Breaking News
Home / ರಾಜಕೀಯ (page 259)

ರಾಜಕೀಯ

ಸಿದ್ದರಾಮಯ್ಯ ನೇತೃತ್ವದಲ್ಲಿ 5 ವರ್ಷ ಸರ್ಕಾರ ಸ್ಥಿರ : ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ

ಸಿದ್ದರಾಮಯ್ಯ ನೇತೃತ್ವದಲ್ಲಿ ಐದು 5 ಸರ್ಕಾರ ಸ್ಥಿರ : ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ ಗೋಕಾಕ : ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ 5 ವರ್ಷ ಸ್ಥಿರವಾಗಿರುತ್ತದೆ, ಯಾವುದೇ ಆಪರೇಷನ್ ಇಲ್ಲ ಎಲ್ಲವೂ ಊಹಾಪೋಹ ಅಷ್ಟೇ ಎಂದು ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ ಅವರು ತಿಳಿಸಿದ್ದಾರೆ. ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಸರ್ಕಾರ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸ್ಥಿರವಾಗಿರುತ್ತದೆ, ಯಾವುದೇ ಆಪರೇಷನ್ ಕಮಲ …

Read More »

ಪೊಲೀಸ್​ ಮನೆಯಲ್ಲಿ ಚಿನ್ನಾಭರಣ ಕದಿಯುವ ವೇಳೆ ಖಾಕಿ ಕೈಗೆ ರೆಡ್​ ಹ್ಯಾಂಡಾಗಿ ಸಿಕ್ಕಿಬಿದ್ದ ಕಳ್ಳರು

ತುಮಕೂರು: ಮನೆಯೊಂದರಲ್ಲಿ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡ ಖದೀಮರು ಹಾಡಹಗಲೇ ಬೀಗ ಒಡೆದು ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದಿರುವ ಘಟನೆ ಜಿಲ್ಲೆಯ ಶಿರಾ ನಗರದ ವಿದ್ಯಾನಗರದಲ್ಲಿ ಭಾನುವಾರ ನಡೆದಿದೆ. ಪೊಲೀಸ್ ಸಿಬ್ಬಂದಿಯೊಬ್ಬರ ಮನೆಗೆ ನುಗ್ಗಿ ಚಿನ್ನಾಭರಣ ದೋಚುವಾಗಲೇ ಖತರ್ನಾಕ್ ಕಳ್ಳರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಬಡವನಹಳ್ಳಿ ಪೊಲೀಸ್‌ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಮಹೇಶ್ ಅವರು ಕುಟುಂಬ ಸಮೇತ ಹೊರಗೆ ಹೋಗಿದ್ದರು. ಕಾರೊಂದರಲ್ಲಿ ಬಂದಿದ್ದ ನಾಲ್ವರು ಖದೀಮರು ಮನೆ ಬಾಗಿಲಿಗೆ ಬೀಗ ಹಾಕಿದ್ದನ್ನು ಗಮನಿಸಿದ್ದಾರೆ. ಕೂಡಲೇ …

Read More »

ತಾಯಿಯನ್ನೇ ಕೊಲೆ ಮಾಡಿದ ಆರೋಪ: ಪುತ್ರನ ಬಂಧನ

ಮಂಗಳೂರು: ಕಟೀಲು ಸಮೀಪದ ಕೊಂಡೇಲಾ ಗ್ರಾಮದ ದುರ್ಗಾ ನಗರ ಎಂಬಲ್ಲಿ ರತ್ನ ಶೆಟ್ಟಿ (60) ಮನೆಯ ಕೊಠಡಿಯೊಳಗೆ ಅಸಹಜವಾಗಿ ಸಾವನ್ನಪ್ಪಿದ್ದರು. ಕೊಲೆ ಆರೋಪದ ಮೇಲೆ ಆಕೆಯ ಮಗನನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ರವಿರಾಜ್ ಶೆಟ್ಟಿ(33) ಬಂಧಿತ ಆರೋಪಿ. ರತ್ನ ಶೆಟ್ಟಿ ಅವರು ಕಟೀಲು ದುರ್ಗಾ ನಗರದ ಬಾಲಕೃಷ್ಣ ಎಂಬವರ ಮನೆಯ ಬದಿಯ ಕೊಠಡಿಯಲ್ಲಿ ಮಗ ರವಿರಾಜ್ ಜೊತೆ ವಾಸ್ತವ್ಯವಿದ್ದರು. ಆತ ಗಿಡಿಗೆರೆ ಚರ್ಚ್ ಬಳಿಯ ಬಾಲಕೃಷ್ಣ ಎಂಬವರ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ. …

Read More »

ರಾಜ್ಯಾದ್ಯಂತ ವಿವಿಧ ಅಧಿಕಾರಿಗಳಿಗೆ ಲೋಕಾ ಶಾಕ್​: ಬೆಂಗಳೂರು ಸೇರಿ 90 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ತೀವ್ರ ಶೋಧ ಕಾರ್ಯ..

ಬೆಂಗಳೂರು: ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಇಂದು (ಸೋಮವಾರ) ಬೆಳ್ಳಂ ಬೆಳಗ್ಗೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಬರೋಬ್ಬರಿ 90 ಕಡೆಗಳಲ್ಲಿ ವಿವಿಧ ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರು, ಚಿತ್ರದುರ್ಗ, ಕಲಬುರಗಿ, ರಾಯಚೂರು, ಹಾಸನ, ಬೀದರ್, ದೇವದುರ್ಗ ಸೇರಿದಂತೆ ಹಲವು ಜಿಲ್ಲೆಗಳ ಅಧಿಕಾರಿಗಳ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. …

Read More »

2025 ರ ಮಹಾಕುಂಭಕ್ಕೂ ಮೊದಲು ತ್ರಿವೇಣಿ ಪುಷ್ಪದಲ್ಲಿ 108 ಅಡಿ ಎತ್ತರದ ಹನುಮನ ವಿಗ್ರಹ ಪ್ರತಿಷ್ಠಾಪನೆ

ಪ್ರಯಾಗರಾಜ್ (ಉತ್ತರ ಪ್ರದೇಶ): ಪ್ರಯಾಗ್​ರಾಜ್​ನಲ್ಲಿ ‘ನಾಗರ್ ಕೊತ್ವಾಲ್’ ಎಂದು ಆರಾಧಿಸಲ್ಪಡುವ ಹನುಮಂತನ 108 ಅಡಿ ಎತ್ತರದ ವಿಗ್ರಹವು ಯಮುನಾ ತೀರದಲ್ಲಿರುವ ತ್ರಿವೇಣಿ ಪುಷ್ಪ ಪ್ರದೇಶದಲ್ಲಿ 2025ರ ಮಹಾಕುಂಭಕ್ಕೂ ಮುನ್ನ ನೆಲೆಸಲಿದೆ.   ಈ ತ್ರಿವೇಣಿ ಪುಷ್ಪ ಪ್ರದೇಶವನ್ನು ಹರಿದ್ವಾರದ ಪರಮಾರ್ಥ ನಿಕೇತನಕ್ಕೆ 30 ವರ್ಷಗಳ ಗುತ್ತಿಗೆಗೆ ಈಗಾಗಲೇ ಹಸ್ತಾಂತರಿಸಲಾಗಿದೆ. ಈ ಗುತ್ತಿಗೆದಾರರು ಈ ಪ್ರತಿಮೆಯ ನಿರ್ಮಾಣ ಮತ್ತು ವಿಗ್ರಹ ಕಟ್ಟಡಗಳ ರಚನೆಗಳು ಮತ್ತು ಬೇಕಾಗಿರುವ ಸೌಕರ್ಯಗಳ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ತ್ರಿವೇಣಿ ಪುಷ್ಪ …

Read More »

ನವೆಂಬರ್​ 3ರಂದು ‘ಇಂಡಿಯನ್​ 2’ ಸಿನಿಮಾದ ಗ್ಲಿಂಪ್ಸ್​ ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ತಿಳಿಸಿದೆ.

  ‘ಇಂಡಿಯನ್​ 2’ ಎಸ್​ ಶಂಕರ್​ ನಿರ್ದೇಶನದ ಮುಂಬರುವ ತಮಿಳು ಸಿನಿಮಾ ಸಿನಿ ಪ್ರೇಮಿಗಳಲ್ಲಿ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ. ಕಮಲ್​ ಹಾಸನ್​ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಈ ಚಿತ್ರದ ಅಪ್​ಡೇಟ್​ ಹೊರಬಿದ್ದಿದೆ. ನವೆಂಬರ್​ 3ರಂದು ಸಿನಿಮಾದ ಒಂದು ನೋಟವನ್ನು (ಗ್ಲಿಂಪ್ಸ್​) ಚಿತ್ರತಂಡ ಹಂಚಿಕೊಳ್ಳಲಿದೆ ಎಂದು ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ತಿಳಿಸಿದೆ. ಈ ವಿಚಾರವನ್ನು ಹಂಚಿಕೊಳ್ಳಲು ‘ಇಂಡಿಯನ್ 2’ನ ಹೊಸ ಲುಕ್​ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಲೈಕಾ ಪ್ರೊಡಕ್ಷನ್ಸ್ ಮತ್ತು …

Read More »

‘ಶೀ ಈಸ್​ ಇನ್​ ಲವ್​’ ಹಾಡಿಗೆ ಯಶ ಶಿವಕುಮಾರ್ ಜೊತೆ ಪ್ರಜ್ವಲ್ ದೇವರಾಜ್ ರೋಮ್ಯಾನ್ಸ್

ಪ್ರಜ್ವಲ್​ ದೇವರಾಜ್​ ನಟನೆಯ ‘ಗಣ’ ಸಿನಿಮಾದ ‘ಶೀ ಈಸ್​ ಇನ್​ ಲವ್​’ ಎಂಬ ರೊಮ್ಯಾಂಟಿಕ್​ ಹಾಡು ಬಿಡುಗಡೆಯಾಗಿದೆ. ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಟ ಪ್ರಜ್ವಲ್ ದೇವರಾಜ್, ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಾ ಬ್ಯುಸಿಯಾಗಿದ್ದಾರೆ. ಅದರಲ್ಲಿ ಬಹುನಿರೀಕ್ಷಿತ ‘ಗಣ’ ಸಿನಿಮಾ ಕೂಡ ಒಂದು. ಇದೀಗ ಈ ಚಿತ್ರದ ರೊಮ್ಯಾಂಟಿಕ್​ ಹಾಡೊಂದು ರಿಲೀಸ್​ ಆಗಿದೆ. ‘ಶೀ ಈಸ್​ ಇನ್​ ಲವ್​’ ಎಂಬ ಸುಮಧುರ ಹಾಡಿಗೆ ಜನರು …

Read More »

‘ಟಗರು ಪಲ್ಯ’ ಬ್ಲಾಕ್​ಬಸ್ಟರ್​; ಹ್ಯಾಟ್ರಿಕ್​ ಗೆಲುವಿನಲ್ಲಿ ಡಾಲಿ ಧನಂಜಯ್​

‘ಟಗರು ಪಲ್ಯ’ ಬ್ಲಾಕ್​ಬಸ್ಟರ್​ ಹಿಟ್ ಆಗುವುದರೊಂದಿಗೆ​ ಡಾಲಿ ಧನಂಜಯ್​ ಹ್ಯಾಟ್ರಿಕ್​ ಗೆಲುವಿನ ಸಂತಸದಲ್ಲಿದ್ದಾರೆ. ಕನ್ನಡ ಚಿತ್ರರಂಗದ ನಟರಾಕ್ಷಸ ಡಾಲಿ ಧನಂಜಯ್​ ನಟನೆಯ ಜೊತೆಗೆ ಚಿತ್ರ ನಿರ್ಮಾಣದಲ್ಲೂ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವ ಜೊತೆ ತಮ್ಮದೇ ಡಾಲಿ ಪಿಕ್ಚರ್ಸ್​ ಸಂಸ್ಥೆಯಡಿ ಚಿತ್ರ ನಿರ್ಮಿಸುತ್ತಿದ್ದಾರೆ. ಈಗಾಗಲೇ ಎರಡು ಸಿನಿಮಾಗಳಿಗೆ ನಿರ್ಮಾಪಕರಾಗಿ ಸಕ್ಸಸ್​ ಕಂಡಿದ್ದ ಧನಂಜಯ್​ ಇದೀಗ ಮತ್ತೊಂದು ಚಿತ್ರವು ಬ್ಲಾಕ್​ಬಸ್ಟರ್​ ಹಿಟ್​ ಆಗಿದೆ. ಈ ಮೂಲಕ ನಿರ್ಮಾಣದಲ್ಲಿ ದಾಖಲೆ ಬರೆದಿರುವ ಡಾಲಿ …

Read More »

ಶಾಸಕರನ್ನು ಖರೀದಿ ಮಾಡುವುದೇ ಬಿಜೆಪಿಯವರ ಡಿಎನ್‌ಎ ಆಗಿದೆ:ಕೃಷ್ಣ ಬೈರೇಗೌಡ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್​​​ ಶಾಸಕರನ್ನು ಬಿಜೆಪಿಯು ಹಣದ ಆಮಿಷವೊಡ್ಡಿ ಸೆಳೆಯುವ ಪ್ರಯತ್ನ ನಡೆಸುತ್ತಿದೆ ಎಂಬ ಆರೋಪ ಬೆನ್ನಲ್ಲೇ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಪ್ರತಿಕ್ರಿಯಿಸಿದ್ದಾರೆ. ಪ್ರಜಾಪ್ರಭುತ್ವ ದಮನ ಮಾಡುವುದೇ ಬಿಜೆಪಿ ಸಿದ್ಧಾಂತವಾಗಿದೆ. ವಾಮಮಾರ್ಗದ ಮೂಲಕ ಅಧಿಕಾರ ಚುಕ್ಕಾಣಿ ಹಿಡಿಯುವುದು ಹೊಸದೇನಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಸೆಳೆಯುತ್ತಿದೆ ಎಂಬ ಆರೋಪ ಕುರಿತು ಮಾತನಾಡಿದ ಸಚಿವರು, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಶಾಸಕರನ್ನು ಖರೀದಿ ಮಾಡುತ್ತಿಲ್ಲ. 2008 ಹಾಗೂ 2019 …

Read More »

ಬೆಂಗಳೂರಿನಲ್ಲಿ ಕಮಾಂಡ್ ಸೆಂಟರ್ ನಿರ್ಮಾಣ: ಗೃಹ ಸಚಿವ ಜಿ ಪರಮೇಶ್ವರ್

ಮಂಗಳೂರು: ಬೆಂಗಳೂರಿನಲ್ಲಿ ಕಮಾಂಡ್ ಸೆಂಟರ್​ನ್ನು ನಿರ್ಮಿಸಲಾಗುತ್ತಿದೆ. ಈ ಮೂಲಕ ರಾಜ್ಯದ ಎಲ್ಲಾ ಠಾಣೆಗಳಲ್ಲಿ ನಡೆಯುವ ಕೆಲಸವನ್ನು ಕಮಾಂಡ್ ಸೆಂಟರ್ ಮೂಲಕ ವೀಕ್ಷಿಸುವ ಕಾರ್ಯ ಆಗಲಿದೆ ಎಂದು ಗೃಹಸಚಿವ ಡಾ‌. ಜಿ ಪರಮೇಶ್ವರ್ ಹೇಳಿದರು. ನಗರದ ವಾಮಂಜೂರಿನಲ್ಲಿ‌ ಮಂಗಳೂರು ಗ್ರಾಮಾಂತರ ಠಾಣೆಯನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, “ಪೊಲೀಸ್ ಠಾಣೆಗೆ ಬಂದು ಹೋದವರು ಯಾರು, ಪ್ರತೀ ದೂರುಗಳು ಎಫ್‌ಐಆರ್ ಆಗಿದೆಯೇ?, ಇಲ್ಲವೋ?, ದೂರು ನೀಡಲು ಬಂದವರಿಗೆ ಸರಿಯಾದ ಸ್ಪಂದನೆ ದೊರಕಿದೆಯೇ ಎಂಬಿತ್ಯಾದಿ ವಿಚಾರಗಳನ್ನು …

Read More »