Breaking News

ನಿಮಗೆ ಗುಂಡಿ ಮುಚ್ಚೋದಕ್ಕೆ ಆಗದಿದ್ರೆ ಮಿಲಿಟರಿ ಕರೆಸ್ತೇನೆ – ಹೈಕೋರ್ಟ್ ಗರಂ

Spread the love

ಬೆಂಗಳೂರು: ಬಿಬಿಎಂಪಿಯ ಎಡವಟ್ಟಿನಿಂದ ಬೆಂಗಳೂರಿನಲ್ಲಿ ವಾಹನ ಸವಾರರು ಹೈರಾಣಾಗಿ ಹೋಗಿದ್ದಾರೆ. ಸಿಕ್ಕ ಸಿಕ್ಕ ಕಡೆಯಲೆಲ್ಲಾ ಗುಂಡಿಯಿಂದ ತುಂಬಿ ತುಳುಕುತ್ತಾ ಇದೆ ಬೆಂಗಳೂರಿನ ರಸ್ತೆಗಳು. ಇದರಿಂದ ಗರಂ ಆದ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಪೀಠ ಬಿಬಿಎಂಪಿ ಮುಖ್ಯ ಎಂಜಿನಿಯರ್ ಪ್ರಭಾಕರ್ ಗೆ ಛೀಮಾರಿ ಹಾಕಿದೆ.

ನಿಮಗೆ ಗುಂಡಿ ಮುಚ್ಚೋಕೆ ಸಾಧ್ಯವಾಗದೇ ಇದ್ದರೆ ನಾನೇ ಮಿಲಿಟರಿ ಕರೆಸ್ತೇನೆ ಅಂತ ಬೇಸರ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಪದೇ ಪದೇ ರಸ್ತೆ ಕಿತ್ತು ಹೋಗೋದಕ್ಕೂ ಬೇಸರ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಉತ್ತರಿಸಿದ ಮುಖ್ಯ ಎಂಜಿನಿಯರ್ ಪ್ರಭಾಕರ್ ಒಂದಷ್ಟು ಮಾಹಿತಿ ಕೋರ್ಟ್ ಗೆ ನೀಡಿದ್ದು, ಈಗಾಗಲೇ ಸಾಕಷ್ಟು ಗುಂಡಿಗಳನ್ಜು ಮುಚ್ಚಲಾಗಿದೆ. ಅಲ್ಲದೇ ಗುಂಡಿ ಮುಚ್ಚೋದಕ್ಕೆ ಟೆಂಡರ್ ಪ್ರಕ್ರಿಯೆ ಮುಗಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ಇದೇ ಮೊದಲ ಬಾರಿಗೆ ವಿಚಾರಣೆಗೆ ಹಾಜರಾಗಿದ್ದೀರಿ ಅಂತ ಸುಮ್ಮನಾಗಿದ್ದೀನಿ. ಇನ್ನು ಮುಂದೆ ಗುಂಡಿಗಳಿಂದ ಸಾವನ್ನಪ್ಪಿದರೆ ನಿಮ್ಮನ್ನೇ ಹೊಣೆ ಮಾಡುವುದಾಗಿ ಎಚ್ಚರಿಕೆ ನೀಡಿದರು. 


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ