Breaking News
Home / ಜಿಲ್ಲೆ / ಬೆಂಗಳೂರು / ಬೆಂಗಳೂರು : ರಾಷ್ಟ್ರ ಧ್ವಜ ವಿಚಾರದಲ್ಲಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ಮಧ್ಯೆ ಕೈ ಕೈ ಮಿಲಾಯಿಸುವ ಸ್ಥಿತಿ ನಿರ್ಮಾಣವಾಗಿದ್ದು, ವಿಧಾನಸಭೆ ರಣಾಂಗಣವಾಗಿ ಪರಿಣಮಿಸಿದೆ. ರಾಷ್ಟ್ರ ಧ್ವಜ ವಿಚಾರವಾಗಿ ಈಶ್ವರಪ್ಪಗೆ ಮಾತನಾಡಲು ಅವಕಾಶ ನೀಡಬಾರದು. ನಮ್ಮ ಪಕ್ಷದ ಎಲ್ಲರೂ ಮಾತನಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಳಿ ಸಲಹೆ ಕೊಟ್ಟು ವಾಪಾಸ್ ಬರುತ್ತಿದ್ದಾಗ ಸಿಟ್ಟಿಗೆದ್ದ ಈಶ್ವರಪ್ಪ ‘ ಸದನ ಏನು ನಿನ್ನ ಅಪ್ಪನದಾ ? ‘ ಎಂದು ಕೇಳಿದಾಗ ಆಕ್ರೋಶಗೊಂಡ ಶಿವಕುಮಾರ್ ಸಿದ್ದರಾಮಯ್ಯ ಖುರ್ಚಿ ಮಧ್ಯದ ಜಾಗದಿಂದ ತೂರಿ ಬಂದು ತಾಕತಿದ್ದರೆ ಬಾರೋ ಎಂದು ತೊಡೆ ತಟ್ಟಿದರು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್‌, ‘ ಶಿವಕುಮಾರ್ ಎಲ್ಲಿ ಇದ್ದಿರೀ ? ಎಂಬ ನೆನಪಿದೆಯೇ ? ಎಂದು ಪ್ರಶ್ನಿಸಿದರು. ಆಗ ಕಾಂಗ್ರೆಸ್ ಶಾಸಕರು ಈಶ್ವರಪ್ಪ ಅವರ ಮುಂದೆ ಬಂದು ಘೋಷಣೆ ಹಾಕಿದಾಗ ಕಾಂಗ್ರೆಸ್ ಆಡಳಿತ ಪಕ್ಷದ ಮಧ್ಯೆ ಕೈ ಕೈ ಮಿಲಾಯಿಸುವ ಸ್ಥಿತಿ ನಿರ್ಮಾಣವಾಯಿತು. ಈ ಹಿನ್ನೆಲೆಯಲ್ಲಿ ಸ್ಪೀಕರ್ ಸದನ ವನ್ನು ಮಧ್ಯಾಹ್ನ ೩ ಗಂಟೆಯವರೆಗೆ ಮುಙದೂಡಲಾಗಿದೆ. ಇದಕ್ಕೂ ಮು‌ನ್ನ ಈಶ್ವರಪ್ಪ ಅವರನ್ನು ಶಿವಕುಮಾರ್ ದೇಶದ್ರೋಹಿ ಎಂದು ಕರೆದಾಗ ‘ ನೀನು ಬೇಲ್ ಮೇಲೆ ಇದ್ದೀಯಾ, ಯಾವಾಗ ಜೈಲಿಗೆ ಹೋಗ್ತಿಯೋ ಗೊತ್ತಿಲ್ಲ ‘ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ. ಈಶ್ವರಪ್ಪ ಅವರನ್ನು ಡಿ.ಕೆ.ಶಿವಕುಮಾರ್ ದೇಶದ್ರೋಹಿ ಎಂದು ನಿಂದಿಸಿದ್ದರಿಂದ ಕೋಪಾವಿಷ್ಠರಾದ ಈಶ್ವರಪ್ಪ, ‘ ನೀನು ರಾಷ್ಟ್ರದ ಅತಿ ದೊಡ್ಡ ಲೂಠಿಕೋರ. ಕನಕಪುರದಿಂದ ದಿಲ್ಲಿಯವರೆಗರ ಬಂಡೆ ಕಳ್ಳ ಸಾಗಣೆ ಮಾಡಿದ್ದೀಯ. ನೀನು ಈಗ ಬೇಲ್ ಮೇಲೆ ಇದ್ದೀಯಾ, ಯಾವಾಗ ಮತ್ತೆ ಜೈಲಿಗೆ ಹೋಗುತ್ತೀಯೋ ಗೊತ್ತಿಲ್ಲ ಎಂದರು. ಅಕ್ರಮ ಗಣಿಗಾರಿಕೆ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಿದಾಗ ಬಳ್ಳಾರಿ ರೆಡ್ಡಿಗಳು ಹಾಗೂ ಸಿದ್ದರಾಮಯ್ಯ ಮಧ್ಯೆ ನಡೆದಂಥ ಸನ್ನಿವೇಷವೇ ಇಂದು‌ ನಿರ್ಮಾಣಗೊಂಡಿತ್ತು.

ಬೆಂಗಳೂರು : ರಾಷ್ಟ್ರ ಧ್ವಜ ವಿಚಾರದಲ್ಲಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ಮಧ್ಯೆ ಕೈ ಕೈ ಮಿಲಾಯಿಸುವ ಸ್ಥಿತಿ ನಿರ್ಮಾಣವಾಗಿದ್ದು, ವಿಧಾನಸಭೆ ರಣಾಂಗಣವಾಗಿ ಪರಿಣಮಿಸಿದೆ. ರಾಷ್ಟ್ರ ಧ್ವಜ ವಿಚಾರವಾಗಿ ಈಶ್ವರಪ್ಪಗೆ ಮಾತನಾಡಲು ಅವಕಾಶ ನೀಡಬಾರದು. ನಮ್ಮ ಪಕ್ಷದ ಎಲ್ಲರೂ ಮಾತನಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಳಿ ಸಲಹೆ ಕೊಟ್ಟು ವಾಪಾಸ್ ಬರುತ್ತಿದ್ದಾಗ ಸಿಟ್ಟಿಗೆದ್ದ ಈಶ್ವರಪ್ಪ ‘ ಸದನ ಏನು ನಿನ್ನ ಅಪ್ಪನದಾ ? ‘ ಎಂದು ಕೇಳಿದಾಗ ಆಕ್ರೋಶಗೊಂಡ ಶಿವಕುಮಾರ್ ಸಿದ್ದರಾಮಯ್ಯ ಖುರ್ಚಿ ಮಧ್ಯದ ಜಾಗದಿಂದ ತೂರಿ ಬಂದು ತಾಕತಿದ್ದರೆ ಬಾರೋ ಎಂದು ತೊಡೆ ತಟ್ಟಿದರು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್‌, ‘ ಶಿವಕುಮಾರ್ ಎಲ್ಲಿ ಇದ್ದಿರೀ ? ಎಂಬ ನೆನಪಿದೆಯೇ ? ಎಂದು ಪ್ರಶ್ನಿಸಿದರು. ಆಗ ಕಾಂಗ್ರೆಸ್ ಶಾಸಕರು ಈಶ್ವರಪ್ಪ ಅವರ ಮುಂದೆ ಬಂದು ಘೋಷಣೆ ಹಾಕಿದಾಗ ಕಾಂಗ್ರೆಸ್ ಆಡಳಿತ ಪಕ್ಷದ ಮಧ್ಯೆ ಕೈ ಕೈ ಮಿಲಾಯಿಸುವ ಸ್ಥಿತಿ ನಿರ್ಮಾಣವಾಯಿತು. ಈ ಹಿನ್ನೆಲೆಯಲ್ಲಿ ಸ್ಪೀಕರ್ ಸದನ ವನ್ನು ಮಧ್ಯಾಹ್ನ ೩ ಗಂಟೆಯವರೆಗೆ ಮುಙದೂಡಲಾಗಿದೆ. ಇದಕ್ಕೂ ಮು‌ನ್ನ ಈಶ್ವರಪ್ಪ ಅವರನ್ನು ಶಿವಕುಮಾರ್ ದೇಶದ್ರೋಹಿ ಎಂದು ಕರೆದಾಗ ‘ ನೀನು ಬೇಲ್ ಮೇಲೆ ಇದ್ದೀಯಾ, ಯಾವಾಗ ಜೈಲಿಗೆ ಹೋಗ್ತಿಯೋ ಗೊತ್ತಿಲ್ಲ ‘ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ. ಈಶ್ವರಪ್ಪ ಅವರನ್ನು ಡಿ.ಕೆ.ಶಿವಕುಮಾರ್ ದೇಶದ್ರೋಹಿ ಎಂದು ನಿಂದಿಸಿದ್ದರಿಂದ ಕೋಪಾವಿಷ್ಠರಾದ ಈಶ್ವರಪ್ಪ, ‘ ನೀನು ರಾಷ್ಟ್ರದ ಅತಿ ದೊಡ್ಡ ಲೂಠಿಕೋರ. ಕನಕಪುರದಿಂದ ದಿಲ್ಲಿಯವರೆಗರ ಬಂಡೆ ಕಳ್ಳ ಸಾಗಣೆ ಮಾಡಿದ್ದೀಯ. ನೀನು ಈಗ ಬೇಲ್ ಮೇಲೆ ಇದ್ದೀಯಾ, ಯಾವಾಗ ಮತ್ತೆ ಜೈಲಿಗೆ ಹೋಗುತ್ತೀಯೋ ಗೊತ್ತಿಲ್ಲ ಎಂದರು. ಅಕ್ರಮ ಗಣಿಗಾರಿಕೆ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಿದಾಗ ಬಳ್ಳಾರಿ ರೆಡ್ಡಿಗಳು ಹಾಗೂ ಸಿದ್ದರಾಮಯ್ಯ ಮಧ್ಯೆ ನಡೆದಂಥ ಸನ್ನಿವೇಷವೇ ಇಂದು‌ ನಿರ್ಮಾಣಗೊಂಡಿತ್ತು.

Spread the love

ಬೆಂಗಳೂರು : ರಾಷ್ಟ್ರ ಧ್ವಜ ವಿಚಾರದಲ್ಲಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ಮಧ್ಯೆ ಕೈ ಕೈ ಮಿಲಾಯಿಸುವ ಸ್ಥಿತಿ ನಿರ್ಮಾಣವಾಗಿದ್ದು, ವಿಧಾನಸಭೆ ರಣಾಂಗಣವಾಗಿ ಪರಿಣಮಿಸಿದೆ.

 

ರಾಷ್ಟ್ರ ಧ್ವಜ ವಿಚಾರವಾಗಿ ಈಶ್ವರಪ್ಪಗೆ ಮಾತನಾಡಲು ಅವಕಾಶ ನೀಡಬಾರದು. ನಮ್ಮ ಪಕ್ಷದ ಎಲ್ಲರೂ ಮಾತನಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಳಿ ಸಲಹೆ ಕೊಟ್ಟು ವಾಪಾಸ್ ಬರುತ್ತಿದ್ದಾಗ ಸಿಟ್ಟಿಗೆದ್ದ ಈಶ್ವರಪ್ಪ ‘ ಸದನ ಏನು ನಿನ್ನ ಅಪ್ಪನದಾ ? ‘ ಎಂದು ಕೇಳಿದಾಗ ಆಕ್ರೋಶಗೊಂಡ ಶಿವಕುಮಾರ್ ಸಿದ್ದರಾಮಯ್ಯ ಖುರ್ಚಿ ಮಧ್ಯದ ಜಾಗದಿಂದ ತೂರಿ ಬಂದು ತಾಕತಿದ್ದರೆ ಬಾರೋ ಎಂದು ತೊಡೆ ತಟ್ಟಿದರು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್‌, ‘ ಶಿವಕುಮಾರ್ ಎಲ್ಲಿ ಇದ್ದಿರೀ ? ಎಂಬ ನೆನಪಿದೆಯೇ ? ಎಂದು ಪ್ರಶ್ನಿಸಿದರು.

ಆಗ ಕಾಂಗ್ರೆಸ್ ಶಾಸಕರು ಈಶ್ವರಪ್ಪ ಅವರ ಮುಂದೆ ಬಂದು ಘೋಷಣೆ ಹಾಕಿದಾಗ ಕಾಂಗ್ರೆಸ್ ಆಡಳಿತ ಪಕ್ಷದ ಮಧ್ಯೆ ಕೈ ಕೈ ಮಿಲಾಯಿಸುವ ಸ್ಥಿತಿ ನಿರ್ಮಾಣವಾಯಿತು. ಈ ಹಿನ್ನೆಲೆಯಲ್ಲಿ ಸ್ಪೀಕರ್ ಸದನ ವನ್ನು ಮಧ್ಯಾಹ್ನ ೩ ಗಂಟೆಯವರೆಗೆ ಮುಙದೂಡಲಾಗಿದೆ.

ಇದಕ್ಕೂ ಮು‌ನ್ನ ಈಶ್ವರಪ್ಪ ಅವರನ್ನು ಶಿವಕುಮಾರ್ ದೇಶದ್ರೋಹಿ ಎಂದು ಕರೆದಾಗ ‘ ನೀನು ಬೇಲ್ ಮೇಲೆ ಇದ್ದೀಯಾ, ಯಾವಾಗ ಜೈಲಿಗೆ ಹೋಗ್ತಿಯೋ ಗೊತ್ತಿಲ್ಲ ‘ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.

ಈಶ್ವರಪ್ಪ ಅವರನ್ನು ಡಿ.ಕೆ.ಶಿವಕುಮಾರ್ ದೇಶದ್ರೋಹಿ ಎಂದು ನಿಂದಿಸಿದ್ದರಿಂದ ಕೋಪಾವಿಷ್ಠರಾದ ಈಶ್ವರಪ್ಪ, ‘ ನೀನು ರಾಷ್ಟ್ರದ ಅತಿ ದೊಡ್ಡ ಲೂಠಿಕೋರ. ಕನಕಪುರದಿಂದ ದಿಲ್ಲಿಯವರೆಗರ ಬಂಡೆ ಕಳ್ಳ ಸಾಗಣೆ ಮಾಡಿದ್ದೀಯ. ನೀನು ಈಗ ಬೇಲ್ ಮೇಲೆ ಇದ್ದೀಯಾ, ಯಾವಾಗ ಮತ್ತೆ ಜೈಲಿಗೆ ಹೋಗುತ್ತೀಯೋ ಗೊತ್ತಿಲ್ಲ ಎಂದರು.

ಅಕ್ರಮ ಗಣಿಗಾರಿಕೆ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಿದಾಗ ಬಳ್ಳಾರಿ ರೆಡ್ಡಿಗಳು ಹಾಗೂ ಸಿದ್ದರಾಮಯ್ಯ ಮಧ್ಯೆ ನಡೆದಂಥ ಸನ್ನಿವೇಷವೇ ಇಂದು‌ ನಿರ್ಮಾಣಗೊಂಡಿತ್ತು.

 

 


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ