Breaking News
Home / ಜಿಲ್ಲೆ / ಮದ್ಯೋದ್ಯಮಿ ಮಲ್ಯಗೆ ಭಾರತದಲ್ಲಿ ಜೈಲೂಟ ಫಿಕ್ಸ್..!

ಮದ್ಯೋದ್ಯಮಿ ಮಲ್ಯಗೆ ಭಾರತದಲ್ಲಿ ಜೈಲೂಟ ಫಿಕ್ಸ್..!

Spread the love

ಲಂಡನ್: ಮದ್ಯೋದ್ಯಮಿ ವಿಜಯ್ ಮಲ್ಯ ತಮ್ಮನ್ನು ಭಾರತಕ್ಕೆ ಹಸ್ತಾಂತರಿಸುವುದರ ವಿರುದ್ಧ ಇಂಗ್ಲೆಂಡ್​ (ಯುಕೆ) ಸುಪ್ರೀಂಕೋರ್ಟ್​ಗೆ ಮನವಿ ಸಲ್ಲಿಸಲು ಇಲ್ಲಿನ ಹೈಕೋರ್ಟ್​ ಅವಕಾಶ ಕಲ್ಪಿಸಲಿಲ್ಲ.

ಭಾರತಕ್ಕೆ ತನ್ನನ್ನು ಹಸ್ತಾಂತರ ಮಾಡದಂತೆ ಕಳೆದ ತಿಂಗಳು ವಿಜಯ್ ಮಲ್ಯ ಸಲ್ಲಿಸಿದ್ದ ಮನವಿ ಅರ್ಜಿಯನ್ನು ಬ್ರಿಟನ್​ನ ಹೈಕೋರ್ಟ್ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಅರ್ಜಿ ಸಲ್ಲಿಸಲು ಮಲ್ಯ ನಿರ್ಧರಿಸಿದ್ದರು.

ಆದರೆ, ಮಲ್ಯ ಅವರಿಗೆ ಮೇಲ್ಮನವಿ ಅರ್ಜಿ ಸಲ್ಲಿಸಲು ಹೈಕೋರ್ಟ್​ ಇಂದು ಅವಕಾಶ ನೀಡಿಲ್ಲ. ಈ ಹಿನ್ನಲೆಯಲ್ಲಿ ಇನ್ನು 28 ದಿನಗಳಲ್ಲಿ ವಿಜಯ್ ಮಲ್ಯ ಭಾರತಕ್ಕೆ ಹಸ್ತಾಂತರಗೊಳಿಸುವ ಪ್ರಕ್ರಿಯೆ ಶುರುವಾಗಲಿದೆ. ಭಾರತಕ್ಕೆ ವಾಪಾಸಾದ ಬಳಿಕ ವಿಜಯ್ ಮಲ್ಯ ಅವರನ್ನು ಮುಂಬೈನ ಅರ್ಥೂರ್​ ರಸ್ತೆಯಲ್ಲಿರುವ ಜೈಲಿನಲ್ಲಿ ಬಂಧಿಸಲಾಗುವುದು.

ಸ್ಥಗಿತಗೊಂಡ ಕಿಂಗ್​ಫಿಶರ್ ವಾಯುಯಾನ ಸಂಸ್ಥೆಗೆ ಸಂಬಂಧಿಸಿದಂತೆ ವಂಚನೆ ಹಾಗೂ ಬಹಿರಂಗಪಡಿಸದ ಸಾಲಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪವನ್ನು ಮಲ್ಯ ಎದುರಿಸುತ್ತಿದ್ದಾರೆ. ಏಪ್ರಿಲ್ 20ರಂದು ಹೈಕೋರ್ಟ್ ತೀರ್ಪಿನ ಮೇಲೆ ಉನ್ನತ ನ್ಯಾಯಾಲಯ ಸಂಪರ್ಕಿಸಲು ಅನುಮತಿಗಾಗಿ ಅವರು ಈ ಅರ್ಜಿ ಸಲ್ಲಿಕೆ ಮಾಡಿದ್ದರು.

ಇಂಗ್ಲೆಂಡ್ ಗೃಹ ಕಾರ್ಯದರ್ಶಿ ಪ್ರಮಾಣೀಕರಿಸಿದ ವೆಸ್ಟ್​ಮಿನಿಸ್ಟರ್​ ಮ್ಯಾಜಿಸ್ಟ್ರೇಟ್​ ಕೋರ್ಟ್​ನ ಹಸ್ತಾಂತರ ಆದೇಶದ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ.ಯಾವುದೇ ಸಮಯದಲ್ಲಿ ತಾನು ಇಂಗ್ಲೆಂಡ್‍ನಿಂದ ಭಾರತಕ್ಕೆ ಗಡಿಪಾರು ಆಗುವ ಭೀತಿಯಿಂದಾಗಿ ಹೊಸ ಕಾನೂನು ಸಮರಕ್ಕೆ ಮದ್ಯದ ದೊರೆ ಮಲ್ಯ ಸಜ್ಜಾಗುತ್ತಿದ್ದಾರೆ.

ಭಾರತಕ್ಕೆ ಹಸ್ತಾಂತರ ಮಾಡುವುದನ್ನು ಪ್ರಶ್ನಿಸಿ 2018ರಲ್ಲಿ ಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಮಲ್ಯ ಮೇಲ್ಮನವಿ ಸಲ್ಲಿಸಿದ್ದರು. ಇಂದು ಬೆಳಗ್ಗೆಯಷ್ಟೇ ಟ್ವೀಟ್ ಮಾಡಿದ್ದ ವಿಜಯ್ ಮಲ್ಯ ತಾವು ಸಾಲ ಪಡೆದ ಶೇ. 100ರಷ್ಟು ಹಣವನ್ನು ವಾಪಾಸ್ ನೀಡಲು ಸಿದ್ಧರಿರುವುದಾಗಿ ಪುನರುಚ್ಛರಿಸಿದ್ದರು.

ಅದರ ಬೆನ್ನಲ್ಲೇ ಅವರಿಗೆ ಯುಕೆ ಸುಪ್ರೀಂ ಕೋರ್ಟ್​ನಲ್ಲಿ ಭಾರೀ ಹಿನ್ನಡೆಯಾಗಿದೆ. ಇದರಿಂದ ಅವರು ಇಂಗ್ಲೆಂಡ್​ನಿಂದ ಭಾರತಕ್ಕೆ ವಾಪಾಸ್​ ಬರಲೇಬೇಕಾದ ಅನಿವಾರ್ಯತೆ ಎದುರಾಗಲಿದೆ.
ಈ ಮೂಲಕ ವಿಜಯ್ ಮಲ್ಯ ಮುಂದಿರುವ ಎಲ್ಲ ಕಾನೂನು ಅವಕಾಶಗಳ ಬಾಗಿಲೂ ಮುಚ್ಚಿದಂತಾಗಿದೆ.

ಕಳೆದ ತಿಂಗಳಷ್ಟೇ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಆದೇಶದ ವಿರುದ್ಧದ ಅರ್ಜಿಯನ್ನು ಹೈಕೋರ್ಟ್​ ವಜಾ ಮಾಡಿತ್ತು. ಇಂದು ಲಂಡನ್​ ನ್ಯಾಯಾಲಯದಲ್ಲಿ ಉದ್ಯಮಿಗೆ ಮತ್ತೊಂದು ಹಿನ್ನಡೆಯಾಗಿದೆ.

ಯುಕೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವ ಆಸೆಯಲ್ಲಿದ್ದ ಅವರಿಗೆ ನಿರಾಶೆಯಾಗಿದೆ. ಇದರಿಂದಾಗಿ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸೋದು ಬಹುತೇಕ ಖಚಿತವಾದಂತಿದೆ.ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಇಂಗ್ಲೆಂಡ್​ ವ್ಯವಸ್ಥೆಯು ಸ್ವಲ್ಪ ವಿಭಿನ್ನವಾಗಿದೆ. ಮಲ್ಯ ಅವರು ಮತ್ತೆ ಹೈಕೋರ್ಟ್ ಮೂಲಕವೇ ಉನ್ನತ ನ್ಯಾಯಾಲಯದ ಕದ ತಟ್ಟಬೇಕಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ