Breaking News

ಕ್ರಾಸಿಂಗ್​ ವೇಳೆ ಎರಡು ಪ್ಯಾಸೆಂಜರ್ ​ರೈಲುಗಳ ಡಿಕ್ಕಿ

Spread the love

ವಿಜಯನಗರ (ಆಂಧ್ರಪ್ರದೇಶ): ರಾಜ್ಯದ ವಿಜಯನಗರ ಜಿಲ್ಲೆಯ ಕೊತ್ತವಲಸ ಮಂಡಲದ ಕಂಟಕಪಲ್ಲಿಯಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದೆ. ಕ್ರಾಸಿಂಗ್​ ಸಂದರ್ಭದಲ್ಲಿ 2 ಪ್ಯಾಸೆಂಜರ್​ ರೈಲು ಮುಖಾಮುಖಿ ಡಿಕ್ಕಿ ಹೊಡೆದಿವೆ.

ಹಳಿ ದಾಟುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, 6 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

 

ಅಪಘಾತದ ಪರಿಣಾಮ ರಾಯಗಡ ಪ್ಯಾಸೆಂಜರ್ ರೈಲಿನ 3 ಬೋಗಿಗಳು ಹಳಿ ತಪ್ಪಿವೆ. ಇನ್ನು ವಿದ್ಯುತ್​ ತಂತಿಗಳು ತುಂಡಾಗಿ ಬಿದ್ದು ಘಟನಾ ಸ್ಥಳದಲ್ಲಿ ಕತ್ತಲು ಆವರಿಸಿದೆ. ಸ್ಥಳಕ್ಕೆ ರೈಲ್ವೆ ರಕ್ಷಣಾ ಸಿಬ್ಬಂದಿ ಹಾಗೂ ಪೊಲೀಸರು ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಡಿಕ್ಕಿ ರಭಸಕ್ಕೆ ರೈಲಿನ ಬೋಗಿಗಳು ಒಂದರ ಮೇಲೊಂದರಂತೆ ಬಿದ್ದಿವೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ಸಹಾಯವಾಣಿಗಳು: 0891 2746330, 0891 2744619

ಸಹಾಯವಾಣಿಗಳು: 81060 53051, 81060 53052, 8500041670, 8500041671

ರೈಲ್ವೆ ಸಹಾಯವಾಣಿಗಳು: 83003 83004, 85005 85006


Spread the love

About Laxminews 24x7

Check Also

ಶಕ್ತಿ ಯೋಜನೆ ಟಿಕೇಟ್ ನೀಡಲು ಹಣ ನೀಡಿ…

Spread the love ಶಕ್ತಿ ಯೋಜನೆ ಟಿಕೇಟ್ ನೀಡಲು ಹಣ ನೀಡಿ… ಬೆಳಗಾವಿಯಲ್ಲಿ ಪ್ರಯಾಣಿಕರೊಂದಿಗೆ ಸಾರಿಗೆ ಬಸ್ ಕಂಡಕ್ಟರ್ ಕಿರಿಕ್…ತರಾಟೆಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ