Home / ರಾಜಕೀಯ / ದೇಶದ ಮಹಿಳಾ ಸೈನ್ಯಕ್ಕೆ ಬೆಳವಡಿ ಮಲ್ಲಮ್ಮ ಹೆಸರಿಡಬೇಕು: ಸಚಿವೆ ಶಶಿಕಲಾ ಜೊಲ್ಲೆ

ದೇಶದ ಮಹಿಳಾ ಸೈನ್ಯಕ್ಕೆ ಬೆಳವಡಿ ಮಲ್ಲಮ್ಮ ಹೆಸರಿಡಬೇಕು: ಸಚಿವೆ ಶಶಿಕಲಾ ಜೊಲ್ಲೆ

Spread the love

ಬೆಳಗಾವಿ: ಇವತ್ತಿನ ದಿನದಲ್ಲಿ ಪೈಲಟ್, ಇಂಡಿಯನ್ ಆರ್ಮಿ, ನೇವಿ ಸೇರಿದಂತೆ ಎಲ್ಲ ಕಡೆ ಮಹಿಳಾ ಸೈನ್ಯವನ್ನು ಸಜ್ಜುಗೊಳಿಸಲಾಗುತ್ತಿದೆ. ವೀರರಾಣಿ ಬೆಳವಡಿ ಮಲ್ಲಮ್ಮನ ಇತಿಹಾಸ ಇಡೀ ಜಗತ್ತಿಗೆ ಗೊತ್ತಾಗಲು ದೇಶದ ಯಾವುದಾದರೂ ಒಂದು ಮಹಿಳಾ ಸೈನ್ಯಕ್ಕೆ ಬೆಳವಡಿ ಮಲ್ಲಮ್ಮಜಿ ಹೆಸರಿಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದು ಮುಜರಾಯಿ, ಹಜ್ ಹಾಗೂ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ವೀರರಾಣಿ ಬೆಳವಡಿ ಮಲ್ಲಮ್ಮನ ಉತ್ಸವ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಅಂದಿನ ಕಾಲದಲ್ಲಿ ಬೆಳವಡಿ ಮಲ್ಲಮ್ಮ, ವೀರರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಅನೇಕರು ರಾಜ ಮನೆತನದಲ್ಲಿ ಹುಟ್ಟಿ ಆರಾಮವಾಗಿ ಜೀವನ ಸಾಗಿಸಬಹುದಿತ್ತು.

ಆದರೆ, ಬ್ರಿಟಿಷರ ಗುಲಾಮಗಿರಿಯಿಂದ ತತ್ತರಿಸಿದ ಈ ನಾಡಿನ ಪ್ರಜೆಗಳಿಗೋಸ್ಕರ ಬೆಳವಡಿ ಮಲ್ಲಮ್ಮ ಸೇರಿದಂತೆ ಅನೇಕ ಜನರು ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಅಂತಹವರನ್ನು ಇವತ್ತಿನ ಹೆಣ್ಣುಮಕ್ಕಳು ಆದರ್ಶವಾಗಿಟ್ಟಕೊಳ್ಳಬೇಕು. ಸುಮಾರು ವರ್ಷಗಳ ಹಿಂದೆ ಹೆಣ್ಣು ಮಕ್ಕಳನ್ನು ಕರೆದುಕೊಂಡು ಶಸ್ತ್ರಾಸ್ತ್ರ ತರಬೇತಿ ನೀಡಿ ಸೈನ್ಯ ಕಟ್ಟಿದ ಈ ನಾಡಿನ ಮೊದಲ ಮಹಿಳೆ ಬೆಳವಡಿ ಮಲ್ಲಮ್ಮ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ