Breaking News
Home / ರಾಜಕೀಯ (page 260)

ರಾಜಕೀಯ

ನ.9 ರಿಂದ ಮೈಸೂರಿನಲ್ಲಿ ಮುಖ್ಯಮಂತ್ರಿ ನಿವಾಸದ‌ ಮುಂದೆ ರೈತರಿಂದ ಧರಣಿ ಸತ್ಯಾಗ್ರಹ: ಕುರುಬೂರು ಶಾಂತಕುಮಾರ್​

ಮೈಸೂರು : ಇನ್ನು ಹತ್ತು ದಿನದಲ್ಲಿ ರೈತರಿಗೆ ಕಬ್ಬಿನ ಹೆಚ್ಚುವರಿ ದರ ಕೊಡಿಸದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ‌ ಅವರ ಮೈಸೂರಿನ‌ ಮನೆಯ ಎದುರು ನ.9 ರಿಂದ ಬೃಹತ್ ಧರಣಿ ಸತ್ಯಾಗ್ರಹ ನಡೆಸಲು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರ ಸಂಘ ತೀರ್ಮಾನಿಸಿದೆ.   ನಗರದ ಪಿಡಿಡಬ್ಲ್ಯೂ ಅತಿಥಿ ಗೃಹದಲ್ಲಿ ನಡೆದ ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್​ ಮಾತನಾಡಿ, ರಾಜ್ಯ ಸರ್ಕಾರ ಹಿಂದಿನ ಸಾಲಿನಲ್ಲಿ ನಿಗದಿ ಮಾಡಿದ್ದ ಕಬ್ಬಿನ ಹೆಚ್ಚುವರಿ …

Read More »

ಟಗರು ಪಲ್ಯ’ಗೆ ಫುಲ್​ ಡಿಮ್ಯಾಂಡ್​​; ಸಿನಿಮಾ ರಿಮೇಕ್​ಗೂ ಹೆಚ್ಚಾಯ್ತು ಬೇಡಿಕೆ

ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿರುವ ಡಾಲಿ ಧನಂಜಯ್​ ನಿರ್ಮಾಣದ ‘ಟಗರು ಪಲ್ಯ’ ಸಿನಿಮಾದ ರಿಮೇಕ್​ಗೂ ಬೇಡಿಕೆ ಹೆಚ್ಚಿದೆ. ಕನ್ನಡ ಚಿತ್ರರಂಗದಲ್ಲಿ ಕರ್ಮಷಿಯಲ್ ಹಾಗೂ ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರದ ನಡುವೆ ಈ ವಾರ ತೆರೆಗೆ ಬಂದ ಹಳ್ಳಿ ಸೊಗಡಿನ ‘ಟಗರು ಪಲ್ಯ’ವನ್ನು ಪ್ರೇಕ್ಷಕರು ಚಪ್ಪರಿಸಿಕೊಂಡು ಸವಿಯುತ್ತಿದ್ದಾರೆ. ಕಳೆದ ಶುಕ್ರವಾರ (ಅ.27) ರಾಜ್ಯಾದ್ಯಂತ ಬಿಡುಗಡೆಯಾದ ಚಿತ್ರ ಎಲ್ಲೆಡೆ ಅದ್ಭುತ ಪ್ರದರ್ಶನ ಕಾಣುತ್ತಿದ್ದು, ದಿನದಿಂದ ದಿನಕ್ಕೆ ಶೋಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಸಂಬಂಧ, …

Read More »

ಕ್ರಾಸಿಂಗ್​ ವೇಳೆ ಎರಡು ಪ್ಯಾಸೆಂಜರ್ ​ರೈಲುಗಳ ಡಿಕ್ಕಿ

ವಿಜಯನಗರ (ಆಂಧ್ರಪ್ರದೇಶ): ರಾಜ್ಯದ ವಿಜಯನಗರ ಜಿಲ್ಲೆಯ ಕೊತ್ತವಲಸ ಮಂಡಲದ ಕಂಟಕಪಲ್ಲಿಯಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದೆ. ಕ್ರಾಸಿಂಗ್​ ಸಂದರ್ಭದಲ್ಲಿ 2 ಪ್ಯಾಸೆಂಜರ್​ ರೈಲು ಮುಖಾಮುಖಿ ಡಿಕ್ಕಿ ಹೊಡೆದಿವೆ. ಹಳಿ ದಾಟುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, 6 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.     ಅಪಘಾತದ ಪರಿಣಾಮ ರಾಯಗಡ ಪ್ಯಾಸೆಂಜರ್ ರೈಲಿನ 3 ಬೋಗಿಗಳು ಹಳಿ ತಪ್ಪಿವೆ. ಇನ್ನು ವಿದ್ಯುತ್​ ತಂತಿಗಳು ತುಂಡಾಗಿ ಬಿದ್ದು ಘಟನಾ …

Read More »

2025ರ ಚಾಂಪಿಯನ್ಸ್ ಟ್ರೋಫಿಗೆ ವಿಶ್ವಕಪ್​ ಮಾನದಂಡ: ಹಲವು ತಂಡಗಳಿಗೆ ಅಚ್ಚರಿ ಮೂಡಿಸಿದ ಐಸಿಸಿ ನಿರ್ಧಾರ

ನವದೆಹಲಿ: 2013 ಮತ್ತು 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಭಾಗವಹಿಸುವಿಕೆಗೆ ಅನುಸರಿಸಿದ್ದ ಮಾನದಂಡವನ್ನು ಐಸಿಸಿ 2025ರ ಟೂರ್ನಿಗೆ ಬದಲಾಯಿಸಿದೆ. ಇದು ಈಗ ಹಲವು ಕ್ರಿಕೆಟ್​ ಮಂಡಳಿಗಳ ಬೇಸರಕ್ಕೆ ಕಾರಣವಾದರೆ, ಇನ್ನೂ ಕೆಲ ಮಂಡಳಿಗಳಿಗೆ ಸಂತಸ ತರಲಿದೆ. 2025ಕ್ಕೆ ಪಾಕಿಸ್ತಾನದ ಆಥಿತ್ಯದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. 2013 ಮತ್ತು 2017 ರಲ್ಲಿ ಐಸಿಸಿ ನೀಡುವ ಶ್ರೇಯಾಂಕದಲ್ಲಿ 8 ಸ್ಥಾನಗಳನ್ನು ಪಡೆದುಕೊಂಡ ತಂಡಗಳು ಎರಡು ಗುಂಪಾಗಿ ಲೀಗ್​ನಲ್ಲಿ ಸ್ಪರ್ಧಿಸುತ್ತಿದ್ದವು. ಮುಂದಿನ ಬಾರಿಯ ಚಾಂಪಿಯನ್ಸ್ …

Read More »

ಸಂಸದ ಕರಡಿ ಸಂಗಣ್ಣ ಕಾಂಗ್ರೆಸ್​ನ ಗ್ಯಾರಂಟಿಗಳ ವಿರುದ್ಧ ವಾಗ್ದಾಳಿ

ಗಂಗಾವತಿ(ಕೊಪ್ಪಳ): ಕಾಯಕದ ಮೂಲಕವೇ ಕೈಲಾಸ ಕಾಣಬೇಕು ಎಂದು ಆದರ್ಶ ನೀಡಿದ ಬಸವಣ್ಣನವರ ತತ್ವಾದರ್ಶಗಳಿಗೆ ವಿರುದ್ಧವಾಗಿ ಇಂದು ಉಚಿತ ಭಾಗ್ಯಗಳನ್ನು ನೀಡುವ ಮೂಲಕ ಜನರನ್ನು ಪರವಾಲಂಬಿಗಳನ್ನಾಗಿ ಮಾಡಲಾಗುತ್ತಿದೆ ಎಂದು ಸಂಸದ ಕರಡಿ ಸಂಗಣ್ಣ ಪರೋಕ್ಷವಾಗಿ ಕಾಂಗ್ರೆಸ್ ಸರ್ಕಾರದ ಉಚಿತ ಭಾಗ್ಯಗಳ ವಿರುದ್ಧ ವಾಗ್ದಾಳಿ ನಡೆಸಿದರು.   ನಗರದ ಚನ್ನಬಸವಸ್ವಾಮಿ ಕಲಾ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಕೊಪ್ಪಳ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳ ಪ್ರತಿಭಾ ಪುರಸ್ಕಾರ …

Read More »

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಡಿ ಕೆ ಶಿವಕುಮಾರ್ ಶಾಸಕರಿಗೆ ನೀಡಿರುವ ಎಚ್ಚರಿಕೆ ಕುರಿತು ಮಾತನಾಡುವುದಿಲ್ಲ ಎಂದಿದ್ದಾರೆ.

ಹಾವೇರಿ : ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಪಕ್ಷದ ವಿಚಾರದಲ್ಲಿ, ಆಂತರಿಕ ವಿಚಾರದಲ್ಲಿ ಹೇಳಿಕೆ ನೀಡದಂತೆ ಶಾಸಕರಿಗೆ ಖಡಕ್​​ ಎಚ್ಚರಿಕೆ ನೀಡಿರುವ ಕುರಿತು ಮಾತನಾಡುವುದಿಲ್ಲಾ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ತಿಳಿಸಿದ್ದಾರೆ.   ಜಿಲ್ಲೆಯ ಹಾನಗಲ್ ತಾಲೂಕು ಸಾಂವಸಗಿ ಗ್ರಾಮದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಅಧ್ಯಕ್ಷರು ಅಪ್ಪಣೆ ಏನಿದೆ ಅದನ್ನು ಚಾಚು ತಪ್ಪದೆ ನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟರು. ಅವರು ನಮ್ಮ ಪಕ್ಷದ ಅಧ್ಯಕ್ಷರು. ಯಾರೇ ಆಗಲಿ ಮಾಧ್ಯಮಗಳಿಗೆ ಹೇಳಿಕೆ …

Read More »

ಏಕ ಭಾರತ- ಶ್ರೇಷ್ಠ ಭಾರತ ದೃಷ್ಟಿಯ ಸಾಕಾರ- ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ- ದೇಶಾದ್ಯಂತ ಸಂಗ್ರಹಿಸಿರುವ ಮಣ್ಣಿನಿಂದ ಅಮೃತ ಉದ್ಯಾನವನ್ನು ರಚಿಸಲಾಗಿದ್ದು, ಅದು ಏಕ ಭಾರತ- ಶ್ರೇಷ್ಠ ಭಾರತ ದೃಷ್ಟಿಯನ್ನು ಸಾಕಾರಗೊಳಿಸುತ್ತದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ಇಲ್ಲಿಯ ಎನ್ ಎಸ್ ಎಫ್ ಕಚೇರಿಯಲ್ಲಿ ದೆಹಲಿಯ ಕರ್ತವ್ಯ ಪಥದಲ್ಲಿ ಬರುವ ಮಂಗಳವಾರದಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಅರಭಾವಿಯಿಂದ ಭಾಗವಹಿಸಲಿರುವ ಕಾರ್ಯಕರ್ತರಿಗೆ ಅಮೃತ ಕಳಶವನ್ನು ದೆಹಲಿಗೆ ಬೀಳ್ಕೊಟ್ಟು ಶುಭ ಕೋರಿದ ಅವರು, ಈ ಮೂಲಕ ನಮ್ಮ ಹೆಮ್ಮೆಯ ವೀರ ಯೋಧರಿಗೆ …

Read More »

ಕಬ್ಬಿನ ತೂಕದಲ್ಲಿ ಮೋಸ ಆರೋಪ: ಸರ್ಕಾರದ ವತಿಯಿಂದಲೇ ಎಲೆಕ್ಟ್ರಾನಿಕ್ ವೇಯಿಂಗ್ ಮಷಿನ್-ಸಚಿವ ಶಿವಾನಂದ ಪಾಟೀಲ

ವಿಜಯಪುರ: ಕೆಲವು ಸಕ್ಕರೆ ಕಾರ್ಖಾನೆಯವರು ರೈತರು ಕಾರ್ಖಾನೆಗೆ ತರುವ ಕಬ್ಬಿನ ತೂಕದಲ್ಲಿ ಮೋಸ ಮಾಡುತ್ತಿರುವ ಆರೋಪ ಕೇಳಿಬರುತ್ತಿದೆ. ರೈತರು ಈ ಬಗ್ಗೆ ಸಾಕ್ಷಿ ಸಮೇತ ದೂರು ಸಲ್ಲಿಸಿದರೆ ಅಂಥ ಕಾರ್ಖಾನೆಗಳ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಮುಂದಿನ ವರ್ಷದಿಂದ ಈ ಅಕ್ರಮ ತಡೆಯಲು ಸರ್ಕಾರದ ವತಿಯಿಂದಲೇ ಎಲೆಕ್ಟ್ರಾನಿಕ್ ವೇಯಿಂಗ್ ಮಷಿನ್ ಅಳವಡಿಸಲಾಗುತ್ತದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಕುಂಟೋಜಿಯಲ್ಲಿ ಭಾನುವಾರ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ …

Read More »

ವಿಶ್ವಕಪ್ ಬಿಗ್​ ಫೈಟ್: ಟಾಸ್​ ಗೆದ್ದ ಇಂಗ್ಲೆಂಡ್ ಬೌಲಿಂಗ್​ ಆಯ್ಕೆ,​ ನಾಯಕನಾಗಿ ರೋಹಿತ್​ಗೆ 100ನೇ ಪಂದ್ಯ​

ಲಖನೌ (ಉತ್ತರಪ್ರದೇಶ): ಲಖನೌನ ಏಕಾನಾ ಕ್ರೀಡಾಂಗಣದಲ್ಲಿ ವಿಶ್ವಕಪ್​ ಕ್ರಿಕೆಟ್‌ನ ಮಹತ್ವದ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ​ ಇಂಗ್ಲೆಂಡ್ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡಿತು. ಟೂರ್ನಿಯ 29ನೇ ಪಂದ್ಯದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್​ ತಂಡ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಒಂದು ವೇಳೆ ಪಂದ್ಯದಲ್ಲಿ ಸೋತರೆ ಇಂಗ್ಲೆಂಡ್​ ತಂಡ ವಿಶ್ವಕಪ್​ನಿಂದ ಬಹುತೇಕ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ.     ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್​ ವಿರುದ್ಧ ಗೆಲುವು ಸಾಧಿಸುವ ಮೂಲಕ ಭಾರತ ಸತತ ಐದನೇ …

Read More »

ಸ್ಮಶಾನದಲ್ಲಿ ಸಮಾಧಿ ಮೇಲೆ ಕುಳಿತು ಕಳ್ಳೇಪುರಿ ತಿನ್ನುತ್ತಾ, ರಂಗಗೀತೆ: ಹುಲಿಕಲ್ ನಟರಾಜ್‌ ನೇತೃತ್ವದಲ್ಲಿ ಮೌಢ್ಯಕ್ಕೆ ಸೆಡ್ಡು

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಚಂದ್ರಗ್ರಹಣ ಸಮಯದಲ್ಲಿ ಸ್ಮಶಾನದಲ್ಲಿರುವ ಸಮಾಧಿಗಳ ಮೇಲೆ ಕುಳಿತು ಕಳ್ಳೇಪುರಿ ತಿನ್ನುತ್ತಾ, ರಂಗಗೀತೆಗಳನ್ನು ಹಾಡುವ ಮೂಲಕ ಜನರು ಮೌಢ್ಯತೆಗೆ ಸೆಡ್ಡು ಹೊಡೆದ ಘಟನೆ ದೇವನಹಳ್ಳಿಯ ದೊರೆಕಾವಲು ಗ್ರಾಮದಲ್ಲಿ ನಡೆದಿದೆ. ಪವಾಡ ಭಂಜಕ ಖ್ಯಾತಿಯ ಹುಲಿಕಲ್ ನಟರಾಜ್ ನೇತೃತ್ವದಲ್ಲಿ ಗ್ರಾಮದ ಸ್ಮಶಾನದಲ್ಲಿ ಸೇರಿದ ಜನರು, ಗ್ರಹಣ ಸಂದರ್ಭದಲ್ಲಿ ಪ್ರಕೃತಿಯಲ್ಲಿ ನಡೆಯುವ ಕೌತುಕ ಕಣ್ತುಂಬಿಕೊಂಡರು. ಚಲನೆಯ ಕಾರಣದಿಂದ ನೆರಳುಬೆಳಕಿನ ಆಟದಲ್ಲಿ ಗ್ರಹಣಗಳು ಸಂಭವಿಸುತ್ತವೆ. ಇದು ಪ್ರಕೃತಿಯಲ್ಲಿ ನಡೆಯುವ ಸಹಜ ಪ್ರಕ್ರಿಯೆ. ನಾವು …

Read More »