Breaking News
Home / ರಾಜಕೀಯ (page 1805)

ರಾಜಕೀಯ

ಸಾಮಾಜಿಕ ಅಂತರ ಕಾಯ್ದುಕೊಳ್ಳೋಣ, ನವ ಭಾರತ ಕಟ್ಟೋಣ” ಸೌ. ಶಶಿಕಲಾ ಜೊಲ್ಲೆ

ಚಿಕ್ಕೋಡಿ “ಸಾಮಾಜಿಕ ಅಂತರ ಕಾಯ್ದುಕೊಳ್ಳೋಣ, ನವ ಭಾರತ ಕಟ್ಟೋಣ”ಬೆಂಗಳೂರಿನಲ್ಲಿ ನಡೆದ ವಿಧಾನ ಸಭೆಯ ಅಧಿವೇಶನ ಮುಗಿಸಿ ಬಂದ ತಕ್ಷಣ, ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕೊರೋನಾ ವೈರಾಣು ಹರಡುವುದನ್ನು ತಪ್ಪಿಸುವ ಸಲುವಾಗಿ, ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಕೊಂಡು, ಒಬ್ಬರಿಗೊಬ್ಬರು ಅಂತರ ಕಾಯ್ದುಕೊಂಡು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ …

Read More »

ಹೋಂ ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿ ಕಾನೂನು ಉಲ್ಲಂಘನೆ- ಮಡಿಕೇರಿಯಲ್ಲಿ ಮೊದಲ ಪ್ರಕರಣ ದಾಖಲು

ಮಡಿಕೇರಿ: ಮಹಾಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಆದರೆ ದುಬೈನಿಂದ ಬಂದು ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದರೂ ಸಾಮಾನ್ಯನಂತೆ ಓಡಾಡಿಕೊಂಡಿದ್ದ ವ್ಯಕ್ತಿಯ ವಿರುದ್ಧ ಕೊಡಗಿನಲ್ಲಿ ಮೊದಲ ಪ್ರಕರಣ ದಾಖಲಾಗಿದೆ. ಮಡಿಕೇರಿ ನಗರದ ಗಣಪತಿ ಬೀದಿಯ 39 ವರ್ಷದ ವ್ಯಕ್ತಿ ಕಳೆದ ಒಂದು ವಾರದ ಹಿಂದೆ ದುಬೈನಿಂದ ಬಂದಿದ್ದನು. ಬಳಿಕ ಆಸ್ಪತ್ರೆಯಲ್ಲಿ ಪರಿಶೀಲನೆಗೆ ಒಳಪಟ್ಟು ಹೋಂ ಕ್ವಾರಂಟೈನ್ ನಲ್ಲಿದ್ದನು. ಆದರೆ ಆ ವ್ಯಕ್ತಿ ಮನೆಯಲ್ಲಿ ಸುಮ್ಮನಿರುವುದು ಬಿಟ್ಟು ಮಡಿಕೇರಿಯಲ್ಲಿ ಓಡಾಡಿಕೊಂಡಿದ್ದನು …

Read More »

ಮನೆ ಬಾಗಿಲಿಗೆ ತರಕಾರಿ, ಹೂ, ಹಣ್ಣು ಬರುತ್ ಮಾರ್ಕೆಟ್‍ಗೆ ಯಾರೂ ಬರಬೇಡಿತ:ಗದಗ ಎಸ್.ಪಿ ಯತೀಶ್

ಗದಗ: ಲಾಕ್‍ಡೌನ್ ಮುಗಿಯುವರೆಗೆ ತರಕಾರಿ ಮಾರ್ಕೆಟ್ ಬಂದ್ ಮಾಡಲಾಗಿದ್ದು, ವ್ಯಾಪಾರಸ್ಥರು ತಳ್ಳುವ ಗಾಡಿ ಮೂಲಕ ನಗರದ ವಾರ್ಡ್‍ಗಳಿಗೆ ಸಂಚರಿಸಿ ಮಾರಾಟ ಮಾಡಬೇಕು ಎಂದು ಎಸ್.ಪಿ ಯತೀಶ್ ತಿಳಿಸಿದರು. ನಗರಸಭೆ ಆವರಣದಲ್ಲಿ ತರಕಾರಿ ಹಾಗೂ ಬೀದಿಬದಿ ವ್ಯಾಪಾರಸ್ಥರೊಂದಿಗೆ ಸಭೆ ನಡೆಸಿದರು. ಈ ಸಭೆನಲ್ಲಿ ಅಧಿಕಾರಿಗಳು ಹಾಗೂ ವ್ಯಾಪಾರಸ್ಥರು ಅಂತರ ಕಾಯ್ದುಕೊಂಡಿದ್ದರು. ಪ್ರತಿ ವಾರ್ಡ್‍ಗೆ ಎಂಟು ಜನ ತರಕಾರಿ ಮಾರಾಟಗಾರರನ್ನು ನೇಮಕ ಮಾಡಲಾಗುತ್ತದೆ. ಯಾರ್ಯಾರು ಯಾವ ಯಾವ ಏರಿಯಾ ಎಂಬುದನ್ನು ತರಕಾರಿ ಹಾಗೂ …

Read More »

ಉಡುಪಿ ಡಿಸಿ ಕೈ ಸೇರಿದ ವೈದ್ಯಕೀಯ ವರದಿ – ಕೊರೊನಾ ದೃಢ

ಉಡುಪಿ: ಜಿಲ್ಲೆಯಲ್ಲಿ ಪ್ರಥಮ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಪ್ರಾಥಮಿಕ ಮಾಹಿತಿಯಲ್ಲಿ ಕೊರೊನಾ ಇರುವುದು ಸ್ಪಷ್ಟವಾಗಿದ್ದು, ಹಾಸನದಿಂದ ಬಂದ ವರದಿ ಕೂಡ ವ್ಯಕ್ತಿಯನ್ನು ಕೊರೊನಾ ಪಾಸಿಟಿವ್ ಎಂಬುದನ್ನು ದೃಢ ಮಾಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಜಿ.ಜಗದೀಶ್, ರಾಜ್ಯದ ನೋಡೆಲ್ ಅಧಿಕಾರಿ ಜೊತೆ ನಾನು ಮಾತನಾಡಿದ್ದೇನೆ. ಡಾಕ್ಟರ್ ಅರುಂಧತಿ ಚಂದ್ರಶೇಖರ್ ಜೊತೆ ಸಂಪರ್ಕದಲ್ಲಿದ್ದೇನೆ. ಆ ವ್ಯಕ್ತಿಯ ಚಲನವಲನಗಳನ್ನು ಟ್ರ್ಯಾಕ್ ಮಾಡುತ್ತಿದ್ದೇವೆ. ಆತ ಬಂದ ವಿಮಾನದ ಬಗ್ಗೆ ಕೂಡ ಪರಿಶೀಲನೆ …

Read More »

ಆಹಾರ, ತರಕಾರಿ ಸುಗಮ ಸರಬರಾಜಿಗೆ ವ್ಯವಸ್ಥೆ – ಡಿಸಿ ಕೆ.ಬಿ ಶಿವಕುಮಾರ್

ಶಿವಮೊಗ್ಗ: ಜಿಲ್ಲೆಯ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಾಪ್‍ಕಾಮ್ಸ್ ನೆರವಿನಿಂದ ಪ್ರತಿ ವಾರ್ಡಿನಲ್ಲಿ ತರಕಾರಿ ಮಾರಾಟ ಮಾಡಲು ಹಾಗೂ ಪ್ಯಾಕ್ಡ್ ಆಹಾರ ಮನೆ ಬಾಗಿಲಿಗೆ ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ತರಕಾರಿ, ಹಾಲು ಹಣ್ಣು, ಮೀನು, ಮಾಂಸ, ದಿನಸಿ ವಸ್ತುಗಳಂತಹ ಅವಶ್ಯಕ ವಸ್ತುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೋಳಿ ಜ್ವರ …

Read More »

ಜನರು ಮನೆಯಿಂದ ಹೊರ ಬರದಂತೆ ಚಿಕ್ಕೋಡಿ ಪೊಲೀಸರಿಂದ ಹೊಸ ಪ್ಲಾನ್

ಚಿಕ್ಕೋಡಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 14ರವರೆಗೆ ದೇಶಾದ್ಯಂತ ಲಾಕ್‍ಡೌನ್ ಘೋಷಿಸಿದ್ದಾರೆ. ಆದರೆ ಅನೇಕರು ತರಕಾರಿ ಖರೀದಿಗೆ ಅಂತ ಮನೆಯಿಂದ ಹೊರ ಬರುತ್ತಿದ್ದಾರೆ. ಹೀಗಾಗಿ ಚಿಕ್ಕೋಡಿ ಪೊಲೀಸರು ಪ್ಲಾನ್ ಮಾಡಿ ಮನೆಯಿಂದ ಜನರು ಹೊರ ಬರದಂತೆ ತಡೆಯಲು ಪ್ರಯತ್ನಿಸುತ್ತಿದ್ದಾರೆ. ಪೊಲೀಸರು ತಳ್ಳುವ ಗಾಡಿ ಅಥವಾ ಆಟೋಗಳಲ್ಲಿ ತರಕಾರಿ ಮಾರುವ ಒಟ್ಟು 12 ಜನರ ಹೆಸರು ಹಾಗೂ ಮೊಬೈಲ್ ನಂಬರ್ ಪಡೆದುಕೊಂಡಿದ್ದಾರೆ. ಅವರಿಗೆ ನಗರದ ವಿವಿಧ …

Read More »

ಕರ್ಫ್ಯೂ ಪಾಲಿಸಿದರೆ ಮಾತ್ರ ವೈರಾಣು ಹರಡುವುದನ್ನು ನಿಯಂತ್ರಿಸಬಹುದು: ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿರುವ 21 ದಿನಗಳ ಕರ್ಫ್ಯೂಗೆ ಸಾರ್ವಜನಿಕರು ಬೆಂಬಲಿಸಬೇಕು. ಸ್ವಯಂ ನಿಯಂತ್ರಣವನ್ನು ಹೇರಿಕೊಂಡು ಅನಗತ್ಯವಾಗಿ ಮನೆಯಿಂದ ಹೊರಬರದೆ ವೈರಾಣು ಹರಡುವುದನ್ನು ನಿಯಂತ್ರಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಮನವಿ ಮಾಡಿಕೊಂಡಿದ್ದಾರೆ. ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣದಲ್ಲಿ ಅಗ್ನಿಶಾಮಕದಳದಿಂದ ನಡೆಸಲಾದ ಡಿಸ್‍ಇನ್ಫೆಕ್ಷನ್ ಸ್ವಚ್ಛತಾ ಕಾರ್ಯ ವೀಕ್ಷಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಅಕ್ಷರಶಃ ಕರ್ಫ್ಯೂವನ್ನು ಪಾಲಿಸಿದಾಗ ಮಾತ್ರ …

Read More »

ಗ್ರಾಮಕ್ಕೆ ಯಾರೂ ಬರುವಂತಿಲ್ಲ, ಹೋಗುವಂತಿಲ್ಲ :ಊರಿಗೆ ದಿಗ್ಭಂಧನ

ಗದಗ: ಕೊರೊನಾ ವೈರಸ್ ಹರಡುವುದನ್ನ ತಡೆಗಟ್ಟಲು ಜಿಲ್ಲೆಯ ಕೊಟುಮಚಗಿ ಹಾಗೂ ರೋಣ ತಾಲೂಕಿನ ಗುನಗುಂಡಿ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ದಿಗ್ಭಂಧನ ಹಾಕಿಕೊಂಡಿದ್ದಾರೆ. ಇಡೀ ದೇಶವೇ ಲಾಕ್‍ಡೌನ್ ಮಾಡಬೇಕೆಂಬ ಪ್ರಧಾನಿ ಮೋದಿ ಅವರ ಮನವಿಗೆ ಗದಗ ಜಿಲ್ಲೆ ಕೊಟುಮಚಗಿ ಗ್ರಾಮದ ಜನರು ಸಖತ್ ರೆಸ್ಪಾನ್ಸ್ ಮಾಡಿದ್ದಾರೆ. ಇಂದಿನಿಂದ ಏಪ್ರಿಲ್ 14 ರವರೆಗೆ ಕೊಟುಮಚಗಿ ಗ್ರಾಮಕ್ಕೆ ಬೇರೆ ಗ್ರಾಮಗಳ ಜನರು ಬರುವಂತಿಲ್ಲ. ಈ ಗ್ರಾಮದ ಜನರು ಸಹ ಬೇರೆ ಕಡೆ ಹೋಗುವಂತಿಲ್ಲ ಎಂದು …

Read More »

21 ದಿನಗಳ ಲಾಕ್‌ಡೌನ್‌ನಿಂದಾಗಿ ಭಾರತ 9 ಲಕ್ಷ ಕೋಟಿ ನಷ್ಟ ಅನುಭವಿಸಲಿದೆ; ಆತಂಕ ವ್ಯಕ್ತಪಡಿಸಿದ ಆರ್ಥಿಕ ತಜ್ಞರು

ಮುಂಬೈ (ಮಾರ್ಚ್‌ 25); ಕೊರೋನಾ ಸೋಂಕು ಹಬ್ಬದಂತೆ ತಡೆಯುವ ಸಲುವಾಗಿ ರಾಷ್ಟ್ರವ್ಯಾಪಿ ಕರೆ ನೀಡಿರುವ 21`ದಿನಗಳ ಲಾಕ್‌ಡೌನ್‌ನಿಂದಾಗಿ ಭಾರತ ಸುಮಾರು 120 ಬಿಲಿಯನ್ (ಭಾರತೀಯ ಹಣದಲ್ಲಿ 9 ಲಕ್ಷ) ಕಳೆದುಕೊಳ್ಳಲಿದೆ. ಅಂದರೆ ಅಂದಾಜು ಭಾರತದ ಶೇ. 4 ರಷ್ಟು ಜಿಡಿಪಿ ನಷ್ಟವಾಗಲಿದೆ. ಹೀಗಾಗಿ ಕೇಂದ್ರ ಸರ್ಕಾರ ವಿಶೇಷ ಆರ್ಥಿಕ ಪ್ಯಾಕೇಜ್‌ ಅನ್ನು ಘೋಷಿಸುವ ಅಗತ್ಯವಿದೆ ಎಂದು ಆರ್ಥಿಕ ತಜ್ಞರು ಸೂಚನೆ ನೀಡಿದ್ದಾರೆ. ಏಪ್ರಿಲ್ 3 ರಂದು ತನ್ನ ಮೊದಲ ದ್ವಿ-ಮಾಸಿಕ ನೀತಿ …

Read More »

ಕೊರೋನಾ ವಿರುದ್ಧ ಹೋರಾಟಕ್ಕೆ 6 ತಿಂಗಳ ಸಂಬಳ ನೀಡಿದ ಕುಸ್ತಿಪಟು..!

ದೇಶದಾದ್ಯಂತ ಕೊರೋನಾ ಭೀತಿ ಆವರಿಸಿದೆ. ಈ ಸಾಂಕ್ರಾಮಿಕ ಸೋಂಕು ಹರಡದಂತೆ ತಡೆಯಲು ಈಗಾಗಲೇ ಕೇಂದ್ರ ಸರ್ಕಾರ 21 ದಿನಗಳ ಕಾಲ ದೇಶದಲ್ಲಿ ಲಾಕ್​ಡೌನ್ ಹೇರಿದೆ. ತ್ತ ಕೊರೋನಾ ಭೀತಿಯಿಂದ ಕ್ರೀಡಾಕೂಟಗಳು ರದ್ದಾಗಿವೆ. ಕ್ರಿಕೆಟರುಗಳು ಸೇರಿದಂತೆ ಎಲ್ಲಾ ಕ್ರೀಡಾಪಟುಗಳು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಹಾಗೆಯೇ ತಮ್ಮ ಅಭಿಮಾನಿಗಳಿಗೆ ಮನೆಯಿಂದ ಹೊರ ಬರದಂತೆ ಮನವಿ ಮಾಡುತ್ತಿದ್ದಾರೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಪಣ ತೊಟ್ಟಿರುವ ಕೇಂದ್ರ ಸರ್ಕಾರದ ಜೊತೆ ಅನೇಕರು ಕೈಜೋಭಾರತದ ಹೆಸರಾಂತ ಕುಸ್ತಿಪಟುವಾಗಿರುವ …

Read More »