Home / ರಾಜಕೀಯ (page 1141)

ರಾಜಕೀಯ

ಉಕ್ರೇನ್​​ನಿಂದ ಬೆಂಗಳೂರಿಗೆ‌ ಆಗಮಿಸಿದ ಐವರು ವಿದ್ಯಾರ್ಥಿಗಳು.. ಸರ್ಕಾರಕ್ಕೆ ಥ್ಯಾಂಕ್ಸ್​ ಹೇಳಿದ ಸ್ಟುಡೆಂಟ್ಸ್​​

ದೇವನಹಳ್ಳಿ(ಬೆಂಗಳೂರು): ಉಕ್ರೇನ್​ ಮೇಲೆ ರಷ್ಯಾ ಆಕ್ರಮಣ ಮುಂದುವರಿದಿದೆ. ಉಕ್ರೇನ್​ನಲ್ಲಿ ಭಾರತೀಯರು ಸಿಲುಕಿಕೊಂಡಿದ್ದು, ಅಲ್ಲಿಂದ ಅವರನ್ನು ಮರಳಿ ದೇಶಕ್ಕೆ ಕರೆತರುವ ಕೆಲಸ ಆಗುತ್ತಿದೆ. ಅದರಂತೆ ಐವರು ವಿದ್ಯಾರ್ಥಿಗಳು ಉಕ್ರೇನ್​ನಿಂದ ದೆಹಲಿಗೆ ಬಂದು, ಅಲ್ಲಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣಕ್ಕೆ ನಿನ್ನೆ ರಾತ್ರಿ 8 ಗಂಟೆಗೆ ಆಗಮಿಸಿದ್ದಾರೆ. ಸೋಮವಾರ ರಾತ್ರಿ 5 ವಿದ್ಯಾರ್ಥಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ವಿದ್ಯಾರ್ಥಿಗಳಾದ ಶ್ರವಣ ಸಂಗಣ್ಣ, ಶಕ್ತಿಶ್ರೀ ಶೇಖರ್, ಮೈನಾ ಅನಿಲ್​​ ನಾಯಕ್, ನಿಹಾರಿಕಾ, ಆಶಾ …

Read More »

ಬೈಲಹೊಂಗಲ ಬಳಿ ಬೈಕ್​ಗಳ ಮಧ್ಯೆ ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರಣ

ಬೆಳಗಾವಿ: ಬೈಕ್​​ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದ ಬಳಿ ನಡೆದಿದೆ. ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಮುಗುಟಸಾಬ್ ನದಾಪ್(25), ಸಂಗೊಳ್ಳಿ ಗ್ರಾಮದ ಪ್ರಸಾದ್ ವಕ್ಕುಂಡಮಠ(18) ಮೃತ ದುರ್ದೈವಿಗಳು. ಮತ್ತೋರ್ವ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಬೈಲಹೊಂಗಲ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೊಡವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ದೇಶದ ಮಹಿಳಾ ಸೈನ್ಯಕ್ಕೆ ಬೆಳವಡಿ ಮಲ್ಲಮ್ಮ ಹೆಸರಿಡಬೇಕು: ಸಚಿವೆ ಶಶಿಕಲಾ ಜೊಲ್ಲೆ

ಬೆಳಗಾವಿ: ಇವತ್ತಿನ ದಿನದಲ್ಲಿ ಪೈಲಟ್, ಇಂಡಿಯನ್ ಆರ್ಮಿ, ನೇವಿ ಸೇರಿದಂತೆ ಎಲ್ಲ ಕಡೆ ಮಹಿಳಾ ಸೈನ್ಯವನ್ನು ಸಜ್ಜುಗೊಳಿಸಲಾಗುತ್ತಿದೆ. ವೀರರಾಣಿ ಬೆಳವಡಿ ಮಲ್ಲಮ್ಮನ ಇತಿಹಾಸ ಇಡೀ ಜಗತ್ತಿಗೆ ಗೊತ್ತಾಗಲು ದೇಶದ ಯಾವುದಾದರೂ ಒಂದು ಮಹಿಳಾ ಸೈನ್ಯಕ್ಕೆ ಬೆಳವಡಿ ಮಲ್ಲಮ್ಮಜಿ ಹೆಸರಿಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದು ಮುಜರಾಯಿ, ಹಜ್ ಹಾಗೂ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ …

Read More »

ಹರ್ಷನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಬಿಜೆಪಿ ಪಾಲಿಕೆ ಸದಸ್ಯರು

ಶಿವಮೊಗ್ಗ: ಕೊಲೆಯಾದ ಭಜರಂಗದಳದ ಕಾರ್ಯಕರ್ತ ಹರ್ಷ ಅವರ ಮನೆಗೆ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ‌ ಹೇಳಿದ್ದಾರೆ. ಹರ್ಷ ಅವರ ಹತ್ಯೆಯಾದ ದಿನದಂದು ಪಾಲಿಕೆಯ ಎಲ್ಲ ಸದಸ್ಯರು ದೆಹಲಿ ಹಾಗೂ ರಾಜಸ್ಥಾನದ ಪ್ರವಾಸದಲ್ಲಿದ್ದರು. ಪ್ರವಾಸ ಮುಗಿಸಿ ವಾಪಸ್ ಬಂದ ಸದಸ್ಯರು ಹರ್ಷನ ಮನೆಗೆ ತೆರಳಿ ಸಾಂತ್ವನ ಹೇಳಿದ್ದಾರೆ. ಮಹಾನಗರ ಪಾಲಿಕೆಯ ಮೇಯರ್ ಸುನೀತ ಅಣ್ಣಪ್ಪನವರ ನೇತೃತ್ವದಲ್ಲಿ ಭೇಟಿ ನೀಡಿದ ಬಿಜೆಪಿ ಸದಸ್ಯರು ತಮ್ಮ ಒಂದು ತಿಂಗಳ ವೇತನ …

Read More »

ಗ್ರಾಹಕರಿಗೆ ಮತ್ತೆ ಶಾಕ್​.. ಸಿಲಿಂಡರ್‌ಗಳ ಬೆಲೆ 105 ರೂ. ಏರಿಕೆ!

ದೆಹಲಿಯಲ್ಲಿ ಇಂದಿನಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ (19 ಕೆಜಿಯ ಸಿಲಿಂಡರ್​) ಬೆಲೆಯನ್ನು 105 ರೂ.ಗಳಷ್ಟು ಹೆಚ್ಚಿಸಲಾಗಿದೆ. ಇಂದಿನಿಂದ ದೆಹಲಿಯಲ್ಲಿ 19 ಕೆ.ಜಿಯ ಸಿಲಿಂಡರ್ ಬೆಲೆ 2,012 ರೂ. ಆಗಿರಲಿದೆ. 5 ಕೆಜಿ ಸಿಲಿಂಡರ್ ಬೆಲೆ 27 ರೂ.ನಷ್ಟು ಏರಿಕೆಯಾಗಿದೆ. ಹಾಗಾಗಿ 5 ಕೆಜಿ ಸಿಲಿಂಡರ್ ಬೆಲೆ 569 ರೂ. ಇರಲಿದೆ. ಆದರೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನಲ್ಲಿ ಯಾವುದೇ ಹೆಚ್ಚಳವಿಲ್ಲ. ಎಲ್‌ಪಿಜಿ ಸಿಲಿಂಡರ್ ದರವನ್ನು ಭಾರತದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ …

Read More »

ಮಹಾಶಿವರಾತ್ರಿ ಪೂಜೆಯ ವಿಧಾನ:

ಮಹಾಶಿವರಾತ್ರಿಯು ಅತ್ಯಂತ ಪ್ರಮುಖವಾದ ಹಬ್ಬವಾಗಿದೆ. ಶಿವರಾತ್ರಿಯನ್ನು ಶಿವ-ಪಾರ್ವತಿಯ ವಿವಾಹದ ಹಬ್ಬ ಎಂದೂ ಹೇಳಲಾಗುತ್ತದೆ. ಶಿವ-ಪಾರ್ವತಿಯ ವಿಶೇಷ ಆಶೀರ್ವಾದ ಪಡೆಯಲು ಈ ದಿನವನ್ನು ಬಹಳ ವಿಶೇಷ ಎಂದು ಪರಿಗಣಿಸಲಾಗಿದೆ. ಈ ದಿನದಂದು ಭಗವಾನ್ ಶಿವನನ್ನು ಸಂಪೂರ್ಣ ಭಕ್ತಿ ಮತ್ತು ವಿಧಿವಿಧಾನಗಳಿಂದ ಪೂಜಿಸಿದರೆ, ಭೋಲೇನಾಥನು ಸಂತೋಷ, ಸಂಪತ್ತು, ಆರೋಗ್ಯ ಎಲ್ಲವನ್ನೂ ನೀಡುತ್ತಾನೆ. ಅದೇ ಸಮಯದಲ್ಲಿ, ಭಕ್ತರ ಸಕಲ ಆಸೆಗಳನ್ನು ಸಹ ಪೂರೈಸಲಾಗುತ್ತದೆ. ಮಂಗಳವಾರ, ಮಾರ್ಚ್ 1, 2022 ರಂದು, ಮಹಾಶಿವರಾತ್ರಿಯ ದಿನದಂದು, ಶಿವನನ್ನು …

Read More »

ಮಹಾಶಿವರಾತ್ರಿಯಂದು ಶಿವನ ಆರಾಧನೆಯಲ್ಲಿ ಈ ತಪ್ಪುಗಳನ್ನು ಮಾಡಬೇಡಿ

ಭಗವಾನ್ ಶಿವನು ತನ್ನ ಭಕ್ತರಿಂದ ಬಹಳ ಬೇಗನೆ ಸಂತುಷ್ಟನಾಗುತ್ತಾನೆ, ಆದ್ದರಿಂದ ಅವನನ್ನು ಭೋಲೆನಾಥ್ ಎಂದೂ ಕರೆಯುತ್ತಾರೆ. ಶಿವನ ಕೃಪೆ ಇದ್ದರೆ ಜೀವನದಲ್ಲಿ ಎಲ್ಲ ರೀತಿಯ ಸುಖ ಸಿಗುತ್ತದೆ. ಮತ್ತೊಂದೆಡೆ, ಶಿವನ ಅಸಮಾಧಾನವು ಜೀವನವನ್ನು ಸಂಕಷ್ಟದ ಹಾದಿಗೆ ದೂಡುತ್ತದೆ. ಆದುದರಿಂದ ಶಿವನ ಪೂಜೆಯಲ್ಲಿ ಯಾವುದೇ ತಪ್ಪನ್ನು ಮಾಡಬಾರದು. ಮಹಾಶಿವರಾತ್ರಿಯ ದಿನದಂದು ಭಗವಾನ್ ಶಿವನನ್ನು ಪೂಜಿಸುವಾಗ, ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ, ಇದರಿಂದ ಪೂಜೆಯ ಸಂಪೂರ್ಣ ಫಲವನ್ನು ಪಡೆಯಬಹುದಾಗಿದೆ. ಶಿವನ ಪೂಜೆಯಲ್ಲಿ ಈ …

Read More »

ಪುನೀತ್​ ರಾಜ್​ಕುಮಾರ್ ಅಭಿಮಾನಿಗಳಿಗೆ ಇಂದು (ಮಾರ್ಚ್​ 1) ವಿಶೇಷ ದಿನ.

ಪುನೀತ್​ ರಾಜ್​ಕುಮಾರ್ (Puneeth Rajkumar)​ ಅಭಿಮಾನಿಗಳಿಗೆ ಇಂದು (ಮಾರ್ಚ್​ 1) ವಿಶೇಷ ದಿನ. ಅವರು ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ ‘ಜೇಮ್ಸ್​’ನ (James Movie) ಲಿರಿಕಲ್​ ಸಾಂಗ್​​, ‘ಟ್ರೇಡ್​ಮಾರ್ಕ್​..’ (Trademark Song) ಬೆಳಗ್ಗೆ 11:11ಕ್ಕೆ ರಿಲೀಸ್​ ಆಗುತ್ತಿದೆ. ಈ ವಿಚಾರವನ್ನು ಈ ಮೊದಲು ಚಿತ್ರತಂಡ ಘೋಷಣೆ ಮಾಡಿತ್ತು. ಹೀಗಾಗಿ, ಅಭಿಮಾನಿಗಳು ಈ ಸಾಂಗ್​ ಕೇಳೋಕೆ ಕಾದು ಕೂತಿದ್ದಾರೆ. ಈಗಾಗಲೇಟೀಸರ್​ ಮೂಲಕ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈಗ ಚಿತ್ರದ ಹಾಡು ಹೇಗಿರಲಿದೆ ಎಂಬುದನ್ನು ನೋಡೋಕೆ …

Read More »

ಉಕ್ರೇನ್‍ನಲ್ಲಿಯೇ ಉಳಿದುಕೊಂಡಿರುವ ವಿದ್ಯಾರ್ಥಿಗಳ ಬಗ್ಗೆ ಸಮೀಕ್ಷೆ ಮಾಡಲಾಗುತ್ತಿದೆ: ಕೋಟಾ ಶ್ರೀನಿವಾಸ್

ಮಡಿಕೇರಿ: ಉಕ್ರೇನ್‍ನಲ್ಲಿ ಕರ್ನಾಟಕದ ನೂರಾರು ವಿದ್ಯಾರ್ಥಿಗಳು ಸಿಲುಕಿರುವ ಹಿನ್ನೆಲೆಯಲ್ಲಿ ಅಲ್ಲಿ ಸಿಲುಕಿರುವವರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಮುಂಜಾಗ್ರತೆ ವಹಿಸಿದೆ. ಅಲ್ಲದೆ ನಮ್ಮ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದಲೂ ಒಬ್ಬರು ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.ಮಡಿಕೇರಿಯಲ್ಲಿ ಅಂತ್ಯೋದಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಕ್ರೇನ್‍ನಲ್ಲಿ ಸಿಲುಕಿರುವ ನಾಗರಿಕರ ಜೊತೆಗೆ ನಿನ್ನೆಯೇ ರಾಜ್ಯದ 12 ವಿದ್ಯಾರ್ಥಿಗಳನ್ನು ಕರೆತರಲಾಗಿದೆ. ಸಂಪರ್ಕದ ಕೊರತೆ ಮತ್ತು ಏನು ಆಗುವುದಿಲ್ಲ ಎಂಬ …

Read More »

ಏಳು ಗಂಟೆಯಲ್ಲಿ 28 ಟನ್ ಕಬ್ಬು ಲೋಡ್ ಮಾಡಿದ ಯುವಕ!

ಚಿಕ್ಕೋಡಿ: ಯುವಕನೊಬ್ಬ ಕೇವಲ 7 ಗಂಟೆಯಲ್ಲಿ 02 ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಸುಮಾರು 28 ಟನ್ ಕಬ್ಬು ಹೇರಿದ್ದಾನೆ. ಈತನ ಸಾಧನೆ ಕಂಡು ಚಿಕ್ಕೋಡಿ ಜನರು ಹುಬ್ಬೇರಿಸಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಬರಮಖೋಡಿ ಗ್ರಾಮದ ಅನಿಲ್ ಕಾಬು ಜಾಧವ್ ಸಾಧನೆ ಮಾಡಿದ ಯುವಕ. ಆತನೊಬ್ಬನೇ ಕೇವಲ 7 ಗಂಟೆಯಲ್ಲಿ 02 ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಸುಮಾರು 28 ಟನ್ ಕಬ್ಬು ಹೇರಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾನೆ. ಈ ಹಿಂದೆ ಇದೇ ಬರಮಖೋಡಿ ಗ್ರಾಮದ …

Read More »