Breaking News
Home / ರಾಜಕೀಯ (page 1166)

ರಾಜಕೀಯ

ಹರಕು ಬಾಯಿ ಈಶ್ವರಪ್ಪ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ: ಹರಕು ಬಾಯಿ ಈಶ್ವರಪ್ಪ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ.

ಬೆಂಗಳೂರು: ಹರಕು ಬಾಯಿ ಈಶ್ವರಪ್ಪ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಆತ ಮೊದಲು ಸಚಿವ ಸ್ಥಾನದಿಂದ ಕೆಳಗೆ ಇಳಿಯಬೇಕು. ನಮ್ಮಪ್ಪನ ಬಗ್ಗೆ ಅವರು ಮಾತನಾಡಿದ್ದಾರೆ. ಬೇಕಾದರೆ ನಮ್ಮಪ್ಪನನ್ನು ಭೇಟಿ ಮಾಡಲಿ. ಈ ವಿಚಾರವಾಗಿ ಸಮಯ ಬಂದಾಗ ಅವರಿಗೆ ಉತ್ತರ ನೀಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ವಿಧಾನಸೌಧಸಲ್ಲಿ ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಆತ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಬದಲಿಗೆ …

Read More »

ಕುಡಿತದ ಚಟ.. ಸ್ವಂತ ಮಗಳ ಮೇಲಿನ ಅತ್ಯಾಚಾರಕ್ಕೆ ಸಾಥ್​ ನೀಡಿದ ತಾಯಿ:

ಆನೇಕಲ್ : ಕಟ್ಟಿಕೊಂಡ ಸಂಸಾರವನ್ನು ತ್ಯಜಿಸಿ ಗಂಡನಿಲ್ಲದ ಮಹಿಳೆಯ ಸಹವಾಸ ಮಾಡಿ, ಕುಡಿದ ಮತ್ತಿನಲ್ಲಿ ಆಕೆಯ ಮಗಳನ್ನು ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿಯನ್ನು, ಮತ್ತು ಅವನಿಗೆ ಸಹಕಾರ ನೀಡಿದ್ದ ಬಾಲಕಿಯ ತಾಯಿಯನ್ನ ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಮೆಹೆಂದಿಪುರ ಮೂಲದ ಮೋಹನ್ ಆಸ್ದಾ ಚೋಟಾ (47), ಹಾಗೂ ತಿಮಲ್ಲಿ ಮೂಲದ ಸೊಂಬರಿ ಮುರುಮು ( 46 ) ಬಂಧಿತ ಆರೋಪಿಗಳು. ಇವರು ಎರಡು ವರ್ಷಗಳ ನಂತರ ಪೊಲೀಸ್​​ ಬಲೆಗೆ ಬಿದ್ದಿದ್ದಾರೆ. ಕಳೆದ …

Read More »

ವಾಟ್ಸ್‌ಆಯಪ್‌, ಮೆಸೇಂಜರ್‌ನಲ್ಲಿ ಹಾರ್ಟ್‌ ಇಮೋಜಿ ಕಳುಹಿಸಿದರೆ ಜೈಲು ಶಿಕ್ಷೆ, 20 ಲಕ್ಷ ದಂಡ

ಸೌದಿ : ವಾಟ್ಸ್‌ಆಯಪ್‌, ಮೆಸೇಂಜರ್‌ ಬಂದ ಮೇಲೆ ಒಂದು ವಾಕ್ಯವನ್ನು ಒಂದೇ ಇಮೋಜಿಯಲ್ಲಿ ಹೇಳಬಹುದಾಗಿದೆ. ಬೇಸರ, ನೋವು, ಕಷ್ಟ, ಖುಷಿ, ದುಃಖ, ಆಶ್ಚರ್ಯ, ಪ್ರೀತಿ, ಪೇಚು. ಹೀಗೆ ಒಂದಾ ಎರಡಾ? ಎಲ್ಲಾ ಭಾವನೆಗಳಿಗೂ ಈಗ ಒಂದೇ ಒಂದು ಇಮೋಜಿ ಸಾಕು.   ಅದರಲ್ಲಿಯೂ ಸ್ನೇಹಿತರ ನಡುವೆ ಹೆಚ್ಚಾಗಿ ಶೇರ್‌ ಆಗುವ ಇಮೋಜಿ ಎಂದರೆ ಲವ್‌ ಇಮೋಜಿ. ಅದು ಪ್ರೇಮಿಗಳೇ ಆಗಿರಬೇಕೆಂದೇನೂ ಇಲ್ಲ. ತಮ್ಮ ಇಷ್ಟದವರು ಏನಾದರೂ ಒಳ್ಳೊಳ್ಳೆ ಇಷ್ಟವಾಗುವ ಸುದ್ದಿ ಅಥವಾ …

Read More »

ಪದವಿ ಕಾಲೇಜುಗಳಲ್ಲಿ ʼಡ್ರೆಸ್‌ ಕೋಡ್‌ʼ ಇಲ್ಲ : ಸಚಿವ ಬಿ.ಸಿ.ನಾಗೇಶ್

ಬೆಂಗಳೂರು : ಪದವಿ ಕಾಲೇಜುಗಳಲ್ಲಿ ಯಾವುದೇ ಡ್ರೆಸ್‌ ಕೋಡ್‌ ಇಲ್ಲ. ಡ್ರೆಸ್‌ ಕೋಡ್‌ ಇರುವ ಕಡೆ ಪಾಲಿಸಬೇಕು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಹೇಳಿದ್ದಾರೆ. ಈ ಕುರಿತು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ‘ಪದವಿ ಕಾಲೇಜುಗಳಲ್ಲಿ ಡ್ರೆಸ್‌ ಕೋಡ್‌ ಇಲ್ಲ. ಡ್ರೆಸ್‌ ಕೋಡ್‌ ಇರುವ ಕಡೆ ಪಾಲಿಸಬೇಕು. ನಿನ್ನೆ ಮಲ್ಲೇಶ್ವರಂ ಕಾಲೇಜಿನಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಹೋಗಿದ್ದರಂತೆ, ಯಾರು ಪ್ರಚೋದಿಸ್ತಿದ್ದಾರೆ ಅನ್ನೋದು ತನಿಖೆಯಾಗ್ತಿದೆ’ ಎಂದರು. ಇನ್ನು ಇದೇ ವೇಳೆ …

Read More »

ನೀತಿ ಆಯೋಗ, ಫೋನ್ ಪೇ ಮಹತ್ವದ ಘೋಷಣೆ; 5 ಲಕ್ಷ ರೂ. ಬಹುಮಾನದ ಫಿನ್ ಟೆಕ್ ಹ್ಯಾಕಥಾನ್ ಆಯೋಜನೆ

NITI ಆಯೋಗ್, PhonePe ಸಹಯೋಗದೊಂದಿಗೆ Fintech ಉದ್ಯಮದ ಪ್ರಾಮುಖ್ಯತೆಯನ್ನು ಪ್ರದರ್ಶಿಸುವ ಪ್ರಯತ್ನದಲ್ಲಿ ಮೊದಲ ಬಾರಿಗೆ ಹ್ಯಾಕಥಾನ್ ಆಯೋಜಿಸುತ್ತಿದೆ.ಹ್ಯಾಕಥಾನ್ ಫಿನ್‌ ಟೆಕ್ ಪರಿಸರ ವ್ಯವಸ್ಥೆಗೆ ಪರಿಹಾರಗಳನ್ನು ಪ್ರದರ್ಶಿಸುವ ಗುರಿ ಹೊಂದಿದೆ. ಈ ಈವೆಂಟ್‌ಗೆ ನೋಂದಾಯಿಸಲು ಕೊನೆಯ ದಿನಾಂಕ ಫೆಬ್ರವರಿ 23. ಅಂತಿಮ ಎಂಟ್ರಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 25. ಈ ಹ್ಯಾಕಥಾನ್‌ನ ವಿಜೇತರನ್ನು ಫೆಬ್ರವರಿ 28 ರಂದು ಘೋಷಿಸಲಾಗುತ್ತದೆ.   ಹ್ಯಾಕಥಾನ್ ಕುರಿತು ಭಾಗವಹಿಸುವವರು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು …

Read More »

ಸದನದಲ್ಲೇ ರಾತ್ರಿ ಕಳೆದ ಕಾಂಗ್ರೆಸ್ ನಾಯಕರು: ಸಂಪುಟದಿಂದ ಈಶ್ವರಪ್ಪ ವಜಾಗೊಳಿಸಲು ಅಹೋರಾತ್ರಿ ಹೋರಾಟ

ಬೆಂಗಳೂರು: ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮೆ ನೀಡಬೇಕು. ಸಂಪುಟದಿಂದ ಅವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು ಸದನದಲ್ಲಿ ಅಹೋರಾತ್ರಿ ಹೋರಾಟ ನಡೆಸಿದ್ದಾರೆ. ವಿಧಾನಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯರು ರಾತ್ರಿ ಧರಣಿ ನಡೆಸಿದ್ದಾರೆ. ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗೃಹಸಚಿವ ಆರಗ ಜ್ಞಾನೇಂದ್ರ, ಹಿರಿಯ ನಾಯಕರು ಮನವೊಲಿಸಲು ಮುಂದಾದರೂ ಪಟ್ಟು ಸಡಿಲಿಸದ ಕಾಂಗ್ರೆಸ್ …

Read More »

ಮೇಕೆದಾಟು‌ ಪಾದಯಾತ್ರೆ ಫೆಬ್ರವರಿ 27ರಿಂದ ಮತ್ತೆ ಆರಂಭ

ರಾಜ್ಯದಲ್ಲಿ ಕೊರೋನಾ ಹೆಚ್ಚಾದ ಕಾರಣ ಮೊಟಕುಗೊಂಡಿದ್ದ ಮೇಕೆದಾಟು‌ ಪಾದಯಾತ್ರೆಯನ್ನು ಫೆಬ್ರವರಿ 27ರಿಂದ ಮತ್ತೆ ಆರಂಭಿಸುವುದಾಗಿ ರಾಜ್ಯ ಕಾಂಗ್ರೆಸ್‌ ತಿಳಿಸಿದೆ. ಈ ಮೊದಲು ಆರಂಭವಾಗಿದ್ದ ಪಾದಯಾತ್ರೆ ದಿಡೀರ್ ಕೊರೋನಾ ಹಿನ್ನೆಲೆ ರಾಜ್ಯ ಸರಕಾರ ಹೇರಿದ್ದ ನಿರ್ಬಂಧ ಹಿನ್ನೆಲೆ ಸ್ಥಗಿತಗೊಂಡಿತ್ತು. ಇದೀಗ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್‌ ಪಾದಯಾತ್ರೆ ನಡೆಸಲಿದ್ದು, 2ನೇ ಹಂತದ ಪಾದಯಾತ್ರೆ ಶುರುವಾಗಲಿದೆ. ಫೆಬ್ರವರಿ 27ರಿಂದ ಶುರುವಾಗುವ ಪಾದಯಾತ್ರೆ ಮಾರ್ಚ್‌ 5ರ ಬದಲಾಗಿ ಮಾರ್ಚ್‌ 3ಕ್ಕೆ ಅಂತ್ಯವಾಗಲಿದೆ. ಮಾರ್ಚ್‌ …

Read More »

ರಾಜ್ಯದಲ್ಲಿ ಇಳಿಕೆಯತ್ತ ಕೋವಿಡ್‌ ಕೇಸ್‌ -ಇಂದಿನ ಪಾಸಿಟಿವಿಟಿ ರೇಟ್ ಶೇ.1.45

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಕೇಸ್ ಸಂಖ್ಯೆಯಲ್ಲಿ ಇಳಿಕೆ ಪ್ರಮಾಣ ಮುಂದುವರಿದಿದೆ. ನಿನ್ನೆಗಿಂತ ಮೂನ್ನೂರಕ್ಕೆ ಕೇಸ್ ಇಳಿಕೆಯಾಗಿವೆ. ಇಂದು ರಾಜ್ಯದಲ್ಲಿ 1,549 ಕೇಸ್ ದಾಖಲಾಗಿವೆ. ಪಾಸಿಟಿವ್ ರೇಟ್ ಪ್ರಮಾಣ 1.45%ಗೆ ಇಳಿದಿದೆ. ರಾಜ್ಯದಲ್ಲಿ ಇಂದು 90,688 ಕೋವಿಡ್ ಟೆಸ್ಟ್ ಆಗಿದ್ದು, 1549 ಕೇಸ್ ದಾಖಲಾಗಿದೆ. ಜೊತೆಗೆ 23 ಜನ ಕೊರೊನಾಗೆ ಬಲಿಯಾಗಿದ್ದಾರೆ. ಕೇಸ್ ಕಡಿಮೆ ಆಗಿ ಸಾವಿನ ಪ್ರಮಾಣ ಕೂಡ ಕೋವಿಡ್ ಇಳಿಕೆಯ ಗ್ರಾಫ್ ಕಾಣ್ತಿದೆ. 

Read More »

10ಸಾವಿರ ರೂ. ಲಂಚ ಸ್ವೀಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಡಚಿ ಎಪಿಎಂಸಿ ಕಾರ್ಯದರ್ಶಿಗೆ ನ್ಯಾಯಾಲಯ 7 ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಬೆಳಗಾವಿ – 10 ಸಾವಿರ ರೂ. ಲಂಚ ಸ್ವೀಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಡಚಿ ಎಪಿಎಂಸಿ ಕಾರ್ಯದರ್ಶಿಗೆ ನ್ಯಾಯಾಲಯ 7 ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 4ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎನ್.ವಿ.ವಿಜಯ ಅವರು ವಿಚಾರಣೆ ನಡೆಸಿ ಆರೋಪಿ ಸುರಪ್ಪ ಹಾಂಕಪ್ಪ ಲಮಾಣಿಗೆ ಶಿಕ್ಷೆೆ ವಿಧಿಸಿದ್ದಾರೆ. ಕಲಂ.7 ಪಿಸಿ ಕಾಯ್ದೆ 1988 ರಲ್ಲಿ 03 ವರ್ಷ ಕಠಿಣ ಕಾರಾಗೃಹ ಶಿಕ್ಷೆ ರೂ.5000/- ದಂಡ ಒಂದು …

Read More »

ನಿಮಗೆ ಗುಂಡಿ ಮುಚ್ಚೋದಕ್ಕೆ ಆಗದಿದ್ರೆ ಮಿಲಿಟರಿ ಕರೆಸ್ತೇನೆ – ಹೈಕೋರ್ಟ್ ಗರಂ

ಬೆಂಗಳೂರು: ಬಿಬಿಎಂಪಿಯ ಎಡವಟ್ಟಿನಿಂದ ಬೆಂಗಳೂರಿನಲ್ಲಿ ವಾಹನ ಸವಾರರು ಹೈರಾಣಾಗಿ ಹೋಗಿದ್ದಾರೆ. ಸಿಕ್ಕ ಸಿಕ್ಕ ಕಡೆಯಲೆಲ್ಲಾ ಗುಂಡಿಯಿಂದ ತುಂಬಿ ತುಳುಕುತ್ತಾ ಇದೆ ಬೆಂಗಳೂರಿನ ರಸ್ತೆಗಳು. ಇದರಿಂದ ಗರಂ ಆದ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಪೀಠ ಬಿಬಿಎಂಪಿ ಮುಖ್ಯ ಎಂಜಿನಿಯರ್ ಪ್ರಭಾಕರ್ ಗೆ ಛೀಮಾರಿ ಹಾಕಿದೆ. ನಿಮಗೆ ಗುಂಡಿ ಮುಚ್ಚೋಕೆ ಸಾಧ್ಯವಾಗದೇ ಇದ್ದರೆ ನಾನೇ ಮಿಲಿಟರಿ ಕರೆಸ್ತೇನೆ ಅಂತ ಬೇಸರ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಪದೇ ಪದೇ ರಸ್ತೆ ಕಿತ್ತು ಹೋಗೋದಕ್ಕೂ ಬೇಸರ ವ್ಯಕ್ತಪಡಿಸಿದ್ದಾರೆ. …

Read More »