Breaking News
Home / ರಾಜ್ಯ (page 1329)

ರಾಜ್ಯ

ಈ ಚುನಾವಣೆಯಲ್ಲಿ ಬಿಜೆಪಿ 15 ಕ್ಕೂ ಹೆಚ್ಚು ಸ್ಥಾನಗಳನ್ನ ಗೆಲ್ಲಲಿದೆ:ಪ್ರಹ್ಲಾದ್ ಜೋಶಿ

ರಾಜ್ಯಾದ್ಯಂತ ಪರಿಷತ್ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಬಿಜೆಪಿ 15 ಕ್ಕೂ ಹೆಚ್ಚು ಸ್ಥಾನಗಳನ್ನ ಗೆಲ್ಲಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಮತದಾನ ಮಾಡಿದ ಬಳಿಕ ಮಾತನಾಡಿದ ಅವರು, ದೇಶದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯ ಹಾಗೂ ಬಿಜೆಪಿ ಸಂಘಟನೆಯಿಂದ ದೊಡ್ಡ ಸಂಖ್ಯೆಯಲ್ಲಿ ಗೆಲುವು ಸಾಧಿಸಲಿದೆ.ಪ್ರದೀಪ್ ಶೆಟ್ಟರ್ ದಾಖಲೆಯ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ. ದೇಶದೆಲ್ಲೆಡೆ ಬಿಜೆಪಿ ಪರ ಅಲೆಯಿದೆ. ಉತ್ತರಪ್ರದೇಶ. ಉತ್ತರಖಾಂಡದಲ್ಲಿ ನಮ್ಮ …

Read More »

ಬಿಪಿನ್ ರಾವತ್ ಸಾವನ್ನ ಸಂಭ್ರಮಿಸಿದವರ ವಿರುದ್ಧ ಕಠಿಣ ಕ್ರಮ : ಸಿಎಂ ಬೊಮ್ಮಾಯಿ

ಹಾವೇರಿ : ತಮಿಳುನಾಡಿನ ಕೂನೂರಿನಲ್ಲಿ ಹೆಲಿಕಾಪ್ಟರ್ ಪತನವಾಗಿ ಸಾವನ್ನಪ್ಪಿದ ಸಿಡಿಎಸ್ ಬಿಪಿನ್ ರಾವತ್ ಸಾವನ್ನ ಸಂಭ್ರಮಿಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ,ಅವರ ಸಾವನ್ನ ಸಂಭ್ರಮಿಸಿ ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಗಳನ್ನ ಹಾಕಿರೋದು ತೀರಾ ಖಂಡನೀಯ. ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿಧಾನ ಪರಿಷತ್ ಚುನಾವಣೆ ಅಂಗವಾಗಿ ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ಮತ ಚಲಾಯಿಸಿದ ಬಳಿಕ ಬಳಿಕ ಮಾತನಾಡಿದ ಅವರು, ಇಡೀ …

Read More »

ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳಲು ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

ಬೆಂಗಳೂರು:ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸುವ ಶಾಸಕರು, ಅಧಿಕಾರಿ ಸಿಬ್ಬಂದಿಗೆ ಕೋವಿಡ್-19ರ ಆರ್ ಟಿ ಪಿಸಿಆರ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಅಧಿವೇಶನದ ಸಂದರ್ಭದಲ್ಲಿ ಉಭಯ ಸದನಗಳ ಸಭಾಂಗಣಗಳನ್ನು ಪ್ರತಿದಿನ ಸ್ಯಾನಿಟೈಜರ್ ಮೂಲಕ ಸ್ವಚ್ಛಗೊಳಿಸಲಾಗುತ್ತದೆ. ಸ್ಯಾನಿಟೈಜರ್ ಬಳಕೆ, ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುತ್ತದೆ. ಮಧುಮೇಹ, ಅಧಿಕ ರಕ್ತದೊತ್ತಡ, ಕಿಡ್ನಿ, ಲಿವರ್, ಹೃದ್ರೋಗ ಸಮಸ್ಯೆ ಇದ್ದವರು ಮುಖಗವಸಿನ ಜತೆಗೆ ಫೇಸ್‍ಮಾಸ್ಕ್ ಬಳಸುವಂತೆ ಸೂಚಿಸಲಾಗಿದೆ. ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನದಲ್ಲಿ ಭಾಗವಹಿಸುವವರು ಡಿ.10ರ …

Read More »

ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಜಯ ಸಾಧಿಸುತ್ತಾರೆ. ಹಾನಗಲ್ ಉಪ ಚುನಾವಣೆಯ ಫಲಿತಾಂಶದಂತೆ ಈ ಫಲಿತಾಂಶವೂ ಬರಲಿದೆ

ಬೆಳಗಾವಿ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಜಯ ಸಾಧಿಸುತ್ತಾರೆ. ಹಾನಗಲ್ ಉಪ ಚುನಾವಣೆಯ ಫಲಿತಾಂಶದಂತೆ ಈ ಫಲಿತಾಂಶವೂ ಬರಲಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ವಿಶ್ವಾಸ ವ್ಯಕ್ತಪಡಿಸಿದರು. ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಇಂದು ಮತ ಚಲಾಯಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕ ಸತೀಶ್ ಜಾರಕಿಹೊಳಿಯವರ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಕಾಂಗ್ರೆಸ್ ನಾಯಕರ ಒಗ್ಗಟ್ಟನ್ನು ನೀವೇ ನೋಡುತ್ತಿದ್ದೀರಿ. ಜಿಲ್ಲೆಯ 14 ತಾಲೂಕುಗಳಲ್ಲಿ ನಮ್ಮ ಕಾಂಗ್ರೆಸ್ ಮತದಾರರಿದ್ದಾರೆ. ನಮ್ಮ ಬೆಂಬಲಿಗರ …

Read More »

ಕವಟಗಿಮಠ ಹಾಗೂ ಲಖನ್ ಜಾರಕಿಹೊಳಿ ಇಬ್ಬರಲ್ಲಿ, ಒಬ್ಬರು ಗೆಲ್ಲುತ್ತಾರೆ

ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳಿಗಿಂದ ಅಧಿಕ ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ವಿಜಯ ಸಾಧಿಸುತ್ತಾರೆಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು. ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮತ ಚಲಾಯಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ಪರಿಷತ್ ಮತದಾನದ ಹಿನ್ನೆಲೆಯಲ್ಲಿ ನಾನು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಕಾಂಗ್ರೆಸ್ ನಗರಸೇವಕರೊಂದಿಗೆ ಸೇರಿ ಮತದಾನ ಮಾಡಿದ್ದೇನೆ. ಈಗಾಗಲೇ ನಾವು ಪದೇ ಪದೇ ಹೇಳುವಂತೆ ನಮ್ಮ ಗೆಲುವು ನಿಶ್ಚಿತ. ಇನ್ನು …

Read More »

ಕಳೆದ ಬಾರಿ 1100 ಮತಗಳನ್ನು ಅಕ್ರಮವಾಗಿ ಪಕ್ಷೇತರ ಅಭ್ಯರ್ಥಿಗೆ ಹಾಕಲಾಗಿತ್ತು: ಸತೀಶ್ ಜಾರಕಿಹೊಳಿ

ಬೆಳಗಾವಿಯಲ್ಲಿ ನಡೆಯುತ್ತಿರುವ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಗುಜನಾಳ ಗ್ರಾಮ ಪಂಚಾಯತ ಮತಗಟ್ಟೆಗೆ ಶಾಸಕ ಸತೀಶ್ ಜಾರಕಿಹೊಳಿ ಭೇಟಿ ನೀಡಿದರು. ಇಂದು ಬೆಳಗಾವಿಯ ಎರಡು ಪರಿಷತ್ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ಗುಜನಾಳ ಗ್ರಾಮ ಪಂಚಾಯತಿ ಬಳಿ ಮೊಕ್ಕಾಂ ಹೂಡಿದ್ದಾರೆ. ಈ ಮೊದಲೇ ಸತೀಶ್ ಜಾರಕಿಹೊಳಿ ಹೇಳಿದಂತೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಗುಜನಾಳ ಗ್ರಾಮ ಪಂಚಾಯತಿಯಲ್ಲಿ ಸ್ಥಾಪಿಸಲಾದ ಮತಗಟ್ಟೆಯ ಬಳಿ ಟಿಕಾಣಿ ಹೂಡಿದ್ದಾರೆ. ಶಾಸಕರಿಗೆ …

Read More »

ಬೆಳಗಾವಿ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ: ಶಾನೂಲ ತಹಸಿಲ್ದಾರ

ಬೆಳಗಾವಿ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ ಎಂದು ಹುಕ್ಕೇರಿಯ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅದ್ಯಕ್ಷ ಶಾನೂಲ ತಹಸಿಲ್ದಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹುಕ್ಕೆರಿಯಲ್ಲಿ ಪರಿಷತ್ ಚುನಾವಣೆಗೆ ನಡೆದ ಮತದಾನದ ವೇಳೆ ಮುಂಜಾನೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಯಾವೊಬ್ಬ ಸದಸ್ಯರೂ ಮತದಾನ ಕೇಂದ್ರದತ್ತ ಸುಳಿಯಲಿಲ್ಲ, ಹುಕ್ಕೇರಿ ತಾಲೂಕಿನ ಗ್ರಾಮ ಪಂಚಾಯತಿಗಳಾದ ಎಲಿಮುನ್ನೋಳ್ಳಿ, ಗುಡಸ, ಅಮ್ಮಣಗಿ, ನೆರಲಿ, ಬಡಕುಂದ್ರಿ ಗ್ರಾಮಗಳಲ್ಲಿ ಮತದಾನ ಕೇಂದ್ರಗಳಲ್ಲಿ ಅಧಿಕಾರಿಗಳು ಮಾತ್ರ ಕಂಡುಬಂದರು. ಕಾಂಗ್ರೆಸ್ ಮತ್ತು ಭಾರತಿಯ …

Read More »

10 ಲಕ್ಷ ರೈತರ ಖಾತೆಗೆ ಪರಿಹಾರ ಮೊತ್ತ ಜಮಾ: ಸಚಿವ ಅಶೋಕ್ ಮಾಹಿತಿ

ಬೆಂಗಳೂರು: 10 ಲಕ್ಷ ರೈತರಿಗೆ 681 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ. ಮಳೆ ಮತ್ತು ಪ್ರವಾಹ ನಷ್ಟಕ್ಕೆ 1281 ಕೋಟಿ ರೂಪಾಯಿ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಕಂದಾಯ ಸಚಿವ ಆರ್. ಅಶೋಕ್ ಈ ಬಗ್ಗೆ ಮಾಹಿತಿ ನೀಡಿದ್ದು, ಕಳೆದ ಮೂರು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ 10.02 ಲಕ್ಷ ರೈತರಿಗೆ 681.90 ಕೋಟಿ ರೂಪಾಯಿ ಇನ್ ಪುಟ್ ಸಬ್ಸಿಡಿಯನ್ನು ನೇರವಾಗಿ ಖಾತೆಗೆ ಪಾವತಿಸಲಾಗಿದೆ ಎಂದು ಹೇಳಿದ್ದಾರೆ. ಇಷ್ಟು ಕಡಿಮೆ …

Read More »

ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು, ಡಿಸೆಂಬರ್ 10; ದಕ್ಷಿಣ ಭಾರತದ ರಾಜ್ಯಗಳಲ್ಲಿ ಮುಂದಿನ ಐದು ದಿನಗಳ ಕಾಲ ಮಳೆಯಾಗಲಿದೆ ಎಂದು ಭಾರತೀಯಹವಾಮಾನಇಲಾಖೆ ಮುನ್ಸೂಚನೆ ನೀಡಿದೆ. ಮಳೆಯ ಜೊತೆಗೆ ಉಷ್ಣಾಂಶ ಸಹ ಕುಸಿತವಾಗಲಿದೆ ಎಂದು ಇಲಾಖೆ ಹೇಳಿದೆ. ಈ ಬಾರಿ ನೈಋತ್ಯ ಮುಂಗಾರು ಅವಧಿಯಿಂದಲೂ ದೇಶದ ವಿವಿಧ ರಾಜ್ಯಗಳಲ್ಲಿ ಮಳೆಯಾಗುತ್ತಲೇ ಇದೆ. ಅಕ್ಟೋಬರ್, ನವೆಂಬರ್ ತಿಂಗಳಿನಲ್ಲಿಯೂ ಅಕಾಲಿಕ ಮಳೆಯಾಗಿದೆ. ‘ಜವಾದ್’ ಚಂಡಮಾರುತದ ಪ್ರಭಾವ ದೇಶದಲ್ಲಿ ಕಡಿಮೆಯಾಗಿದೆ.   ಭಾರತೀಯ ಹವಾಮಾನ ಇಲಾಖೆ ಆಂಧ್ರ ಪ್ರದೇಶ, ರಾಯಲಸೀಮಾ, …

Read More »

ಎಲ್ಲಿ, ಎಷ್ಟು ಮತದಾನ? – ಸಮಗ್ರ ವಿವರ

ಬೆಂಗಳೂರು –ನಡೆಯುತ್ತಿದ್ದು, ಬೆಳಗ್ಗೆ 10 ಗಂಟೆವರೆಗೆ ವಿಜಯಪುರದಲ್ಲಿ ಮಾತ್ರ ಶೂನ್ಯ ಮತದಾನವಾಗಿದೆ. ದಕ್ಷಿಣ ಕನ್ನಡದಲ್ಲಿ ಶೇ.45ರಷ್ಟು ಮತದಾನವಾಗಿದ್ದು, ರಾಜ್ಯದಲ್ಲೇ ಅತೀ ಹೆಚ್ಚು ಮತ        

Read More »