Breaking News
Home / ಜಿಲ್ಲೆ (page 788)

ಜಿಲ್ಲೆ

ಮನಮೋಹನ್ ಸಿಂಗ್, ಚಿದಂಬರಂ ಸೇರಿ 16 ಸಂಸದರು ಅಧಿವೇಶನಕ್ಕೆ ಗೈರು

ನವದೆಹಲಿ,  ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಸೇರಿದಂತೆ 16 ರಾಜ್ಯಸಭಾ ಸಂಸದರು ಸಂಸತ್ ಮುಂಗಾರು ಅಧಿವೇಶನದಲ್ಲಿ ಭಾಗವಹಿಸುವುದಿಲ್ಲ ಎಂದು ಮೇಲ್ಮನೆಗೆ ಮಾಹಿತಿ ನೀಡಿದ್ದಾರೆ. ಇಂದು ಸದನವು 14 ಸಂಸದರಿಗೆ ರಜೆ ಅನುಮೋದನೆ ನೀಡಿದ್ದರೆ, ಸೋಮವಾರ ತೃಣಮೂಲ ಕಾಂಗ್ರೆಸ್ ಸುಖೇಂಡು ಶೇಖರ್ ರಾಯ್ ಮತ್ತು ಸುಭಾಶಿಶ್ ಚಕ್ರವರ್ತಿ ಎಂಬ ಇಬ್ಬರು ಸಂಸದರಿಗೆ ರಜೆ ನೀಡಿತ್ತು. ಮನ್‍ಮೋಹನ್ ಸಿಂಗ್, ಚಿದಂಬರಂ ಮತ್ತು ಆಸ್ಕರ್ ಫರ್ನಾಂಡಿಸ್ (ಕಾಂಗ್ರೆಸ್), …

Read More »

ಶಿರಾ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿ.ಬಿ.ಜಯಚಂದ್ರ ಕಣಕ್ಕೆ

ಬೆಂಗಳೂರು,  ಶಿರಾ ಕ್ಷೇತ್ರದ ವಿಧಾನಸಭೆ ಉಪಚುನಾವಣೆಗೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ಅಭ್ಯರ್ಥಿಯಾಗಬೇಕೆಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಸೂಚಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ತುಮಕೂರು ಜಿಲ್ಲೆಯ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಕೆ.ಎನ್.ರಾಜಣ್ಣ ಅವರ ಉಪಾಧ್ಯಕ್ಷತೆಯಲ್ಲಿ ಚುನಾವಣೆ ನಡೆಸಲಾಗುತ್ತದೆ ಎಂದು ತಿಳಿಸಿದರು. ಸಭೆಯಲ್ಲಿ ಕೆ.ಎನ್.ರಾಜಣ್ಣ ಅವರು ಜಯಚಂದ್ರ ಅವರ ಅಭ್ಯರ್ಥಿಗಳಾಗಬೇಕೆಂದು …

Read More »

ಗೃಹ ಸಚಿವ ಬಸವರಾಜ ಬೊಮ್ಮಾಯಿಗೂ ಒಕ್ಕರಿಸಿದ ಕೊರೋನಾ!

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಬಳಿಕ ಇಡೀಗ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರಿಗೂ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಈ ಕುರಿತು ಸ್ವತಃ ಬಸವರಾಜ ಬೊಮ್ಮಾಯಿಯವರೇ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, ಕೊರೋನಾ ಪರೀಕ್ಷೆಗೊಳಪಟ್ಟಿದ್ದು, ನನಗೆ ಸೋಂಕು ದೃಢಪಟ್ಟಿದೆ. ಆದರೆ, ಯಾವುದೇ ರೀತಿಯ ಲಕ್ಷಣಗಳು ಕಂಡು ಬಂದಿಲ್ಲ, ಪ್ರಸ್ತುತ ಆರೋಗ್ಯವಾಗಿಯೇ ಇದ್ದು, ಮನೆಯಲ್ಲಿಯೇ ಪ್ರತ್ಯೇಕವಾಗಿದ್ದೇನೆಂದು ಹೇಳಿದ್ದಾರೆ. …

Read More »

ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷದಲ್ಲಿ ಈಗಾಗಲೇ ರಣತಂತ್ರ ಆರಂಭವಾಗಿದೆ. ಶಾಸಕ ಬಿ ಸತ್ಯನಾರಾಯಣ ಅವರ ನಿಧನದಿಂದ ತೆರವಾಗಿರುವ ಕ್ಷೇತ್ರವನ್ನು ಗೆಲ್ಲಲೇಬೇಕೆಂದು ಕಾಂಗ್ರೆಸ್‌ ಪಣತೊಟ್ಟಿದೆ.

ಬೆಂಗಳೂರು: ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷದಲ್ಲಿ ಈಗಾಗಲೇ ರಣತಂತ್ರ ಆರಂಭವಾಗಿದೆ. ಶಾಸಕ ಬಿ ಸತ್ಯನಾರಾಯಣ ಅವರ ನಿಧನದಿಂದ ತೆರವಾಗಿರುವ ಕ್ಷೇತ್ರವನ್ನು ಗೆಲ್ಲಲೇಬೇಕೆಂದು ಕಾಂಗ್ರೆಸ್‌ ಪಣತೊಟ್ಟಿದೆ. ಈ ಹಿನ್ನೆಲೆ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂಬಂಧ ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆಯೊಂದು ನಡೆದಿದೆ. ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಬುಧವಾರ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಈ …

Read More »

ಶುಭ ಹಾರೈಸಿದವರು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ.

ಬೆಂಗಳೂರು: ಕೆಪಿಸಿಸಿ ಮಾಜಿ ಅಧ್ಯಕ್ಷರು, ತಮಿಳುನಾಡು, ಪೊಂಡಿಛೆರಿ ಮತ್ತು ಗೊವಾ ರಾಜ್ಯಗಳ ಎಐಸಿಸಿ ಉಸ್ತುವಾರಿಯಾಗಿ ನೇಮಕಗೊಂಡ ದಿನೇಶ ಆರ್. ಗುಂಡುರಾವ ಅವರ ನಿವಾಸಕ್ಕೆ ತೆರಳಿ ಅವರನ್ನು ಬುದವಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಸನ್ಮಾನಿಸಿ ಶುಭ ಹಾರೈಸಿದರು. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಸಂಘಟನಾ ಚತುರರುರಾದ ದಿನೇಶ ಗುಂಡುರಾವ ಅವರು ಈ ಮೂರು ರಾಜ್ಯಗಳಿಗೆ ಎಐಸಿಸಿ ಉಸ್ತುವಾರಿಯಾಗಿರುವುದು ಪಕ್ಷಕ್ಕೆ ಬಲ ಬಂದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ …

Read More »

4 ಕೋಟಿ ಮೌಲ್ಯದ ಗಾಂಜಾ ವಶ, ಸಹಶಿಕ್ಷಕ ಸೇರಿ ಐವರ ಸೆರೆ..!

ಚಿತ್ರದುರ್ಗ  : ಹೊಲದಲ್ಲಿ ಗಾಂಜಾ ಬೆಳೆದಿದ್ದ ಸಹಶಿಕ್ಷಕ ಸೇರಿದಂತೆ ಐವರನ್ನು ಬಂಧಿಸಿ, 4 ಕೋಟಿ ಮೌಲ್ಯದ ಗಾಂಜಾ ಗಿಡ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‍ಪಿ ಜಿ.ರಾಧಿಕಾ ತಿಳಿಸಿದರು. ಸಂಡೂರು ತಾಲೂಕಿನ ಅಂತಾಪುರ ಕೊರಚರಹಟ್ಟಿಯ ರುದ್ರೇಶ(45), ಮಹದೇವಪುರ ಗ್ರಾಮದ ಸಮಂತಗೌಡ(42), ಭೂ ಮಾಲೀಕ ಸಹ ಶಿಕ್ಷಕ ವೈ.ಜಂಬುನಾಥ(50), ಹೊಟೇಲ್ ಮಾಲೀಕ ಡಿ.ಬಿ.ಮಂಜುನಾಥ(45) ಹಾಗೂ ಡಿ.ವೈ ಮಂಜುನಾಥ(48) ಇವರುಗಳನ್ನು ಬಂಧಿಸಲಾಗಿದೆ ಎಂದು ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ಮೊಳಕಾಲ್ಮೂರು ತಾಲ್ಲೂಕು ವಡೇರಹಳ್ಳಿ ಗ್ರಾಮದ ಜಮೀನಿನಲ್ಲಿ ಹೆಚ್ಚಿನ …

Read More »

ಆಸ್ತಿ ಹಕ್ಕು ನೀಡಲು ‘ಸ್ವಾಮಿತ್ವ’: ಗಡಿ, ವಿಸ್ತೀರ್ಣ, ಇತರ ದಾಖಲೆ ತಯಾರಿಗೆ ಯೋಜನೆ

ಬೆಳಗಾವಿ: ಕೇಂದ್ರ ಸರ್ಕಾರದ ‘ಸ್ವಾಮಿತ್ವ’ (ಸುಧಾರಿತ ತಂತ್ರಜ್ಞಾನ ಬಳಕೆ ಮೂಲಕ ಗ್ರಾಮಗಳ ಸಮೀಕ್ಷೆ ಹಾಗೂ ಮ್ಯಾಪಿಂಗ್) ಯೋಜನೆಗೆ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದ್ದು, ಅನುಷ್ಠಾನಕ್ಕೆ ಚಾಲನೆ ದೊರೆತಿದೆ. ಈ ತಿಂಗಳಲ್ಲಿ ಎಲ್ಲ 14 ತಾಲ್ಲೂಕುಗಳಲ್ಲೂ ತಲಾ 8ರಂತೆ 112 ಗ್ರಾಮ ಪಂಚಾಯಿತಿಗಳ 216 ಗ್ರಾಮಗಳಲ್ಲಿ ಯೋಜನೆ ನಡೆಯಲಿದೆ. ಇವುಗಳಲ್ಲಿ ಪೂರ್ಣಗೊಂಡ ನಂತರ ಇತರ ಪಂಚಾಯಿತಿಗಳ ಮಟ್ಟದಲ್ಲಿ ಆಸ್ತಿಗಳ ಮಾರ್ಕಿಂಗ್‌ ಆರಂಭವಾಗಲಿದೆ. 88 ಮಂದಿ ಸರ್ಕಾರಿ ಸರ್ವೇಯರ್‌ಗಳನ್ನು ನಿಯೋಜಿಸಲಾಗಿದೆ. ಮಾರ್ಕಿಂಗ್‌ ಬಳಿಕ ಡ್ರೋನ್‌ ಆಧಾರಿತ …

Read More »

ಬೀದಿ ನಾಟಕ ಕಲಾವಿದರು ಯಾವುದೆ  ಕಾಯ೯ಕ್ರಮಗಳು ಇಲ್ಲದೆ  ಪರದಾಡುವ ಪರಿಸ್ಥಿತಿ

ಬೆಳಗಾವಿ : ಕನಾ೯ಟಕ  ರಾಜ್ಯ ಬೀದಿ ನಾಟಕ ಕಲಾವಿದರ ಒಕ್ಕೂಟ ಬೆಳಗಾವಿ ಘಟಕದಿಂದ ಕಳೆದ  ಆರು ತಿಂಗಳಿಂದ ಬೀದಿ ನಾಟಕ ಕಲಾವಿದರು ಯಾವುದೆ  ಕಾಯ೯ಕ್ರಮಗಳು ಇಲ್ಲದೆ  ಪರದಾಡುವ ಪರಿಸ್ಥಿತಿ ಎದುರಾಗಿದ್ದು . ಬೀದಿ ನಾಟಕ ಕಲಾವಿದರು ಎಲ್ಲ ಇಲಾಖೆಗಳ ಯೋಜನೆಗಳನ್ನು   ಜನಸಾಮಾನ್ಯರಿಗೆ  ಬೀದಿ ನಾಟಕದ   ಮೂಲಕ  ತಿಳುವಳಿಕೆ  ಕೊಟ್ಟು  ಸಕಾ೯ರ  ಮತ್ತು ಇಲಾಖೆಯ  ನಡುವೀನ  ಕೊಂಡಿಗಳಂತ್ತೆ  ಕೆಲಸವನ್ನು ಕಳೆದ  ಸುಮಾರು  40 ಕ್ಕೂ  ಹೆಚ್ಚು ವಷ೯ಗಳಿಂದ  ಕಾಯ೯ಕ್ರಮಗಳನ್ನು  ಮಾಡಿಕೊಂಡು …

Read More »

ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (16-09-2020-ಬುಧವಾರ)

ಗುರುವಿನ ಸ್ಥಾನ ಅತ್ಯಂತ ಮಹತ್ವವೂ, ಜವಾಬ್ದಾರಿಯುತವೂ, ಕ್ಲಿಷ್ಟವೂ, ಜಟಿಲವೂ ಆದುದು. ಸಮಾಜ ಗುರುವಿನಿಂದ ಬಹಳಷ್ಟು ನಿರೀಕ್ಷಿಸುತ್ತದೆ. ಗುರು ದಾರಿ ತಪ್ಪಿದರೆ ಸಮಾಜ ನಾಶದತ್ತ ಸಾಗಿದಂತೆ. # ಪಂಚಾಂಗ : ಬುಧವಾರ, 16.09.2020 ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.19 ಚಂದ್ರ ಉದಯ ರಾ.05.51 / ಚಂದ್ರ ಅಸ್ತ ಸಂ.05.44 ಶಾರ್ವರಿ ಸಂವತ್ಸರ / ದಕ್ಷಿಣಾಯಣ / ರ್ಷ ಋತು / ಭಾದ್ರಪದ ಮಾಸ / ಕೃಷ್ಣ ಪಕ್ಷ …

Read More »

ನಟಿ ರಾಣಿಗೆ ಜೈಲು ಸೇರಿದಂತೆ ಮಗಳ ಪ್ರೀತಿಯ ಮನೆಯನ್ನು ಅವರ ತಂದೆ ನಿವೃತ್ತ ಸೇನಾಧಿಕಾರಿ ಮಾರಾಟಕ್ಕಿಟ್ಟಿದ್ದಾರೆ

ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ ಮಾಫಿಯಾ ಕೇಸಲ್ಲಿ ನಟಿ ರಾಗಿಣಿ ದ್ವಿವೇದಿ ಜೈಲು ಪಾಲಾಗಿದ್ದಾರೆ. ಸಿಸಿಬಿ ಕಸ್ಟಡಿಯ ಅಂತ್ಯವಾದ ಹಿನ್ನೆಲೆಯಲ್ಲಿ ರಾಗಿಣಿಯನ್ನು 1ನೇ ಎಸಿಎಂಎಂ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇತ್ತ ನಟಿ ರಾಣಿಗೆ ಜೈಲು ಸೇರಿದಂತೆ ಮಗಳ ಪ್ರೀತಿಯ ಮನೆಯನ್ನು ಅವರ ತಂದೆ ನಿವೃತ್ತ ಸೇನಾಧಿಕಾರಿ ಮಾರಾಟಕ್ಕಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಯಲಹಂಕದ ಅನನ್ಯ ಅಪಾರ್ಟ್‌ಮೆಂಟ್‌ನಲ್ಲಿ ರಾಗಿಣಿ ಅವರ ಫ್ಲ್ಯಾಟ್ ಇತ್ತು. ಇದೀಗ ಆ ಫ್ಲ್ಯಾಟನ್ನು ನಟಿ …

Read More »