Breaking News
Home / ಜಿಲ್ಲೆ / ಬೆಂಗಳೂರು / 28 ದಿನಗಳ ಬಳಿಕ ತನ್ನ ಹಸುಗೂಸನ್ನು ಅಪ್ಪಿಕೊಂಡು ಮುದ್ದಾಡಿರುವ ಭಾವುಕ ಘಟನೆ ಸಿಲಿಕಾನ್ ಸಿಟಿಯ ದೊಡ್ಡಬಸ್ತಿಯಲ್ಲಿ

28 ದಿನಗಳ ಬಳಿಕ ತನ್ನ ಹಸುಗೂಸನ್ನು ಅಪ್ಪಿಕೊಂಡು ಮುದ್ದಾಡಿರುವ ಭಾವುಕ ಘಟನೆ ಸಿಲಿಕಾನ್ ಸಿಟಿಯ ದೊಡ್ಡಬಸ್ತಿಯಲ್ಲಿ

Spread the love

ಬೆಂಗಳೂರು: ಕೊರೊನಾ ಗೆದ್ದ ಮಹಿಳೆ 28 ದಿನಗಳ ಬಳಿಕ ತನ್ನ ಹಸುಗೂಸನ್ನು ಅಪ್ಪಿಕೊಂಡು ಮುದ್ದಾಡಿರುವ ಭಾವುಕ ಘಟನೆ ಸಿಲಿಕಾನ್ ಸಿಟಿಯ ದೊಡ್ಡಬಸ್ತಿಯಲ್ಲಿ ನಡೆದಿದೆ.

ದೊಡ್ಡಬಸ್ತಿಯಲ್ಲಿ ರೋಗಿ ನಂಬರ್ 259 ಮಹಿಳೆ ಕೊರೊನಾದಿಂದ ಗುಣಮುಖರಾಗಿ ತನ್ನ ಮನೆಗೆ ವಾಪಸ್ಸಾಗಿದ್ದಾರೆ. ಡೆಲಿವರಿಯಾದ ನಾಲ್ಕೇ ದಿನದಲ್ಲಿ ತನ್ನ ಹಸುಗೂಸಿನಿಂದ ದೂರವಾಗಿದ್ದರು. ಮಗುವಿಗೆ ಎದೆಹಾಲು ಉಣಿಸಲಾಗದಂತಹ ಅಸಹಾಯಕ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ 28 ದಿನಗಳ ಬಳಿಕ, ಈ ಮಹಿಳೆ ಕೊರೊನಾ ಗೆದ್ದು ಮನೆಗೆ ಬಂದಿದ್ದು, ತನ್ನ ಹಸುಗೂಸನ್ನ ಕಂಡು ಭಾವುಕರಾಗಿದ್ದಾರೆ.

ಕೊರೊನಾ ಗೆದ್ದ ಮಹಿಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದು, ಗುಣಮುಖವಾಗಿ ಮನೆಗೆ ಬಂದಿದ್ದು, ಖುಷಿಯಾಗುತ್ತಿದೆ. ತುಂಬಾ ದಿನಗಳ ನಂತರ ನನ್ನ ಮಗುವನ್ನು ನೋಡಿದೆ ನನಗೆ ಈಗ ಸಂತೋಷವಾಗುತ್ತಿದೆ ಎಂದು ಭಾವುಕರಾಗಿ ಹೇಳಿದರು. ಕೊರೊನಾ ಗೆದ್ದ ಮಹಿಳೆಗೆ ವಿವಿಧ ಇಲಾಖೆಗಳ ಸ್ಥಳೀಯ ಅಧಿಕಾರಿಗಳು, ಮುಖಂಡರು ಸಾಂತ್ವನ ಮತ್ತು ಧೈರ್ಯ ಹೇಳಿದ್ದಾರೆ.

ಅಷ್ಟೇ ಅಲ್ಲದೇ ಈ ಏರಿಯಾದ ಮುಸ್ಲಿಂ ಬಾಂಧವರು, ವೈದ್ಯಾಧಿಕಾರಿಗಳು, ಅಧಿಕಾರಿಗಳು ಈ ಮಹಿಳೆಯನ್ನ ಚೇರ್ ಮೇಲೆ ಕೂರಿಸಿ ಚಪ್ಪಾಳೆ ಹೊಡೆದು ಆತ್ಮಸ್ಥೈರ್ಯ ತುಂಬಿದರು.

ಮಹಿಳೆಯ ಪತಿ ರೋಗಿ ನಂಬರ್ 199 ಪಾದರಾಯನಪುರದ ನಿವಾಸಿಯಾಗಿದ್ದ. ಮಹಿಳೆ ಹೆರಿಗೆಗಾಗಿ ತವರು ಮನೆ ದೊಡ್ಡಬಸ್ತಿಗೆ ಬಂದಿದ್ದರು. ಆದರೆ ಪತ್ನಿಯನ್ನ ನೋಡಲು ಪತಿ ಬಂದಿದ್ದ. ಅಂದು ಸಂಜೆ ಆತನಿಗೆ ಸೋಂಕು ಇರೋದು ದೃಢವಾಗಿತ್ತು. ಈ ವೇಳೆ ಪತ್ನಿಗೂ ಆರೋಗ್ಯ ತಪಾಸಣೆ ಮಾಡಲಾಗಿತ್ತು. ಈ ನಡುವೆ ಮಹಿಳೆಗೆ ಹೆರಿಯಾಗಿತ್ತು. ಆದರೆ ಹೆರಿಗೆಯಾದ ನಾಲ್ಕೇ ದಿನದಲ್ಲಿ ಮಹಿಳೆಗೂ ಸೋಂಕು ಇರುವುದು ದೃಢವಾಗಿತ್ತು. ಹೀಗಾಗಿ ಮಗು ಮತ್ತು ತಾಯಿಯನ್ನ ಪ್ರತ್ಯೇಕವಾಗಿಡಲಾಗಿತ್ತು.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ