Breaking News
Home / ರಾಜಕೀಯ / ಬೆಳಗಾವಿಯಲ್ಲಿ ಒಟ್ಟು 10,175 ಮಕ್ಕಳು ಫೇಲ್‌!

ಬೆಳಗಾವಿಯಲ್ಲಿ ಒಟ್ಟು 10,175 ಮಕ್ಕಳು ಫೇಲ್‌!

Spread the love

ಬೆಳಗಾವಿ: ಅಖಂಡ ಜಿಲ್ಲೆ ಸೇರಿ ಈ ಬಾರಿ ಒಟ್ಟು 10,175 ವಿದ್ಯಾರ್ಥಿಗಳು ಫೇಲಾಗಿದ್ದಾರೆ!

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 4,742 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಅತಿ ಹೆಚ್ಚು ಮಕ್ಕಳು ಅಂದರೆ; 2,490 ಮಕ್ಕಳು ಅನುತ್ತೀರ್ಣರಾಗಿದ್ದಾರೆ.

ವಾಣಿಜ್ಯ ವಿಭಾಗದಿಂದ 1,352 ಹಾಗೂ ವಿಜ್ಞಾನ ವಿಭಾಗದಲ್ಲಿ 900 ಫೇಲಾಗಿದ್ದಾರೆ.

ಅದೇ ರೀತಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 5,433 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ 3,606, ವಾಣಿಜ್ಯ ವಿಭಾಗದಲ್ಲಿ 927 ಹಾಗೂ ವಿಜ್ಞಾನ ವಿಭಾಗದಲ್ಲಿ 900 ಮಕ್ಕಳು ಫೇಲಾಗಿದ್ದಾರೆ.

‘ಕಬ್ಬಿಣದ ಕಡಲೆ’ ಎಂದು ಹೇಳುವ ವಿಜ್ಞಾನ ವಿಭಾಗದಲ್ಲೇ ಫೇಲಾದವರು ಕಡಿಮೆ. ‘ಸುಲಿದ ಬಾಳೆ ಹಣ್ಣು’ ಎಂದು ಪರಿಗಣಿಸುವ ಕಲಾ ವಿಭಾಗದಲ್ಲೇ ಅತಿ ಹೆಚ್ಚು ಮಕ್ಕಳು ಫೇಲಾಗಿದ್ದು ಅಚ್ಚರಿಕೆ ಕಾರಣವಾಗಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ