Breaking News
Home / Uncategorized / ‘ಸಿಕಂದರ್’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಎದುರು ಕಟ್ಟಪ್ಪ ?

‘ಸಿಕಂದರ್’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಎದುರು ಕಟ್ಟಪ್ಪ ?

Spread the love

ನಟ ಸಲ್ಮಾನ್​ ಖಾನ್​ (Salman Khan) ಅವರು ಮುಂದಿನ ಸಿನಿಮಾದ ತಯಾರಿಯಲ್ಲಿ ಬ್ಯುಸಿ ಆಗಿದ್ದಾರೆ. ಈ ಬಾರಿ ಅವರು ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಎ.ಆರ್​. ಮುರುಗದಾಸ್​ ಜೊತೆ ಕೈ ಜೋಡಿಸಿದ್ದಾರೆ.‘ಸಿಕಂದರ್’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಎದುರು ಕಟ್ಟಪ್ಪ ಸತ್ಯರಾಜ್ ವಿಲನ್?​

ಈ ಸಿನಿಮಾಗೆ ‘ಸಿಕಂದರ್​’ (Sikandar) ಎಂದು ಶೀರ್ಷಿಕೆ ಇಡಲಾಗಿದೆ. ಸಲ್ಮಾನ್​ ಖಾನ್​ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿರುವ ಈ ಸಿನಿಮಾದ ಬಗ್ಗೆ ಒಂದು ಎಗ್ಸೈಟಿಂಗ್ ನ್ಯೂಸ್​ ಕೇಳಿಬಂದಿದೆ. ‘ಸಿಕಂದರ್​’ ಸಿನಿಮಾದಲ್ಲಿ ‘ಬಾಹುಬಲಿ’ ಖ್ಯಾತಿಯ ನಟ ಸತ್ಯರಾಜ್ (Sathyaraj)​ ಅವರು ವಿಲನ್​ ಪಾತ್ರ ಮಾಡಲಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಅನೇಕ ಪೋಸ್ಟ್​ಗಳು ಹರಿದಾಡುತ್ತಿವೆ.ಬಾಹುಬಲಿ’ ಸಿನಿಮಾದಲ್ಲಿ ಸತ್ಯರಾಜ್​ ಅವರು ಕಟ್ಟಪ್ಪ ಎಂಬ ಪಾತ್ರ ಮಾಡಿ ಸಖತ್​ ಫೇಮಸ್​ ಆದರು. ದಕ್ಷಿಣ ಭಾರತ ಮಾತ್ರವಲ್ಲದೇ ಉತ್ತರ ಭಾರತದಲ್ಲೂ ಅವರಿಗೆ ತುಂಬ ಜನಪ್ರಿಯತೆ ಸಿಕ್ಕಿತು. ಈಗ ಅವರು ಸಲ್ಮಾನ್​ ಖಾನ್​ ಎದುರು ವಿಲನ್​ ಆಗಿ ಅಬ್ಬರಿಸಿದರೆ ಅವರ ಚಾರ್ಮ್​ ಇನ್ನಷ್ಟು ಹೆಚ್ಚಾಗಲಿದೆ. ಆದರೆ ಈ ವಿಷಯವನ್ನು ಚಿತ್ರತಂಡದವರು ಅಧಿಕೃತವಾಗಿ ಹೇಳುವುದು ಬಾಕಿ ಇದೆ. ಅದಕ್ಕಾಗಿ ಫ್ಯಾನ್ಸ್​ ಕಾದಿದ್ದಾರೆ.


Spread the love

About Laxminews 24x7

Check Also

ಪೋಕ್ಸೋ ಕೇಸ್ : ‘CID’ ವಿಚಾರಣೆಗೆ ಹಾಜರಾದ B. S. Y.

Spread the love ಬೆಂಗಳೂರು: ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ