Breaking News
Home / ರಾಜ್ಯ (page 1330)

ರಾಜ್ಯ

ಕೆಲವರು ನಮ್ಮ ಹೆಸರು ಹೇಳಿಕೊಂಡು ಎದುರಾಳಿಗೆ ಮತ ನೀಡಿ ಅಂತಾ ಹೇಳುತ್ತಿದ್ದಾರೆ. ಅದಕ್ಕೆ ಕಾರ್ಯಕರ್ತರು ಸ್ಪಂದಿಸಬೇಡಿ.: ಸತೀಶ್ ಜಾರಕಿಹೊಳಿ

ಗೋಕಾಕ: ಕೆಲವರು ನಮ್ಮ ಹೆಸರು ಹೇಳಿಕೊಂಡು ಎದುರಾಳಿಗೆ ಮತ ನೀಡಿ ಅಂತಾ ಹೇಳುತ್ತಿದ್ದಾರೆ. ಅದಕ್ಕೆ ಕಾರ್ಯಕರ್ತರು ಸ್ಪಂದಿಸಬೇಡಿ. ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಪಣತೊಡಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ತಮ್ಮ ಹಿಲ್ ಗಾರ್ಡನ್ ಕಚೇರಿಯಲ್ಲಿ ಗೋಕಾಕ, ಅರಭಾವಿ ಮತಕ್ಷೇತ್ರದ ಏಜೆಂಟ್ ಹಾಗೂ ಮುಖಂಡರ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ನಾವು ಕಾಂಗ್ರೆಸ್ ಅಭ್ಯರ್ಥಿ ಹೊರತು ಯಾರಿಗೂ ಮತ ನೀಡಿ ಎಂದು ಹೇಳಿಲ್ಲ. ಮುಖಂಡರು ಇದಕ್ಕೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ …

Read More »

ಕಾನೂನು ಪದವಿ ಆಫ್ ಲೈನ್ ಪರೀಕ್ಷೆ ರದ್ದತಿ ಹಾಗೂ ಕೂಡಲೇ ತರಗತಿ ಆರಂಭಕ್ಕೆ ಒತ್ತಾಯಿಸಿ, ಕಾನೂನು ವಿದ್ಯಾರ್ಥಿಗಳ ಹೋರಾಟ

ಹುಬ್ಬಳ್ಳಿ: ಕಾನೂನು ಪದವಿ ಆಫ್ ಲೈನ್ ಪರೀಕ್ಷೆ ರದ್ದತಿ ಹಾಗೂ ಕೂಡಲೇ ತರಗತಿ ಆರಂಭಕ್ಕೆ ಒತ್ತಾಯಿಸಿ, ಕಾನೂನು ವಿದ್ಯಾರ್ಥಿಗಳ ಹೋರಾಟ ಬೆಂಬಲಿಸಿ, ಎಬಿವಿಪಿಯಿಂದ ಸಾವಿರಾರು ವಿದ್ಯಾರ್ಥಿಗಳು ಗುರುವಾರ ಕಾನೂನು ವಿವಿಗೆ ಮುತ್ತಿಗೆ ಹಾಕಿದರು.   ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ನವನಗರದ ಆರ್ ಟಿಒ ಕಚೇರಿಯಿಂದ ಕಾನೂನು ವಿವಿವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ವಿವಿಗೆ ಮುತ್ತಿಗೆ ಹಾಕಿದರು. ವಿವಿ ಕುಲಪತಿ ವಿರುದ್ಧ ಘೋಷಣೆ ಕೂಗಿದರು. ರಾಜ್ಯದ ವಿವಿಧ ಜಿಲ್ಲೆಯ ನೂರಾರು …

Read More »

ಲೈಂಗಿಕ ಕಿರುಕುಳದ ದೂರಿನಲ್ಲಿ ಸತ್ಯಾಂಶವಿದ್ದರೆ, ಆ ಸಚಿವರನ್ನು ಸಂಪುಟದಿಂದ ಕೈಬಿಡಲಾಗುವುದು

ಪಣಜಿ: ಲೈಂಗಿಕ ಹಗರಣದಲ್ಲಿ ತೊಡಗಿಕೊಂಡಿರುವ ಕುರಿತಾಗಿ ಪ್ರತಿಪಕ್ಷಗಳು ಬಿಜೆಪಿ ಸಚಿವರೊಬ್ಬರ ವಿರುದ್ಧ ಆರೋಪ ಮಾಡುತ್ತಿವೆ, ಆದರೆ ಇದುವರೆಗೂ ಹೆಸರು ಬಹಿರಂಗ ಪಡಿಸಿಲ್ಲ. ಸಚಿವರ ವಿರುದ್ಧ ಲೈಂಗಿಕ ಕಿರುಕುಳದ ದೂರು ಬಂದರೆ ತನಿಖೆ ನಡೆಸಿ, ಅದರಲ್ಲಿ ಸತ್ಯಾಂಶವಿದ್ದರೆ ಆ ಸಚಿವರನ್ನು ಸಂಪುಟದಿಂದ ಕೈಬಿಡಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಸ್ಪಷ್ಟಪಡಿಸಿದ್ದಾರೆ.   ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತಾಡಿರುವ ಅವರು- ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆ ದೂರು ನೀಡಲು ಮುಂದೆ ಬಂದರೆ ಅಥವಾ ಯಾರಾದರೂ ದೃಢವಾದ …

Read More »

ಚುನಾವಣೆ ಕರ್ತವ್ಯ ಲೋಪ: ಬಾಬಾನಗರ ಪಿಡಿಒ ರೇಣುಕಾ ಸಸ್ಪೆಂಡ್

ವಿಜಯಪುರ: ಗ್ರಾ.ಪಂ. ಸದಸ್ಯೆಯೊಬ್ಬರಿಗೆ ಸ್ಥಳೀಯ ಸಂಸ್ಥೆಗಳ ಮೇಲ್ಮನೆ ಚುನಾವಣೆಯಲ್ಲಿ ಮತದಾನ ಮಾಡಲು ಅಗತ್ಯವಿಲ್ಲದಿದ್ದರೂ ಸಹಾಯಕರ ಅಗತ್ಯವಿದೆ ಎಂದು ದೃಢೀಕರಣ ನೀಡಿದ ಆರೋಪದಲ್ಲಿ ಪಿಡಿಒ ರೇಣುಕಾ ಸೋಲಾಪುರ ಅವರನ್ನು ಅಮಾನತು ಮಾಡಲಾಗಿದೆ.   ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರ ಗ್ರಾ.ಪಂ. ಪಿಡಿಒ ರೇಣುಕಾ ಸೋಲಾಪುರ ಇವರನ್ನು ಚುನಾವಣೆ ಕರ್ತವ್ಯ ಲೋಪದ ಆರೋಪದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಸುನಿಲ ಕುಮಾರ ಅಮಾನತು ಮಾಡಿದ ಆದೇಶ ಹೊರಡಿಸಿದ್ದಾರೆ. ಬಾಬಾನಗರ ಗ್ರಾ.ಪಂ. ಸದಸ್ಯೆ ಮುತ್ತವ್ವ ಶ್ರೀಶೈಲ …

Read More »

ಕಾಂಗ್ರೆಸ್ ಅಭ್ಯರ್ಥಿ ಕೆಜಿಎಫ್ ಬಾಬು ವಿರುದ್ಧ ಎಫ್‍ಐಆರ್ ದಾಖಲು

ಬೆಂಗಳೂರು: ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕೆ ಬೆಂಗಳೂರು ಮಹಾನಗರ ವಿಧಾನ ಪರಿಷತ್ ನ ಕಾಂಗ್ರೆಸ್ ಅಭ್ಯರ್ಥಿ ಯೂಸುಫ್ ಶರೀಫ್ ಬಾಬು (ಕೆಜಿಎಫ್ ಬಾಬು) ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಯೂಸುಫ್ ಶರೀಫ್ ಬಾಬು ಅವರು, ತನ್ನನ್ನು ಗೆಲ್ಲಿಸಿದರೆ ರೂ. 5,000, ರೂ.10 ಸಾವಿರ, 50 ಸಾವಿರ, ಒಂದು ಲಕ್ಷ ಜೀವಿವಿಮೆ ಲೆಕ್ಕದಲ್ಲಿ ತಲಾ ರೂ. 5 ಲಕ್ಷ -ಹೀಗೆ ರೂ. 500 ಕೋಟಿಗೂ ಅಧಿಕ ಹಣವನ್ನು …

Read More »

ಸ್ನೇಹಿತನಿಂದಲೇ 8ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ತಡವಾಗಿ ಬೆಳಕಿಗೆ ಬಂದ ಘಟನೆ

ಕೊರಟಗೆರೆ : ನೋಟ್ಸ್ ಬುಕ್ ಕೊಡುವ ನೆಪದಲ್ಲಿ ವಿದ್ಯಾರ್ಥಿನಿ ಮನೆಗೆ ಹೋದ ಸ್ನೇಹಿತ ಕೂಲ್ ಡ್ರಿಂಕ್ಸ್ ನಲ್ಲಿ ಪ್ರಜ್ಞೆ ತಪ್ಪುವ ಔಷಧಿ ಬೆರೆಸಿ ಕೊಡಿಸಿ ಅತ್ಯಾಚಾರವೆಸಗಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಕೊರಟಗೆರೆ ಪಟ್ಟಣದ ಇಮ್ರಾನ್ ಪಾಷಾ ಮಗ ಅಸ್ಲಾಂ ಎಂಬ ಯುವಕ ಖಾಸಗಿ ಪ್ರೌಢಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಗೆ ನೋಟ್ಸ್ ಕೊಡುವ ನೆಪದಲ್ಲಿ ಮನೆಗೆ ಹೋಗಿ ಕೂಲ್ ಡ್ರಿಂಕ್ಸ್ ನಲ್ಲಿ ಮತ್ತು ಬರುವ ಔಷಧಿಯನ್ನು ಬೆರೆಸಿ ಕುಡಿಸಿ …

Read More »

ಮೂರು ಜನರ ಜಿದ್ದಾ ಜಿದ್ದಿಯಿಂದ ಪ್ರಚಾರ ಮತದಾರ ಯಾರಿಗೆ ಗೆಲುವಿನ ಮೆಟ್ಟಿಲು ಹತ್ತಿಸುತ್ತಾನೆ,? complete details

ಬೆಳಗಾವಿ: ಬೆಳಗಾವಿ ವಿಧಾನ ಪರಿಷತ್ ಚುನಾವಣೆ ನಾಳೆ ತೀರ್ಪಿನ ದಿನ ಮೂರು ಅಭ್ಯರ್ಥಿ ಗಳ ಪ್ರಚಾರ ಫುಲ್ ಜೋರಾಗಿತ್ತು ಒಂದು ಕಡೆ ಪಕ್ಷೇತರ ಅಭ್ಯರ್ಥಿ ಹವಾ ಆದ್ರೆ ಇನ್ನೊಂದು ಕೊಡೆ ಎರಡು ಪಕ್ಷದ ನಾಯಕರ ಘಟಾನು ಘಟಿಗಳು ಬಂದ್ರು ಚುನಾವಣೆ ಯಾವ ಕಡೆ ಆಗುತ್ತೆ ಯಾವ ಪಕ್ಷದ ಪರ ಆಗುತ್ತೆ ಅನ್ನೋದೇ ಎಲ್ಲರಲ್ಲೂ ಗೊಂದಲ ಸ್ಸೃಷ್ಟಿಸಿದೆ. ಕೆಲವೊಂದು ಕಡೆ ಬಿಜೆಪಿಗೆ ಮತ ಕಡಿಮೆ ಬರಬಹುದು ಯಾಕಂದ್ರೆ ಸ್ವತ ಬಸವರಾಜ್ ಬೊಮ್ಮಾಯಿ …

Read More »

ಉದ್ಯೋಗಾಕಾಂಕ್ಷಿಗಳೇ ಗಮನಿಸಿ : KSRTC ಯಲ್ಲಿ 4,600 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಸರ್ಕಾರದ ಅನುಮತಿ ಕೋರಿ ಮನವಿ

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (KSRTC) 726 ತಾಂತ್ರಿಕ ಸಹಾಯಕ ಮತ್ತು 200 ಕರಾಸಾ ಪೇದೆ ಹುದ್ದೆಗಳು ಹಾಗೂ 3,745 ಚಾಲನಾ ಸಿಬ್ಬಂದಿ ಸೇರಿ 4,600 ಕ್ಕೂ ಹೆಚ್ಚು ಹುದ್ದೆಗಳ ನೇರ ನೇಮಕಾತಿಗೆ ಮರು ಚಾಲನೆ ನೀಡಲು ಸರ್ಕಾರದ ಅನುಮತಿ ಕೋರಲಾಗಿದೆ. ಈ ಕುರಿತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಮಾಹಿತಿ ನೀಡಿದ್ದು, ಪ್ರುಸ್ತುತ ಕೋವಿಡ್ 19 ಕಾರಣ ಕೆಎಸ್‌ಆರ್ …

Read More »

ಹೆದ್ದಾರಿ ದಾಟುತ್ತಿದೆ ದೈತ್ಯ ಅನಕೊಂಡ, ಉಸಿರು ಬಿಗಿ ಹಿಡಿದುಕೊಳ್ಳುವಂಥ ವಿಡಿಯೋ

ನವದೆಹಲಿ : ನೀವು ವಾಹನದಲ್ಲಿ ಕುಳಿತು ಆರಾಮವಾಗಿ, ಪ್ರಯಾಣಿಸುತ್ತಿರುವಾಗ ಎದುರಿಗೆ ಸುಮಾರು 25 ಅಡಿ ಉದ್ದದ ದೈತ್ಯ ಹಾವು (Snake video) ಬಂದರೆ? ಕೈ ಕಾಲು ನಡುಗಿ ಹೋಗುತ್ತದೆ. ಎದೆ ಜೋರಾಗಿ ಹೊಡೆದುಕೊಳ್ಳುತ್ತದೆ. ಏನು ಮಾಡಬೇಕು ಎನ್ನುವುದು ಕೂಡಾ ತೋಚುವುದಿಲ್ಲ. ಘಟನೆಯನ್ನು ನೆನೆಸಿದ ಮಾತ್ರಕ್ಕೆ ಭಯ ವರಿಸಿಕೊಳ್ಳುತ್ತದೆ. ಆದರೆ ಇಂಥಹ ಘಟನೆ ನಿಜವಾಗಿಯೂ ನಡೆದಿದೆ. ಹೌದು ಹೆದ್ದಾರಿಯಲ್ಲಿ ದೈತ್ಯ ಹಾವು ಹರಿದಾಡುವ ವಿಡಿಯೋವೊಂದು ವೈರಲ್ (Viral video) ಆಗುತ್ತಿದೆ. ಈ ವಿಡಿಯೋವನ್ನು …

Read More »

ಅಳಿಯನ ಮನೆ ಮುಂದೆ ನೇಣು ಹಾಕಿಕೊಂಡ ಮಾವ!

ಹಾಸನ, ಡಿಸೆಂಬರ್ 09; ಮಗಳ ತಿಂಗಳ ತಿಥಿ ಮಾಡಲು ಬಂದಿದ್ದ ಅಪ್ಪ ಅಳಿಯನ ಮನೆ ಬಾಗಿಲಿಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಸನಜಿಲ್ಲೆಯ ಬೇಲೂರು ತಾಲ್ಲೂಕಿನ ಮಾಳೆಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದೊಡ್ಡಗದ್ದವಳ್ಳಿ ಗ್ರಾಮದ ನಾಗರಾಜ್ (55) ಆತ್ಮಹತ್ಯೆ ಮಾಡಿಕೊಂಡವರು. ಅಕ್ಟೋಬರ್ 30ರಂದು ಸಾವನ್ನಪ್ಪಿದ್ದ ಮಗಳು ಹೇಮಶ್ರೀಯ ತಿಂಗಳ ತಿಥಿ ಕಾರ್ಯ ಮಾಡಲು …

Read More »