Breaking News

ನಟಿ ರಾಣಿಗೆ ಜೈಲು ಸೇರಿದಂತೆ ಮಗಳ ಪ್ರೀತಿಯ ಮನೆಯನ್ನು ಅವರ ತಂದೆ ನಿವೃತ್ತ ಸೇನಾಧಿಕಾರಿ ಮಾರಾಟಕ್ಕಿಟ್ಟಿದ್ದಾರೆ

Spread the love

ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ ಮಾಫಿಯಾ ಕೇಸಲ್ಲಿ ನಟಿ ರಾಗಿಣಿ ದ್ವಿವೇದಿ ಜೈಲು ಪಾಲಾಗಿದ್ದಾರೆ. ಸಿಸಿಬಿ ಕಸ್ಟಡಿಯ ಅಂತ್ಯವಾದ ಹಿನ್ನೆಲೆಯಲ್ಲಿ ರಾಗಿಣಿಯನ್ನು 1ನೇ ಎಸಿಎಂಎಂ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇತ್ತ ನಟಿ ರಾಣಿಗೆ ಜೈಲು ಸೇರಿದಂತೆ ಮಗಳ ಪ್ರೀತಿಯ ಮನೆಯನ್ನು ಅವರ ತಂದೆ ನಿವೃತ್ತ ಸೇನಾಧಿಕಾರಿ ಮಾರಾಟಕ್ಕಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಯಲಹಂಕದ ಅನನ್ಯ ಅಪಾರ್ಟ್‌ಮೆಂಟ್‌ನಲ್ಲಿ ರಾಗಿಣಿ ಅವರ ಫ್ಲ್ಯಾಟ್ ಇತ್ತು. ಇದೀಗ ಆ ಫ್ಲ್ಯಾಟನ್ನು ನಟಿ ರಾಗಿಣಿ ತಂದೆ ಮಾರಾಟ ಮಾಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅವರ ತಂದೆ ಮಗಳ ಪ್ರೀತಿಯ ಮನೆಯನ್ನು ಬರೋಬ್ಬರಿ ಎರಡು ಕೋಟಿಗೆ ಮಾರಾಟಕ್ಕಿಟ್ಟಿದ್ದಾರೆ.ಈ ಅಪಾರ್ಟ್‌ಮೆಂಟ್ ಮಾಲೀಕರು ರಾಗಿಣಿಯ ತಂದೆ ರಾಕೇಶ್ ದ್ವಿವೇದಿ ಆಗಿದ್ದಾರೆ. ಹೀಗಾಗಿ ಅವರೇ 3 ಬಿಎಚ್‍ಕೆ ಫ್ಲ್ಯಾಟನ್ನು ಮಾರಾಟಕ್ಕಿಟ್ಟಿದ್ದಾರೆ ಎನ್ನಲಾಗಿದೆ. ನ್ಯಾಯಾಂಗ ಬಡಾವಣೆಯಲ್ಲಿ ಈ ಅನನ್ಯ ಅಪಾರ್ಟ್‌ಮೆಂಟ್ ಇದ್ದು, ಇದರಲ್ಲಿ ನಟಿ ರಾಗಿಣಿ ಎರಡು ಫ್ಲ್ಯಾಟ್ ಹೊಂದಿದ್ದಾರೆ.

ಅದರಲ್ಲಿ ಒಂದು ಮನೆಯನ್ನು ಎರಡು ಕೋಟಿಗೆ ಮಾರಾಟಕ್ಕಿಟ್ಟಿದ್ದಾರೆ. ಮನೆ ಸೇಲ್‍ಗಿಟ್ಟಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಲಾಗಿದೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ