನ್ನ ಭಾರತದ ವೇಗದ ಬೌಲಿಂಗ್ ಮುಂಚೂಣಿಯಲ್ಲಿರುವ ಜಸ್ಪ್ರೀತ್ ಬುಮ್ರಾ ಭಾರತ ತಂಡವನ್ನು ಮತ್ತೆ ಸೇರಿಕೊಂಡಿದ್ದಾರೆ. ತನ್ನ ಮಗ ಮೊದಲ ಮಗುವಿನ ಜನನದ ( ಅಂಗದ್‌) ಕಾರಣ ಪಲ್ಲೆಕೆಲೆಯಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದ ನಂತರ ಭಾರತಕ್ಕೆ ಮರಳಿದ್ದರು. ಇದರಿಂದ ಗುಂಪು ಹಂತದ ನೇಪಾಳ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದರು. ಆದರೆ, ಭಾರತ ನೇಪಾಳದ ವಿರುದ್ಧದ ಪಂದ್ಯದಲ್ಲಿ 10 ವಿಕೆಟ್​ಗಳ …

Read More »

ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರ ಕೇಂದ್ರ ಸಚಿವ ಪ್ರಹ್ಲಾದ್ ‌ಜೋಶಿ ಪ್ರತಿಕ್ರಿಯೆ

ಹುಬ್ಬಳ್ಳಿ: ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ‌ಜೋಶಿ ‘ಮೈತ್ರಿ ಬಗ್ಗೆ ನನಗೇನು ಗೊತ್ತಿಲ್ಲ. ಈ ವಿಷಯದಲ್ಲಿ ಅಧಿಕೃತ ಮಾಹಿತಿ ಬರುವವರೆಗೆ ನಾನು ಏನು ಹೇಳುವುದಿಲ್ಲ’ ಎಂದರು. ಶುಕ್ರವಾರ (ನಿನ್ನೆ) ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಡಿಎಂಕೆ ನಾಯಕ ಎ ರಾಜಾ ಮತ್ತು ಸಚಿವ ಉದಯನಿಧಿ ಸ್ಟಾಲಿನ್​ ಹೇಳಿಕೆ ಖಂಡಿಸುವ ಪ್ರಯತ್ನ ಮಾಡಿಲ್ಲ. ಘಮಂಡಿಯಾ ಘಟಬಂಧನ ಪ್ರಚಾರ ಬಹಳಷ್ಟು ನಡೆಯುತ್ತಿದೆ. ಇದು ಅರ್ಥವಿಲ್ಲದ ಘಟಬಂಧನ …

Read More »

ಸಂಚಾರ ನಿಯಮ ಉಲ್ಲಂಘನೆ: ಶೇ.50 ರಷ್ಟು ರಿಯಾಯಿತಿ ದಂಡ ಪಾವತಿಗೆ ಇಂದೇ ಕೊನೆ ದಿನ

ಬೆಂಗಳೂರು: ಸಂಚಾರ ನಿಯಮ‌ ಉಲ್ಲಂಘನೆ ಮಾಡಿದ ವಾಹನ ಸವಾರರಿಗೆ ಶೇ.50ರಷ್ಟು ರಿಯಾಯಿತಿ ದಂಡ ಪಾವತಿಗೆ ಇಂದು(ಶನಿವಾರ) ಕೊನೆ ದಿನವಾಗಿದ್ದು, ಫೆಬ್ರುವರಿ 11ರ ಮುನ್ನ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಸವಾರರಿಗೆ ಈ ಆದೇಶ ಅನ್ವಯವಾಗಲಿದೆ.   ಸವಾರರು ಸದ್ಬಳಕೆ‌ ಮಾಡಿಕೊಳ್ಳುವಂತೆ ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ. ರಾಜ್ಯ ಕಾನೂನು ಸೇವೆ ಪ್ರಾಧಿಕಾರ ಶಿಫಾರಸು ಮೇರೆಗೆ ರಾಜ್ಯ ಸರ್ಕಾರ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಶೇ.50 ರಷ್ಟು ದಂಡ ಪಾವತಿಸುವ ಬಗ್ಗೆ ಆದೇಶ ಹೊರಡಿಸಿತ್ತು. ಮೊದಲ …

Read More »

ಮೃದಂಗ ನುಡಿಸಿ ವಿಶ್ವ ಪ್ರತಿನಿಧಿಗಳನ್ನು ಸ್ವಾಗತಿಸಲಿರುವ 12 ವರ್ಷದ ಸಂಗೀತ ಕಲಾವಿದ ದಕ್ಷ್

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಶನಿವಾರ ನಡೆಯಲಿರುವ ಔತಣಕೂಟದಲ್ಲಿ 12 ವರ್ಷದ ಬಾಲಕ ದಕ್ಷಿ ಮೃದಂಗ ಬಾರಿಸುವ ಮೂಲಕ ಅತಿಥಿಗಳನ್ನು ಸ್ವಾಗತಿಸಲಿದ್ದಾರೆ. ಮೂಲಗಳ ಪ್ರಕಾರ, ವಿಶ್ವ ಪ್ರತಿನಿಧಿಗಳನ್ನು ಸ್ವಾಗತಿಸಲು ಆಯೋಜಿಸಲಾದ ಸಂಗೀತ ಕಛೇರಿಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಕನಿಷ್ಠ 78 ಸಂಗೀತಗಾರರು ಭಾಗವಹಿಸಲಿದ್ದಾರೆ. ದೆಹಲಿಯ ವಸುಂಧರಾ ಎನ್‌ಕ್ಲೇವ್‌ನ ಸೋಮರ್‌ವಿಲ್ಲೆ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿ ದಕ್ಷ್ ಕೂಡ ಸಂಗೀತ ಕಚೇರಿಯಲ್ಲಿ ಪ್ರದರ್ಶನ ನೀಡಲಿದ್ದಾರೆ. ಜಿ20 ಶೃಂಗಸಭೆಯ ಭಾಗವಾಗಿರುವುದು ನನಗೆ ಹೆಮ್ಮೆಯ ವಿಷಯ …

Read More »

ಅಂಗವಿಕಲರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ: ಅಂಗವಿಕಲರು ಮುಖ್ಯ ವಾಹಿನಿಗೆ ಬರಲು ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ. ಅಂಗವಿಕಲರ ಕೆಲಸ ಕಾರ್ಯಗಳಿಗಾಗಿ ಅನುಕೂಲವಾಗಲು ಟ್ರೈಸಿಕಲ್ ವಿತರಿಸಲಾಗಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಇಲ್ಲಿಯ ಎನ್‍ಎಸ್‍ಎಫ್ ಆವರಣದಲ್ಲಿ 2022-23ನೇ ಸಾಲಿನಲ್ಲಿ ಅಂಗವಿಕಲ ಮತ್ತು ಹಿರಿಯ ನಾಗರೀಕರ ಕಲ್ಯಾಣ ಇಲಾಖೆಯಿಂದ ಹೆಚ್ಚುವರಿ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು. ಇನ್ನೂ ಅರಭಾವಿ ಕ್ಷೇತ್ರದ ಅಂಗವಿಕಲ ಫಲಾನುಭವಿಗಳಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನಗಳನ್ನು ನೀಡುವುದು ಬಾಕಿ ಇವೆ. …

Read More »

ಬಗಲಗುಂಟೆ ವ್ಯಾಪ್ತಿಯಲ್ಲಿ ತಾಯಿ – ಮಗನ ಹತ್ಯೆ ಪ್ರಕರಣ: ಪ್ರಿಯಕರನ ಬಂಧನ

ಬೆಂಗಳೂರು : ಬಗಲಗುಂಟೆ ಠಾಣಾ ವ್ಯಾಪ್ತಿಯ ರವೀಂದ್ರನಾಥ ಗುಡ್ಡೆಯಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣದ ಆರೋಪಿ ಶೇಖರ್ ಎಂಬಾತನನ್ನು ಬಂಧಿಸಲಾಗಿದೆ. ನವನೀತಾ (35) ಹಾಗೂ ಸಾಯಿ ಸೃಜನ್ (8) ನನ್ನು ಹತ್ಯೆ ಮಾಡಿದ್ದ ಆಕೆಯ ಪ್ರಿಯಕರ ಶೇಖರ್​ನನ್ನು ಬಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ನವನೀತಾ ತನ್ನ ಪತಿಯನ್ನು ತೊರೆದು ಮಗನೊಂದಿಗೆ 2 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಈ ವೇಳೆ, ನವನೀತಾಳಿಗೆ ಆರೋಪಿ ಶೇಖರ್ ಪರಿಚಯವಾಗಿತ್ತು. ಬಳಿಕ ಇಬ್ಬರೂ ಪರಸ್ಪರ ಪ್ರೀತಿಸಲಾರಂಭಿಸಿದ್ದರು. ಆದರೆ, …

Read More »

ನೂತನ ಎಸ್ಪಿಯಾಗಿ ಭೀಮಾಶಂಕರ್ ಗುಳೇದ್ ಅಧಿಕಾರ ಸ್ವೀಕಾರ

ಬೆಳಗಾವಿಯ ನೂತನ ವರಿಷ್ಟಾಧಿಕಾರಿಯಾಗಿ ಭೀಮಾಶಂಕರ್ ಗುಳೇದ್ ರವರು ಇಂದು ಅಧಿಕಾರಿ ಸ್ವೀಕರಿಸಿದರು. ಬೆಳಗಾವಿ ಜಿಲ್ಲೆಯ ವರಿಷ್ಟಾಧಿಕಾರಿಯಾಗಿ ಭೀಮಾಶಂಕರ್ ಗುಳೇದ್ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಎಸ್ಪಿ ಸಂಜೀವ್ ಪಾಟೀಲ್ ಅವರು ಅಧಿಕಾರ ಹಸ್ತಾಂತರಿಸಿದರು. ‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯಭಾರ ವಹಿಸಿ ಕೊಂಡಿದ್ದೇನೆ. ಚೆನ್ನಾಗಿ ಕಾರ್ಯನಿರ್ವ ಹಿಸುತ್ತೇನೆ’ ಎಂದು ಭೀಮಾಶಂಕರ್ ಗುಳೇದ್ ಎಂದು ಮಾಧ್ಯಮಗಳಿಗೆ ವಿಶ್ವಾಸ ವ್ಯಕ್ತಪಡಿಸಿದರು.ಸಂಜೀವ್ ಪಾಟೀಲ್ ರವರು ಉತ್ತಮವಾಗಿ ಕೆಲಸ ಮಾಡಿದ್ದಾರೆ ಅವರ ಮಾಡಿದ ಕೆಲಸಗಳನ್ನು ನಾನೂ ಕೂಡ ಮುಂದುವರಿಸಿಕೊಂಡು …

Read More »

ಲೋಕಸಭಾ ಚುನಾವಣೆಯಲ್ಲಿ ಯಾರು ಮೈತ್ರಿ ಮಾಡಿಕೊಳ್ಳುತ್ತಾರೆ, ನಾವು ತಲೆಕೆಡಿಸಿಕೊಳ್ಳುವುದಿಲ್ಲ

ಲೋಕಸಭಾ ಚುನಾವಣೆಯಲ್ಲಿ ಯಾರು ಮೈತ್ರಿ ಮಾಡಿಕೊಳ್ಳುತ್ತಾರೆ, ಯಾರು ಪ್ರತ್ಯೇಕವಾಗಿ ಚುನಾವಣೆ ಸ್ಪರ್ಧಿಸುತ್ತಾರೆ ಎನ್ನುವ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ   ಲೋಕಸಭಾ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯೆ ಮುಖ್ಯಮಂತ್ರಿಗಳು ಮಾಧ್ಯಮದರಿಗೆ ಇಂದು ಪ್ರತಿಕ್ರಿಯೆ ನೀಡಿದರು, ಲೋಕಸಭಾ ಚುನಾವಣೆಯಲ್ಲಿ ಯಾರು ಮೈತ್ರಿ ಮಾಡಿಕೊಳ್ಳುತ್ತಾರೆ, ಯಾರು ಪ್ರತ್ಯೇಕವಾಗಿ ಚುನಾವಣೆ ಸ್ಪರ್ಧಿಸುತ್ತಾರೆ ಎನ್ನುವ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ ನಾವು ಜನರ ಹತ್ತಿರ ಮತ ಕೇಳುತ್ತೇವೆ. …

Read More »