Breaking News
Home / ರಾಜಕೀಯ / ಸಚಿವರೊಬ್ಬರ ಹಗರಣದ ದಾಖಲೆಯನ್ನು ಸದನದಲ್ಲೇ ಬಿಡುಗಡೆ ಮಾಡುತ್ತೇನೆ:H.D.K.

ಸಚಿವರೊಬ್ಬರ ಹಗರಣದ ದಾಖಲೆಯನ್ನು ಸದನದಲ್ಲೇ ಬಿಡುಗಡೆ ಮಾಡುತ್ತೇನೆ:H.D.K.

Spread the love

ಬೆಂಗಳೂರು: ಸಚಿವರೊಬ್ಬರು ನಡೆಸಿರುವ ಹಗರಣಕ್ಕೆ ಸಂಬಂಧಪಟ್ಟಂತೆ ದಾಖಲೆ ಬಿಡುಗಡೆಗೆ ಸಮಯಾವಕಾಶ ನೀಡುವಂತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಮಾಡಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ದಾಖಲೆ ಬಿಡುಗಡೆ ಮಾಡುವುದಕ್ಕಾಗಿ ಸ್ಪೀಕರ್ ಗೆ ಅವಕಾಶ ಕೇಳಿದ್ದೇನೆ.ಸ್ಪೀಕರ್ ಗೆ ಇಂದು ಬೆಳಗ್ಗೆ ದೂರವಾಣಿ ಕರೆ ಮಾಡಿ ಮಾತಾಡಿದ್ದೇನೆ.

ನಾಳೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ ಎಂದರು.

ನಾನು ನ್ಯೂಸ್ ಸೆನ್ಸ್ ಮಾಡೋಕೆ ನೀಡಿರುವ ಹೇಳಿಕೆ ಅಲ್ಲ. ಸರ್ಕಾರ ಸಹಕಾರ ನೀಡಲಿ. ಸರ್ಕಾರದ ಒಂದು ತೀರ್ಮಾನದಿಂದ ನೂರಾರು ಕೋಟಿ ನಷ್ಟವಾಗಿದೆ. ಅದನ್ನು ದಾಖಲೆ ಸಹಿತ ಇಡುತ್ತೇನೆ ಎಂದು ಹೇಳಿದರು.

ರಾಜಕೀಯ ನಿವೃತ್ತಿಗೆ ಸಿದ್ಧ: ಬೆಂಗಳೂರಲ್ಲಿ ಒತ್ತುವರಿ ತೆರವು ಮಾಡ್ತಾ ಇರುವ ಬಗ್ಗೆ ಸದನದಲ್ಲಿ ಮಾತಾಡಿದ್ದೇನೆ. ನನ್ನ ಕಾಲದಲ್ಲಿ ಬೆಂಗಳೂರು ಜನತೆಗೆ ಏನಾದರೂ ಮೋಸ ಮಾಡಿದ್ದೇನೆ ಎಂದು ಹೇಳಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.


Spread the love

About Laxminews 24x7

Check Also

ತೈಲ ಬೆಲೆ ಏರಿಕೆ ಸಾಮಾನ್ಯರನ್ನು ಬಾಧಿಸದು: ಸಚಿವ ಕೆ.ಎಚ್‌.ಮುನಿಯಪ್ಪ

Spread the love ವಿಜಯಪುರ(ದೇವನಹಳ್ಳಿ): ‘ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಕಡಿಮೆ ಇದೆ. ಸ್ವಲ್ಪ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ