Breaking News

ಸೆಟ್ಟೇರಿತು ರಾಜವರ್ಧನ್ ಮೂರನೇ ಸಿನಿಮಾ

Spread the love

ಕನ್ನಡದ ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ನಟನೆಯ ಮೂರನೇ ಸಿನಿಮಾ ‘ಹಿರಣ್ಯ’ ಇಂದು ಸೆಟ್ಟೇರಿತು. ಬೆಂಗಳೂರಿನ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಕ್ಲ್ಯಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು ಮಾಜಿ ಸಚಿವ ಚೆಲುವನಾರಾಯಣ ಸ್ವಾಮಿ.

ಈಗಾಗಲೇ ‘ಬಿಚ್ಚುಗತ್ತಿ’ ಸಿನಿಮಾದ ಮೂಲಕ ಐತಿಹಾಸಿಕ ಪಾತ್ರ ಮಾಡಿರುವ ರಾಜವರ್ಧನ್, ಹಿರಣ್ಯ ಚಿತ್ರದಲ್ಲಿ ಮತ್ತೊಂದು ಬಗೆಯ ಚಿತ್ರ ಪಾತ್ರ ಮಾಡಿದ್ದಾರಂತೆ. ಈ ಪಾತ್ರಕ್ಕಾಗಿ ಅವರು ಸಾಕಷ್ಟು ರೀತಿಯಲ್ಲಿ ತಯಾರಿ ಕೂಡ ಮಾಡಿಕೊಂಡಿದ್ದಾರಂತೆ. ಪಾತ್ರಕ್ಕೂ ಮತ್ತು ಸಿನಿಮಾದ ಶೀರ್ಷಿಕೆಗೂ ಸಂಬಂಧ ಇರುವುದರಿಂದ ಈ ಟೈಟಲ್ ಗಾಗಿ ಅವರು ಡಾಲಿ ಧನಂಜಯ್ ಅವರನ್ನು ಮೊರೆ ಹೋಗಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಟ ಡಾಲಿ ಧನಂಜಯ್ ‘ಹಿರಣ್ಯ’ ಶೀರ್ಷಿಕೆಯನ್ನು ನೋಂದಾಯಿಸಿದ್ದರು. ಈ ಶೀರ್ಷಿಕೆಗಾಗಿ ರಾಜವರ್ಧನ್ ಕೂಡ ಅರ್ಜಿ ಸಲ್ಲಿಸಿದ್ದರಂತೆ. ಕೊನೆಗೂ ಗೆಳೆಯನ ಒತ್ತಾಸೆಗೆ ತಮ್ಮ ಶೀರ್ಷಿಕೆಯನ್ನು ಬಿಟ್ಟುಕೊಟ್ಟಿದ್ದಾರೆ ಡಾಲಿ ಧನಂಜಯ್. 

ಪ್ರವೀಣ್ ಅವ್ಯಕ್ತ ನಿರ್ದೇಶನದಲ್ಲಿ ಹಿರಣ್ಯ ಚಿತ್ರ ಮೂಡಿ ಬರಲಿದ್ದು, ಇದೇ ಮೊದಲ ಬಾರಿಗೆ ಚಿತ್ರಕ್ಕಾಗಿ ಬಣ್ಣ ಹಚ್ಚುತ್ತಿದ್ದಾರೆ ಮಾಡೆಲ್ ಆಗಿರುವ ರಿಹಾನಾ. ಸಾಕಷ್ಟು ಜಾಹೀರಾತುಗಳಿಗೆ ರೂಪದರ್ಶಿಯಾಗಿರುವ ರಿಹಾನಾಗೆ ಮೊದಲ ಸಿನಿಮಾದಲ್ಲಿಯೇ ಸವಾಲಿನ ಪಾತ್ರ ಸಿಕ್ಕಿದೆಯಂತೆ.

 


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ