Breaking News
Home / ಜಿಲ್ಲೆ / ಗದಗ / ಮನೆ ಬಾಗಿಲಿಗೆ ತರಕಾರಿ, ಹೂ, ಹಣ್ಣು ಬರುತ್ ಮಾರ್ಕೆಟ್‍ಗೆ ಯಾರೂ ಬರಬೇಡಿತ:ಗದಗ ಎಸ್.ಪಿ ಯತೀಶ್

ಮನೆ ಬಾಗಿಲಿಗೆ ತರಕಾರಿ, ಹೂ, ಹಣ್ಣು ಬರುತ್ ಮಾರ್ಕೆಟ್‍ಗೆ ಯಾರೂ ಬರಬೇಡಿತ:ಗದಗ ಎಸ್.ಪಿ ಯತೀಶ್

Spread the love

ಗದಗ: ಲಾಕ್‍ಡೌನ್ ಮುಗಿಯುವರೆಗೆ ತರಕಾರಿ ಮಾರ್ಕೆಟ್ ಬಂದ್ ಮಾಡಲಾಗಿದ್ದು, ವ್ಯಾಪಾರಸ್ಥರು ತಳ್ಳುವ ಗಾಡಿ ಮೂಲಕ ನಗರದ ವಾರ್ಡ್‍ಗಳಿಗೆ ಸಂಚರಿಸಿ ಮಾರಾಟ ಮಾಡಬೇಕು ಎಂದು ಎಸ್.ಪಿ ಯತೀಶ್ ತಿಳಿಸಿದರು.

ನಗರಸಭೆ ಆವರಣದಲ್ಲಿ ತರಕಾರಿ ಹಾಗೂ ಬೀದಿಬದಿ ವ್ಯಾಪಾರಸ್ಥರೊಂದಿಗೆ ಸಭೆ ನಡೆಸಿದರು. ಈ ಸಭೆನಲ್ಲಿ ಅಧಿಕಾರಿಗಳು ಹಾಗೂ ವ್ಯಾಪಾರಸ್ಥರು ಅಂತರ ಕಾಯ್ದುಕೊಂಡಿದ್ದರು. ಪ್ರತಿ ವಾರ್ಡ್‍ಗೆ ಎಂಟು ಜನ ತರಕಾರಿ ಮಾರಾಟಗಾರರನ್ನು ನೇಮಕ ಮಾಡಲಾಗುತ್ತದೆ. ಯಾರ್ಯಾರು ಯಾವ ಯಾವ ಏರಿಯಾ ಎಂಬುದನ್ನು ತರಕಾರಿ ಹಾಗೂ ಬೀದಿಬದಿ ವ್ಯಾಪಾರಿಗಳು ನಿರ್ಧರಿಸಬೇಕು. ಅಂತಹ ಮಾರಾಟಗಾರರಿಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಗುರುತಿನ ಪಾಸ್ ನೀಡಲಾಗುತ್ತೆ. ಕೊಡುವ ತೆಗೆದುಕೊಳ್ಳುವ ವ್ಯವಹಾರದಲ್ಲಿ ಅಂತರ ಕಾಯ್ದುಕೊಳ್ಳಬೇಕು. ಜನರು ಅವರ ಮನೆ ಬಳಿ ತರಕಾರಿ ಖರೀದಿಸಿದರೆ ಜನಸಂದಣಿಯೂ ಆಗುವುದಿಲ್ಲ. ಸೋಂಕು ಹರಡುವ ಅವಕಾಶವನ್ನು ತಡೆಯಬಹುದು ಎಂದರು.


Spread the love

About Laxminews 24x7

Check Also

ಮತದಾರರನ್ನು ಆಕರ್ಷಿಸಲು ಚುನಾವಣಾ ಆಯೋಗದ ವಿಭಿನ್ನ ಪ್ರಯತ್ನ

Spread the love ಬೆಂಗಳೂರು, ಏಪ್ರಿಲ್. 20: ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧವಾಗುವುದಕ್ಕಿಂತ ಹೆಚ್ಚಾಗಿ ನಮ್ಮ ಚುನಾವಣಾ ಆಯೋಗ ಹಲವು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ