Breaking News
Home / ರಾಜಕೀಯ (page 199)

ರಾಜಕೀಯ

ಪೊಲೀಸ್ ಠಾಣೆ ಆವರಣದಲ್ಲಿಯೇ ಮದುವೆ

ಧಾರವಾಡ: ಯುವಕ ಮತ್ತು ಯುವತಿ ಮದುವೆ ವಯಸ್ಸಿಗೆ ಬಂದವರಿದ್ದರೇ, ಧರ್ಮ ಜಾತಿ ಯಾವುದೇ ಇರಲಿ, ಪರಸ್ಪರ ಒಪ್ಪಿ ಮದುವೆ (Love Marriage) ಆಗೋದಕ್ಕೆ ಕಾನೂನಿನಲ್ಲಿ ಒಪ್ಪಿಗೆಯೇ ಇದೆ. ಆದರೆ ಈ ರೀತಿ ಆಗಿದ್ದ ಮದುವೆಯೊಂದನ್ನು ಮುರಿದು, ಪ್ರೇಮಿಗಳನ್ನು ಬೇರ್ಪಡಿಸಲು ಮುಂದಾಗಿರೋ ಪೊಲೀಸರ ಮೇಲೆಯೇ ಬಂದಿತ್ತು. ಕೊನೆಗೆ ಠಾಣೆಯಲ್ಲಿಯೇ ಪೊಲೀಸರು (Dharwad Police) ಜೋಡಿಗೆ ಮದುವೆ ಮಾಡಿ ಕಳುಹಿಸಿದ ಘಟನೆಯೊಂದು ಧಾರವಾಡದಲ್ಲಿ ನಡೆದಿದೆ ಧಾರವಾಡ ತಾಲೂಕಿನ ಬಾಡ ಗ್ರಾಮದ ಮಂಜುನಾಥ್ ಮಾಯಕಾರ …

Read More »

ಭ್ರಷ್ಟರಿಗೆ ‘ಲೋಕಾಯುಕ್ತ’ ಶಾಕ್ : ರಾಜ್ಯದ ಹಲವೆಡೆ ದಾಳಿ,

ಬೆಂಗಳೂರು : ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ 13 ಸರ್ಕಾರಿ ಅಧಿಕಾರಿಗಳ 63 ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ಬೆಂಗಳೂರಿನ ಮೂರು ಸ್ಥಳಗಳು, ಬೀದರ್ ಎರಡು ಸ್ಥಳಗಳು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಚಿಕ್ಕಬಳ್ಳಾಪುರ, ಮೈಸೂರು, ಕೋಲಾರ ಮತ್ತು ಧಾರವಾಡದ ತಲಾ ಒಂದು ಸ್ಥಳಗಳ ಮೇಲೆ 200 ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.   ಜಕ್ಕೂರಿನ ಅಮೃತ್ ಹಳ್ಳಿಯಲ್ಲಿರುವ ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ …

Read More »

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಪ್ತ ಸಂಬಂಧಿಗೂ ಲೋಕಾಯುಕ್ತ ಶಾಕ್‌!

ಕಲಬುರಗಿ : ಮಂಗಳವಾರ ಬೆಳಗ್ಗೆ ಲೋಕಾಯುಕ್ತ ಸಿಬ್ಬಂದಿ (Lokayukta) 13 ಮಂದಿ ಅಧಿಕಾರಿಗಳ ಮನೆ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿದ್ದು, ಅವರ ಪೈಕಿ ಬಿಜೆಪಿ (BJP) ರಾಜ್ಯಾಧ್ಯಕ್ಷ ವಿಜಯೇಂದ್ರ (B Y Vijayendra) ಅವರ ಪತ್ನಿಯ ಸೋದರ ಸಹ ಸೇರಿದ್ದಾರೆಂದು ತಿಳಿದುಬಂದಿದೆ. ಕಲಬುರಗಿಯ (Kalaburagi) ಕರುಣೇಶ್ವರ ಕಾಲನಿಯಲ್ಲಿರುವ ಡಾ. ಪ್ರಭುಲಿಂಗ ಮಾನಕರ್‌ (Dr Prabhulinga Mankar) ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಯಾದಗಿರಿಯ ಜಿಲ್ಲಾ ಆರೋಗ್ಯಾಧಿಕಾರಿಯಾಗಿ …

Read More »

ಪೃಥ್ವಿ ಸಿಂಗ್‌ ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪ್ರತಿಕ್ರಿಯಿಸಿದ್ದಾರೆ.

ಬೆಳಗಾವಿ : ರಮೇಶ್‌ ಜಾರಕಿಹೊಳಿ ಆಪ್ತ ಬಿಜೆಪಿ ಮುಖಂಡ ಪೃಥ್ವಿ ಸಿಂಗ್‌ ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪ್ರತಿಕ್ರಿಯಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೃಥ್ವಿ ಸಿಂಗ್‌ ಗೆ ಚಾಕು ಇರಿತ ಪ್ರಕರಣ ರಾಜಕೀಯ ಪ್ರೇರಿತವೋ ಅಥವಾ ಶಡ್ಯಂತ್ರವೋ ಗೊತ್ತಾಗಬೇಕು. ಆತ ಮೋಸ್ಟ್‌ ಬೋಗಸ್‌ ಎಂದಿದ್ದಾರೆ. ನಮ್ಮ ಕುಟುಂಬದವರೆಲ್ಲರೂ ಶಾಂತಿ ಪ್ರಿಯರು. ಎಸ್ ಪಿ ಜೊತೆ ಮಾತನಾಡಿದ್ದೇನೆ. ಚಾಕು ಇರಿತದ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಬೇಕಿದೆ. …

Read More »

ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚುತ್ತೇನೆ: ಸಿದ್ದರಾಮಯ್ಯ ಹೇಳಿಕೆಗೆ ಸಿಡಿದೆದ್ದ ಬಿಜೆಪಿ ನಾಯಕರು

ಸೋಮವಾರ (ಡಿ.04) ರಂದು ಮುಖ್ಯಮಂತ್ರಿಗಳು ಆಡಿದ ಮಾತು ದೇಶ ಮತ್ತು ರಾಜ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹಿಂದೆ ಟಿಪ್ಪು (Tippu) ಮೇಲೆ ಅತಿಯಾದ ಪ್ರೀತಿ ತೋರಿಸಿ ಏನಾಯಿತು? ಹಿಂದೂಗಳನ್ನು ಎರಡನೇ ದರ್ಜೆ ಪ್ರಜೆಗಳ ರೀತಿ ನೋಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashok) ವಾಗ್ದಾಳಿ ಮಾಡಿದರು. ಸುವರ್ಣಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ಸಮಾನತೆ ಇರಬೇಕು. ಟಿಪ್ಪು ಜಯಂತಿ, ಶಾಯಿ ಭಾಗ್ಯ, ಮುಸ್ಲಿಂ ವಿವಾಹಕ್ಕೆ ಧನ …

Read More »

ಜಲಶಕ್ತಿ ಯೋಜನೆ ಅಡಿ ಗ್ರಾಮೀಣ ಪ್ರದೇಶದ ಶೇ 71 ಮನೆಗಳಿಗೆ ನಲ್ಲಿ ನೀರಿನ ಸೌಕರ್ಯ

ನವದೆಹಲಿ: ಜಲಶಕ್ತಿ ಯೋಜನೆ ಅಡಿ ದೇಶದಾದ್ಯಂತ ಗ್ರಾಮೀಣ ಪ್ರದೇಶದ ಶೇ 71 ಮನೆಗಳಿಗೆ ನಲ್ಲಿ ನೀರಿನ ಸೌಕರ್ಯ ಕಲ್ಪಿಸಲಾಗಿದೆ ಎಂದು ರಾಜ್ಯಸಭೆಗೆ ಸೋಮವಾರ ಲಿಖಿತ ಉತ್ತರದ ಮೂಲಕ ತಿಳಿಸಲಾಯಿತು. ಸೆಪ್ಟೆಂಬರ್‌ 30ಕ್ಕೆ ಅನ್ವಯಿಸಿ, ಗ್ರಾಮೀಣ ಪ್ರದೇಶಗಳ ಪ್ರತಿ ಮನೆಗಳಿಗೂ ನಲ್ಲಿ ನೀರಿನ ಸೌಕರ್ಯ ಕಲ್ಪಿಸಲಾಗಿದೆ ಎಂದು ಒಂಬತ್ತು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ವರದಿ ನೀಡಿವೆ. ಅದರಂತೆ ಗೋವಾ, ಗುಜರಾತ್‌, ಹರಿಯಾಣ, ಹಿಮಾಚಲ ಪ್ರದೇಶ, ಪಂಜಾಬ್‌ ಮತ್ತು ತೆಲಂಗಾಣ ರಾಜ್ಯಗಳು ಹಾಗೂ …

Read More »

ಈ ಅಧಿವೇಶನದಲ್ಲೂ ವಿಧಾನಪರಿಷತ್‌ ಕಲಾಪ ಅಧಿಕೃತ ವಿರೋಧ ಪಕ್ಷದ ನಾಯಕನಿಲ್ಲ

ಬೆಳಗಾವಿ: ಈ ಅಧಿವೇಶನದಲ್ಲೂ ವಿಧಾನಪರಿಷತ್‌ ಕಲಾಪ ಅಧಿಕೃತ ವಿರೋಧ ಪಕ್ಷದ ನಾಯಕನಿಲ್ಲದೆಯೇ ನಡೆಯುವ ಸಾಧ್ಯತೆ ಇದೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿ ಆರ್. ಅಶೋಕ ಅವರನ್ನು ಆಯ್ಕೆ ಮಾಡಿದಾಗಲೇ, ಪರಿಷತ್ತಿಗೂ ಆಯ್ಕೆಯಾಗಲಿದೆ ಎಂದು ಹೇಳಲಾಗಿತ್ತು. ಬೆಳಗಾವಿ ಅಧಿವೇಶನದ ಎರಡು ದಿನ ಮೊದಲು ಪಕ್ಷದ ವರಿಷ್ಠರು ಹೆಸರು ಸೂಚಿಸಬಹುದು ಎನ್ನಲಾಗಿತ್ತು.   ಬಿಜೆಪಿ ರಾಜ್ಯ ನಾಯಕರು ಮೂವರ ಹೆಸರುಗಳನ್ನು ದೆಹಲಿಗೆ ಕಳುಹಿಸಿದ್ದು, ಯಾವುದಕ್ಕೂ ವರಿಷ್ಠರು ಒಪ್ಪಿಗೆ ನೀಡಿಲ್ಲ. ಈ ಬಾರಿಯೂ ಆಯ್ಕೆ ಆಗುವ …

Read More »

ರಾಜ್ಯದಲ್ಲಿರುವ ವಿಶೇಷ ಮಕ್ಕಳ ಶಾಲೆಯ ಶಿಕ್ಷಕರ ವೇತನ ತಾರತಮ್ಯ ನಿವಾರಣೆ ಮಾಡಬೇಕು

ಬೆಳಗಾವಿ: ರಾಜ್ಯದಲ್ಲಿರುವ ವಿಶೇಷ ಮಕ್ಕಳ ಶಾಲೆಯ ಶಿಕ್ಷಕರ ವೇತನ ತಾರತಮ್ಯ ನಿವಾರಣೆ ಮಾಡಬೇಕು, ಎಲ್ಲ ಸರ್ಕಾರಿ ಶಾಲೆಗಳ ಮಾದರಿಯಲ್ಲಿ ತಮ್ಮನ್ನೂ ಪರಿಗಣಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ವಿಶೇಷ ಶಾಲೆಗಳ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿ, ಸಮೀಪದ ಸುವರ್ಣ ವಿಧಾನಸೌಧದ ಬಳಿ ಸೋಮವಾರ ಧರಣಿ ನಡೆಸಿದರು.   ರಾಜ್ಯದಲ್ಲಿ 34 ಅನುದಾನಿತ ಶಾಲೆಗಳು, 136 ಶಾಲೆಗಳು ಶಿಶುಕೇಂದ್ರಿದ ಎಂಬ ಅವೈಜ್ಞಾನಿಕ ಯೋಜನೆ ಅಡಿ ಇವೆ. 1982ರ ಅಧಿನಿಯಮದ ಪ್ರಕಾರ ಇರುವ 34 …

Read More »

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಶ್ರೀಮಂತ ಇತಿಹಾಸವಿದೆ.

ಚನ್ನಮ್ಮನ ಕಿತ್ತೂರು: ‘ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಶ್ರೀಮಂತ ಇತಿಹಾಸವಿದೆ. ಅದನ್ನು ಸಾಹಿತಿ, ಕವಿಗಳು ಅಧ್ಯಯನ ಮಾಡಬೇಕು. ನಿರಂತರ ಓದುವಿಕೆ ಶ್ರೇಷ್ಠ ಸಾಹಿತ್ಯ ರಚನೆಗೆ ಸಹಕಾರಿ’ ಎಂದು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.   ಇಲ್ಲಿಯ ಕಲ್ಮಠದ ಶಂಕರ ಚಂದರಗಿ ಸಭಾಭವನದಲ್ಲಿ ಸುವರ್ಣ ಕರ್ನಾಟಕ-50 ಸಂಭ್ರಮದ ಅಂಗವಾಗಿ ಭಾನುವಾರ ನಡೆದ ಜಿಲ್ಲಾ ಮಟ್ಟದ ಕವಿಗೋಷ್ಠಿಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ‘ಕುವೆಂಪು ಅವರ ಸಾಹಿತ್ಯದಲ್ಲಿ ನಿಸರ್ಗ ಶ್ರೀಮಂತಿಕೆ …

Read More »

ಸಮಾಜಕ್ಕೆ ಛಾಯಾಗ್ರಾಹಕರ ಕೊಡುಗೆ ಅನನ್ಯ: ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ

ಬೈಲಹೊಂಗಲ: ‘ಪ್ರತಿಯೊಬ್ಬ ಛಾಯಾಗ್ರಾಹಕರು ತಮ್ಮ ವೃತ್ತಿ ಬದುಕಿನ ಜೊತೆಗೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು’ ಎಂದು ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೇಳಿದರು. ಪಟ್ಟಣದ ಗಣಾಚಾರಿ ಕಲ್ಯಾಣ ಮಂಟಪದಲ್ಲಿ ನಡೆದ ತಾಲ್ಲೂಕು ಪೋಟೊಗ್ರಾಫರ್ ಮತ್ತು ವಿಡಿಯೊಗ್ರಾಫರ್ ಸಂಘದ 8ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.   ‘ಸ್ಥಳೀಯವಾಗಿಯು ಸಾಕಷ್ಟು ಹಿರಿಯ ಛಾಯಾಗ್ರಾಹಕರು ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕಿರಿಯ ಛಾಯಾಗ್ರಾಹಕರು ಮುನ್ನಡೆಯಬೇಕು. ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಬೇಕು’ …

Read More »