ಬೆಂಗಳೂರು, ಮಾರ್ಚ್ 18: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಸ್ಫೋಟ ಪ್ರಕರಣ ಸಂಬಂಧ ದೂರುದಾರ ದಿನೇಶ್ ಕಲ್ಲಹಳ್ಳಿ “ದೂರು ವೃತ್ತಾಂತ”ವನ್ನು ಎಸ್‌ಐಟಿಗೆ ನಾಲ್ಕು ಪುಟಗಳ ಹೇಳಿಕೆಯನ್ನು ಸಲ್ಲಿಸಿದ್ದಾರೆ. ಕೆಲ ವರ್ಷಗಳಿಂದ ಪರಿಚಯವಿದ್ದ ಯುವಕ ಸಿಡಿ ಕೊಟ್ಟಿದ್ದು, ದೂರು ಕೊಡುವ ನೆಪದಲ್ಲಿ ಸಿಡಿ ಸ್ಫೋಟಿಸಿದ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಯಾರೋ ಹೇಳಿದಕ್ಕೆ ನಾನು ಆ ಅಸಯ್ಯದ ಕೆಲಸ ಮಾಡಿಬಿಟ್ಟೆ ಮಾ. 2 ರಂದು ದಿನೇಶ್ ಕಲ್ಲಹಳ್ಳಿ ಜನ ಸಂಪನ್ಮೂಲ …
Read More »ಸಿ.ಡಿ ಪ್ರಕರಣ: ಶ್ರವಣ ತಂದೆಯಿಂದ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ
ಬೆಂಗಳೂರು: ಶಾಸಕ ರಮೇಶ ಜಾರಕಿಹೊಳಿ ಸಿ.ಡಿ ಪ್ರಕರಣದ ಆರೋಪಿ ಎನ್ನಲಾದ ಶ್ರವಣಕುಮಾರ್ ಅವರ ತಂದೆ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಮತ್ತೊಬ್ಬ ಮಗ ಚೇತನ್ ಅವರನ್ನು ಎಸ್‌ಐಟಿ ಪೊಲೀಸರು ಅಕ್ರಮವಾಗಿ ಬಂಧನದಲ್ಲಿ ಇರಿಸಿಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಪಿ.ಸೂರ್ಯಕುಮಾರ್ ದೂರಿದ್ದಾರೆ. ಗೃಹ ಇಲಾಖೆ ಕಾರ್ಯದರ್ಶಿ, ಎಸ್‌ಐಟಿ, ಕಬ್ಬನ್ ಪಾರ್ಕ್ ಹಾಗೂ ಸದಾಶಿವನಗರ ಪೊಲೀಸ್ ಠಾಣಾಧಿಕಾರಿಗಳನ್ನು ಪ್ರತಿವಾದಿ ಮಾಡಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ‘ಮಾ.13ರಂದು ಮನೆಗೆ ದಾಳಿ ಮಾಡಿದ್ದ ಎಸ್‌ಐಟಿ …
Read More »ಹಸು ಬಿಡಿ, ಹಸಿವಿನತ್ತ ನೋಡಿ: ರಮೇಶ್‌ಕುಮಾರ್
ಬೆಂಗಳೂರು: ‘ರಾಜ್ಯ ಸರ್ಕಾರ ಜಾನುವಾರು ಹತ್ಯೆ ನಿಷೇಧ ಕಾಯ್ದೆ ತಂದ ಮೇಲೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗೋವನ್ನು ಪೂಜಿಸುವುದು ತಪ್ಪಲ್ಲ. ಆದರೆ, ಹಸುವಿನ ಹೆಸರಿನಲ್ಲಿ ರಾಜಕಾರಣ ಮಾಡುವುದಕ್ಕಿಂತ ಹಸಿವು ಮುಕ್ತ ಮಾಡುವುದಕ್ಕೆ ಪೂರಕವಾದ ರಾಜಕೀಯ ಮಾಡೋಣ’ ಎಂದು ಕಾಂಗ್ರೆಸ್‌ನ ಕೆ.ಆರ್.ರಮೇಶ್ ಕುಮಾರ್ ಸಲಹೆ ನೀಡಿದರು. ವಿಧಾನಸಭೆಯಲ್ಲಿ ಗುರುವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ‘ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ ಕಾಯ್ದೆ ಜಾರಿಗೆ ಬಂದ ಬಳಿಕ ಹೈನುಗಾರಿಕೆ ವೃತ್ತಿಯಲ್ಲಿರುವವರ …
Read More »ಕಾನ್‍ಸ್ಟೆಬಲ್ ಹುದ್ದೆಗಳ ಭರ್ತಿ ನಂತರ ಪೊಲೀಸರಿಗೆ ಪಾಳಿ ಕರ್ತವ್ಯದ ವ್ಯವಸ್ಥೆ ಜಾರಿ : ಬೊಮ್ಮಾಯಿ
ಬೆಂಗಳೂರು, ಮಾ.18- ಪೊಲೀಸ್ ಕಾನ್‍ಸ್ಟೆಬಲ್ ಹುದ್ದೆಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿದ ಬಳಿಕ ಪಾಳಿ ಕರ್ತವ್ಯದ ವ್ಯವಸ್ಥೆಯನ್ನು ಜಾರಿಗೆ ತರುವ ಕುರಿತು ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದರು.ವಿಧಾನಪರಿಷತ್‍ನಲ್ಲಿ ಪ್ರಶ್ನೋತ್ತರದ ಅವಯಲ್ಲಿ ಸದಸ್ಯ ಎಸ್.ರವಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ 2 ವರ್ಷಗಳಿಂದ ದೊಡ್ಡ ಪ್ರಮಾಣದಲ್ಲಿ ನೇಮಕಾತಿ ನಡೆದಿದೆ. ಪಿಎಸ್‍ಐನಿಂದ ಕಾನ್‍ಸ್ಟೆಬಲ್‍ವರೆಗೆ 15 ಸಾವಿರ ಹುದ್ದೆ ಭರ್ತಿ ಮಾಡಿಕೊಳ್ಳಲಾಗಿದೆ. ಇನ್ನು 23 ಸಾವಿರ ಹುದ್ದೆಗಳು ಖಾಲಿ …
Read More »ಸಾಹುಕಾರ್ ಸಿಡಿ ಪ್ರಕರಣ – ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಯುವತಿ ಸಹೋದರರು
ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಎಸ್ ಐಟಿ ತನಿಖೆ ಚುರುಕುಗೊಂಡಷ್ಟು ಸ್ಫೋಟಕ ಮಾಹಿತಿಗಳು ಹೊರಬರುತ್ತಲೇ ಇದೆ. ಇದೀಗ ಸಿಡಿಯಲ್ಲಿರುವ ಯುವತಿಯ ಸಹೋದರರು ವಿಚಾರಣೆ ವೇಳೆ ಆಘಾತಕಾರಿ ಮಾಹಿತಿ ಬಾಯ್ಬಿಟ್ಟಿದ್ದಾರೆ. ಯುವತಿಯ ತಂದೆ ತಮ್ಮ ಮಗಳು ಕಿಡ್ನಾಪ್ ಆಗಿದ್ದಾಳೆ ಎಂದು ಎರಡು ದಿನಗಳ ಹಿಂದೆ ಬೆಳಗಾವಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಯುವತಿಯ ಮನೆಯವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ …
Read More »ಬೆಳಗಾವಿ ಜಿಲ್ಲೆಯಲ್ಲಿ ಇಂದು 24 ಕೊರೊನಾ ಕೇಸ್ ಪತ್ತೆ..ಸದಾಶಿವನಗರ ಈಗ ಮೈಕ್ರೋ ಕಂಟೇನ್ಮೆಂಟ್ ಪ್ರದೇಶ
ದಿನದಿಂದ ದಿನಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಶುರುವಾಗಿದೆ. ಜಿಲ್ಲೆಯ್ಲಿ ಇಂದು ಒಟ್ಟು 24 ಕೊರೊನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿವೆ. ಇದರಿಂದ ಕುಂದಾನಗರಿ ಜನರಲ್ಲಿ ಆತಂಕ ಮನೆ ಮಾಡಿದೆ. ಹೌದು ಗುರುವಾರ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ಹೆಲ್ತ್ ಬುಲೆಟಿನ್‍ನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 24 ಜನರಿಗೆ ಮಹಾಮಾರಿ ಕೊರೊನಾ ವಕ್ಕರಿಸಿಕೊಂಡಿದೆ. ಇದರಲ್ಲಿ ಸದಾಶಿವನಗರದಲ್ಲಿಯೇ 7 ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿರುವ ಹಿನ್ನೆಲೆ ಸರ್ಕಾರದ ಆದೇಶದಂತೆ ಮೈಕ್ರೋ …
Read More »ಘಟಪ್ರಭಾ ಸಮೀಪದ ಶಿಂದಿಕುರಬೇಟ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ ಸಾರಾಯಿ ಕುಡಿದು ರೋಗಿಗಳಿಗೆ ಚಿಕಿತ್ಸೆ
ಹೆಣ್ಣು ಮಗಳು ಹೆಣ್ಣು ಕುಲಕ್ಕೆ ಮತ್ತು ವೈದ್ಯ ಕುಲಕ್ಕೆ ಅಪಮಾನ ಮಾಡಿದ್ದಾರೆ . ಸಾರಾಯಿ ಕುಡಿದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ . ಅಷ್ಟೇ ಅಲ್ಲದೇ ಸಿಗರೇಟ್ ಸೇದಿ ಹೊಗೆ ಕೂಡ ಬಿಟ್ಟಿದ್ದಾರೆ . ಈ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಹೀಗೆ ಸಿಗರೇಟ್ ಸೇರಿ ಹೊಗೆ ಬಿಡುತ್ತಿರುವ, ಸಾರಾಯಿ ಕುಡಿಯುತ್ತಿರುವ ಈ ಮಹಿಳೆಯರು ಗೋಕಾಕ್ ತಾಲೂಕಿನ ಘಟಪ್ರಭಾ ಸಮೀಪದ ಶಿಂದಿಕುರಬೇಟ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ ಮತ್ತು ಗ್ರೂಪ್ …
Read More »C.D. ಪ್ರಕರಣ – ಮಾಜಿ ಪತ್ರಕರ್ತರು ಹೇಳಿದ್ದೇನು?
ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೆಸರು ಕೇಳಿ ಬಂದಿರುವುದಕ್ಕೆ ಮಾಜಿ ಪತ್ರಕರ್ತರಾದ ನರೇಶ್ ಗೌಡ ಮತ್ತು ಭವಿತ್ ಎಂಬುವವುರು ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿ ಮಾತನಾಡಿದ್ದಾರೆ. ಭವಿತ್ ಮಾತನಾಡಿ, ಸಿಡಿ ಪ್ರಕರಣದಲ್ಲಿ ನನ್ನ ಹೆಸರು ಕೇಳಿ ಬಂದಿರುವುದು ಆಘಾತ ಉಂಟು ಮಾಡಿದೆ. ನಾನು ಪ್ರಕರಣದ ಸೂತ್ರದಾರನೂ ಅಲ್ಲ, ಭಾಗಿಯೂ ಆಗಿಲ್ಲ ಎಂದು ಹೇಳಿದ್ದಾರೆ. ಎಸ್ ಐಟಿ ಅಧಿಕಾರಿಗಳು ವಿಚಾರಣೆಗೆ …
Read More »ಸಂಪರ್ಕಿತರನ್ನ ಪತ್ತೆ ಹಚ್ಚಲು ಕ್ರಮ ಕೈಗೊಳ್ಳಿ, ನಿರ್ಲಕ್ಷ್ಯ ಮಾಡಿದ್ರೆ, ನೀವೇ ಹೊಣೆ: ಆಯುಕ್ತ ಮಂಜುನಾಥ್ ಪ್ರಸಾದ್
ಬೆಂಗಳೂರು: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವ್ರು ಇಂದು ವಲಯವಾರು ಅಧಿಕಾರಿಗಳ ಜೊತೆ ವಿಶೇಷ ಸಭೆ ನಡೆಸಿದ್ದು, ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಹವಾಳಿಯನ್ನ ಹತೋಟಿಗೆ ತರಲು ಬಿಬಿಎಂಪಿ ಮುಂದಾಗಿದೆ. ಸಭೆಯ ಮಾತನಾಡಿದ ಆಯುಕ್ತರು, ‘ ಸೋಂಕು ಪತ್ತೆಯಾದ ಕೂಡಲೇ ಅವ್ರ ಜೊತೆ ಸಂಪರ್ಕದಲ್ಲಿ ಇರೋರನ್ನ ಪತ್ತೆ ಹಚ್ಚಿ. ಸೋಂಕಿತರ ಮೊಬೈಲ್ ನಂಬರ್, ಪಿನ್ ನಂಬರ್, ಅಡ್ರೆಸ್ ನಂಬರ್ ತೆಗೆದುಕೊಂಡು ಹುಡುಕಿ. ನೀವು ಸರಿಯಾಗಿ ಅಡ್ರೆಸ್ ತೆಗೆದುಕೊಳ್ಳದಿದ್ರೆ ಕಾಂಟ್ಯಾಕ್ಟ್ ಮಿಸ್ ಆಗುತ್ತೆ. …
Read More »ಹೈಕಮಾಂಡ್ ಹೇಳಿದರೆ ಸ್ಪರ್ಧೆಗೆ ಸಿದ್ಧ:ಸತೀಶ್ ಜಾರಕಿಹೊಳಿ
ಬೆಳಗಾವಿ: ಬೆಳಗಾವಿ ಲೋಕಸಭಾ ಉಪಚುನಾವಣೆ ಅಖಾಡ ರಂಗೇರುತ್ತಿದ್ದು, ಟಿಕೆಟ್ ಆಕಾಂಕ್ಷಿಗಳ ಲಾಬಿ ಆರಂಭವಾಗಿದೆ. ಈ ನಡುವೆ ಹೈಕಮಾಂಡ್ ಸೂಚಿಸಿದರೆ ಸ್ಪರ್ಧೆಗೆ ಸಿದ್ಧ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿ ಲೋಕಸಭಾ ಉಪಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ಹೈಕಮಾಂಡ್ ಹೇಳಿದರೆ ನಾನು ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧ. ಈಗಾಗಲೇ ಮೂರರಿಂದ ನಾಲ್ಕು ಜನರ ಹೆಸರು ಚಾಲ್ತಿಯಲ್ಲಿದೆ ಇದರಲ್ಲಿ ನಾನೂ ಒಬ್ಬ ಎಂದರು. ಟಿಕೆಟ್ ವಿಚಾರವಾಗಿ ಪಕ್ಷದಲ್ಲಿ …
Read More »
Laxmi News 24×7