Breaking News

ರಾಜ್ಯ

ನಿಲಜಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಬದ್ಧ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

ನಿಲಜಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಬದ್ಧ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ 1.90 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಬೆಳಗಾವಿ: ನಿಲಜಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಬದ್ಧವಾಗಿದ್ದು, ಇದಕ್ಕಾಗಿ 1.90 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ನಿಲಜಿ ಗ್ರಾಮದ ಶ್ರೀ ಮಹಾಲಕ್ಷ್ಮಿ …

Read More »

ಬೆಳಗಾವಿ ಡಿಸಿ ವಿರುದ್ಧ ಸಂಸತ್ ಸಭಾಪತಿಗಳಿಗೆ ಧೈರ್ಯಶೀಲ್ ಮಾನೆ ದೂರು…

ಬೆಳಗಾವಿ ಡಿಸಿ ವಿರುದ್ಧ ಸಂಸತ್ ಸಭಾಪತಿಗಳಿಗೆ ಧೈರ್ಯಶೀಲ್ ಮಾನೆ ದೂರು… ಇದು ಕಳ್ಳರ ತಿರುಬೊಬ್ಬೆ ಎಂದ ಕನ್ನಡ ಹೋರಾಟಗಾರ ಅಶೋಕ್ ಚಂದರಗಿ ಕರ್ನಾಟಕಕ್ಕೆ ಪ್ರವೇಶ ನೀಡದೇ ಸಂಸತ್ ಹಕ್ಕು ಭಂಗದ ಆರೋಪ ಬೆಳಗಾವಿ ಡಿಸಿ ವಿರುದ್ಧ ಸಂಸತ್ ಸಭಾಪತಿಗಳಿಗೆ ಧೈರ್ಯಶೀಲ್ ಮಾನೆ ದೂರು ಕ್ರಮಕೈಗೊಳ್ಳಬೇಕೆಂದು ಸಭಾಪತಿಗಳಿಗೆ ಮನವಿ ‘ಬೆಳಗಾವಿಯಲ್ಲಿ ನ.1ರಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಆಯೋಜಿಸಿದ್ದ ಕರಾಳ ದಿನಾಚರಣೆಯಲ್ಲಿ ಭಾಗಿಯಾಗಲು ತೆರಳುತ್ತಿದ್ದ ನನಗೆ ಬೆಳಗಾವಿ ಪ್ರವೇಶ ನಿಷೇಧಿಸಿದ ಬೆಳಗಾವಿ ಜಿಲ್ಲಾಧಿಕಾರಿ …

Read More »

ಜಿಲ್ಲಾ ಮಟ್ಟದ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಸಚಿವ ಸತೀಶ್ ಜಾರಕಿಹೊಳಿ ಅವರು ಚಾಲನೆ.

ಜಿಲ್ಲಾ ಮಟ್ಟದ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಸಚಿವ ಸತೀಶ್ ಜಾರಕಿಹೊಳಿ ಅವರು ಚಾಲನೆ. ಗೋಕಾಕ : ಇಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಅಡಿ ಗೋಕಾಕ ತಾಲೂಕು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಆವರಣದಲ್ಲಿ ಜಿಲ್ಲಾ ಮಟ್ಟದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮಗುವಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಾದ ಸಚಿವ ಸತೀಶ್ ಜಾರಕಿಹೊಳಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಮೋಹನ್ ಭಸ್ಮೆ, ಜಿಲ್ಲಾ …

Read More »

ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಿ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಚಾಲನೆ ನೀಡಿದರು.

ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಿ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಚಾಲನೆ ನೀಡಿದರು. ಇಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಅಡಿ ಗೋಕಾಕ ತಾಲೂಕು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಆವರಣದಲ್ಲಿ ಜಿಲ್ಲಾ ಮಟ್ಟದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮಗುವಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮುಖ್ಯ ವೈದ್ಯಾಧಿಕಾರಿಗಳಾದ ರವಿಂದ್ರ ಅಂಟಿನ ಸೇರಿದಂತೆ …

Read More »

ಚಿಕ್ಕೋಡಿ ನ್ಯಾಯಾಲಯ ಆವರಣದಲ್ಲಿ ಜಿಲ್ಲಾ ನ್ಯಾಯಾಂಗ ಇಲಾಖೆ ಅನಾವರಣ

ಚಿಕ್ಕೋಡಿ ನ್ಯಾಯಾಲಯ ಆವರಣದಲ್ಲಿ ಜಿಲ್ಲಾ ನ್ಯಾಯಾಂಗ ಇಲಾಖೆ, ಬೆಳಗಾವಿ, ಲೋಕೋಪಯೋಗಿ ಇಲಾಖೆ (ಚಿಕ್ಕೋಡಿ ವಿಭಾಗ) ಹಾಗೂ ಬಾರ್ ಅಸೋಸಿಯೇಷನ್, ಚಿಕ್ಕೋಡಿ ಇವರ ಸಂಯುಕ್ತ ಆಶ್ರಯದಲ್ಲಿ ನೂತನ ನ್ಯಾಯಾಲಯ ಸಂಕೀರ್ಣ, ಬಾರ್ ಅಸೋಸಿಯೇಷನ್ ಕಟ್ಟಡದ ಉದ್ಘಾಟನೆ ಮತ್ತು ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ಹಸ್ತಾಂತರಿಸುತ್ತಿರುವ ಚಿತ್ರಣವಿರುವ ಗೋಡೆಯ ಮೇಲಿನ ಮ್ಯುರಲ್ ಅನ್ನು ಇಂದು ಮಾನ್ಯ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಶ್ರೀ ಪ್ರಸನ್ನ ಬಿ. ವರಾಳೆ ಅವರ‌ ಜೊತೆಗೆ …

Read More »

ಗ್ಲಾಂಡರ್ಸ್‌ ಸೋಂಕಿಗೆ ರೇಸ್‌ಕೋರ್ಸ್‌ನ ಕುದುರೆ ಬಲಿ; ಮೃಗಾಲಯದಲ್ಲಿ ಕಟ್ಟೆಚ್ಚರ

ಮೈಸೂರು: ನಗರದ ಎಂ.ಜಿ. ರಸ್ತೆಯಲ್ಲಿರುವ ರೇಸ್‌ಕೋರ್ಸ್‌ನಲ್ಲಿ ಮಾರಕ ಗ್ಲಾಂಡರ್ಸ್‌ ಸೋಂಕಿನಿಂದ ಕುದುರೆಯೊಂದು ಮೃತಪಟ್ಟಿದೆ. ಈ ಹಿನ್ನೆಲೆಯಲ್ಲಿ, ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿಸೆಂಬರ್ 17ರಂದು ಎರಡು ವರ್ಷದ ಗಂಡು ಕುದುರೆ ಗ್ಲಾಂಡರ್ಸ್‌ ಸೋಂಕಿಗೆ ಬಲಿಯಾಗಿದೆ. ಈ ಸೋಂಕು ಮಾರಕವಾಗಿದ್ದು, ಎರಡು ಕಿ.ಮೀ ವ್ಯಾಪ್ತಿಯವರೆಗೂ ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ, ಮೃಗಾಲಯದಲ್ಲಿ ಎಲ್ಲ ಪ್ರಾಣಿಗಳ ಮೇಲೆ ನಿಗಾವಹಿಸಿ, ಮುಂಜಾಗ್ರತಾ ಕ್ರಮ‌ ಕೈಗೊಳ್ಳಲಾಗಿದೆ. ಸೋಂಕು ಮೃಗಾಲಯದಲ್ಲಿರುವ ಜೀಬ್ರಾ …

Read More »

ಸದಾಶಿವನಗರದ ಡಿಕೆಶಿ ನಿವಾಸಕ್ಕೆ ನಾಗಾಸಾಧುಗಳ ಭೇಟಿ:

ಸದಾಶಿವನಗರದ ಡಿಕೆಶಿ ನಿವಾಸಕ್ಕೆ ನಾಗಾಸಾಧುಗಳ ಭೇಟಿ: ಮುಂದಿನ ಸಿಎಂ ಆಗಲಿ ಎಂದು ನಾಗಾಸಾಧುಗಳಿಂದ ಡಿಕೆಶಿಗೆ ಆಶೀರ್ವಾದ ಸದಾಶಿವನಗರದ ಡಿಕೆಶಿ ನಿವಾಸಕ್ಕೆ ನಾಗಾಸಾಧುಗಳ ಭೇಟಿ ಉತ್ತರಾಖಂಡ್ ಉತ್ತರಪ್ರದೇಶದಿಂದ ಆಗಮಿಸಿದ 10 ಸಾಧುಗಳು ಡಿಕೆ ಶಿವಕುಮಾರ್ ಸಿಎಂ ಆಗಲೆಂದು ಹರಸಿದ ಸಾಧುಗಳು ಮನೆಗೆ ಬಂದವರನ್ನು ದೂರ ತಳ್ಳಲಾಗದು ಎಂದ ಡಿಕೆಶಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮನೆಗೆ ಇಂದು ನಾಗಾಸಾಧುಗಳು ತೆರಳಿ ವಿಶೇಷ ಆಶೀರ್ವಾದ ಮಾಡಿದ್ದು, ಅವರು ಮುಂದಿನ ಮುಖ್ಯಮಂತ್ರಿಯಾಗಲಿ ಎಂದು ಹಾರೈಸಿದ್ದಾರೆ …

Read More »

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ.

ಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಮೂಡಲಗಿ ತಾಲ್ಲೂಕಿನ ಅರಳಿಮಟ್ಟಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಮಾರ್ಗದರ್ಶಕರಾದ ರಾದ ಸಂತೋಷ ಜಾರಕಿಹೊಳಿ ಅವರ …

Read More »

ಕುತೂಹಲ ಕೆರಳಿಸಿದ ಸತೀಶ್​ ಜಾರಕಿಹೊಳಿ ಡಿನ್ನರ್ ಪಾರ್ಟಿ: ಸಿಎಂ, ಅಹಿಂದ ಸಚಿವರು, ಶಾಸಕರಿಗೆ ಮಾತ್ರ ಆಹ್ವಾನ!

ಬೆಳಗಾವಿ: ಚಳಿಗಾಲ ಅಧಿವೇಶನದಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ರಾಜ್ಯ ನಾಯಕರು ಬಂದಿದ್ದೇ ಬಂದಿದ್ದು, ಡಿನ್ನರ್ ಪಾರ್ಟಿಗಳು ನಡೆಯುತ್ತಲೇ ಇವೆ. ಗುರುವಾರ ರಾತ್ರಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್​ ಜಾರಕಿಹೊಳಿ ಅವರು ಆಯೋಜಿಸಿದ್ದ ಭೋಜನಕೂಟವು ತೀವ್ರ ಕುತೂಹಲ ಕೆರಳಿಸಿದೆ. ಬೆಳಗಾವಿಯ ಕುವೆಂಪುನಗರದಲ್ಲಿ ಇರುವ ಸತೀಶ್​ ಜಾರಕಿಹೊಳಿ‌ ನಿವಾಸದಲ್ಲಿ ಡಿನ್ನರ್ ಪಾರ್ಟಿ ಕರೆದಿದ್ದರು. ಈ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ. ಪರಮೇಶ್ವರ್​, ಸಚಿವರಾದ ಡಾ.ಹೆಚ್.ಸಿ. ಮಹದೇವಪ್ಪ, ಜಮೀರ್ ಅಹ್ಮದ್ ಖಾನ್ ಸೇರಿದಂತೆ 25 …

Read More »

ಕಲೆಕ್ಷನ್ ಕಿಂಗ್ ಅಂದ್ರೆ ವಿಜಯೇಂದ್ರ:ಡಿ.ಕೆ.ಶಿ

ಚಿಕ್ಕೋಡಿ: ಕಲೆಕ್ಷನ್ ಕಿಂಗ್ ಅಂದ್ರೆ ವಿಜಯೇಂದ್ರ, ಬಿ.ಎಸ್. ಯಡಿಯೂರಪ್ಪ ಅವರ ಹೆಸರನ್ನು ಕೆಳಗೆ ಇಳಿಸುತ್ತಿರುವ ವ್ಯಕ್ತಿ ಅಂದರೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಯತ್ನಾಳ್ ದಾಟಿಯಂತೆ ವಿಜಯೇಂದ್ರ ಮೇಲೆ ನೇರಾನೇರ ಆರೋಪ ಮಾಡಿದರು. ರಾಜ್ಯದ ಖಜಾನೆ ಖಾಲಿ ಮಾಡಿ ಕಾಂಗ್ರೆಸ್ ಹೈಕಮಾಂಡ್ ಖುಷಿ ಪಡಿಸಿದ್ದೀರಿ ಎಂದು ವಿಜಯೇಂದ್ರ ಅವರ ಹೇಳಿಕೆ ವಿಚಾರವಾಗಿ ಡಿ.ಕೆ. ಶಿವಕುಮಾರ್​ ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿ, ವಿಜಯೇಂದ್ರ ಅವರಿಗೆ ಅನುಭವ ಕೊರತೆ ಇದೆ. …

Read More »