Breaking News
Home / ಜಿಲ್ಲೆ (page 820)

ಜಿಲ್ಲೆ

ಹಿರಿಯ ಐಪಿಎಸ್‌ ಅಧಿಕಾರಿ ಹೌಸಿಂಗ್‌ ಬೋರ್ಡ್‌ ಡಿಜಿ ಆಗಿರುವ ಆರ್‌ಪಿ ಶರ್ಮಾ ತಮ್ಮ ರಿವಾಲ್ವರ್‌ನಿಂದ ಕುತ್ತಿಗೆಗೆ ಗುಂಡು ಹಾರಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಂಗಳೂರು: ಹಿರಿಯ ಐಪಿಎಸ್‌ ಅಧಿಕಾರಿ ಹೌಸಿಂಗ್‌ ಬೋರ್ಡ್‌ ಡಿಜಿ ಆಗಿರುವ ಆರ್‌ಪಿ ಶರ್ಮಾ ತಮ್ಮ ರಿವಾಲ್ವರ್‌ನಿಂದ ಕುತ್ತಿಗೆಗೆ ಗುಂಡು ಹಾರಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಸಂಜೆ ತಮ್ಮ ನಿವಾಸದಲ್ಲೇ 2 ಬಾರಿ ಕುತ್ತಿಗೆಗೆ ಆರ್‌ಪಿ ಶರ್ಮಾ ಫೈರ್‌ ಮಾಡಿಕೊಂಡಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ. ಕೊತ್ತನೂರಿನ ಮನೆಯಲ್ಲೇ ತಮಗೆ ತಾವೇ ಸರ್ವಿಸ್‌ ರಿವಾಲ್ವರ್‌‌ನಿಂದ ಗುಂಡು ಹಾರಿಸಿಕೊಂಡಿದ್ದಾರೆ. ಕೂಡಲೇ ಮನೆಯಲ್ಲಿದ್ದವರು ಹೆಬ್ಬಾಳದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಶರ್ಮಾ ದಾಖಲು ಮಾಡಿದ್ದಾರೆ. ಸ್ಥಳಕ್ಕೆ …

Read More »

ಬಾರದ ಪೆನ್ ಶನ್ ನಿಂದಾಗಿ ವಾಯುವ್ಯ ಸಾರಿಗೆಯ ಚಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೆ.2 ರಂದು ಬೆಳಕಿಗೆ ಬಂದಿದೆ.

ಹಾವೇರಿ: ನಿವೃತ್ತಿಯಾಗಿ ವರ್ಷ ಕಳೆದರು ಬಾರದ ಪೆನ್ ಶನ್ ನಿಂದಾಗಿ ವಾಯುವ್ಯ ಸಾರಿಗೆಯ ಚಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೆ.2 ರಂದು ಬೆಳಕಿಗೆ ಬಂದಿದೆ. ಶಿವಪ್ರಕಾಶ ಹೂಗಾರ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಈತ ನಗರದ ವಾಯುವ್ಯ ಸಾರಿಗೆ ಇಲಾಖೆಯ ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ಕಚೇರಿ ಮುಂಭಾಗದ ಹೊಟೇಲ್ ನಲ್ಲಿ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದು ಬಂದಿದೆ.  ಶಿವಪ್ರಕಾಶ ಹೂಗಾರ 1 ವರ್ಷ 8 ತಿಂಗಳ ಹಿಂದೆ ಚಾಲಕ ಹುದ್ದೆಯಿಂದ …

Read More »

ಗೋಕಾಕ ನಲ್ಲಿ ಸಿದ್ದು ಕನಮಡ್ಡಿ ಕೊಲೆಗೆ ಹೊಸ ತೀರವು

ಗೋಕಾಕ : ಬೆಳಗಾವಿ ಜಿಲ್ಲಾ ಪೋಲಿಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಕಳೆದ ನಾಲ್ಕು ತಿಂಗಳ ಹಿಂದೆ ನಡೆದಿದ್ದ ದಲಿತ ಯುವಕನ ಕೊಲೆ ಪ್ರಕರಣದ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ನಿ‌ನ್ನೆ ರಾತ್ರಿ ಆರೋಪಿಗಳ ಮನೆಗಳ ಮೇಲೆ ಸರ್ಚ್ ವಾರಂಟ್ ಜೊತೆಗೆ ನಡೆಸಿದ ದಾಳಿಯಲ್ಲಿ ಅಪಾರ ಪ್ರಮಾಣದ ನಗದು, ಮಾರಕಾಸ್ತ್ರ, ಮಾದಕ ವಸ್ತು ಸೇರಿದಂತೆ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನ ಪೋಲಿಸರು ವಶಕ್ಕೆ ಪಡೆದಿದ್ದಾರೆ. ಕಳೆದ ನಾಲ್ಕು ತಿಂಗಳ …

Read More »

ನಿಸ್ವಾರ್ಥ ಭಕ್ತಿಯಿಂದ ಫಲ

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರ ರುದ್ರಾಕ್ಷಿಮಠ, ಬೆಳಗಾವಿ —– ಹರಿದ ಗೋಣಿಯಲೊಬ್ಬ ಕಳವೆಯ ತುಂಬಿದ ಇರುಳೆಲ್ಲ ನಡೆದನಾ ಸುಂಕಕಂಜಿ ಕಳವೆಯೆಲ್ಲ ಹೋಗಿ ಬರಿ ಗೋಣಿ ಉಳಿಯಿತ್ತು ಅಳಿಮನದವನ ಭಕ್ತಿ ಇಂತಾಯಿತ್ತು ರಾಮನಾಥ ಮಾನವನ ಜೀವನ ತುಂಬಾ ಸೂಕ್ಷ್ಮವಾದುದು. ಆತನ ಬದುಕಿನಲ್ಲಿ ನಿಷ್ಠೆಯ ಸೇವೆ, ಪ್ರಾಮಾಣಿಕತೆ, ತ್ಯಾಗಕ್ಕೆ ಬೆಲೆ ಇದ್ದೇ ಇರುತ್ತದೆ. ಒಬ್ಬ ವ್ಯಕ್ತಿಯು ಹರಿದ ಗೋಣಿ ಚಿಲದಲ್ಲಿ ಭತ್ತವನ್ನು ತುಂಬಿಟ್ಟಿದ್ದ. ಭತ್ತವನ್ನು ಹೊಲದಿಂದ ಹಗಲಿನಲ್ಲಿ ಮನೆಗೆ ಸಾಗಿಸಿದರೆ ತೆರಿಗೆಯವರು ಸುಂಕ ವಿಧಿಸಬಹುದು …

Read More »

ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ

ಚಿಕ್ಕಮಗಳೂರು.    ರಾಷ್ಟ್ರೀಯ ಹೆದ್ದಾರಿ-73 (ಹಳೆಯ ಸಂಖ್ಯೆ-234)ರ ಮಂಗಳೂರು-ವಿಲ್ಲಂಪುರ ರಸ್ತೆಯ 86.200 ರಿಂದ 90.200ಕಿಮೀ ಕೊಟ್ಟಿಗೆಹಾರದವರೆಗಿನ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ದಿನದ 24 ಗಂಟೆ ಲಘುವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೆದ್ದಾರಿ ವಿಭಾಗದ ಕಾರ್ಯಪಾಲಕ ಅಭಿಯಂತರರ ವರದಿಯನ್ವಯ ಪ್ರಸ್ತುತ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಮಳೆಯ ಪ್ರಮಾಣ ಕ್ಷೀಣಿಸಿರುವುದರಿಂದ ವಾಹನಗಳ ಸುಗಮ ಸಂಚಾರ ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ಕೇಂದ್ರ ಮೋಟಾರು ವಾಹನ ಕಾಯ್ದೆ ಅನ್ವಯ ರಾಷ್ಟ್ರೀಯ ಹೆದ್ದಾರಿ-73ರ ಮಂಗಳೂರು-ತುಮಕೂರು ರಸ್ತೆಯ 86.200ಕಿಮೀ …

Read More »

ಸರ್ಕಾರಿ ಗ್ಯಾರಂಟಿ ಇರುವ ಈ ಖಾತೆ ಯಲ್ಲಿ ಕೇವಲ ರೂ.500 ಉಳಿತಾಯ ಮಾಡಿ ಲಕ್ಷಾಂತರ ಗಳಿಕೆ ಮಾಡಿ

ನವದೆಹಲಿ: ನೀವು ಹಣ ಹೂಡಿಕೆಗಾಗಿ ಯಾವುದಾದರೊಂದು ಯೋಜನೆಯ ಹುಡುಕಾಟದಲ್ಲಿದ್ದಾರೆ ಸಾರ್ವಜನಿಕ ಭವಿಷ್ಯ ನಿಧಿ (PPF) ಒಂದು ಉತ್ತಮ ಆಯ್ಕೆಯಾಗಿದೆ. ಪಿಪಿಎಫ್ ಖಾತೆಯನ್ನು ಕೇವಲ 500 ರೂಪಾಯಿಗಳೊಂದಿಗೆ ತೆರೆಯಬಹುದು. ಆರ್ಥಿಕ ವರ್ಷವೊಂದರಲ್ಲಿ ಈ ಖಾತೆಯಲ್ಲಿ ಕನಿಷ್ಠ 500 ರೂಪಾಯಿ ಠೇವಣಿ ಇಡಬೇಕಾಗುತ್ತದೆ. ಒಂದು ವರ್ಷದಲ್ಲಿ ಗರಿಷ್ಠ 1.5 ಲಕ್ಷ ರೂಪಾಯಿಗಳನ್ನು ಜಮಾ ಮಾಡಬಹುದು. ಪ್ರಸ್ತುತ, ಇದು ಶೇಕಡಾ 7.1 ರಷ್ಟು ಬಡ್ಡಿಯನ್ನು ನೀಡುತ್ತಿದ್ದು, ಇದು ಬ್ಯಾಂಕ್ ಸ್ಥಿರ ಠೇವಣಿಗಿಂತ ಹೆಚ್ಚಾಗಿದೆ. ಪೋಸ್ಟ್ ಆಫೀಸ್ …

Read More »

ಕಿಚ್ಚನಿಗೆ ಬರ್ತ್ ಡೇ ಸಂಭ್ರಮ. 47ನೇ ವಸಂತಕ್ಕೆ ಕಾಲಿಡುತ್ತಿರುವ ನಟ ಸುದೀಪ್‌

ನಟ ಕಿಚ್ಚ ಸುದೀಪ್‌ ಅವರಿಗೆ ಇಂದು   ಜನ್ಮದಿನದ ಸಂಭ್ರಮ. 47ನೇ ವಸಂತಕ್ಕೆ ಕಾಲಿಡುತ್ತಿರುವ ಕಿಚ್ಚ ಸುದೀಪ್‌ ಅವರಿಗೆ ಚಿತ್ರೋದ್ಯಮದಿಂದ, ಅಭಿಮಾನಿ  ಗಳಿಂದ, ವಿವಿಧ ಕ್ಷೇತ್ರಗಳ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇನ್ನು ಪ್ರತಿವರ್ಷ ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಸಾರ್ವಜನಿಕವಾಗಿ, ಅದ್ಧೂರಿಯಾಗಿ ಆಚರಿಸಿ ಕೊಂಡು ಬರುತ್ತಿದ್ದ ಕಿಚ್ಚನ ಅಭಿಮಾನಿಗಳ ಬರ್ತ್‌ಡೇ ಸಂಭ್ರಮಾ ಚರಣೆಗೆ ಈ ಬಾರಿ ಕೋವಿಡ್ ಬ್ರೇಕ್‌ ಹಾಕಿದೆ. ಹೌದು, ಕೋವಿಡ್ ಲಾಕ್‌ಡೌನ್‌ನ ಕೆಲ ನಿಯಮಗಳು ಇನ್ನೂ …

Read More »

ಇಂಡಿಯನ್ ಎಕ್ಸ್ ಪ್ರೆಸ್: ಎನ್ ಜಿ ಓಗೆ ಆಯಂಬುಲೆನ್ಸ್ ದಾನ ನೀಡಿದ ಶಾಸಕ ಅನಿಲ್ ಬೆನಕೆ

ಬೆಳಗಾವಿ: ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಮಾಡಿದ ವರದಿ ಹಿನ್ನೆಲೆಯಲ್ಲಿ ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ ಹೆಲ್ಪ್ ಫಾರ್ ನೀಡಿ ಎಂಬ ಎನ್ ಜಿ ಓಗೆ ಆಯಂಬುಲೆನ್ಸ್ ಕೊಡುಗೆ ನೀಡಿದ್ದಾರೆ. ಆಗಸ್ಟ್ 31 ರಂದು ಕೋವಿಡ್ ಸ್ಪೆಷಲ್ ವರ್ಕರ್, ಎಂಬ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಈ ವೇಳೆ ಎನ್ ಜಿ ಕಾರ್ಯಕರ್ತ ಸುರೇಂದತ್ರ ಅಂಗೋಲ್ಕರ್ ಆಯಂಬುಲೆನ್ಸ್ ಬೇಕೆಂದು ಮನವಿ ಮಾಡಿದ್ದರು. ಶಾಸಕ ಅನಿಲ್ ಬೆನಕೆ ಶಾಸಕರ ನಿಧಿಯನ್ನು …

Read More »

ಗೋಕಾಕ ತಾಲೂಕು ಆಸ್ಪತ್ರೆ ವರ್ತನೆಯ ಖಂಡಿಸಿ : ಕರ್ನಾಟಕ ರಕ್ಷಣಾ ವೇದಿಕೆಯಿಂದ ಮುಷ್ಕರ.

ಗೋಕಾಕನಲ್ಲಿರುವ ಜನ ಪ್ರಸಿದ್ಧ ಆಸ್ಪತ್ರೆ ಅಂದರೆ ಅದು ಗೋಕಾಕ ಸರಕಾರಿ ತಾಲೂಕ ಆಸ್ಪತ್ರೆ. ಆದರೆ ಈ ಆಸ್ಪತ್ರೆಯಲ್ಲಿ ಕೆಲವು ಡಾಕ್ಟರಗಳು ಮತ್ತು ನರ್ಸಗಳಿಂದ ಅಮಾನವೀಯ ವರ್ತನೆಯಿಂದ ಕಪ್ಪು ಚುಕ್ಕಿ ಆಗಿದೆ ಎಂದರೆ ತಪ್ಪಾಗಲಾರದು. ಅದು ಹೇಗೆಂದರೆ ಕೆಲವು ದಿನಗಳಿಂದ ತಾಲೂಕ ಆಸ್ಪತ್ರೆಯಲ್ಲಿ ಬರುವಂತಹ ತುಂಬು ಗರ್ಭಿಣಿಯರು ತೋರಿಸಿಕೊಳ್ಳಲಿಕ್ಕೆ ಬಂದರೆ ಈ ಡಾಕ್ಟರಗಳು ಮತ್ತು ನರ್ಸಗಳಿಂದ ಅವರಿಗೆ ನರಕಯಾತನೆ ಆಗುವ ಹಾಗೆ ಮಾಡುತ್ತಾರೆ ಎಂದರೆ ತಪ್ಪಾಗಲಾರದು ಮತ್ತು ಆಸ್ಪತ್ರೆಗೆ ಬಂದ ತಕ್ಷಣ …

Read More »

ಪಂಚಾಯತ್ ರಾಜ್  ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕೊರೊನಾ ಸೋಂಕು

ಶಿವಮೊಗ್ಗ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್  ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನೆಯಷ್ಟೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು.  ಇಂದು ಸಚಿವ ಕೆ.ಎಸ್ ಈಶ್ವರಪ್ಪಗೂ ಕೊರೊನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ನನಗೆ ಇಂದು ಕೊರೊನಾ ಸೋಂಕು ದೃಢ ಪಟ್ಟಿದ್ದು, ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇಲ್ಲ.  ಸಧ್ಯಕ್ಕೆ ವೈದ್ಯರ ಸಲಹೆಯಂತೆ ಆಸ್ಪತ್ರೆಯಲ್ಲಿ …

Read More »