Breaking News
Home / ಜಿಲ್ಲೆ (page 1051)

ಜಿಲ್ಲೆ

ಗುತ್ತಿಗೆದಾರನಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ್ದ ಆರೋಪಿಗಳ ಬಂಧನ

ರಾಯಚೂರು: ಶಕ್ತಿನಗರದ ರಾಘವೇಂದ್ರ ಕಾಲೋನಿಯಲ್ಲಿ ಗುತ್ತಿಗೆದಾರನಿಗೆ ಕೊಲೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ್ದ ಆರೋಪಿಗಳು ಸೆರೆಸಿಕ್ಕಿದ್ದಾರೆ. ರಾಯಚೂರಿನ ರೌಡಿಶೀಟರ್ ಮಹ್ಮದ್ ಗೌಸ್ ತಂಡದ 12 ಜನರ ಬಂಧನವಾಗಿದ್ದು, ಮುಖ್ಯ ಆರೋಪಿ ಗೌಸ್ ತಲೆ ಮರೆಸಿಕೊಂಡಿದ್ದಾನೆ. ಮೇ 8ರಂದು ಆರ್ ಟಿಪಿಎಸ್, ವೈಟಿಪಿಎಸ್ ಗುತ್ತಿಗೆದಾರ ಕೇರಳ ಮೂಲದ ಹರ್ಷನ್ ಮನೆಗೆ ಮಹ್ಮದ್ ಗೌಸ್ ಹಾಗೂ 17 ಜನ ನುಗ್ಗಿ ಪಿಸ್ತೂಲ್, ಮಾರಕಾಸ್ತ್ರ ತೋರಿಸಿ ಹಣ ವಸೂಲಿ ಮಾಡಿದ್ದರು. ಹರ್ಷನ್ ರಿಂದ …

Read More »

28 ದಿನಗಳ ಬಳಿಕ ತನ್ನ ಹಸುಗೂಸನ್ನು ಅಪ್ಪಿಕೊಂಡು ಮುದ್ದಾಡಿರುವ ಭಾವುಕ ಘಟನೆ ಸಿಲಿಕಾನ್ ಸಿಟಿಯ ದೊಡ್ಡಬಸ್ತಿಯಲ್ಲಿ

ಬೆಂಗಳೂರು: ಕೊರೊನಾ ಗೆದ್ದ ಮಹಿಳೆ 28 ದಿನಗಳ ಬಳಿಕ ತನ್ನ ಹಸುಗೂಸನ್ನು ಅಪ್ಪಿಕೊಂಡು ಮುದ್ದಾಡಿರುವ ಭಾವುಕ ಘಟನೆ ಸಿಲಿಕಾನ್ ಸಿಟಿಯ ದೊಡ್ಡಬಸ್ತಿಯಲ್ಲಿ ನಡೆದಿದೆ. ದೊಡ್ಡಬಸ್ತಿಯಲ್ಲಿ ರೋಗಿ ನಂಬರ್ 259 ಮಹಿಳೆ ಕೊರೊನಾದಿಂದ ಗುಣಮುಖರಾಗಿ ತನ್ನ ಮನೆಗೆ ವಾಪಸ್ಸಾಗಿದ್ದಾರೆ. ಡೆಲಿವರಿಯಾದ ನಾಲ್ಕೇ ದಿನದಲ್ಲಿ ತನ್ನ ಹಸುಗೂಸಿನಿಂದ ದೂರವಾಗಿದ್ದರು. ಮಗುವಿಗೆ ಎದೆಹಾಲು ಉಣಿಸಲಾಗದಂತಹ ಅಸಹಾಯಕ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ 28 ದಿನಗಳ ಬಳಿಕ, ಈ ಮಹಿಳೆ ಕೊರೊನಾ ಗೆದ್ದು ಮನೆಗೆ ಬಂದಿದ್ದು, ತನ್ನ …

Read More »

ಭಾರೀ ಮಳೆಯಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಕೆರೆಯಂತಾದ ರಸ್ತೆ……….

ಮಂಗಳೂರು: ಕಳೆದ ಕೆಲದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಭಾಗಗಳಲ್ಲಿ ಮಳೆಯಾಗುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲೂ ಭಾರೀ ಮಳೆ ಸುರಿದಿದೆ. ಎಡೆಬಿಡದೆ ಸುರಿದ ಮಳೆಯಿಂದಾಗಿ ದೇವಸ್ಥಾನದ ಬಳಿಯ ರಸ್ತೆ ಪೂರ್ತಿ ನೀರು ನಿಂತು ಕೆರೆಯಂತಾಗಿತ್ತು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪ್ರವೇಶಿಸುವ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ನೀರು ಹರಿಯುವುದಕ್ಕೆ ಸಾಧ್ಯವಾಗದೇ ರಸ್ತೆ ಕೆರೆಯಂತಾಗಿತ್ತು. ರಸ್ತೆಯಲ್ಲಿ ಪಾರ್ಕ್ ಮಾಡಿದ್ದ ದ್ವಿಚಕ್ರ ವಾಹನ, ಕಾರು ಕೃತಕ ನೆರೆಗೆ ಭಾಗಶಃ ಮುಳುಗಿ ಹೋಗಿತ್ತು. ವಾಹನ ಸವಾರರು …

Read More »

ಉಚಿತವಾಗಿ ಹಂಚುವ ರೇಷನ್ ಕಿಟ್‍ಗಳನ್ನು ಮಾರಾಟ ಮಾಡುತ್ತಿದ್ದ ನಾಲ್ವರ ಸೆರೆ

ಬೆಂಗಳೂರು, – ಕಾರ್ಮಿಕ ಇಲಾಖೆಯಿಂದ ಬಡವರಿಗೆ ಉಚಿತವಾಗಿ ಹಂಚುವ ರೇಷನ್ ಕಿಟ್‍ಗಳನ್ನು ಹಣಕ್ಕೆ ಮಾರಾಟ ಮಾಡುತ್ತಿದ್ದ ನಾಲ್ವರು ಆರ್‍ಟಿ ನಗರ ಪೊಲೀಸರ ಅತಿಥಿಗಳಾಗಿದ್ದಾರೆ. ಕಾರ್ಮಿಕ ಇಲಾಖೆಯ ರೇಷನ್‍ಕಿಟ್‍ಗಳನ್ನು ತಲಾ ಒಂದು ಕಿಟ್‍ಗೆ 150ರೂ. ಪಡೆದು ಕೆಲವರು ಮಾರಾಟ ಮಾಡುತ್ತಿದ್ದರು. ಆದರೆ, ಈ ಬಗ್ಗೆ ಸ್ಥಳೀಯ ಶಾಸಕರು ಹಾಗೂ ಪಾಲಿಕೆ ಸದಸ್ಯರಿಗೆ ಮಾಹಿತಿ ಇರಲಿಲ್ಲ. ಆರ್‍ಟಿ ನಗರದಲ್ಲಿ ಮೆಟೆಡೋರ್‍ನಲ್ಲಿ ಕಾರ್ಮಿಕ ಇಲಾಖೆಯ ಕಿಟ್‍ಗಳನ್ನು ಸಾರ್ವಜನಿಕರಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ …

Read More »

ಮದ್ಯೋದ್ಯಮಿ ಮಲ್ಯಗೆ ಭಾರತದಲ್ಲಿ ಜೈಲೂಟ ಫಿಕ್ಸ್..!

ಲಂಡನ್: ಮದ್ಯೋದ್ಯಮಿ ವಿಜಯ್ ಮಲ್ಯ ತಮ್ಮನ್ನು ಭಾರತಕ್ಕೆ ಹಸ್ತಾಂತರಿಸುವುದರ ವಿರುದ್ಧ ಇಂಗ್ಲೆಂಡ್​ (ಯುಕೆ) ಸುಪ್ರೀಂಕೋರ್ಟ್​ಗೆ ಮನವಿ ಸಲ್ಲಿಸಲು ಇಲ್ಲಿನ ಹೈಕೋರ್ಟ್​ ಅವಕಾಶ ಕಲ್ಪಿಸಲಿಲ್ಲ. ಭಾರತಕ್ಕೆ ತನ್ನನ್ನು ಹಸ್ತಾಂತರ ಮಾಡದಂತೆ ಕಳೆದ ತಿಂಗಳು ವಿಜಯ್ ಮಲ್ಯ ಸಲ್ಲಿಸಿದ್ದ ಮನವಿ ಅರ್ಜಿಯನ್ನು ಬ್ರಿಟನ್​ನ ಹೈಕೋರ್ಟ್ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಅರ್ಜಿ ಸಲ್ಲಿಸಲು ಮಲ್ಯ ನಿರ್ಧರಿಸಿದ್ದರು. ಆದರೆ, ಮಲ್ಯ ಅವರಿಗೆ ಮೇಲ್ಮನವಿ ಅರ್ಜಿ ಸಲ್ಲಿಸಲು ಹೈಕೋರ್ಟ್​ ಇಂದು ಅವಕಾಶ ನೀಡಿಲ್ಲ. ಈ …

Read More »

ಕೊರೊನಾದಿಂದ ಗುಣಮುಖನಾಗಿ ಡಿಸ್ಚಾರ್ಜ್ ಆಗಿದ್ದ ವೃದ್ಧ ಸಾವು….

ಮೈಸೂರು: ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ 72 ವರ್ಷದ ವೃದ್ಧ ಇಂದು ಸಾವನ್ನಪ್ಪಿದ್ದಾರೆ. ಮೈಸೂರಿನ ನಜರ್‍ಬಾದ್ ನಿವಾಸಿಯಾಗಿದ್ದ 72 ವರ್ಷದ ವೃದ್ಧನಿಗೆ ಕೊರೊನಾ ಸೋಂಕು ತಗುಲಿತ್ತು. 17 ದಿನಗಳ ಹಿಂದೆ ಕೊರೊನಾದಿಂದ ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಡಿಸ್ವಾರ್ಜ್ ಆಗಿದ್ದರು. ಆದ್ರೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧ ಸಾವನ್ನಪ್ಪಿದ್ದಾರೆ. ಮೃತ ವೃದ್ಧನ ಅಂತ್ಯಕ್ರಿಯೆ ಶುಕ್ರವಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮೈಸೂರಿನ 90 ಕೊರೊನಾ ಸೋಂಕಿತರಲ್ಲಿ 88 ಮಂದಿ ಗುಣಮುಖವಾಗಿ …

Read More »

ಡೆಡ್ಲಿ ಕೊರೊನಾ ಮಧ್ಯೆ ಇದೀಗ ರಾಜ್ಯದಲ್ಲಿ ಚಂಡಮಾರುತ ಅಪ್ಪಳಿಸುವ ಭೀತಿ ಎದುರಾಗಿದೆ.

ಬೆಂಗಳೂರು: ಡೆಡ್ಲಿ ಕೊರೊನಾ ಮಧ್ಯೆ ಇದೀಗ ರಾಜ್ಯದಲ್ಲಿ ಚಂಡಮಾರುತ ಅಪ್ಪಳಿಸುವ ಭೀತಿ ಎದುರಾಗಿದೆ. ಕೇರಳದ ಹಲವು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಮೇ 17ರೊಳಗೆ ಆಮ್‍ಫಾನ್ ಚಂಡಮಾರುತದಿಂದ ಭಾರೀ ಮಳೆಯಾಗಲಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮೇ 15 ಮತ್ತು 16ರಂದು ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮೇ 18ರಂದು ಈ ಆಮ್‍ಫಾನ್ ಚಂಡಮಾರುತದ ಅಬ್ಬರ ಹೆಚ್ಚಾಗಲಿದ್ದು, ಒಂದು ಗಂಟೆಗೆ 172 ಕಿ.ಮೀ. …

Read More »

ರಮೇಶ್ ಕುಮಾರ್ ಲಾಕ್‍ಡೌನ್ ಉಲ್ಲಂಘನೆ- ನೂರಾರು ಜನ ಸೇರಿಸಿ ಕೆರೆ ಪೂಜೆ….

ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೂರಾರು ಜನರನ್ನು ಸೇರಿಸಿ ಕರೆಯಲ್ಲಿ ಪೂಜೆ ಮಾಡುವ ಮೂಲಕ ಲಾಕ್‍ಡೌನ್ ನಿಯಮ ಉಲ್ಲಂಘಿಸಿದ್ದಾರೆ. ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಆಲವಾಟ್ಟ ಗ್ರಾಮದ ಕೆರೆಗೆ ಕೆ.ಸಿ.ವ್ಯಾಲಿ ನೀರು ಹರಿದ ಹಿನ್ನೆಲೆ ತಮ್ಮದೆ ಮುಖಂಡರು, ಸ್ಥಳೀಯರನ್ನು ಸೇರಿಸಿಕೊಂಡು ಪೂಜೆ ಸಲ್ಲಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಪೂಜೆ ವೇಳೆ ನೂರಾರು ಜನರ ಜಮಾವಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಮಾಜಿ ಸ್ಪೀಕರ್ ವಿರುದ್ಧ ಹಲವರು …

Read More »

ವಿಜಯಪುರಕ್ಕೆ ಮಹಾರಾಷ್ಟ್ರದ 1,590 ಕಾರ್ಮಿಕರ ಆಗಮನ………..

ವಿಜಯಪುರ: ಶುಕ್ರವಾರ ಬೆಳಗಿನ ಜಾವ ನಾಲ್ಕು ಗಂಟೆಗೆ ಮಹಾರಾಷ್ಟ್ರದಿಂದ ವಲಸೆ ಕಾರ್ಮಿಕರು ವಿಜಯಪುರಕ್ಕೆ ಆಗಮಿಸಲಿದ್ದಾರೆ. ಶ್ರಮಿಕ್ ವಿಶೇಷ ರೈಲಿನ ಮೂಲಕ ಮಹಾರಾಷ್ಟ್ರದ ಸಿಂಧದುರ್ಗದಿಂದ ಒಟ್ಟು 1,590 ಕಾರ್ಮಿಕರು ಬೆಳಗಿನ ಜಾವ 4 ಗಂಟೆಗೆ ವಿಜಯಪುರಕ್ಕೆ ಬಂದಿಳಿಯಲಿದ್ದಾರೆ. ಜಿಲ್ಲೆಗೆ ಆಗಮಿಸುವ ಎಲ್ಲ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಕಾರ್ಮಿಕರನ್ನು ಅವರ ತಾಲೂಕುಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಕ್ವಾರಂಟೈನ್ ಮಾಡಲಾಗುವುದು. ರೈಲ್ವೇ ನಿಲ್ದಾಣದಿಂದಲೇ ಕಾರ್ಮಿಕರನ್ನ ಕ್ವಾರಂಟೈನ್ ಕೇಂದ್ರಕ್ಕೆ ಕಳಿಸಲು …

Read More »

ಕೊರೊನಾ ಹಾಟ್‍ಸ್ಪಾಟ್ ಆಗೋದನ್ನೇ ತಪ್ಪಿಸಿದ ಕಮಾಂಡರ್ ಡಾ. ಜಿ ಶಿವಣ್ಣ………

ಬೆಂಗಳೂರು: ದೊಡ್ಡಬಸ್ತಿಯಲ್ಲಿ ಒಂದೇ ಒಂದು ಪಾಸಿಟಿವ್ ಪ್ರಕರಣದಿಂದ ಬೆಂಗಳೂರು ಆತಂಕಗೊಂಡಿತ್ತು. ಇಡೀ ದೊಡ್ಡಬಸ್ತಿ ಕೊರೊನಾ ಹಾಟ್‍ಸ್ಪಾಟ್ ಆಗುತ್ತಾ ಅನ್ನೋ ಆತಂಕ ಜನರನ್ನು ಕಾಡಿತ್ತು. ಆದರೆ ಜನರ ಸಹಕಾರ ಹಾಗೂ ಕೋವಿಡ್ ಕಮಾಂಡರ್ ಜಿ.ಶಿವಣ್ಣ ಅವರ ಮಾಸ್ಟರ್ ಪ್ಲಾನ್‍ನಿಂದ ಕೊರೊನಾ ಹಾಟ್‍ಸ್ಪಾಟ್ ಆಗೋದನ್ನೇ ತಪ್ಪಿಸಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿಯ ದೊಡ್ಡಬಸ್ತಿಯನ್ನ ನೋಡಿ ಪಾದರಾಯನಪುರದ ಜನ ಬುದ್ಧಿ ಕಲಿಯಬೇಕಿದೆ. ಏಪ್ರಿಲ್ 12ರಂದು ಈ ಏರಿಯಾದಲ್ಲಿ ಗರ್ಭಿಣಿ ಮಹಿಳೆಗೆ ಕೊರೊನಾ ಸೋಂಕು …

Read More »