Home / ರಾಜಕೀಯ / ಜಲಶಕ್ತಿ ಯೋಜನೆ ಅಡಿ ಗ್ರಾಮೀಣ ಪ್ರದೇಶದ ಶೇ 71 ಮನೆಗಳಿಗೆ ನಲ್ಲಿ ನೀರಿನ ಸೌಕರ್ಯ

ಜಲಶಕ್ತಿ ಯೋಜನೆ ಅಡಿ ಗ್ರಾಮೀಣ ಪ್ರದೇಶದ ಶೇ 71 ಮನೆಗಳಿಗೆ ನಲ್ಲಿ ನೀರಿನ ಸೌಕರ್ಯ

Spread the love

ವದೆಹಲಿ: ಜಲಶಕ್ತಿ ಯೋಜನೆ ಅಡಿ ದೇಶದಾದ್ಯಂತ ಗ್ರಾಮೀಣ ಪ್ರದೇಶದ ಶೇ 71 ಮನೆಗಳಿಗೆ ನಲ್ಲಿ ನೀರಿನ ಸೌಕರ್ಯ ಕಲ್ಪಿಸಲಾಗಿದೆ ಎಂದು ರಾಜ್ಯಸಭೆಗೆ ಸೋಮವಾರ ಲಿಖಿತ ಉತ್ತರದ ಮೂಲಕ ತಿಳಿಸಲಾಯಿತು.

ಸೆಪ್ಟೆಂಬರ್‌ 30ಕ್ಕೆ ಅನ್ವಯಿಸಿ, ಗ್ರಾಮೀಣ ಪ್ರದೇಶಗಳ ಪ್ರತಿ ಮನೆಗಳಿಗೂ ನಲ್ಲಿ ನೀರಿನ ಸೌಕರ್ಯ ಕಲ್ಪಿಸಲಾಗಿದೆ ಎಂದು ಒಂಬತ್ತು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ವರದಿ ನೀಡಿವೆ.

ಅದರಂತೆ ಗೋವಾ, ಗುಜರಾತ್‌, ಹರಿಯಾಣ, ಹಿಮಾಚಲ ಪ್ರದೇಶ, ಪಂಜಾಬ್‌ ಮತ್ತು ತೆಲಂಗಾಣ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್‌ ಮತ್ತು ನಿಕೋಬಾರ್‌, ದಾದ್ರ ನಗರ ಹವೇಲಿ, ದಿಯು ದಾಮನ್‌, ಪುದುಚೆರಿಯ ಗ್ರಾಮಗಳ ಪ್ರತಿ ಮನೆಗಳಿಗೂ ನಲ್ಲಿ ನೀರಿನ ಸೌಲಭ್ಯ ಕಲ್ಪಿಸಲಾಗಿದೆ ಎಂದು ಕೇಂದ್ರ ಜಲಶಕ್ತಿ ರಾಜ್ಯ ಖಾತೆ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದರು.

ನವೆಂಬರ್‌ 29ಕ್ಕೆ ಅನ್ವಯಿಸಿ, ದೇಶದ 19.24 ಕೋಟಿ ಗ್ರಾಮೀಣ ಕುಟುಂಬಗಳ ಪೈಕಿ, ಸುಮಾರು 13.69 ಕೋಟಿ ಕುಟುಂಬಗಳು ನಲ್ಲಿ ನೀರಿನ ಸೌಕರ್ಯ ಪಡೆದಿವೆ.

10.46 ಕೋಟಿ ಹೆಚ್ಚುವರಿ ನಲ್ಲಿ ನೀರಿನ ಸೌಕರ್ಯಗಳನ್ನು ಗ್ರಾಮೀಣ ಪ್ರದೇಶಗಳ ಕುಟುಂಬಗಳಿಗೆ ಒದಗಿಸಲಾಗುವುದು ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವರದಿ ನೀಡಿವೆ ಎಂದರು.

2019ರ ಆಗಸ್ಟ್‌ 15ರಂದು ಜಲ ಜೀವನ್‌ ಮಿಷನ್‌ ಘೋಷಿಸುವ ವೇಳೆ ಗ್ರಾಮೀಣ ಪ್ರದೇಶದಲ್ಲಿ ಶೇ 17 ಮನೆಗಳಿಗೆ ಮಾತ್ರ ನಲ್ಲಿ ನೀರಿನ ಸೌಕರ್ಯವಿತ್ತು ಎಂದು ತಿಳಿಸಿದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ