Breaking News
Home / ರಾಜಕೀಯ (page 830)

ರಾಜಕೀಯ

ಮುರುಘಾ ಶರಣರಿಗೆ ಆಂಜಿಯೋಗ್ರಾಂ ಪರೀಕ್ಷೆ: ಆರೋಗ್ಯ ಸ್ಥಿರ

ಶಿವಮೊಗ್ಗ: ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರಿಗೆ ಕೊರೋನರಿ ಆಂಜಿಯೋಗ್ರಾಂ ಪರೀಕ್ಷೆ ನಡೆಸಲಾಗಿದೆ. ವಿರೂಪಾಕ್ಷಪ್ಪ ತಿಳಿಸಿದರು. ಪ್ರೌಢಶಾಲೆ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧಿತರಾಗಿರುವ ಮುರುಘಾ ಶರಣರನ್ನು ನ್ಯಾಯಾಲಯದ ಆದೇಶದಂತೆ ಹೃದಯ ತಪಾಸಣೆಗಾಗಿ ಬುಧವಾರ ರಾತ್ರಿ ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಕರೆತಂದು ಇಲ್ಲಿನ ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಶಿವಮೂರ್ತಿ ಶರಣರಿಗೆ ಆಸ್ಪತ್ರೆಯಲ್ಲಿ ನೀಡಿರುವ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದ ಡಾ.ವಿರೂಪಾಕ್ಷಪ್ಪ, ‘ಶರಣರ ಆರೋಗ್ಯದ …

Read More »

ಫಿಸಿಕಲ್ ಟ್ರೈನರ್‌ಗೆ ಉಂಗುರ ತೊಡಿಸಿ ಎಂಗೇಜ್ಡ್ ಆದ ಆಮೀರ್ ಖಾನ್ ಪುತ್ರಿ

ಬಾಲಿವುಡ್ (Bollywood) ಖ್ಯಾತ ನಟ ಆಮೀರ್ ಖಾನ್ (Aamir Khan) ಪುತ್ರಿ ಇರಾ ಖಾನ್ (Ira Khan) ಕೊನೆಗೂ ನಿಶ್ಚಿತಾರ್ಥ (Engaged) ಮಾಡಿಕೊಂಡಿದ್ದಾರೆ. ತನ್ನ ಪ್ರಿಯಕರಿಗೆ ಉಂಗುರ ತೊಡಿಸಿ, ಮುತ್ತಿಡುವ ಮೂಲಕ ಎಂಗೇಜ್ಡ್ ಆಗಿರುವುದಾಗಿ ಅವರು ಘೋಷಣೆ ಮಾಡಿದ್ದಾರೆ. ಇರಾ ಖಾನ್ ಮತ್ತು ನೂಪುರ್ ಶಿಖಾರೆ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆ ಪ್ರೀತಿ ಇಂದು ಮತ್ತೊಂದು ಹಂತ ಪಡೆದುಕೊಂಡಿದೆ. ಪ್ರೀತಿಸುತ್ತಿರುವಾಗಲೇ ಒಟ್ಟಿಗೆ ವಾಸವಿದ್ದ ಈ ಜೋಡಿ ಇದೀಗ ಅಧಿಕೃತವಾಗಿ ಸತಿ …

Read More »

ಬೊಮ್ಮಾಯಿಯವರ ಬಂಡಲ್‍ನಿಂದಾಗಿ ಕಲ್ಯಾಣ ಕರ್ನಾಟಕ ಹಿನ್ನೆಡೆ – ಪ್ರಿಯಾಂಕ್ ಖರ್ಗೆ ಟೀಕೆ

ಕಲಬುರಗಿ: ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಗೆ 5,000 ಕೋಟಿ ರೂ. ನೀಡುವುದಾಗಿ ಹೇಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೂಗಿಗೆ ತುಪ್ಪ ಸವರಿ ಹೋಗಿದ್ದಾರೆ. ಮುಂದೆ ಚುನಾವಣೆ ಬರುತ್ತಿದೆ ಈ ಅನುದಾನ ಬಿಡುಗಡೆ ಅಸಾಧ್ಯಾ ಎಂದು ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಕೆಆರ್‌ಡಿಬಿಗೆ ಘೋಷಿತ ಅನುದಾನ 3,000 ಕೋಟಿ ರೂಪಾಯಿಯಲ್ಲಿ ಕೇವಲ 1,500 ರೂಪಾಯಿ ಕೋಟಿ ಮಾತ್ರ ಬಿಡುಗಡೆ …

Read More »

ಈ ಬಾಬ್ತು ಬಿಲ್ ಪಾವತಿ ಮಾಡಲು ಕೋರಿದಾಗ, 11 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಎಸ್.ಬಿ.ಲೋಕೇಶ್ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದ್ದರು. ಸೆ.22 ಗುರುವಾರ 11 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ನರಸಿಂಹಮೂರ್ತಿ ಹಣದ ಸಮೇತ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಆರೋಪಿಯನ್ನು ಬಂಧಿಸಿದ್ದು, ಹಣವನ್ನು ಜಪ್ತಿ ಮಾಡಲಾಗಿದೆ. ಚಿತ್ರದುರ್ಗ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಜಿ.ಮಂಜುನಾಥ್ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

ಚಿತ್ರದುರ್ಗ: ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಹಾಸ್ಟೆಲ್‌ಗಳಿಗೆ ಪಾತ್ರೆ ಮತ್ತಿತರೆಪರಿಕರಗಳನ್ನು ಸರಬರಾಜು ಮಾಡಿದ ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ಲಂಚದ ಬೇಡಿಕೆ ಇಟ್ಟಿದ್ದ ಸಹಾಯಕ ನಿರ್ದೇಶಕರ ಕಚೇರಿ ಪ್ರಥಮ ದರ್ಜೆ ಸಹಾಯಕನನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿದ್ದಾರೆ.   ಚಿತ್ರದುರ್ಗ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಪ್ರಥಮ ದರ್ಜೆ ಸಹಾಯಕ ನರಸಿಂಹಮೂರ್ತಿ ಬಂಧಿತ ಆರೋಪಿ.ಸಜ್ಜನಕೆರೆ ಗ್ರಾಮದ ಕಲ್ಲೇಶ್ವರ ಏಜೆನ್ಸಿ ಮಾಲಿಕ ಎಸ್.ಬಿ.ಲೋಕೇಶ್, ಆಗಸ್ಟ್ 2 ರಂದು ಸಮಾಜ ಕಲ್ಯಾಣ ಇಲಾಖೆ …

Read More »

ಯಡಿಯೂರಪ್ಪಗೆ ಬಿಗ್ ರಿಲೀಫ್ ನೀಡಿದ ಸುಪ್ರೀಂ; ‘ಲಂಚ ಕೇಸ್’ ಅರ್ಜಿ ವಿಚಾರಣೆಗೆ ಮಧ್ಯಂತರ ತಡೆ

ಹೊಸದಿಲ್ಲಿ: ಭ್ರಷ್ಟಾಚಾರ ತಡೆ ಕಾಯ್ದೆಯಡಿ ತಮ್ಮ ಮತ್ತು ಇತರರ ವಿರುದ್ಧ ದಾಖಲಾಗಿದ್ದ ಲಂಚದ ದೂರಿನ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಪೊಲೀಸ್ ತನಿಖೆಗೆ ತಡೆ ನೀಡುವಂತೆ ಅವರು ಸಲ್ಲಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ‘ತನಿಖೆಗೆ ಮಧ್ಯಂತರ ತಡೆ’ ನೀಡಿದೆ. ಯಡಿಯೂರಪ್ಪ, ಪುತ್ರ ವಿಜಯೇಂದ್ರ, ಮೊಮ್ಮಗ ಶಶಿಧರ ಮರಡಿ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಅಧಿಕಾರಿಗಳು, ಗುತ್ತಿಗೆದಾರರನ್ನು ಆರೋಪಿಗಳನ್ನಾಗಿಸಿ ಸಾಮಾಜಿಕ ಕಾರ್ಯಕರ್ತ …

Read More »

ವಿಜಯಪುರದಲ್ಲಿ ಜನಸ್ನೇಹಿ ಪೊಲೀಸ್ ಠಾಣೆ!

ವಿಜಯಪುರ: ಸಾಮಾನ್ಯವಾಗಿ ಪೊಲೀಸ್ ಠಾಣೆ ಅಂದಾಕ್ಷಣ ಕಣ್ಮುಂದೆ ಬರೋದು ಠಾಣೆ ಮುಂದೆ ನಿಂತ ನಾಲ್ಕಾರು ಹಳೆ ವಾಹನಗಳು, ಬಣ್ಣ ಮಾಸಿದ ಗೋಡೆ, ಗಿಡ ಗಂಟಿಗಳು ಬೆಳೆದು ನಿಂತ ಇಕ್ಕಟ್ಟಾದ ಪ್ರದೇಶ. ಇಂತಹ ಠಾಣೆಗಳಿಗೆ ಜನ ಬರುವುದಕ್ಕೂ ಹಿಂದೆ ಮುಂದೆ ನೋಡುವ ಇಂದಿನ ದಿನಗಳಲ್ಲಿ ಜಿಲ್ಲೆಯ ಆದರ್ಶ ನಗರ ಪೊಲೀಸ್ ಠಾಣೆ ಸಾಕಷ್ಟು ಡಿಫರೆಂಟ್ ಆಗಿ ಜನ ಸಾಮಾನ್ಯರನ್ನ ಆಕರ್ಷಿಸುತ್ತಿದೆ. ಮಾತ್ರವಲ್ಲದೇ ಬಂದಂತಹ ಜನಸಾಮಾನ್ಯರಿಗೆ ಪೊಲೀಸ್ ವ್ಯವಸ್ಥೆ ಕುರಿತು ಅಗತ್ಯ ಮಾಹಿತಿ ಒದಗಿಸುವ …

Read More »

ರಸ್ತೆ ತಡೆದು ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಬೆಂಗಳೂರು: ನೂರಾರು ಕೋಟಿಯ ನಕಲಿ ಬಿಲ್ಲು, ಕಳಪೆ ಕಾಮಗಾರಿ ವಿರುದ್ಧ ಕಾಂಗ್ರೆಸ್ ಪಕ್ಷದ ಮುಖಂಡ ಅನೂಪ್ ಅಯ್ಯಂಗಾರ್ ನೇತೃತ್ವದಲ್ಲಿ ಇಂದು ಕಾವೇರಿ ಥೀಯಟರ್ ಮುಖ್ಯ ರಸ್ತೆಯಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಸ್ಥಳೀಯ ಶಾಸಕ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ವಿರುದ್ಧ 100ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ರಸ್ತೆಯಲ್ಲೇ ಕುಳಿತು ಪ್ರತಿಭಟಿಸಿದರು. ಪಾಲಿಕೆಯ ವಾರ್ಡ್‌ಗಳಲ್ಲಿ ನಕಲಿ ಬಿಲ್ಲುಗಳನ್ನು ಪಾಸ್ ಮಾಡಲಾಗಿದೆ. ಬಿಬಿಎಂಪಿ ಅಧಿಕಾರಿಗಳೇ ತಮ್ಮ ಅಸಹಾಯತೆ ವ್ಯಕ್ತಪಡಿಸಿದ್ದಾರೆ. ಇದನ್ನು ಸಂಪೂರ್ಣವಾಗಿ ವಿಚಾರಣೆಗೆ‌ ಒಳಪಡಿಸಬೇಕು. …

Read More »

ಔಷಧ ಚೀಟಿಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಆಗುತ್ತಿರುವ ಡಾಕ್ಟರ್​ ಇವರು! ಅಂಥದ್ದೇನಿದೆ ಈ ಚೀಟಿಯಲ್ಲಿ?

ಕೊಚ್ಚಿ: ಔಷಧ ಚೀಟಿಯ ಮೇಲೆ ಬರೆಯುವ ವೈದ್ಯರ ಬರವಣಿಗೆಯು ಮೆಡಿಕಲ್​ ಶಾಪ್​ ಸಿಬ್ಬಂದಿಗೆ ಮಾತ್ರ ಅರ್ಥವಾಗುತ್ತೆ ಎಂಬುದು ಜನರ ಸಾಮಾನ್ಯ ನಂಬಿಕೆಯಾಗಿದೆ. ಅದು ನಿಜವೂ ಹೌದು. ಬಹುತೇಕ ವೈದ್ಯರು ಬರಹ ಅಸ್ಪಷ್ಟವಾಗಿರುತ್ತದೆ. ಆದರೆ, ಎಲ್ಲಾ ವೈದ್ಯರು ಬರವಣಿಗೆ ಅಸ್ಪಷ್ಟವಾಗಿರುತ್ತದೆ ಎಂದು ಸಾಮಾನ್ಯೀಕರಿಸಲು ಸಾಧ್ಯವಿಲ್ಲ. ಏಕೆಂದರೆ, ಇಲ್ಲೂ ಬದಲಾವಣೆಯ ಗಾಳಿ ಬೀಸುತ್ತಿದೆ. ಕೇರಳದ ಮಕ್ಕಳ ತಜ್ಞರೊಬ್ಬರು ಬರೆದಿರುವ ಔಷಧ ಚೀಟಿಯು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಕೇರಳದ ಪಾಲಕ್ಕಾಡ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದ …

Read More »

ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ಅಕ್ಕಿ ದರ ಮತ್ತಷ್ಟು ಹೆಚ್ಚಳ ಸಾಧ್ಯತೆ

ನವದೆಹಲಿ: ಮುಂದಿನ ದಿನಗಳಲ್ಲಿ ಅಕ್ಕಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಖಾರಿಫ್ ಋತುವಿನಲ್ಲಿ ಕಡಿಮೆ ಇಳುವರಿ, ರಫ್ತು ಇತರೆ ಕಾರಣದಿಂದ ಅಕ್ಕಿ ಬೆಲೆ ಏರಿಕೆ ಮುಂದುವರೆಯಬಹುದು ಎಂದು ಹೇಳಲಾಗಿದೆ. ರಫ್ತು ನೀತಿಯಲ್ಲಿ ಬದಲಾವಣೆ ಆಹಾರ ಸಚಿವಾಲಯ ನೀಡಿದ ಮಾಹಿತಿಯಲ್ಲಿ, ಭಾರತದ ಅಕ್ಕಿ ರಫ್ತು ನೀತಿಯಲ್ಲಿ ಇತ್ತೀಚಿನ ತಿದ್ದುಪಡಿಗಳ ಹಿಂದಿನ ವಿವರವಾದ ಕಾರಣಗಳನ್ನು ವಿವರಿಸಲಾಗಿದೆ. ಭಾರತದ ಅಕ್ಕಿ ರಫ್ತು ನಿಯಮಗಳಲ್ಲಿ ಇತ್ತೀಚಿನ ಬದಲಾವಣೆಗಳು ರಫ್ತಿಗೆ ಲಭ್ಯತೆಯನ್ನು ಕಡಿಮೆ ಮಾಡದೆ “ದೇಶೀಯ ಬೆಲೆಗಳನ್ನು …

Read More »

ವಿಜಯಪುರ: ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಹಣ ಪಡೆಯಲು ಬಂದಿದ್ದ ವ್ಯಕ್ತಿ ಪೊಲೀಸ್​​ ವಶಕ್ಕೆ

ವಿಜಯಪುರ: ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಹಣ ಪಡೆಯಲು ಬಂದಿದ್ದ ವ್ಯಕ್ತಿಯನ್ನು ಯುವಕರು ಹಿಡಿದು ಪೊಲೀಸರಿಗೊಪ್ಪಿಸಿರುವ ಘಟನೆ ಜಿಲ್ಲೆಯ ‌ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ನಡೆದಿದೆ. ಹೋಂ ಗಾರ್ಡ್ ಶಾಂತೇಶ್ ಕೊರ್ತಿ ಎಂಬಾತ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ 8 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಎಂದು ಆರೋಪಿಸಲಾಗಿದೆ. ಹಣ ನೀಡುವುದಾಗಿ ಕರೆಸಿದ ಯುವಕರು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶ್ರೀಕಾಂತ್​ ಎಂಬುವವರ ಬಳಿ ಹಣ ಪಡೆಯಲು ಶಾಂತೇಶ್ ಕೊರ್ತಿ ಬಂದಿದ್ದ. …

Read More »