Breaking News

ಕೊರೋನಾ ವಿರುದ್ಧ ಹೋರಾಟಕ್ಕೆ 6 ತಿಂಗಳ ಸಂಬಳ ನೀಡಿದ ಕುಸ್ತಿಪಟು..!

Spread the love

ದೇಶದಾದ್ಯಂತ ಕೊರೋನಾ ಭೀತಿ ಆವರಿಸಿದೆ. ಈ ಸಾಂಕ್ರಾಮಿಕ ಸೋಂಕು ಹರಡದಂತೆ ತಡೆಯಲು ಈಗಾಗಲೇ ಕೇಂದ್ರ ಸರ್ಕಾರ 21 ದಿನಗಳ ಕಾಲ ದೇಶದಲ್ಲಿ ಲಾಕ್​ಡೌನ್ ಹೇರಿದೆ.

ತ್ತ ಕೊರೋನಾ ಭೀತಿಯಿಂದ ಕ್ರೀಡಾಕೂಟಗಳು ರದ್ದಾಗಿವೆ. ಕ್ರಿಕೆಟರುಗಳು ಸೇರಿದಂತೆ ಎಲ್ಲಾ ಕ್ರೀಡಾಪಟುಗಳು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಹಾಗೆಯೇ ತಮ್ಮ ಅಭಿಮಾನಿಗಳಿಗೆ ಮನೆಯಿಂದ ಹೊರ ಬರದಂತೆ ಮನವಿ ಮಾಡುತ್ತಿದ್ದಾರೆ.

ಕೊರೊನಾ ಸೋಂಕು ನಿಯಂತ್ರಣಕ್ಕೆ ಪಣ ತೊಟ್ಟಿರುವ ಕೇಂದ್ರ ಸರ್ಕಾರದ ಜೊತೆ ಅನೇಕರು ಕೈಜೋಭಾರತದ ಹೆಸರಾಂತ ಕುಸ್ತಿಪಟುವಾಗಿರುವ ಭಜರಂಗ್ ಪುನಿಯಾ ಅವರು ತಮ್ಮ ಆರು ತಿಂಗಳ ಸಂಬಳವನ್ನು ಹರಿಯಾಣ ಕೊರೋನಾ ಸೋಂಕಿತ ಪರಿಹಾರ ನಿಧಿಗೆ ನೀಡಿದ್ದಾರೆ.ರೈಲ್ವೇಸ್​ನಲ್ಲಿ ವಿಶೇಷ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪುನಿಯಾ ಅವರು ತಮ್ಮ ಆರು ತಿಂಗಳ ವೇತನವನ್ನು ನೀಡಿದ್ದಾರೆ ಎಂದು ಹರಿಯಾಣ ಮುಖ್ಯಮಂತ್ರಿ ಎಂಎಲ್ ಖಟ್ಟರ್ ತಿಳಿಸಿದ್ದಾರೆ.

 

ಕಾಮನ್​ ವೆಲ್ತ್​ ಹಾಗೂ ಏಷ್ಯನ್​ ಗೇಮ್ಸ್​ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿರುವ ಭಜರಂಗ್ ಒಲಿಂಪಿಕ್ಸ್ ತಯಾರಿಯಲ್ಲಿದ್ದರು. ಇದೇ ವೇಳೆ ಕೋವಿಡ್-19 ವಿಶ್ವದಾದ್ಯಂತ ಹರಡದ್ದರಿಂದ ಇದೀಗ ಟೋಕಿಯೊ ಒಲಿಂಪಿಕ್ಸ್ ಅನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.

ಈ ಕುಸ್ತಿಪಟುವಿನ ಸಾಮಾಜಿಕ ಕಳಕಳಿಗೆ ಇದೀಗ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದು,ಹರಿಯಾಣ ರಾಜ್ಯದ ಕೊರೋನಾ ಸೋಂಕಿತರ ನೆರವಿಗೆ ನಿಂತ ಭಜರಂಗ್ ಪುನಿಯಾ ಅವರ ಕಾರ್ಯಕ್ಕೆ ಒಂದು ಸೆಲ್ಯೂಟ್.


Spread the love

About Laxminews 24x7

Check Also

ಲಾರಿ ಡಿಕ್ಕಿ ಹಿನ್ನೆಲೆ ಪಲ್ಟಿಯಾದ ಐಸ್ ಕ್ಯೂಬ್ ತುಂಬಿದ ಟಂಟಂ ವಾಹನ

Spread the love ಲಾರಿ ಡಿಕ್ಕಿ ಹಿನ್ನೆಲೆ ಪಲ್ಟಿಯಾದ ಐಸ್ ಕ್ಯೂಬ್ ತುಂಬಿದ ಟಂಟಂ ವಾಹನ ಇಳಕಲ್ ಹೊರವಲಯದ ರಾಷ್ಟ್ರೀಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ