Breaking News
Home / ರಾಜಕೀಯ (page 838)

ರಾಜಕೀಯ

ಅಕ್ರಮ ಹಣ ವರ್ಗಾವಣೆ ಕೇಸ್; ಇ.ಡಿ ಕಚೇರಿಗೆ ಹಾಜರಾದ ಡಿಕೆ

ಬೆಂಗಳೂರು: ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಮನ್ಸ್ ನೀಡಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿದ್ದಾರೆ. ಇಂದು 12 ಗಂಟೆ ಸುಮಾರಿಗೆ ಇ.ಡಿ.ಕಚೇರಿಗೆ ಹಾಜರಾಗಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್​ಗೆ ಇ.ಡಿ ಅಧಿಕಾರಿಗಳು ಬುಲಾವ್ ನೀಡಿದ್ದಾರೆ. ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದ ಇ.ಡಿ, ಈಗಾಗಲೇ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್​​​ಶೀಟ್​​​​ ಸಲ್ಲಿಕೆ ಮಾಡಿದೆ. ನ್ಯಾಯಾಲಯದಲ್ಲಿ ಇದರ ವಿಚಾರಣೆ ಕೂಡ ಪ್ರಗತಿಯಲ್ಲಿದೆ. ಈ ನಡುವೆ ಜಾರಿ ನಿರ್ದೇಶನಾಲಯ ಹೆಚ್ಚುವರಿಯಾಗಿ …

Read More »

ಮಹಿಳಾ ಪೇದೆ ಹತ್ಯೆ ಕೇಸ್​; ಒಬ್ಬನಿಗಾಗಿ ಇಬ್ಬರ ಫೈಟ್-ಲೇಡಿ ಕಾನ್ಸ್​​ಟೇಬಲ್ ಸ್ಫೋಟಕ ಲವ್ ಕಹಾನಿ..

ತುಮಕೂರು: ಕರ್ತವ್ಯಕ್ಕೆ ತೆರಳಿದ್ದ ಮಹಿಳಾ ಪೊಲೀಸ್ ಪೇದೆ ನಾಪತ್ತೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ. ಪ್ರಕಣರದ ವಿಚಾರಣೆ ಮುಂದುವರೆಸಿರುವ ಪೊಲೀಸರು, ಮತ್ತೊಬ್ಬ ಮಹಿಳಾ ಕಾನ್ಸ್​ಟೇಬಲ್​ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.  ಏನಿದು ಪ್ರಕರಣ..? ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರ್ ಪೊಲೀಸ್ ಠಾಣೆಯ ಪೊಲೀಸ್‌ ಕಾನ್ಸ್‌ಟೇಬಲ್‌ ಆಗಿ ಕರ್ತವ್ಯನಿರ್ವಹಿಸುತ್ತಿದ್ದ ಸುಧಾ (39) ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ನಾಪತ್ತೆ ದೂರು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ನಾಪತ್ತೆಯಾಗಿದ್ದ ಸುಧಾ ಅವರ ಮೃತದೇಹ …

Read More »

ಬೆಳಗಾವಿಯಲ್ಲಿ‌ ಮಹಿಳೆಯರಿಂದ ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡಗೆ ತರಾಟೆ

ಬೆಳಗಾವಿ: ಕಳೆದ ನಾಲ್ಕು ದಶಕಗಳಿಂದ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಮಾಡದ ಹಿನ್ನೆಲೆ ರಾಮದುರ್ಗ ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ ಅವರನ್ನು ಮಹಿಳೆಯರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಮಹಿಳೆಯರ‌ ತರಾಟೆ ತೆಗೆದುಕೊಂಡ ಹಿನ್ನೆಲೆ ಶಾಸಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ರಾಮದುರ್ಗ ತಾಲೂಕಿನಲ್ಲಿ ನಾಲ್ಕು ದಶಕ ಕಳೆದರೂ ರಸ್ತೆ ಅಭಿವೃದ್ಧಿಗೊಂಡಿಲ್ಲ. ಇದರಿಂದ ಕೊಚ್ಚಿಗೆದ್ದ ಮಹಿಳೆಯರು ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ‌ಗೆ ತರಾಟೆಗೆ ತೆಗೆದುಕೊಂಡರು. ಈ ಘಟನೆ ರಾಮದುರ್ಗ ‌ತಾಲೂಕಿ‌‌ನ ಚಿಕೊಪ್ಪ ಕೆಎಸ್ ಗ್ರಾಮದಲ್ಲಿ ನಡೆದಿದೆ. …

Read More »

ದಸರಾಗೆ ದೈವಿಭಕ್ತಿ ಹೊಂದಿರುವ ರಾಷ್ಟ್ರಪತಿಗಳು ಬರುತ್ತಿದ್ದಾರೆ: ಪ್ರಹ್ಲಾದ್ ಜೋಶಿ

ಮೈಸೂರು : ”ಇದೇ ಮೊದಲು ದೈವಿಭಕ್ತಿ ಹೊಂದಿರುವ ರಾಷ್ಟ್ರಪತಿಗಳು ದಸರಾಗೆ ಬರುತ್ತಿದ್ದಾರೆ.ಪೂರ್ವ ತಯಾರಿ ಬಗ್ಗೆ ಮಾತನಾಡಲು ನಾನು ಬಂದಿದ್ದೇನೆ”ಎಂದು ಮೈಸೂರಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೋಮವಾರ ಹೇಳಿಕೆ ನೀಡಿದ್ದಾರೆ.   ಮೈಸೂರು ಜನರಲ್ಲಿ ವಿಶೇಷ ನಿವೇದನೆ ಮಾಡಿದ ಜೋಶಿ ಅವರು, ”ಮೈಸೂರಿಗರು ಬಹುದೊಡ್ಡ ಸಂಖ್ಯೆಯಲ್ಲಿ ರಾಷ್ಟ್ರಪತಿ ಕಾರ್ಯಕ್ರಮಕ್ಕೆ ಬನ್ನಿ. ರಾಷ್ಟ್ರಪತಿಗಳಿಗೆ ಹುಬ್ಬಳ್ಳಿಯಲ್ಲಿ ಪೌರ ಸನ್ಮಾನ ಮಾಡಲಾಗುವುದು” ಎಂದರು.   ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ”ಕಾಂಗ್ರೆಸ್‌ನವರು ಭ್ರಮೆಯಲ್ಲಿದ್ದಾರೆ …

Read More »

ಸಚಿವರೊಬ್ಬರ ಹಗರಣದ ದಾಖಲೆಯನ್ನು ಸದನದಲ್ಲೇ ಬಿಡುಗಡೆ ಮಾಡುತ್ತೇನೆ:H.D.K.

ಬೆಂಗಳೂರು: ಸಚಿವರೊಬ್ಬರು ನಡೆಸಿರುವ ಹಗರಣಕ್ಕೆ ಸಂಬಂಧಪಟ್ಟಂತೆ ದಾಖಲೆ ಬಿಡುಗಡೆಗೆ ಸಮಯಾವಕಾಶ ನೀಡುವಂತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಮಾಡಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ದಾಖಲೆ ಬಿಡುಗಡೆ ಮಾಡುವುದಕ್ಕಾಗಿ ಸ್ಪೀಕರ್ ಗೆ ಅವಕಾಶ ಕೇಳಿದ್ದೇನೆ.ಸ್ಪೀಕರ್ ಗೆ ಇಂದು ಬೆಳಗ್ಗೆ ದೂರವಾಣಿ ಕರೆ ಮಾಡಿ ಮಾತಾಡಿದ್ದೇನೆ. ನಾಳೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ ಎಂದರು. ನಾನು ನ್ಯೂಸ್ ಸೆನ್ಸ್ ಮಾಡೋಕೆ ನೀಡಿರುವ ಹೇಳಿಕೆ ಅಲ್ಲ. …

Read More »

ಯಾತ್ರೆ ನಡೆಯುವುದು ವ್ಯಕ್ತಿಯಿಂದಲ್ಲ, ಪಕ್ಷದಿಂದ: ಸ್ವಪಕ್ಷೀಯರಿಗೆ ಟಾಂಗ್ ನೀಡಿದ ದೇಶಪಾಂಡೆ

ಬೆಂಗಳೂರು: ಯಾವುದೇ ವ್ಯಕ್ತಿಯಿಂದ ರಥ ಯಾತ್ರೆ ನಡೆಯಲ್ಲ. ಪಕ್ಷದಿಂದ ರಥ ಯಾತ್ರೆ ನಡೆಯುತ್ತದೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರು ಪಕ್ಷದ ಹಿರಿಯ ನಾಯಕರ ವಿರುದ್ಧ ಪರೋಕ್ಷವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಥಯಾತ್ರೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ ಅಧ್ಯಕ್ಷ, ಸಿಎಲ್ಪಿ ನಾಯಕ ಎಲ್ಲರೂ ಇರುತ್ತಾರೆ ಎಂದು ಹೇಳಿದರು.   ನಾವೆಲ್ಲ ಸಂಘಟಿತರಾಗಿ ಒಟ್ಟಾಗಿ ಚುನಾವಣೆಗೆ ಹೋಗುತ್ತೇವೆ. ಕೆಲವೊಂದು ಸಲಹೆಗಳು ಭಿನ್ನವಾಗಿ ಇರುತ್ತವೆ. ಹಾಗಂತ …

Read More »

ʼತೆಲಂಗಾಣದಲ್ಲಿ 40 ಶೇ. ಸಿಎಂ ಫ್ಲೆಕ್ಸ್ ಹಾಕಿರುವುದು ಒಂದು ವ್ಯವಸ್ಥಿತ ಷಡ್ಯಂತ್ರʼ

ಬೆಂಗಳೂರು : ತೆಲಂಗಾಣದಲ್ಲಿ 40 ಶೇ. ಸರ್ಕಾರ ಎಂಬ ಫ್ಲೆಕ್ಸ್‌ಗಳನ್ನು ಹಾಕಿರುವುದು ಒಂದು ವ್ಯವಸ್ಥಿತ ಷಡ್ಯಂತ್ರ. ನಮ್ಮ ರಾಜ್ಯದ ಬಗ್ಗೆ ತೆಲಂಗಾಣದಲ್ಲಿ ಹಾಕುವುದು ಎಷ್ಟು ಸಮಂಜಸ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.   ಅವರು ಇಂದು ಕೃಷ್ಣಾದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದರು. ತೆಲಂಗಾಣದಲ್ಲಿಯೂ40 ಶೇ. ಸರ್ಕಾರಎಂಬ ಫ್ಲೆಕ್ಸ್‌ಗಳನ್ನು ಅಳವಡಿಸಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಯವರು ಈ ಬಗ್ಗೆ ನನಗೆ ಗೊತ್ತಿಲ್ಲ. ಇದೊಂದು ವ್ಯವಸ್ಥಿತ ಷಡ್ಯಂತ್ರ. ನಮ್ಮ ರಾಜ್ಯದ ಬಗ್ಗೆ ತೆಲಂಗಾಣದಲ್ಲಿ …

Read More »

ಹುಬ್ಬಳ್ಳಿಗೆ ಭೇಟಿ ನೀಡಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು

ಹುಬ್ಬಳ್ಳಿ, ಸೆಪ್ಟೆಂಬರ್‌, 19: ಸೆಪ್ಟೆಂಬರ್ 26ರಂದು ರಾಷ್ಟ್ರಪತಿ ದ್ರೌಪದಿ‌ ಮುರ್ಮು ಅವರು ಹುಬ್ಬಳ್ಳಿಗೆ ಭೇಟಿ ನೀಡಲಿದ್ದಾರೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ ಅವರು ಮಾಹಿತಿ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹುಬ್ಬಳ್ಳಿ ಧಾರವಾಡ ನಗರಕ್ಕೆ ಭೇಟಿ ನೀಡಲಿದ್ದಾರೆ. ಈ ಬಾರಿ ದಸರಾ ಉತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆಹ್ವಾನ ನೀಡಿದ್ದಾರೆ. ವಿಶ್ವ ವಿಖ್ಯಾತ …

Read More »

ಶಬರಿಮಲೆಗೆ ಏರ್‌ಪೋರ್ಟ್‌: ಇಂದು ಮಣ್ಣು ಪರೀಕ್ಷೆ

ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಆಗಮಿಸುವವರಿಗಾಗಿ ಅನುಕೂಲವಾಗಲು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಾಥಮಿಕ ಕೆಲಸಗಳು ಶುರುವಾಗಿವೆ. ಚೆರುವಲ್ಲಿ ಎಸ್ಟೇಟ್‌ನಲ್ಲಿ ಪ್ರಸ್ತಾವಿತ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಮಣ್ಣಿನ ಪರೀಕ್ಷೆ ಸೋಮವಾರ ಆರಂಭವಾಗಲಿದೆ. ಈ ಮೂಲಕ ತಜ್ಞರ ತಂಡ, ರನ್‌ವೇ ನಿಲ್ದಾಣಕ್ಕೆ ಅಲ್ಲಿನ ಮಣ್ಣಿನ ಸ್ಥಿತಿ ಯೋಗ್ಯವಾಗಿದೆಯೇ ಎಂಬುದನ್ನು ಪರೀಕ್ಷಿಸಲಿದೆ. ಕನ್ಸಲ್ಟಿಂಗ್‌ ಸಂಸ್ಥೆ ಲೂಯಿಸ್‌ ಬರ್ಗರ್‌ ಪರವಾಗಿ ಜಿಯೋ ಐಡಿ ಏಜೆನ್ಸಿಯ ಅಧಿಕಾರಿಗಳು ಮಣ್ಣಿನ ಪರೀಕ್ಷೆ ನಡೆಸಲು ನವದೆಹಲಿಯಿಂದ ಶಬರಿಮಲೆಗೆ ಆಗಮಿಸಿದ್ದಾರೆ.

Read More »

ಚಿರತೆ ಬಗ್ಗೆ ಸುಳ್ಳು ಮಾಹಿತಿ: ಮೋದಿ ಸುಳ್ಳುಗಾರ ಎಂದ ಜೈರಾಮ್ ರಮೇಶ್

ನವದೆಹಲಿ, ಸೆ.18: ದೊಡ್ಡ ಬೆಕ್ಕುಗಳು ಅಂದರೆ ಚಿರತೆಗಳು ದೇಶದಲ್ಲಿ ನಾಶವಾಗಿವೆ ಎಂದು ಘೋಷಿಸಿದ ನಂತರ ಚಿರತೆಗಳನ್ನು ಭಾರತಕ್ಕೆ ಮರು ಪರಿಚಯಿಸಲು ದಶಕಗಳಿಂದ ಯಾವುದೇ ರಚನಾತ್ಮಕ ಪ್ರಯತ್ನಗಳು ನಡೆದಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಕಾಂಗ್ರೆಸ್ ಭಾನುವಾರ ವಾಗ್ದಾಳಿ ನಡೆಸಿದೆ.   2009 ರಲ್ಲಿ ‘ಪ್ರಾಜೆಕ್ಟ್ ಚೀತಾ’ ಆರಂಭಿಸಿದ ಪತ್ರವನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಭಾನುವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹಿಂದಿನ ಸರ್ಕಾರಗಳು ಚಿರತೆಗಳನ್ನು ಮರು ಪರಿಚಯಿಸಲು ಪ್ರಯತ್ನಗಳನ್ನು ಮಾಡಲಿಲ್ಲ …

Read More »