Breaking News
Home / ರಾಜಕೀಯ (page 1150)

ರಾಜಕೀಯ

ಕರ್ನಾಟಕದ ಮುಖಂಡರೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಭೆ, ಸಿದ್ದರಾಮಯ್ಯ ಭಾಗಿ

ದೆಹಲಿ: ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಕಾಂಗ್ರೆಸ್​ ಪಕ್ಷದ ಕರ್ನಾಟಕ ರಾಜ್ಯದ ಮುಖಂಡರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರೊಂದಿಗೆ ಸಭೆ ನಡೆಸಿದರು. ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೂ ರಾಹುಲ್ ಗಾಂಧಿ ಪ್ರತ್ಯೇಕವಾಗಿ ಚರ್ಚಿಸಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಸುಮಾರು 20 ನಾಯಕರು ಪಾಲ್ಗೊಂಡಿದ್ದರು. ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೇವಾಲ ಸಹ ಭಾಗವಹಿಸಿದ್ದ ಸಭೆಯಲ್ಲಿ ರಾಜ್ಯ ರಾಜಕಾರಣದ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಈ …

Read More »

ಬಾಕಿ ವೇತನ ಕೊಡೋವರೆಗೂ ಪಲ್ಸ ಪೋಲಿಯೋ ಕೆಲಸ ಮಾಡಲ್ಲ: ಅಂಗನವಾಡಿ ಕಾರ್ಯಕರ್ತೆಯರ ಎಚ್ಚರಿಕೆ

ಕಳೆದ ಮೂರು ವರ್ಷಗಳ ವೇತನ ಕೊಡೋವರೆಗೂ ಪಲ್ಸ ಪೋಲಿಯೋ ಕಾರ್ಯಕ್ರಮದಲ್ಲಿ ನಾವು ಕೆಲಸ ಮಾಡೋದಿಲ್ಲ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ಬೆಳಗಾವಿ ತಾಲೂಕಾ ಘಟಕ ಎಚ್ಚರಿಕೆ ನೀಡಿದೆ ಕಳೆದ ಮೂರು ವರ್ಷಗಳ ವೇತನ ಕೊಡೋವರೆಗೂ ಪಲ್ಸ ಪೋಲಿಯೋ ಕಾರ್ಯಕ್ರಮದಲ್ಲಿ ನಾವು ಕೆಲಸ ಮಾಡೋದಿಲ್ಲ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ಬೆಳಗಾವಿ ತಾಲೂಕಾ ಘಟಕ ಎಚ್ಚರಿಕೆ ನೀಡಿದೆ. ಹೌದು ಬೆಳಗಾವಿ ತಾಲೂಕಿನ ಬೆಳಗುಂದಿ …

Read More »

#UkraineCrisis ಮೋದಿ ಮಧ್ಯ ಪ್ರವೇಶ ಮಾಡಿ ಪುಟಿನ್​ ಜೊತೆ ಮಾತನಾಡಲಿ- ಉಕ್ರೇನ್​

ನವದೆಹಲಿ: ಕಳೆದ ಮೂರು ದಶಕಗಳಿಂದ ಉಕ್ರೇನ್​​ ಮತ್ತು ರಷ್ಯಾ ನಡುವೆ ನಡೆಯುತ್ತಿದ್ದ ವಿವಾದ ಯುದ್ಧಕ್ಕೆ ದಾರಿ ಮಾಡಿಕೊಟ್ಟಿದ್ದು ರಷ್ಯಾ ಅಧ್ಯಕ್ಷ ಪುಟಿನ್​​ ಉಕ್ರೇನ್​ ಮೇಲೆ ದಾಳಿ ಮಾಡಲು ಗ್ರೀನ್​ ಸಿಗ್ನಲ್​ ನೀಡಿದ ಬೆನ್ನಲ್ಲೇ ಸೇನೆ ತನ್ನ ಕೆಲಸವನ್ನು ಆರಂಭ ಮಾಡಿದೆ. ಈ ನಡುವೆ ಉಕ್ರೇನ್​ ಹಾಗೂ ರಷ್ಯಾ ಯುದ್ಧ ವಿಶ್ವಕ್ಕೆ ತಲೆವಾಗುವ ಎಚ್ಚರಿಕೆಯನ್ನು ಈಗಾಗಲೇ ಹಲವು ತಜ್ಞರು ನೀಡಿದ್ದು, ಈ ಯುದ್ಧ 3ನೇ ಮಹಾಯುದ್ಧಕ್ಕೆ ದಾರಿ ಮಾಡಿಕೊಡಬಹುದು ಎಂದಿದ್ದಾರೆ. ಈ …

Read More »

ಇದೊಂದು ರೈಲ್ವೆ ಕ್ರಾಸಿಂಗ್​ನಲ್ಲಿ ಬರೀ ಕಚೋರಿಗಾಗಿ ರೈಲೇ ನಿಂತು ಬಿಡುತ್ತದೆ!

ನವದೆಹಲಿ: ಸಾಮಾನ್ಯವಾಗಿ ಒಮ್ಮೆ ಹೊರಟ ರೈಲು ನಿಗದಿತ ಸ್ಟೇಷನ್​ ಬಿಟ್ಟು ಬೇರೆಲ್ಲೂ ನಿಲ್ಲುವುದಿಲ್ಲ. ಅದು ಸಾಗುವ ಹಾದಿಯಲ್ಲಿ ಏನೇ ಎದುರಾದರೂ ಲೆಕ್ಕಿಸದೆ ಹೊಡೆದುಕೊಂಡು ಮುಂದಕ್ಕೆ ಹೋಗಿಬಿಡುತ್ತದೆ. ಆದರೆ ಇಲ್ಲೊಂದು ಕಡೆ ಕಚೋರಿಗೇ ರೈಲನ್ನು ನಿಲ್ಲಿಸುವ ತಾಕತ್ತಿದೆ. ಅಂಥದ್ದೊಂದು ಇದೊಂದು ಪ್ರದೇಶದಲ್ಲಿ ನಿತ್ಯವೂ ಕಾಣಿಸುತ್ತದೆ. ರಾಜಸ್ಥಾನದ ಆಲ್ವಾರ್​ನ ರೈಲ್ವೆ ಕ್ರಾಸಿಂಗ್​ನಲ್ಲಿ ಕಚೋರಿಗಾಗಿಯೇ ರೈಲು ಕ್ರಾಸಿಂಗ್​ನಲ್ಲಿ ನಿಲ್ಲುತ್ತದೆ. ಆಲ್ವಾರ್​ನ ದೌಡ್​ಪುರ್​ ರೈಲ್ವೆ ಕ್ರಾಸಿಂಗ್​ನಲ್ಲಿ ಇಂಥದ್ದೊಂದು ದೃಶ್ಯ ಸಾಮಾನ್ಯವಾಗಿ ಪ್ರತಿ ಮುಂಜಾನೆಯೂ ಕಾಣಸಿಗುತ್ತದೆ. ಈ ರೈಲ್ವೆ …

Read More »

ಬಯಲಾಟ ಅಕಾಡೆಮಿ ಪ್ರಶಸ್ತಿ ಪ್ರಕಟ; 15 ಸಾಧಕರ ಆಯ್ಕೆ

ಬೆಂಗಳೂರು: ಕರ್ನಾಟಕ ಬಯಲಾಟ ಅಕಾಡೆಮಿ ವತಿಯಿಂದ 2020-21ನೇ ಸಾಲಿನ ಗೌರವ ಮತ್ತು ವಾರ್ಷಿಕ ಪ್ರಶಸ್ತಿಗೆ ರಾಜ್ಯದ ವಿವಿಧ ಬಯಲಾಟ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 15 ಸಾಧಕರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ 2022ರ ಏಪ್ರಿಲ್ ಮೊದಲ ವಾರದಲ್ಲಿ ಬಾಗಲಕೋಟೆಯಲ್ಲಿ ಜರುಗಲಿದೆ. ಗೌರವ ಪ್ರಶಸ್ತಿಯು 50 ಸಾವಿರ ನಗದು ಮತ್ತು ವಾರ್ಷಿಕ ಪ್ರಶಸ್ತಿಯು 25 ಸಾವಿರ ನಗದು ಪುರಸ್ಕಾರ ಒಳಗೊಂಡಿದ್ದು, ಎರಡೂ ವರ್ಗದವರಿಗೆ ಸನ್ಮಾನಿಸಲಾಗುತ್ತದೆ ಎಂದು ಬಯಲಾಟ ಅಕಾಡೆಮಿ ರಿಜಿಸ್ಟ್ರಾರ್ …

Read More »

ನಿಯಮ ಇರುವಲ್ಲಿ ಸಮವಸ್ತ್ರ ಕಡ್ಡಾಯ: ಹೈಕೋರ್ಟ್ ಸ್ಪಷ್ಟನೆ

ಬೆಂಗಳೂರು: ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ 2004ರಿಂದಲೂ ಸಮವಸ್ತ್ರವಿದ್ದು, ಇಷ್ಟು ದಿನ ಇಲ್ಲದ ಸಮಸ್ಯೆ ಈಗ ಏಕಾಏಕಿ ಉದ್ಭವಿಸಿದೆ. ಇದಕ್ಕೆಲ್ಲ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್​ಐ) ಎಂಬ ಸಂಘಟನೆಯೇ ಕಾರಣ ಎಂದು ಹಿರಿಯ ವಕೀಲ ಎಸ್.ಎಸ್. ನಾಗಾನಂದ್ ಹೈಕೋರ್ಟ್​ಗೆ ತಿಳಿಸಿದರು. ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧಿಸಿರುವ ಕ್ರಮ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ವಸ್ತ್ರಸಂಹಿತೆ ಜಾರಿ ಸಂಬಂಧ ಫೆ.5ರಂದು ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿರುವ …

Read More »

ಅಂಗನವಾಡಿ ಕೇಂದ್ರಗಳಲ್ಲಿ ಆಹಾರ ಅಭಾವ; ಮನೆಯಿಂದಲೇ ತರಬೇಕಾಗಿದೆ ಬುತ್ತಿ!

ಹುಬ್ಬಳ್ಳಿ :ಕೋವಿಡ್ ಹಿನ್ನೆಲೆಯಲ್ಲಿ ಸತತ ಎರಡು ವರ್ಷಗಳಿಂದ ಬಂದ್ ಆಗಿದ್ದ ಅಂಗನವಾಡಿ ಕೇಂದ್ರಗಳು ಇದೀಗ ಫೆ.14ರಿಂದ ಪುನಾರಂಭಗೊಂಡಿದ್ದರೂ, ಆಹಾರ ಧಾನ್ಯ ಪೂರೈಕೆಯಾಗದೇ ಮಕ್ಕಳು ಮನೆಯಿಂದ ಬುತ್ತಿ ಕಟ್ಟಿಕೊಂಡು ತರಬೇಕಾದ ದುಸ್ಥಿತಿ ಎದುರಾಗಿದೆ.   ರಾಜ್ಯದಲ್ಲಿ 65,911 ಅಂಗನವಾಡಿ ಕೇಂದ್ರಗಳಿದ್ದು, 44,312 ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿವೆ. ಉಳಿದವು ಬಾಡಿಗೆ 8,640 ಕೇಂದ್ರಗಳಿಗೆ ಸ್ವಂತ ಅಡುಗೆ ಮನೆಗಳಿಲ್ಲ. ಸಾಕಷ್ಟು ಕೇಂದ್ರಗಳಲ್ಲಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಊಟ, ನೀರು ಇಲ್ಲದೆ ಮಕ್ಕಳು ಕೇಂದ್ರಗಳಿಗೆ ತೆರಳುವುದು …

Read More »

ಗಂಡ ವಿದೇಶದಲ್ಲಿ, ಹೆಂಡತಿ ಸ್ವದೇಶದಲ್ಲಿ

ಲಾಕ್​ಡೌನ್ ಸಮಯದಲ್ಲಿ ಗಂಡ-ಹೆಂಡತಿ ಒಂದೇ ಮನೆಯಲ್ಲಿ ಜತೆಗಿದ್ದಾಗ ಏನೆಲ್ಲಾ ಆಗುತ್ತದೆ ಎಂದು ‘ಇಕ್ಕಟ್’ ಚಿತ್ರದ ಮೂಲಕ ತೋರಿಸಿಕೊಟ್ಟಿದ್ದರು ನಾಗಭೂಷಣ್. ಅವರು ಈಗ ಲಾಕ್​ಡೌನ್ ಕುರಿತು ಇನ್ನೊಂದು ಸಿನಿಮಾ ಮಾಡಿದ್ದಾರೆ. ವ್ಯತ್ಯಾಸ ಏನೆಂದರೆ, ಲಾಕ್​ಡೌನ್​ನಲ್ಲಿ ಗಂಡ ವಿದೇಶದಲ್ಲಿರುತ್ತಾನೆ, ಹೆಂಡತಿ ಸ್ವದೇಶದಲ್ಲಿರುತ್ತಾಳೆ … ಅವರಿಬ್ಬರ ನಡುವಿನ ಪ್ರೀತಿ-ಗೀತಿ-ಇತ್ಯಾದಿಯ ಬಗ್ಗೆ ಈ ಚಿತ್ರ ಸುತ್ತುತ್ತದೆ. ಅದೇ ‘ಮೇಡ್ ಇನ್ ಚೈನಾ’. ನಾಗಭೂಷಣ್ ಮತ್ತು ಪ್ರಿಯಾಂಕಾ ತಿಮ್ಮೇಶ್ ಅಭಿನಯದಲ್ಲಿ ಛಾಯಾಗ್ರಾಹಕ ಪ್ರೀತಂ ತೆಗ್ಗಿನಮನೆ ಒಂದು ಚಿತ್ರ …

Read More »

ಕಚೇರಿ ಬಿಟ್ಟು ಮನೆಯಲ್ಲೇ ಕೆಲಸ: ಲಂಚಕ್ಕೆ ಕೈವೊಡ್ಡಿ ಸ್ಥಳೀಯರ ಮೊಬೈಲ್​ನಲ್ಲಿ ಸಿಕ್ಕಿಬಿದ್ದ ಲಂಚಾವತಾರಿ PDO

ಯಾದಗಿರಿ: ಕರ್ತವ್ಯ ಸಮಯದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟು ಸ್ಥಳದಲ್ಲಿಯೇ ಹಣ ಸ್ವೀಕರಿಸುತ್ತಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸುರಪುರ ತಾಲೂಕಿನ ಅರಕೇರಾ (ಕೆ) ಗ್ರಾಮದ ಪಿಡಿಒ ದುರ್ಗಶ್ರೀ ಲಂಚ ಸ್ವೀಕರಿಸುತ್ತಿರುವ ಕ್ಷಣವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದಿರುವ ಸ್ಥಳೀಯರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.   ಇ-ಸ್ವತ್ತು ಮಾಡಿ ಕೊಡುವ ವಿಚಾರವಾಗಿ ಪಿಡಿಒಗೆ 5 ಸಾವಿರ ಹಾಗೂ ಕಂಪ್ಯೂಟರ್ ಆಪರೇಟರ್​ಗೆ 2 ಸಾವಿರ ರೂ. ಲಂಚಕ್ಕೆ ಬೇಡಿಕೆ …

Read More »

ಬಿತ್ತನೆ ಮಾಡದೇ ಬಿಟ್ಟಿದ್ದ ಜಾಗದಲ್ಲಿ ಅಶ್ವಗಂಧ – ಸಂತಸದಲ್ಲಿ ಕೊಪ್ಪಳ ರೈತರು

ಕೊಪ್ಪಳ: ಜಿಲ್ಲೆಯ ಜಿಂಕೆ (Deer) ಹಾವಳಿಗೆ ಬೇಸತ್ತು, ತಮ್ಮ ಜಮೀನುಗಳನ್ನ ಬಿತ್ತನೆ ಮಾಡದೇ ಬಿಟ್ಟಿದ್ದ ರೈತರಿಗೆ (Farmers) ಔಷಧಿಯ (Medicine) ಸಸ್ಯ ಅಶ್ವಗಂಧ ವರದಾನವಾಗಿದೆ. ಕೊಪ್ಪಳ ತಾಲೂಕು ಅಳವಂಡಿ ಗ್ರಾಮದ ರೈತ ಭೀಮರಡ್ಡೆಪ್ಪ ಗದ್ದಿಕೇರಿ ಅಶ್ವಗಂಧ ಬೆಳೆದು ಇತರೇ ರೈತರಿಗೆ ಮಾದರಿ ಆಗಿದ್ದಾರೆ. ಭೀಮರೆಡ್ಡೆಪ್ಪ ಅವರು ತಮ್ಮ ಒಟ್ಟೂ 7 ಎಕರೆ ಹೊಲದಲ್ಲಿ ಮಳೆಯಾಶ್ರಿತ ಕೃಷಿಯಲ್ಲೇ ಅಶ್ವಗಂಧ ಬೆಳೆದಿದ್ದಾರೆ. ಖಾಸಗಿ ಕಂಪನಿಯೊಂದಿಗೆ ಖರೀದಿ ಒಪ್ಪಂದ ಮಾಡಿಕೊಂಡು ಅಶ್ವಗಂಧ ಬಿತ್ತನೆ ಮಾಡಿದ್ದಾರೆ. …

Read More »