Home / ರಾಜ್ಯ (page 1001)

ರಾಜ್ಯ

ಪೊಲೀಸರ ಜೊತೆ ವಾಗ್ವಾದ: ಲಿಂಬಾವಳಿ ಪುತ್ರಿಗೆ ₹ 10 ಸಾವಿರ ದಂಡ

ಬೆಂಗಳೂರು: ಅತಿ ವೇಗವಾಗಿ ಕಾರು ಚಲಾಯಿಸಿದ್ದನ್ನು ಪ್ರಶ್ನಿಸಿದ ಪೊಲೀಸರ ಜೊತೆಗೇ ಶಾಸಕ ಅರವಿಂದ ಲಿಂಬಾವಳಿ ಅವರ ಪುತ್ರಿ ವಾಗ್ವಾದಕ್ಕೆ ಇಳಿದಿದ್ದು, ನಿಯಮ ಉಲ್ಲಂಘಿಸಿದ್ದಕ್ಕಾಗಿ ಅವರಿಂದ ₹ 10 ಸಾವಿರ ದಂಡ ವಸೂಲಿ ಮಾಡಲಾಗಿದೆ. ‘ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣದ ಕಡೆಯಿಂದ ರಾಜಭವನ ಕಡೆಗೆ ಗುರುವಾರ ಕಾರಿನಲ್ಲಿ ಹೊರಟಿದ್ದ ಲಿಂಬಾವಳಿ ಪುತ್ರಿ, ಪೊಲೀಸರ ಜೊತೆ ವಾಗ್ವಾದ ನಡೆಸಿದ್ದರು. ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಗೆ ₹ 1,000 ದಂಡ ಹಾಗೂ ಹಳೇ ಪ್ರಕರಣಗಳಿಗೆ …

Read More »

SBI ಬ್ಯಾಂಕ್‌ನಿಂದ ಪತ್ನಿ-ತಾಯಿ ಖಾತೆಗೆ 1.60 ಕೋಟಿ ರೂ ವರ್ಗಾಯಿಸಿ ಸಿಕ್ಕಿಬಿದ್ದ ಕ್ಯಾಷಿಯರ್

ಬಾಗಲಕೋಟೆ, ಜೂನ್ 9: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವ ಗಾದೆಗೆ ಮಾತನಂತೆ, ದಿನಾಲು ಲಕ್ಷಾಂತರ ರೂಪಾಯಿಯನ್ನು ನೋಡುತ್ತಿದ್ದ ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಕೆಲಸ ಮಾಡುವ ಕ್ಯಾ‍ಷಿಯರ್‌, ತಾನೂ ಉದ್ಯೋಗ ಮಾಡುವ ಬ್ಯಾಂಕ್‌ನಲ್ಲಿಯೇ ಅಧಿಕಾರವನ್ನು ದುರಪಯೋಗಪಡಿಸಿಕೊಂಡು ಬರೋಬ್ಬರಿ 1 ಕೋಟಿ, 60 ಲಕ್ಷ ರೂಪಾಯಿಗಳನ್ನು ಲಪಟಾಯಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.   ಬಾಗಲಕೋಟೆ ಜಿಲ್ಲೆಯ ನವನಗರದ ಎಸ್‌ ಬಿಐ ಬ್ಯಾಂಕ್‌ ನಲ್ಲಿ ಕ್ಯಾಷಿಯರ್ ಹುದ್ದೆಯಲ್ಲಿದ್ದು,ಲಕ್ಷಾಂತರ ಹಣವನ್ನು ಪ್ರತಿಧಿನ ನೋಡುತ್ತಿದ್ದ …

Read More »

ಬಿಜೆಪಿ ಸೇರಲು ಹೋಗಿದ್ದ ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು- H.D.K.

ಬೆಂಗಳೂರು: ಸಿದ್ದರಾಮಯ್ಯ ಅವರಿಗೆ ನಾಚಿಕೆಯಾಗಬೇಕು. ಈ ಹಿಂದೆ ಬಿಜೆಪಿ ಸೇರಲು ಹೋಗಿದ್ದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಬಿಜೆಪಿ ಸೇರಲು ಅಡ್ವಾಣಿ ಬಳಿ ಹೋಗಿದ್ದರು. ಒಂದು ಕಾಲದಲ್ಲಿ ಅಡ್ವಾಣಿ ಬಳಿ ಟವೆಲ್ ಹಾಕಿದ್ದರು. ಬೇಕಿದ್ದರೆ ಸಿದ್ದರಾಮಯ್ಯ ಜೊತೆ ಹೋಗಿದ್ದವರನ್ನು ಕೇಳಿ ಎಂದು ಸಿದ್ದರಾಮಯ್ಯ ಬಿಜೆಪಿ ಸೇರ್ಪಡೆ ಪ್ರಯತ್ನದ ಬಗ್ಗೆ ಲೇವಡಿ ಮಾಡಿದ್ದಾರೆ. ಇನ್ನು ಸಿದ್ದರಾಮಯ್ಯ …

Read More »

ರಾಜ್ಯಸಭಾ ಚುನಾವಣೆ: ಬಿಜೆಪಿ ಪ್ಲ್ಯಾನ್‌ ಏನು?

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಕಚ್ಚಾಟದ ಮೇಲೆ ಬಿಜೆಪಿ ಎಚ್ಚರಿಕೆಯ ಹೆಜ್ಜೆಯಿಡಲು ತೀರ್ಮಾನ ಮಾಡಿದೆ. ಮೊದಲು ನಿರ್ಮಲಾ ಸೀತಾರಾಮನ್‍ಗೆ ವೋಟಿಂಗ್ ಮಾಡಿಸಲು ತೀರ್ಮಾನ ಮಾಡಿದ್ದು, ನಿರ್ಮಲಾಗೆ 46 ಮೊದಲ ಪ್ರಾಶಸ್ತ್ಯದ ಮತಗಳನ್ನು ಹಾಕಿಸಲು ಬಿಜೆಪಿ ಪ್ಲಾನ್ ಮಾಡಿದೆ. ನಂತರ ಜಗ್ಗೇಶ್‍ಗೆ 44 ಮೊದಲ ಪ್ರಾಶಸ್ತ್ಯದ ಮತ ಇದ್ದು, 32 ಎರಡನೇ ಪ್ರಾಶಸ್ತ್ಯದ ಮತಗಳನ್ನು ಹಾಕಿಸಲು ನಿರ್ಧರಿಸಲಾಗಿದೆ. ಅಂತಿಮವಾಗಿ 3ನೇ ಅಭ್ಯರ್ಥಿ ಲೆಹರ್ ಸಿಂಗ್‍ಗೆ 32 ಮೊದಲ ಪ್ರಾಶಸ್ತ್ಯದ ಮತಗಳು, 90 ಎರಡನೇ ಪ್ರಾಶಸ್ತ್ಯದ ಮತಗಳನ್ನು …

Read More »

ಪಂಚಮಸಾಲಿ ಹೋರಾಟಕ್ಕೆ ಸ್ಪಂದಿಸುತ್ತಿರುವ ಆಡಳಿತರೂಡ ಸರ್ಕಾರದ #ಉಭಯಪಾಟೀಲ್ಶಕ್ತಿಗಳು

ಪಂಚಮಸಾಲಿ ಹೋರಾಟಕ್ಕೆ ಸ್ಪಂದಿಸುತ್ತಿರುವ ಆಡಳಿತರೂಡ ಸರ್ಕಾರದ #ಉಭಯಪಾಟೀಲ್ಶಕ್ತಿಗಳು ಪಂಚಮಸಾಲಿ 2 ಎ ಮೀಸಲಾತಿಗಾಗಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿ ಹಕ್ಕೊತ್ತಾಯ ಮಾಡಿದ #ಪಾಟೀಲದ್ವಯರು. 9th June 22 at bengalure ಜೂನ್ 27 ರಂದು ಮುಖ್ಯಮಂತ್ರಿ ಮನೆ ಮುಂದೆ ಕೂಡಲ ಸಂಗಮ ಶ್ರೀಗಳು, ಆರಂಭ ಮಾಡಲು ಉದ್ದೇಶಿಸಿರುವ ಸತ್ಯಾಗ್ರಹದ ಗಂಭೀರತೆಯನ್ನು ಅರ್ಥಮಾಡಿಕೊಂಡ ಸಚಿವ ಸಿಸಿ ಪಾಟೀಲ್ ಹಾಗೂ ಶಾಸಕ ಯಾತ್ನಲ್ ಗೌಡರು ಸರ್ಕಾರ ಹಾಗೂ ಸಮಾಜದ ನಡುವೆ …

Read More »

ಕಲಬುರ್ಗಿಯಲ್ಲಿ ಲಕ್ಷ್ಮಣ್ ಸವದಿ ಸಭೆ,ಮನುಷ್ಯ ಬದುಕಿರುವಷ್ಟು ದಿನ ಸಂಕಷ್ಟದಲ್ಲಿರುವವರ ಕಣ್ಣೀರೊರೆಸುವ ಕಾರ್ಯ ಮಾಡಬೇಕು.

ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯ ಉತ್ತರ ಮಂಡಲದ ನಾಯಕರು, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಬೆಂಗಳೂರು ಅಧ್ಯಕ್ಷರಾದ ಶ್ರೀ ಚಂದು ಪಾಟೀಲ ಅವರ ಜನ್ಮದಿನದ ಅಂಗವಾಗಿ ಅಭಿಮಾನಿ ಬಳಗದಿಂದ ಕಲಬುರ್ಗಿಯಲ್ಲಿ ಜರುಗಿದ ೫೦೦೧ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಲಾಯಿತು. ಮನುಷ್ಯ ಬದುಕಿರುವಷ್ಟು ದಿನ ಸಂಕಷ್ಟದಲ್ಲಿರುವವರ ಕಣ್ಣೀರೊರೆಸುವ ಕಾರ್ಯ ಮಾಡಬೇಕು. ನಮ್ಮ ಕೈಲಾದಷ್ಟು ದಾನ, ಧರ್ಮ, ಪರೋಪಕಾರ, ಸಮಾಜ ಸೇವಾ ಕಾರ್ಯ ಮಾಡಿದರೆ ನಮ್ಮ ಬದುಕು ಸಾರ್ಥಕವಾಗುತ್ತದೆ. …

Read More »

ಶ್ರೀ ಬಸವರಾಜ ಎಸ್. ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್. ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ‌.ಎಸ್. ಯಡಿಯೂರಪ್ಪ, ಶ್ರೀ ಜಗದೀಶ್ ಶೆಟ್ಟರ್, ಕೇಂದ್ರ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್, ಶ್ರೀ ಪ್ರಲ್ಹಾದ್ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಿ. ಟಿ. ರವಿ, ರಾಜ್ಯಸಭಾ ಚುನಾವಣಾ ಉಸ್ತುವಾರಿ ಹಾಗೂ ಕೇಂದ್ರ ಸಚಿವರಾದ ಶ್ರೀ …

Read More »

ಕೊನೆಗೂ ತನ್ನನ್ನೇ ಮದ್ವೆಯಾದ ಯುವತಿ..ಇನ್ನೇನಿದ್ರೂ ಹನಿಮೂನ್ ಮಾತ್ರ ಬಾಕಿ

ಭಾರೀ ಸಂಚಲ ಮೂಡಿಸಿದ್ದ ಗುಜರಾತ್​ ವಡೋದರ ಮೂಲದ ಯುವತಿ ಕ್ಷಮಾ ಬಿಂದು ಕೊನೆಗೂ ತಮ್ಮ ಕನಸನ್ನ ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಶಾಸ್ತ್ರೋಕ್ತವಾಗಿ ನಿನ್ನೆ ತಮ್ಮನ್ನೇ ತಾವು ಮದುವೆ ಆಗಿದ್ದಾರೆ. ಇವರು ಜೂನ್ 11 ರಂದು ಮದುವೆ ಆಗಬೇಕಿತ್ತು, ಹಲವರ ವಿರೋಧ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕಿಂತ ಮೂರು ದಿನಗಳ ಮುಂಚೆಯೇ ಮದುವೆ ಆಗಿದ್ದಾರೆ. ಯಾಕೆ ವಿರೋಧ ಆಗಿತ್ತು..? ಕ್ಷಮಾ ಬಿಂದು ಏಕಾಂಗಿಯಾಗಿ (ತಮ್ಮನ್ನೇ ತಾವು) ವಿವಾಹ ಆಗುತ್ತಿರೋದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಹಿಂದೂ …

Read More »

ಬೆಳಗಾವಿಯ ಏರ್ಮನ್ ತರಬೇತಿ ಶಾಲೆಯ ನೂತನ ಕಮಾಂಡಿಂಗ್ ಏರ್ ಆಫೀಸರ್ ಆಗಿ ಏರ್ ಕಮಾಂಡರ್ ಎಸ್.ಶ್ರೀಧರ್ ಅಧಿಕಾರ ಸ್ವೀಕರಿಸಿದ್ದಾರೆ.

ಬೆಳಗಾವಿಯ ಏರ್ಮನ್ ತರಬೇತಿ ಶಾಲೆಯ ನೂತನ ಕಮಾಂಡಿಂಗ್ ಏರ್ ಆಫೀಸರ್ ಆಗಿ ಏರ್ ಕಮಾಂಡರ್ ಎಸ್.ಶ್ರೀಧರ್ ಅಧಿಕಾರ ಸ್ವೀಕರಿಸಿದ್ದಾರೆ. ಏರ್ ಕಮಾಂಡರ್ ಎಸ್.ಶ್ರೀಧರ್  ಅವರನ್ನು 14 ಜೂನ್ 1989 ರಂದು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಸ್ಟ್ರೀಮ್‌ನಲ್ಲಿ ನಿಯೋಜಿಸಲಾಗಿತ್ತು. ಸಾಯಿಕ್ ಸ್ಕೂಲ್ ಕೊರೊಕೊಂಡ ಮತ್ತು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ, ಅವರ ವೃತ್ತಿಜೀವನದಲ್ಲಿ 33 ವರ್ಷಗಳ ಕಾಲ, ಸುಮಾರು 5000 ಗಂಟೆಗಳ ಕಾಲ ಅಕಾಶದಲ್ಲಿಯೇ ಹಾರಾಟ ನಡೆಸಿದ್ದಾರೆ. ಐಎಎಫ್‌ನ ವಿವಿಧ …

Read More »

ಕಬ್ಬು ಬೆಳೆಗಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಫ್‌ಆರ್‌ಪಿಪಿ ದರ ಹೆಚ್ಚಿಸುವ ವಿಚಾರದಲ್ಲಿ ಮೋಸ ಮಾಡುತ್ತಿವೆ

ಕಬ್ಬು ಬೆಳೆಗಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಫ್‌ಆರ್‌ಪಿಪಿ ದರ ಹೆಚ್ಚಿಸುವ ವಿಚಾರದಲ್ಲಿ ಮೋಸ ಮಾಡುತ್ತಿವೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಬೆಳಗಾವಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಬೆಳಗಾವಿ ಡಿಸಿ ಕಚೇರಿ ಮುಂದೆ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಮತ್ತು ರಾಜ್ಯದಲ್ಲಿ …

Read More »