Breaking News
Home / ರಾಜಕೀಯ (page 1170)

ರಾಜಕೀಯ

ಪದ್ಮಶ್ರೀ ಪ್ರಶಸ್ತಿ ತಿರಸ್ಕರಿಸಿದ್ದ ಗಾಯಕಿ ಸಂಧ್ಯಾ ಮುಖರ್ಜಿ ನಿಧನ

ಕೋಲ್ಕತ್ತಾ: ಹಿರಿಯ ಗಾಯಕಿ ಸಂಧ್ಯಾ ಮುಖೋಪಾಧ್ಯಾಯ ಎಂದೇ ಚಿರಪರಿಚಿತರಾಗಿರುವ, ಲೆಜೆಂಡರಿ ಬೆಂಗಾಲಿ ಗಾಯಕಿ ಸಂಧ್ಯಾ ಮುಖರ್ಜಿ ನಿಧನರಾಗಿದ್ದಾರೆ. ಸಂಧ್ಯಾ ಮುಖರ್ಜಿ ಇಂದು ಸಂಜೆ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ ಎಂದು ಅವರು ದಾಖಲಾಗಿದ್ದ ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಕೋವಿಡ್ -19 ಪಾಸಿಟಿವ್ ಬಂದಿತ್ತು. ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಹೃದಯದ ಕಾಯಿಲೆ, ಬಹು-ಅಂಗಾಂಗಗಳ ವೈಫಲ್ಯ ಮೂಳೆಯಲ್ಲಿ ಮುರಿತವಾಗಿತ್ತು. ಹೀಗಾಗಿ ಅವರು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು …

Read More »

ಯುಪಿ, ಬಿಹಾರದ ಜನತೆಗೆ ಪಂಜಾಬ್ ಪ್ರವೇಶಿಸಲು ಬಿಡಬೇಡಿ: ಚನ್ನಿ ವಿರುದ್ಧ ಬಿಜೆಪಿ, ಆಪ್ ಕೆಂಡ

ಚಂಡೀಗಢ: ಉತ್ತರಪ್ರದೇಶ, ಬಿಹಾರದವರನ್ನು ಪಂಜಾಬ್‍ಗೆ ಪ್ರವೇಶಿಸಲು ಬಿಡಬೇಡಿ ಎಂಬ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ ಹೇಳಿಕೆಗೆ ಬಿಜೆಪಿ ಹಾಗೂ ದೆಹಲಿ ಮುಖ್ಯಮಂತ್ರಿ ಕಿಡಿಕಾರಿದ್ದಾರೆ. ಉತ್ತರಪ್ರದೇಶ ಮತ್ತು ಬಿಹಾರದ ಜನರನ್ನು ಪಂಜಾಬ್‍ನ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವಮಾನಿಸಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ. ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರೂ ಚನ್ನಿ ಹೇಳಿಕೆಯನ್ನು ಟೀಕಿಸಿದ್ದಾರೆ. ಯಾವುದೇ ವ್ಯಕ್ತಿ ಅಥವಾ ಯಾವುದೇ ನಿರ್ದಿಷ್ಟ ಸಮುದಾಯವನ್ನು …

Read More »

13 ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವನ್ನು ಎಸೆಗಿ 8 ವಿದ್ಯಾರ್ಥಿಯನ್ನು ಗರ್ಭಿಣಿಮಾಡಿದ್ದ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ!

ಜಕಾರ್ತ: ಶಿಕ್ಷಕನೊಬ್ಬನು 13 ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವನ್ನು ಎಸೆಗಿ 8 ವಿದ್ಯಾರ್ಥಿಯನ್ನು ಗರ್ಭಿಣಿ ಮಾಡಿರುವ ಭಯಾನಕ ಘಟನೆ ಇಂಡೋನೇಷ್ಯಾದ ಧಾರ್ಮಿಕ ಬೋರ್ಡಿಂಗ್ ಶಾಲೆಯಲ್ಲಿ ನಡೆದಿದ್ದು, ಆರೋಪಿಯು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ. ಹೆರ್ರಿ ವಿರಾವನ್(36) ಆರೋಪಿ. ಈತ ತನ್ನ ಶಾಲೆಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಸ್ಕಾಲರ್‍ಶಿಪ್ ಸೇರಿ ಇನ್ನಿತರ ಆಮಿಷ ಒಡ್ಡುತ್ತಿದ್ದ. ಹೀಗಾಗಿ ಸ್ವಲ್ಪ ಬಡವರಾದವರು ತಮ್ಮ ಮಕ್ಕಳನ್ನು ಅಲ್ಲಿಯೇ ಸೇರಿಸಲು ಮುಂದಾಗುತ್ತಿದ್ದರು. ಇದರಿಂದಲೇ ಈ 13 ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರವೆಸಗಿದ್ದು, …

Read More »

ಏರ್ ಇಂಡಿಯಾ ವಿಶ್ವದಲ್ಲೇ ಅತ್ಯುತ್ತಮವಾಗಿಸುವುದು ನಮ್ಮ ಗುರಿ: ಎನ್ ಚಂದ್ರಶೇಖರನ್

ನವದೆಹಲಿ: ಗ್ರಾಹಕರ ಸೇವೆಯಲ್ಲಿ ಏರ್ ಇಂಡಿಯಾ ಅತ್ಯುತ್ತಮವಾಗಬೇಕೆಂದು ನಾವು ಬಯಸುತ್ತೇವೆ. ಏರ್ ಇಂಡಿಯಾ ವಿಶ್ವದಲ್ಲೇ ತಾಂತ್ರಿಕವಾಗಿ ಮುಂದುವರಿದ ಸಂಸ್ಥೆಯಾಗಬೇಕೆಂದು ನಾವು ಬಯಸುತ್ತೇವೆ ಎಂದು ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಕರನ್ ತಿಳಿಸಿದ್ದಾರೆ. ಚಂದ್ರಶೇಖರನ್ ಇತ್ತೀಚೆಗೆ ಸಂದೇಶವನ್ನು ನೀಡಿದ್ದು, ಏರ್ ಇಂಡಿಯಾವನ್ನು ವಿಶ್ವ ದರ್ಜೆಗೆ ತರಲು ಟಾಟಾ ಗ್ರೂಪ್ ಬದ್ಧವಾಗಿದೆ. ಗ್ರಾಹಕರ ಸೇವೆಯಲ್ಲಿ ಏರ್ ಇಂಡಿಯಾವನ್ನು ಅತ್ಯುತ್ತಮವಾಗಿಸಲು ಕಂಪನಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ. ಏರ್ ಇಂಡಿಯಾವನ್ನು ಜನವರಿ 27ರಂದು ಟಾಟಾ ಗ್ರೂಪ್‌ಗೆ …

Read More »

ಸೆಟ್ಟೇರಿತು ರಾಜವರ್ಧನ್ ಮೂರನೇ ಸಿನಿಮಾ

ಕನ್ನಡದ ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ನಟನೆಯ ಮೂರನೇ ಸಿನಿಮಾ ‘ಹಿರಣ್ಯ’ ಇಂದು ಸೆಟ್ಟೇರಿತು. ಬೆಂಗಳೂರಿನ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಕ್ಲ್ಯಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು ಮಾಜಿ ಸಚಿವ ಚೆಲುವನಾರಾಯಣ ಸ್ವಾಮಿ. ಈಗಾಗಲೇ ‘ಬಿಚ್ಚುಗತ್ತಿ’ ಸಿನಿಮಾದ ಮೂಲಕ ಐತಿಹಾಸಿಕ ಪಾತ್ರ ಮಾಡಿರುವ ರಾಜವರ್ಧನ್, ಹಿರಣ್ಯ ಚಿತ್ರದಲ್ಲಿ ಮತ್ತೊಂದು ಬಗೆಯ ಚಿತ್ರ ಪಾತ್ರ ಮಾಡಿದ್ದಾರಂತೆ. ಈ ಪಾತ್ರಕ್ಕಾಗಿ ಅವರು ಸಾಕಷ್ಟು ರೀತಿಯಲ್ಲಿ …

Read More »

ದೊಡ್ಡ ಗಣಪತಿ ದೇವಾಲಯಕ್ಕೆ ನೋಟಿಸ್ – ಸಿಟಿ ರವಿ ಪ್ರಶ್ನೆಗೆ ಉತ್ತರ ನೀಡಿದ ಆರಗ

ಬೆಂಗಳೂರು: ದೇವಾಲಯಗಳಲ್ಲಿ ಹೆಚ್ಚು ಸೌಂಡ್ ಇರುವಂತಹ ಧ್ವನಿವರ್ಧಕ ಬಳಸುವಂತಿಲ್ಲ. ಪೂಜೆ ಸಂದರ್ಭದಲ್ಲಿ ಡಮರುಗ, ಧ್ವನಿವರ್ಧಕ, ಭಾರೀ ಸದ್ದಾಗುವ ಘಂಟೆ ಹೊಡೆಯದಂತೆ ಮುಜರಾಯಿ ಇಲಾಖೆಯಡಿಯ ದೇವಸ್ಥಾನಗಳಿಗೆ ನೋಟಿಸ್ ನೀಡಲಾಗಿದೆ. ಈ ಕುರಿತಾಗಿ ವಿಧಾನಸಭೆಯಲ್ಲಿ ಶೂನ್ಯವೇಳೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ದೊಡ್ಡ ಗಣಪತಿ ದೇವಸ್ಥಾನಕ್ಕೆ ನೋಟೀಸ್ ನೀಡಿದ ವಿಚಾರ ಪ್ರಸ್ತಾಪಿಸಿದ್ದಾರೆ. ಘಂಟೆ ಶಬ್ಧದಿಂದ, ಶಂಖನಾದದಿಂದ ಮಾಲಿನ್ಯ ಅಂತಾರೆ, ಇದೊಂದು ಹೊಸದು, ಘಂಟೆಯಿಂದ ಮಾಲಿನ್ಯ ಆಗುತ್ತಾ? ಯಾರಿಗೆ ಕೆಟ್ಟ ಹೆಸರು ತರಲು ಹೀಗೆ …

Read More »

ಶಾಸಕ ಸತೀಶ್‌ ಜಾರಕಿಹೊಳಿ ಪ್ರಶ್ನೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಉತ್ತರ

ಬೆಂಗಳೂರು: ವಿಧಾನಮಂಡಲದ ಅಧಿವೇಶನದಲ್ಲಿ ಮಂಗಳವಾರ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳು ಮತ್ತು ಅವುಗಳನ್ನು ಭರ್ತಿ ಮಾಡಲು ಸರ್ಕಾರ ತೆಗೆದುಕೊಂಡಿರುವ ಕ್ರಮ ಏನು? ಎಂದು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಉತ್ತರಿಸಿದ್ದಾರೆ. ಶಾಸಕ ಸತೀಶ್‌ ಜಾರಕಿಹೊಳಿ ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ, 2021-22ನೇ ಸಾಲಿನಲ್ಲಿ ಸರ್ಕಾರ 1171 ಪೊಲೀಸ್‌ ಸಬ್‌ ಇನ್ಸ್ಪೆಕ್ಟರ್‌ …

Read More »

2 ವರ್ಷದಿಂದ ಬಂದ್ ಆಗಿದ್ದ ಸವದತ್ತಿ ದೇವಸ್ಥಾನದಲ್ಲಿ ಇಂದು ಭಾರತ ಹುಣ್ಣಿಮೆ ಸಂಭ್ರಮ

ಬೆಳಗಾವಿ: 2 ವರ್ಷಗಳ ಬಳಿಕ ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಇಂದು ಭಕ್ತರು ಭಾರತ ಹುಣ್ಣಿಮೆ ಸಂಭ್ರಮಾಚರಣೆ ಮಾಡಲಿದ್ದಾರೆ. ಜಿಲ್ಲೆಯ ಸವದತ್ತಿ ಹೊರವಲಯದಲ್ಲಿರುವ ಸುಪ್ರಸಿದ್ಧ ದೇವಸ್ಥಾನ ಇದಾಗಿದ್ದು, ಕೋವಿಡ್ ಹಿನ್ನೆಲೆ ದೇವಸ್ಥಾನವು 2 ವರ್ಷಗಳಿಂದ ಬಂದ್ ಆಗಿತ್ತು. ಭಕ್ತರ ದಂಡೇ ದೇವಸ್ಥಾನಕ್ಕೆ ಹರಿದು ಬರುತ್ತಿದ್ದು, ಕರ್ನಾಟಕ, ಮಹಾರಾಷ್ಟ್ರ, ಗೋವಾ ಸೇರಿ ವಿವಿಧೆಡೆಯಿಂದ ಆಗಮಿಸುತ್ತಿದ್ದಾರೆ. ಭಾರತ ಹುಣ್ಣಿಮೆ ನಿಮಿತ್ಯ ರೇಣುಕಾ ಯಲ್ಲಮ್ಮ ದೇವಿ ಸನ್ನಿಧಿಯಲ್ಲಿ ಬೃಹತ್ ಜಾತ್ರೆ ನಡೆಯಲಿದೆ.  ಇಂದು ಸುಮಾರು 10 ರಿಂದ …

Read More »

ಬೆಂಗಳೂರು : ರಾಷ್ಟ್ರ ಧ್ವಜ ವಿಚಾರದಲ್ಲಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ಮಧ್ಯೆ ಕೈ ಕೈ ಮಿಲಾಯಿಸುವ ಸ್ಥಿತಿ ನಿರ್ಮಾಣವಾಗಿದ್ದು, ವಿಧಾನಸಭೆ ರಣಾಂಗಣವಾಗಿ ಪರಿಣಮಿಸಿದೆ. ರಾಷ್ಟ್ರ ಧ್ವಜ ವಿಚಾರವಾಗಿ ಈಶ್ವರಪ್ಪಗೆ ಮಾತನಾಡಲು ಅವಕಾಶ ನೀಡಬಾರದು. ನಮ್ಮ ಪಕ್ಷದ ಎಲ್ಲರೂ ಮಾತನಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಳಿ ಸಲಹೆ ಕೊಟ್ಟು ವಾಪಾಸ್ ಬರುತ್ತಿದ್ದಾಗ ಸಿಟ್ಟಿಗೆದ್ದ ಈಶ್ವರಪ್ಪ ‘ ಸದನ ಏನು ನಿನ್ನ ಅಪ್ಪನದಾ ? ‘ ಎಂದು ಕೇಳಿದಾಗ ಆಕ್ರೋಶಗೊಂಡ ಶಿವಕುಮಾರ್ ಸಿದ್ದರಾಮಯ್ಯ ಖುರ್ಚಿ ಮಧ್ಯದ ಜಾಗದಿಂದ ತೂರಿ ಬಂದು ತಾಕತಿದ್ದರೆ ಬಾರೋ ಎಂದು ತೊಡೆ ತಟ್ಟಿದರು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್‌, ‘ ಶಿವಕುಮಾರ್ ಎಲ್ಲಿ ಇದ್ದಿರೀ ? ಎಂಬ ನೆನಪಿದೆಯೇ ? ಎಂದು ಪ್ರಶ್ನಿಸಿದರು. ಆಗ ಕಾಂಗ್ರೆಸ್ ಶಾಸಕರು ಈಶ್ವರಪ್ಪ ಅವರ ಮುಂದೆ ಬಂದು ಘೋಷಣೆ ಹಾಕಿದಾಗ ಕಾಂಗ್ರೆಸ್ ಆಡಳಿತ ಪಕ್ಷದ ಮಧ್ಯೆ ಕೈ ಕೈ ಮಿಲಾಯಿಸುವ ಸ್ಥಿತಿ ನಿರ್ಮಾಣವಾಯಿತು. ಈ ಹಿನ್ನೆಲೆಯಲ್ಲಿ ಸ್ಪೀಕರ್ ಸದನ ವನ್ನು ಮಧ್ಯಾಹ್ನ ೩ ಗಂಟೆಯವರೆಗೆ ಮುಙದೂಡಲಾಗಿದೆ. ಇದಕ್ಕೂ ಮು‌ನ್ನ ಈಶ್ವರಪ್ಪ ಅವರನ್ನು ಶಿವಕುಮಾರ್ ದೇಶದ್ರೋಹಿ ಎಂದು ಕರೆದಾಗ ‘ ನೀನು ಬೇಲ್ ಮೇಲೆ ಇದ್ದೀಯಾ, ಯಾವಾಗ ಜೈಲಿಗೆ ಹೋಗ್ತಿಯೋ ಗೊತ್ತಿಲ್ಲ ‘ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ. ಈಶ್ವರಪ್ಪ ಅವರನ್ನು ಡಿ.ಕೆ.ಶಿವಕುಮಾರ್ ದೇಶದ್ರೋಹಿ ಎಂದು ನಿಂದಿಸಿದ್ದರಿಂದ ಕೋಪಾವಿಷ್ಠರಾದ ಈಶ್ವರಪ್ಪ, ‘ ನೀನು ರಾಷ್ಟ್ರದ ಅತಿ ದೊಡ್ಡ ಲೂಠಿಕೋರ. ಕನಕಪುರದಿಂದ ದಿಲ್ಲಿಯವರೆಗರ ಬಂಡೆ ಕಳ್ಳ ಸಾಗಣೆ ಮಾಡಿದ್ದೀಯ. ನೀನು ಈಗ ಬೇಲ್ ಮೇಲೆ ಇದ್ದೀಯಾ, ಯಾವಾಗ ಮತ್ತೆ ಜೈಲಿಗೆ ಹೋಗುತ್ತೀಯೋ ಗೊತ್ತಿಲ್ಲ ಎಂದರು. ಅಕ್ರಮ ಗಣಿಗಾರಿಕೆ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಿದಾಗ ಬಳ್ಳಾರಿ ರೆಡ್ಡಿಗಳು ಹಾಗೂ ಸಿದ್ದರಾಮಯ್ಯ ಮಧ್ಯೆ ನಡೆದಂಥ ಸನ್ನಿವೇಷವೇ ಇಂದು‌ ನಿರ್ಮಾಣಗೊಂಡಿತ್ತು.

ಬೆಂಗಳೂರು : ರಾಷ್ಟ್ರ ಧ್ವಜ ವಿಚಾರದಲ್ಲಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ಮಧ್ಯೆ ಕೈ ಕೈ ಮಿಲಾಯಿಸುವ ಸ್ಥಿತಿ ನಿರ್ಮಾಣವಾಗಿದ್ದು, ವಿಧಾನಸಭೆ ರಣಾಂಗಣವಾಗಿ ಪರಿಣಮಿಸಿದೆ.   ರಾಷ್ಟ್ರ ಧ್ವಜ ವಿಚಾರವಾಗಿ ಈಶ್ವರಪ್ಪಗೆ ಮಾತನಾಡಲು ಅವಕಾಶ ನೀಡಬಾರದು. ನಮ್ಮ ಪಕ್ಷದ ಎಲ್ಲರೂ ಮಾತನಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಳಿ ಸಲಹೆ ಕೊಟ್ಟು ವಾಪಾಸ್ ಬರುತ್ತಿದ್ದಾಗ ಸಿಟ್ಟಿಗೆದ್ದ ಈಶ್ವರಪ್ಪ ‘ ಸದನ ಏನು ನಿನ್ನ ಅಪ್ಪನದಾ ? ‘ ಎಂದು ಕೇಳಿದಾಗ …

Read More »

ರೈತರಿಗೆ ಕಂದಾಯ ಸಚಿವ ಆರ್. ಅಶೋಕ್ ಗುಡ್ ನ್ಯೂಸ್

ಬೆಂಗಳೂರು: ಜಮೀನು ಸರ್ವೆ ಸಮಸ್ಯೆಗೆ ಆರು ತಿಂಗಳಲ್ಲಿ ಮುಕ್ತಿ ನೀಡುವುದಾಗಿ ಕಂದಾಯ ಸಚಿವ ಆರ್. ಅಶೋಕ್ ಭರವಸೆ ನೀಡಿದ್ದಾರೆ. ಕಳೆದ 5 ವರ್ಷಗಳಿಂದ ಬಾಕಿ ಉಳಿದಿರುವ 2 ಲಕ್ಷ ಪೋಡಿ, ಹದ್ದುಬಸ್ತು, 11ಇ ನಕ್ಷೆ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಲಾಗುವುದು ಎಂದು ಹೇಳಿದ್ದಾರೆ. 2072 ಭೂಮಾಪಕರಿಗೆ ಪರವಾನಿಗೆ ನೀಡಲಾಗುವುದು. ಮನೆಬಾಗಿಲಿಗೆ ಕಂದಾಯ ಇಲಾಖೆ ದಾಖಲೆಗಳನ್ನು ಶೀಘ್ರವೇ ತಲುಪಿಸಲಾಗುವುದು ಎಂದು ಹೇಳಿದ್ದಾರೆ.

Read More »